ನೇರ ಪ್ರಸಾರದ ವೇಳೆ ಇರಾನ್‌ ಸರ್ಕಾರಿ ಟಿವಿ ಕೇಂದ್ರದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ; ಅರ್ಧಕ್ಕೇ ಹೊರನಡೆದ ನಿರೂಪಕಿ ; ದೃಶ್ಯ ವೀಡಿಯೊದಲ್ಲಿ ಸೆರೆ

ಇರಾನ್‌ನ ಬಹುತೇಕ ಭಾಗಗಳಲ್ಲಿ, ವಿಶೇಷವಾಗಿ ಅದರ ರಾಜಧಾನಿ ತೆಹ್ರಾನ್‌ನಲ್ಲಿ ಆಕಾಶದಿಂದ ಇಸ್ರೇಲ್‌ ಕ್ಷಿಪಣಿಗಳ ಮಳೆ ಗೈಯುತ್ತಿದೆ. ಈಗಾಗಲೇ ಇಸ್ರೇಲ್ ತಾನು ಇರಾನ್‌ ಮೇಲೆ ʼಸಂಪೂರ್ಣ ವಾಯು ಪ್ರಾಬಲ್ಯʼವನ್ನು ಹೊಂದಿರುವುದಾಗಿ ಹೇಳಿಕೊಂಡಿದೆ. ಎರಡು ಪ್ರಮುಖ ಪ್ರತಿಸ್ಪರ್ಧಿಗಳ ನಡುವಿನ ಸಂಘರ್ಷವು ಘಾತೀಯವಾಗಿ ಬೆಳೆಯುತ್ತಿದೆ. ಈಗ ಇಸ್ರೇಲಿನ ಅಂತಹ ಒಂದು ವಾಯು ದಾಳಿಯಲ್ಲಿ, ಇಸ್ರೇಲಿ ಕ್ಷಿಪಣಿಯು ನೇರ ಪ್ರಸಾರ ಕಾರ್ಯಕ್ರಮ … Continued

ಇಸ್ರೇಲ್-ಇರಾನ್ ಯುದ್ಧ ಉಲ್ಬಣ | ಭೂಗತ ಬಂಕರ್‌ನಲ್ಲಿ ಅಡಗಿದ ಇರಾನ್‌ ಸರ್ವೋಚ್ಚ ನಾಯಕ ಖಮೇನಿ-ಕುಟುಂಬ : ವರದಿ

ಇಸ್ರೇಲ್‌- ಇರಾನ್‌ನ ಸಂಘರ್ಷದ ಮಧ್ಯೆ ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಈಶಾನ್ಯ ತೆಹ್ರಾನ್‌ನಲ್ಲಿರುವ ಭೂಗತ ಬಂಕರ್‌ಗೆ ಸ್ಥಳಾಂತರಿಸಲಾಗಿದೆ ಎಂದು ಇರಾನ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ. ಖಮೇನಿ ಅವರ ಮಗ ಮೊಜ್ತಬಾ ಸೇರಿದಂತೆ ಅವರ ಕುಟುಂಬದ ಎಲ್ಲಾ ಸದಸ್ಯರು ಸಹ ಅವರೊಂದಿಗೆ ಇದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ತಿಳಿಸಿದೆ. ವರದಿಯ ಪ್ರಕಾರ, … Continued

ರಕ್ಷಣಾ ವ್ಯವಸ್ಥೆ ಭೇದಿಸಿ ಇಸ್ರೇಲ್ ರಕ್ಷಣಾ ಕೇಂದ್ರ ಕಚೇರಿಗೆ ಅಪ್ಪಳಿಸಿದ ಇರಾನ್‌ ಕ್ಷಿಪಣಿ : ಅದು ಅಪ್ಪಳಿಸಿದ ಕ್ಷಣದ ದೃಶ್ಯ ವೀಡಿಯೊದಲ್ಲಿ ಸೆರೆ

