40000 ಹಮಾಸ್‌ ಹೋರಾಟಗಾರರು, ಸುರಂಗಗಳ ಜಾಲ: ಗಾಜಾದಲ್ಲಿ ಇಸ್ರೇಲಿ ಪಡೆಗಳನ್ನು ಬಲೆಗೆ ಕೆಡವಲು ʼಮೂರು ಆಯಾಮ’ದ ಯುದ್ಧ ಯೋಜನೆ ರೂಪಿಸಿದ ಹಮಾಸ್

ಹಮಾಸ್ ಗಾಝಾ ಪಟ್ಟಿಯಲ್ಲಿ ಸುದೀರ್ಘ ಯುದ್ಧಕ್ಕೆ ಸಿದ್ಧತೆ ನಡೆಸಿದೆ ಮತ್ತು ಕದನ ವಿರಾಮಕ್ಕೆ ಒಪ್ಪಿಗೆ ನೀಡುವಂತೆ ತನ್ನ ಪರಮ ಶತ್ರುವಾದ ಇಸ್ರೇಲ್‌ ಮೇಲೆ ಒತ್ತಡ ಹೇರಲು ಅದು ಇಸ್ರೇಲ್‌ ಪಡೆಗಳು ಗಾಜಾ ನಗರೊಳಗೆ ಪ್ರವೇಶಿಸದಂತೆ ಸಾಕಷ್ಟು ಕಾಲ ತಡೆಹಿಡಿಯಬಹುದು ಎಂದು ಹಮಾಸ್ ನಂಬಿದೆ ಎಂದು ಸಂಘಟನೆಯ ನಾಯಕತ್ವದ ಎರಡು ಮೂಲಗಳು ತಿಳಿಸಿವೆ ಎಂದು ವರದಿಯೊಂದು ಹೇಳಿದೆ.
ಗಾಜಾವನ್ನು ಆಳುವ ಹಮಾಸ್ ಗುಂಪು, ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು, ಆಹಾರ ಮತ್ತು ವೈದ್ಯಕೀಯ ಸರಬರಾಜುಗಳನ್ನು ಸಂಗ್ರಹಿಸಿಟ್ಟುಕೊಂಡಿದೆ ಎಂದು ಹೆಸರು ಹೇಳಲು ಇಚ್ಛಿಸದ ಜನರು ಹೇಳಿದ್ದಾರೆ, ಪರಿಸ್ಥಿತಿಯ ಸೂಕ್ಷ್ಮತೆಯಿಂದಾಗಿ ಹೆಸರು ಹೇಳಲು ನಿರಾಕರಿಸಿದ್ದಾರೆ. ಗಾಜಾ ಪ್ರದೇಶದ ಕೆಳಗೆ ನಿರ್ಮಾಣ ಮಾಡಿದ ಸುರಂಗಗಳಲ್ಲಿ ತನ್ನ ಸಾವಿರಾರು ಹೋರಾಟಗಾರರು ತಿಂಗಳುಗಳ ಕಾಲ ಬದುಕಬಲ್ಲರು ಮತ್ತು ಇಸ್ರೇಲಿ ಪಡೆಗಳನ್ನು ನಗರ ಗೆರಿಲ್ಲಾ ತಂತ್ರಗಳ ಮೂಲಕ ಎದುರಿಸಬಹುದು ಎಂದು ಗುಂಪು ವಿಶ್ವಾಸ ಹೊಂದಿದೆ ಎಂದು ಅವರು ರಾಯಿಟರ್ಸ್‌ಗೆ ತಿಳಿಸಿದರು.
ಅಂತಿಮವಾಗಿ, ಗಾಜಾದ ಮೇಲಿಮ ಇಸ್ರೇಲ್‌ ಮುತ್ತಿಗೆಯನ್ನು ಕೊನೆಗೊಳಿಸಲು ಇಸ್ರೇಲ್‌ಗೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚಲಿದೆ ಎಂದು ಹಮಾಸ್ ನಂಬುತ್ತದೆ, ನಾಗರಿಕ ಸಾವುನೋವುಗಳು ಹೆಚ್ಚಾಗುತ್ತಿದ್ದಂತೆ, ಕದನ ವಿರಾಮದ ಒತ್ತಡ ಹೆಚ್ಚುತ್ತ ಹೋಗುತ್ತದೆ ಮತ್ತು ನಂತರ ಇಸ್ರೇಲಿ ಒತ್ತೆಯಾಳುಗಳ ಬದಲಿಗೆ ಬದಲಾಗಿ ಮಾತುಕತೆಯಲ್ಲಿ ಸಾವಿರಾರು ಪ್ಯಾಲೇಸ್ತಿನಿಯನ್ ಕೈದಿಗಳ ಬಿಡುಗಡೆಯಂತಹ ಸ್ಪಷ್ಟವಾದ ಒಪ್ಪಂದ ಹೊರಹೊಮ್ಮಬಹುದು ಎಂದು ಹಮಾಸ್‌ ಭಾವಿಸಿದೆ ಎಂದು ಮೂಲಗಳು ತಿಳಿಸಿವೆ.

ಹಮಾಸ್ ಪರಿಚಯವಿರುವ ವ್ಯಕ್ತಿಯ ಪ್ರಕಾರ, ಒತ್ತೆಯಾಳುಗಳಿಗೆ ಬದಲಾಗಿ ಹಮಾಸ್‌ ಪ್ಯಾಲಿಸ್ತೀನ್‌ ಖೈದಿಯನ್ನು ಬಿಡುಗಡೆ ಮಾಡಲು ಒತ್ತಾಯಿಸುತ್ತರೆ ಎಂದು ಕತಾರ್-ಮಧ್ಯಸ್ಥಿಕೆಯ ಒತ್ತೆಯಾಳುಗಳ ಬಿಡುಗಡೆಯ ಮಾತುಕತೆಗಳಲ್ಲಿ ಹಮಾಸ್‌ ಗುಂಪು ಅಮೆರಿಕ ಮತ್ತು ಇಸ್ರೇಲ್‌ಗೆ ಸ್ಪಷ್ಟಪಡಿಸಿದೆ. ದೀರ್ಘಾವಧಿಯಲ್ಲಿ, ಹಮಾಸ್ ಗುಂಪು ಇಸ್ರೇಲ್‌ನ ಗಾಜಾದ 17 ವರ್ಷಗಳ ದಿಗ್ಬಂಧನವನ್ನು ಕೊನೆಗೊಳಿಸಲು ಬಯಸಿದೆ ಎಂದು ಹೇಳಿದೆ, ಜೊತೆಗೆ ಇಸ್ರೇಲಿ ವಸಾಹತು ವಿಸ್ತರಣೆಯನ್ನು ನಿಲ್ಲಿಸಲು ಅದು ಬಯಸುತ್ತದೆ. ಗುರುವಾರ, ವಿಶ್ವಸಂಸ್ಥೆ ತಜ್ಞರು ಗಾಜಾದಲ್ಲಿ ಮಾನವೀಯ ಕದನ ವಿರಾಮಕ್ಕೆ ಕರೆ ನೀಡಿದರು, ಪ್ಯಾಲೆಸ್ತೀನಿಯಾದವರು “ಜನಾಂಗೀಯ ಹತ್ಯೆಯ ಗಂಭೀರ ಅಪಾಯ” ದಲ್ಲಿದ್ದಾರೆ ಎಂದು ಹೇಳಿದರು.