ಮಧ್ಯಪ್ರಾಚ್ಯ ಉದ್ವಿಗ್ನತೆಯ ನಡುವೆ ಇಸ್ರೇಲ್ ಅನ್ನು ಕ್ಷಿಪಣಿಗಳ ದಾಳಿಯಿಂದ ರಕ್ಷಿಸುತ್ತಿದ್ದ ಐರನ್ ಡೋಮ್ ವಾಯು ರಕ್ಷಣೆಯ ವೈಫಲ್ಯದಲ್ಲಿ ಇರಾನ್ ಟೆಲ್ ಅವಿವ್‌ನಲ್ಲಿರುವ ಇಸ್ರೇಲ್ ರಕ್ಷಣಾ ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿದೆ. 24 ಗಂಟೆಗಳ ಒಳಗೆ ಇರಾನ್ ಮೇಲೆ ಇಸ್ರೇಲ್ ನಡೆಸಿದ ಎರಡು ಅಲೆಗಳ ವಾಯುದಾಳಿಯ ನಂತರ ಇರಾನ್ ಪ್ರತಿದಾಳಿ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ … Continued

ತಾನು ಮಾಡಿದ ತಪ್ಪಿಗೆ ಭಾರತದ ಕ್ಷಮೆಯಾಚಿಸಿದ ಇಸ್ರೇಲ್‌

ನವದೆಹಲಿ: ಮೊದಲ ಬಾರಿಗೆ, ಇಸ್ರೇಲ್ ರಕ್ಷಣಾ ಪಡೆಗಳು ಭಾರತದ ಅಂತಾರಾಷ್ಟ್ರೀಯ ಗಡಿಗಳ ತಪ್ಪಾದ ನಕ್ಷೆಯನ್ನು ಪ್ರಕಟಿಸಿದ ನಂತರ ಇಸ್ರೇಲ್‌ ಭಾರತದ ಕ್ಷಮೆ ಕೋರಿದೆ. ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿದೆ ಎಂದು ತಪ್ಪಾಗಿ ತೋರಿಸಲಾಗಿದೆ. X ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದೆ. ಐಡಿಎಫ್ ನಕ್ಷೆಯು “ಗಡಿಗಳನ್ನು ನಿಖರವಾಗಿ ಚಿತ್ರಿಸಲು ವಿಫಲವಾಗಿದೆ” ಎಂದು ಒಪ್ಪಿಕೊಂಡಿದೆ. ಆದರೆ ಅದು … Continued

ಇಸ್ರೇಲ್‌-ಇರಾನ್‌ ಸಂಘರ್ಷ | ಇಸ್ರೇಲಿ ವಾಯುದಾಳಿಯಲ್ಲಿ ಇರಾನಿನ 4 ಸೇನಾ ಮೇಜರ್‌ ಜನರಲ್‌ ಗಳು, 6 ಪರಮಾಣು ವಿಜ್ಞಾನಿಗಳು ಸಾವು

ನವದೆಹಲಿ : ತೆಹ್ರಾನ್ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಇರಾನಿನ ಹಲವಾರು ಮಿಲಿಟರಿ ಪ್ರಮುಖರು ಮತ್ತು ಪರಮಾಣು ವಿಜ್ಞಾನಿಗಳು “ಹುತಾತ್ಮರಾಗಿದ್ದಾರೆ” ಎಂದು ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ದೃಢಪಡಿಸಿದ್ದಾರೆ. ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಇರಾನಿನ 78 ಜನರು ಮೃತಪಟ್ಟಿದ್ದು, 329 ಮಂದಿ ಗಾಯಗೊಂಡಿದ್ದಾರೆ. ದಾಳಿಯ ಸಮಯದಲ್ಲಿ, ಇರಾನ್​ನ ಕ್ರಾಂತಿಕಾರಿ ಗಾರ್ಡ್‌ನ ಕ್ಷಿಪಣಿ ಕಾರ್ಯಕ್ರಮದ ಮುಖ್ಯಸ್ಥ … Continued

24 ಗಂಟೆಗಳ ಒಳಗೆ ಇರಾನ್‌ ಮೇಲೆ 2ನೇ ವಾಯುದಾಳಿ ನಡೆಸಿದ ಇಸ್ರೇಲ್‌ : ಇರಾನಿನ 200 ತಾಣಗಳ ಮೇಲೆ ವೈಮಾನಿಕ ದಾಳಿ

ಇರಾನ್‌ನ ಪರಮಾಣು ಘಟಕಗಳು ಮತ್ತು ಮಿಲಿಟರಿ ನೆಲೆಗಳ ಮೇಲೆ ವಾಯು ದಾಳಿ ನಡೆಸಿದ 24 ಗಂಟೆಗಳ ಒಳಗೆ ಇಸ್ರೇಲ್‌ ಇರಾನ್‌ ರಾಜಧಾನಿ ತೆಹ್ರಾನ್‌ ಮೇಲೆ ಮತ್ತೆ ದಾಳಿ ಪ್ರಾರಂಭಿಸಿದೆ. ಇಸ್ಫಹಾನ್‌ನಲ್ಲಿರುವ ಪರಮಾಣು ಘಟಕ ಸೇರಿದಂತೆ ಇರಾನ್‌ನಲ್ಲಿರುವ 200 ಕ್ಕೂ ಹೆಚ್ಚು ಟಾರ್ಗೆಟ್‌ಗಳನ್ನು ಹೊಡೆದುರುಳಿಸಿರುವುದಾಗಿ ಇಸ್ರೇಲಿ ಸೇನೆ ತಿಳಿಸಿದೆ. ಫೋರ್ಡೋ ಪರಮಾಣು ತಾಣದ ಬಳಿ ಎರಡು ಸ್ಫೋಟಗಳು … Continued

ಇರಾನಿನ ಪರಮಾಣು, ಕ್ಷಿಪಣಿ ನೆಲೆಗಳ ಮೇಲೆ ಇಸ್ರೇಲ್ ವಾಯು ದಾಳಿ; ದಾಳಿಯಲ್ಲಿ ಇರಾನಿನ ಇಬ್ಬರು ಉನ್ನತ ಮಿಲಿಟರಿ ಮುಖ್ಯಸ್ಥರ ಸಾವು

ಇಸ್ರೇಲ್ ಶುಕ್ರವಾರ ಮುಂಜಾನೆ ಇರಾನ್ ವಿರುದ್ಧ ಆಪರೇಷನ್ ಲಯನ್ ಎಂದು ಹೆಸರಿಸಲಾದ ದೊಡ್ಡ ಪ್ರಮಾಣದ ಮಿಲಿಟರಿ ದಾಳಿ ನಡೆಸಿತು. ಇದು ಇರಾನಿನ ನಿರ್ಣಾಯಕ ಪರಮಾಣು ಶಸ್ತ್ರಾಗಾರ ಮತ್ತು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇರಾನಿನ ನಗರಗಳಲ್ಲಿ ಬಹು ಸ್ಫೋಟಗಳು ವರದಿಯಾಗಿವೆ. ಇರಾನಿನ ಪರಮಾಣು ಶಸ್ತ್ರಾಗಾರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ನ 12ಕ್ಕೂ ಅಧಿಕ ಜೆಟ್ ಗಳು ಶುಕ್ರವಾರ … Continued

ಲೇಸರ್ ಆಯುಧ ಬಳಸಿ ಶತ್ರು ಡ್ರೋನ್‌ಗಳನ್ನು ಹೊಡೆದುರುಳಿಸಿದ ಜಗತ್ತಿನ ಮೊದಲ ದೇಶವಾಯ್ತು ಇಸ್ರೇಲ್ – ವೀಡಿಯೊಗಳು