“ಹಮಾಸ್ ಅನ್ನು ನಾಶಮಾಡುವ ಉದ್ದೇಶವನ್ನು ಸುಲಭವಾಗಿ ಸಾಧಿಸಲಾಗುವುದಿಲ್ಲ” ಎಂದು ಜೋರ್ಡಾನ್‌ನ ಮಾಜಿ ವಿದೇಶಾಂಗ ಮಂತ್ರಿ ಮತ್ತು ಉಪ ಪ್ರಧಾನ ಮಂತ್ರಿ ಮಾರ್ವಾನ್ ಅಲ್-ಮುಯಾಶರ್ ಹೇಳಿದರು, ಅವರು ಈಗ ವಾಷಿಂಗ್ಟನ್‌ನಲ್ಲಿ ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್‌ಗಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಂಘರ್ಷಕ್ಕೆ ಯಾವುದೇ ಮಿಲಿಟರಿ ಪರಿಹಾರವಿಲ್ಲ. ನಾವು ಕೆಲವು ಕರಾಳ ಕಾಲದಲ್ಲಿದ್ದೇವೆ. ಈ ಯುದ್ಧವು ಚಿಕ್ಕದಾಗಿರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್ 7 ರ ದಾಳಿಯಲ್ಲಿ ಹಮಾಸ್ ಬಂದೂಕುಧಾರಿಗಳು ಗಾಜಾ ಪಟ್ಟಿಯಿಂದ ನುಗ್ಗಿ 1,400 ಇಸ್ರೇಲಿಗಳನ್ನು ಕೊಂದು 239 ಒತ್ತೆಯಾಳುಗಳನ್ನು ತೆಗೆದುಕೊಂಡ ನಂತರ ಇಸ್ರೇಲ್ ಅಗಾಧ ವೈಮಾನಿಕ ಫೈರ್‌ಪವರ್ ಅನ್ನು ನಿಯೋಜಿಸಿದೆ.
ನಂತರದ ಇಸ್ರೇಲ್‌ ಪ್ರತಿದಾಳಿಯಲ್ಲಿ ಸಾವಿನ ಸಂಖ್ಯೆ 9,000 ಮೀರಿದೆ, ಪ್ರತಿ ದಿನವೂ ಹಿಂಸಾಚಾರವು ಪ್ರಪಂಚದಾದ್ಯಂತ ಪ್ರತಿಭಟನೆಗಳನ್ನು ಉತ್ತೇಜಿಸುತ್ತದೆ, 2 ದಶಲಕ್ಷಕ್ಕೂ ಹೆಚ್ಚು ಗಾಜಾ ಜನರು ಸಣ್ಣ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದಾರೆ.

ಹಮಾಸ್ ‘ಸಂಪೂರ್ಣವಾಗಿ ಸಿದ್ಧವಾಗಿದೆ’
ಹಮಾಸ್ ಅನ್ನು ಅಧ್ಯಯನ ಮಾಡಿದ ಕತಾರ್ ವಿಶ್ವವಿದ್ಯಾನಿಲಯದ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಪ್ಯಾಲೇಸ್ತಿನಿಯನ್ ಪರಿಣಿತ ಅದೀಬ್ ಜಿಯಾದೆಹ್ ಅವರು, ಇಸ್ರೇಲ್ ಮೇಲೆ ಆಕ್ರಮಣ ಅನುಸರಿಸಲು ಹಮಾಸ್‌ ಗುಂಪು ದೀರ್ಘಾವಧಿಯ ಯೋಜನೆಯನ್ನು ಹೊಂದಿರಬೇಕು ಎಂದು ಹೇಳಿದ್ದಾರೆ. “ಅಕ್ಟೋಬರ್ 7 ರ ದಾಳಿಯನ್ನು ತನ್ನ ಮಟ್ಟದ ಪ್ರಾವೀಣ್ಯತೆ, ಈ ಮಟ್ಟದ ಪರಿಣತಿ, ನಿಖರತೆ ಮತ್ತು ತೀವ್ರತೆಯಿಂದ ನಡೆಸಿದವರು ದೀರ್ಘಾವಧಿಯ ಯುದ್ಧಕ್ಕೆ ಸಿದ್ಧರಾಗಿರುತ್ತಾರೆ. ಸಂಪೂರ್ಣ ಸಿದ್ಧರಾಗದೆ ಹಮಾಸ್ ಅಂತಹ ದಾಳಿಯಲ್ಲಿ ತೊಡಗಲು ಸಾಧ್ಯವಿಲ್ಲ. ಮತ್ತು ಫಲಿತಾಂಶಕ್ಕಾಗಿ ಸಜ್ಜುಗೊಳಿಸಲಾಗಿದೆ” ಎಂದು ಜಿಯಾದೆಹ್‌ ರಾಯಿಟರ್ಸ್‌ಗೆ ತಿಳಿಸಿದರು.
ಮೂಲಗಳ ಪ್ರಕಾರ, ಇಸ್ರೇಲಿ ಅಧಿಕಾರಿಗಳು ಹಮಾಸ್‌ನ ಗೆರಿಲ್ಲಾ ತಂತ್ರಗಳನ್ನು ಎದುರಿಸಲು ಮತ್ತು ಆಕ್ರಮಣದ ನಂತರ ಅಂತಾರಾಷ್ಟ್ರೀಯ ಟೀಕೆಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ ಎಂದು ತಮ್ಮ ಅಮೇರಿಕನ್ ಸಹವರ್ತಿಗಳಿಗೆ ಒತ್ತಿಹೇಳಿದ್ದಾರೆ. ಹಮಾಸ್ ಅನ್ನು ತೊಡೆದುಹಾಕಲು ಅಥವಾ ಸಂಘಟನೆಯನ್ನು ತೀವ್ರವಾಗಿ ಹಾನಿ ಮಾಡುವ ಸಾಮರ್ಥ್ಯವನ್ನು ದೇಶ ಹೊಂದಿದೆಯೇ ಎಂಬುದು ಮುಕ್ತ ಪ್ರಶ್ನೆಯಾಗಿ ಉಳಿದಿದೆ ಎಂದು ಮೂಲಗಳು ಹೇಳಿವೆ.
ಗುಂಪಿನ ಮೂಲಗಳ ಪ್ರಕಾರ ಹಮಾಸ್ ಸುಮಾರು 40,000 ಹೋರಾಟಗಾರರನ್ನು ಹೊಂದಿದೆ. ನೂರಾರು ಕಿಲೋಮೀಟರ್ ಉದ್ದ ಮತ್ತು 80 ಮೀಟರ್ ಆಳದವರೆಗೆ ಅನೇಕ ವರ್ಷಗಳಿಂದ ನಿರ್ಮಿಸಲಾದ ಕೋಟೆಯ ಸುರಂಗಗಳ ವಿಶಾಲವಾದ ವೆಬ್ ಅನ್ನು ಬಳಸಿಕೊಂಡು ಅವರು ಗಾಜಾ ಪ್ರದೇಶದ ಸುತ್ತಲೂ ಓಡಾಡಬಹುದು. ಗುರುವಾರ, ಗಾಜಾದಲ್ಲಿ ಹಮಾಸ್‌ ಕಾರ್ಯಕರ್ತರು ಟ್ಯಾಂಕ್‌ಗಳಿಗೆ ಗುಂಡು ಹಾರಿಸಲು ಸುರಂಗಗಳಿಂದ ಹೊರಹೊಮ್ಮಿದರು.