ನವದೆಹಲಿ: ಯುದ್ಧದಲ್ಲಿ ಶತ್ರು ಡ್ರೋನ್‌ಗಳನ್ನು ಹೊಡೆದುರುಳಿಸಲು ಲೇಸರ್ ಆಯುಧವನ್ನು ಯಶಸ್ವಿಯಾಗಿ ಬಳಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಇಸ್ರೇಲ್ ಭಾಜನವಾಗಿದ್ದು, ಇದನ್ನು ಆಧುನಿಕ ಯುದ್ಧದಲ್ಲಿ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್‌-ಹಮಾಸ್‌ ಯುದ್ಧದ ಸಮಯದಲ್ಲಿ ಇಸ್ರೇಲ್‌ ಇದನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಇಸ್ರೇಲಿ ವಾಯುಪಡೆಯ ವೈಮಾನಿಕ ರಕ್ಷಣಾ ವ್ಯವಸ್ಥೆಯು ನೇರ ಯುದ್ಧಭೂಮಿ ಪರಿಸ್ಥಿತಿಗಳಲ್ಲಿ … Continued

ಇಸ್ರೇಲ್ ಸೇನೆಯಿಂದ ಹಮಾಸ್ ಗುಂಪಿನ ಗಾಜಾ ಮುಖ್ಯಸ್ಥ ಮುಹಮ್ಮದ್ ಸಿನ್ವಾರ್ ಹತ್ಯೆ : ಇಸ್ರೇಲ್ ಪ್ರಧಾನಿ ನೆತನ್ಯಾಹು

ಟೆಲ್ ಅವಿವ್ (ಇಸ್ರೇಲ್) : ಹಮಾಸ್‌ನ ಗಾಜಾ ಮುಖ್ಯಸ್ಥ ಮುಹಮ್ಮದ್ ಸಿನ್ವಾರ್ ಅವರನ್ನು ಇಸ್ರೇಲ್ ಸೇನೆ ಹತ್ಯೆ ಮಾಡಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಪ್ರಕಟಿಸಿದ್ದಾರೆ. ಮೇ 14 ರಂದು ಇಸ್ರೇಲ್ ನಡೆಸಿದ ಬೃಹತ್ ವಾಯು ದಾಳಿಯಲ್ಲಿ ಹಮಾಸ್ ಮುಖ್ಯಸ್ಥ ಮುಹಮ್ಮದ್ ಸಿನ್ವಾರ್ ತೀವ್ರವಾಗಿ ಗಾಯಗೊಂಡಿದ್ದಾರೆ ಎಂಬ ವರದಿಗಳು ಬಂದವು. ಆ ಸಮಯದಲ್ಲಿ … Continued

ಅಮೆರಿಕದ ಯಹೂದಿ ವಸ್ತುಸಂಗ್ರಹಾಲಯದ ಹೊರಗೆ ಗುಂಡಿನ ದಾಳಿ; ಇಬ್ಬರು ಇಸ್ರೇಲಿ ರಾಯಭಾರ ಕಚೇರಿ ಸಿಬ್ಬಂದಿ ಹತ್ಯೆ

ವಾಷಿಂಗ್ಟನ್ : “ಯೆಹೂದ್ಯ ವಿರೋಧಿ ಭಯೋತ್ಪಾದನೆಯ ಕೃತ್ಯ”ದಲ್ಲಿ, ಬುಧವಾರ ರಾತ್ರಿ (ಸ್ಥಳೀಯ ಸಮಯ) ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್ ಯಹೂದಿ ವಸ್ತುಸಂಗ್ರಹಾಲಯದ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಇಸ್ರೇಲಿ ರಾಯಭಾರ ಕಚೇರಿಗೆ ಸಂಬಂಧಿಸಿದ ಇಬ್ಬರು ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಎಲಿಯಾಸ್ ರೊಡ್ರಿಗಸ್ ಎಂದು ಗುರುತಿಸಲಾದ 30 ವರ್ಷದ ಶಂಕಿತನನ್ನು ಬಂಧಿಸಲಾಗಿದೆ. ನಂತರ … Continued