ಇತ್ತೀಚಿನ ದಶಕಗಳಲ್ಲಿ ಹಮಾಸ್ ಗುಂಪು ಇಸ್ರೇಲ್‌ನೊಂದಿಗೆ ಸರಣಿ ಯುದ್ಧಗಳನ್ನು ನಡೆಸಿದೆ ಮತ್ತು ಹಮಾಸ್‌ನ ಬಾಹ್ಯ ಸಂಬಂಧಗಳ ಬೈರುತ್ ಮೂಲದ ಮುಖ್ಯಸ್ಥ ಅಲಿ ಬರಾಕಾ ಅವರ ಪ್ರಕಾರ, ಹಮಾಸ್‌ ಗುಂಪು ಕ್ರಮೇಣ ತನ್ನ ಮಿಲಿಟರಿ ಸಾಮರ್ಥ್ಯಗಳನ್ನು ವಿಶೇಷವಾಗಿ ಅದರ ಕ್ಷಿಪಣಿಗಳನ್ನು ಸುಧಾರಿಸಿದೆ ಎಂದು ಹೇಳಿದರು. 2008 ರ ಗಾಜಾ ಯುದ್ಧದಲ್ಲಿ, ಹಮಾಸ್ ರಾಕೆಟ್‌ಗಳು ಗರಿಷ್ಠ 40 ಕಿಮೀ (25 ಮೈಲುಗಳು) ವ್ಯಾಪ್ತಿಯನ್ನು ಹೊಂದಿದ್ದವು, ಆದರೆ ಅದು 2021 ರ ಸಂಘರ್ಷದ ವೇಳೆಗೆ 230 ಕಿಮೀಗೆ ಏರಿತು ಎಂದು ಅವರು ಹೇಳಿದರು.ಕಳೆದ ವಾರ ದಿ ವಾಷಿಂಗ್ಟನ್ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ, ಬೈರುತ್ ಮೂಲದ ಹಮಾಸ್ ನಾಯಕ ಅಲಿ ಬರಾಕಾ ಅವರು “ಹೋರಾಟಗಾರರು ಭೂಗತರಾಗಿದ್ದಾರೆ, ಯುದ್ಧಕ್ಕಾಗಿ ಕಾಯುತ್ತಿದ್ದಾರೆ” ಎಂದು ಹೇಳಿದ್ದಾರೆ. ಹಮಾಸ್‌ನ ಸೇನಾ ಅಂಗವಾದ ಇಝೆಡಿನ್ ಅಲ್-ಕಸ್ಸಾಮ್ ಬ್ರಿಗೇಡ್ಸ್‌ನಲ್ಲಿ 40,000 ಕಾರ್ಯಕರ್ತರು ಮತ್ತು ಇತರ ಬಣಗಳಲ್ಲಿ 20,000 ಮಂದಿ ಇದ್ದಾರೆ ಎಂದು ಅವರು ಹೇಳಿದ್ದಾರೆ. “ಅವರು 60,000 ಅನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಅವರು ಇಸ್ರೇಲಿ ಮಿಲಿಟರಿ ಉದ್ದೇಶಿಸಿ ಹೇಳಿದರು.
ಹಮಾಸ್ ಮಾರ್ಗಗಳು, ದಶಕಗಳಿಂದ ಕೈ ಉಪಕರಣಗಳಿಂದ ಅಗೆದು, ಪ್ರಿಕಾಸ್ಟ್ ಕಾಂಕ್ರೀಟ್‌ನಿಂದ ಬಲಪಡಿಸಲಾಗಿದೆ ಮತ್ತು ಹ್ಯಾಂಡ್ ಟ್ರಾಲಿಗಳು, ವಿದ್ಯುತ್ ದೀಪಗಳು, ಸಂವಹನ ನೋಡ್‌ಗಳು ಮತ್ತು ವಾತಾಯನ ಹೊಂದಿವೆ.

ಸುರಂಗ ಮಾರ್ಗ ಪತ್ತೆ ಹಚ್ಚಲು ವಿಶೇಷ ಯುದ್ಧ ಎಂಜಿನಿಯರಿಂಗ್ ಘಟಕ ಪ್ರಯತ್ನ…
ಇಸ್ರೇಲಿ ಮಿಲಿಟರಿ ತನ್ನ ಯಹಲೋಮ್ ವಿಶೇಷ ಯುದ್ಧ ಎಂಜಿನಿಯರಿಂಗ್ ಘಟಕದ ಸೈನಿಕರು ಇತರ ಪಡೆಗಳೊಂದಿಗೆ ಸುರಂಗ ಮಾರ್ಗಗಳನ್ನು ಪತ್ತೆಹಚ್ಚಲು ಮತ್ತು ನಾಶಮಾಡಲು ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತದೆ, ಇದನ್ನು ಇಸ್ರೇಲಿ ವಕ್ತಾರರು ಗಾಜಾದಲ್ಲಿ “ಸಂಕೀರ್ಣ ನಗರ ಹೋರಾಟ” ಎಂದು ಕರೆದರು.
ಇಸ್ರೇಲ್‌ನ ಭೂ ಪಡೆಗಳು ಗಾಜಾ ನಗರವನ್ನು ಸುತ್ತುವರೆದಿರುವಂತೆ, ಎರಡು ಕಡೆಯವರು ತಮ್ಮನ್ನು “ಮೂರು ಆಯಾಮದ” ನಗರ ಯುದ್ಧಕ್ಕೆ ಒಡ್ಡಿಕೊಳ್ಳಬಹುದು. ಹಮಾಸ್‌ ಗುಂಪಿನ ಯೋಧರು ಛಿದ್ರಗೊಂಡ ಕಟ್ಟಡಗಳ ಮೇಲ್ಛಾವಣಿಗಳಿಂದ, ಕಲ್ಲುಮಣ್ಣುಗಳಿಂದ ಚದುರಿದ ಬೀದಿಗಳಿಂದ ಮತ್ತು ಭೂಗತ ಸುರಂಗಗಳಿಂದ ಗುಂಡು ಹಾರಿಸುತ್ತಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ಹೇಳುತ್ತದೆ.
ಇಸ್ರೇಲಿ ಅಧಿಕಾರಿಗಳು ಅಂದಾಜಿನ ಪ್ರಕಾರ, 1,300 ಸುರಂಗಗಳಿವೆ, ಅದು ಗಾಜಾ ಪಟ್ಟಿಯಾದ್ಯಂತ 300 ಮೈಲುಗಳಷ್ಟು ವ್ಯಾಪಿಸಿದೆ, ಇದು ಕೇವಲ 25 ಮೈಲುಗಳಷ್ಟು ಉದ್ದವಾಗಿದೆ. ನೆಟ್‌ವರ್ಕ್ ಅನ್ನು ವಿಶ್ವದ ಅತ್ಯಂತ ವಿಸ್ತಾರವಾದ ಭೂಗತ ವೆಬ್‌ಗಳಲ್ಲಿ ಒಂದಾಗಿದೆ ಎಂದು ಇಸ್ರೇಲ್‌ ಮಿಲಿಟರಿ ವಿವರಿಸುತ್ತದೆ. ಗಾಜಾ ಆಸ್ಪತ್ರೆಗಳ ಕೆಳಗೂ ಭೂಗತ ಬಂಕರ್‌ಗಳಿವೆ ಎಂದು ಅದು ಹೇಳುತ್ತದೆ. ಆದರೆ ಪ್ಯಾಲೆಸ್ತೀನ್ ವೈದ್ಯರು ಇದನ್ನು ನಿರಾಕರಿಸಿದ್ದಾರೆ.
ಇಸ್ರೇಲಿ ಮಿಲಿಟರಿ ಪ್ರೋಟೋಕಾಲ್ ಸಾಮಾನ್ಯವಾಗಿ ಸಾಮಾನ್ಯ ಭೂಪಡೆಗಳು ಸುರಂಗಗಳಿಗೆ ಪ್ರವೇಶಿಸುವುದನ್ನು ನಿಷೇಧಿಸುತ್ತದೆ, ಏಕೆಂದರೆ ಸಾಯುವ ಅಥವಾ ಸೆರೆಯಾಗುವ ಅವಕಾಶ ತುಂಬಾ ಹೆಚ್ಚಾಗಿರುತ್ತದೆ. ಇಸ್ರೇಲಿಗಳು ದೂರದಿಂದ ಅವರನ್ನು ನಾಶಮಾಡಲು ಪ್ರಯತ್ನಿಸುವುದು ಅವರ ಸಂಭಾವ್ಯ ತಂತ್ರವಾಗಿದೆ.

 

 

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement