ವೀಡಿಯೊ | ಹಮಾಸ್‌ ನಾಯಕರು ಹಣ ಬೇಕಾದಾಗ ಯುದ್ಧ ಮಾಡ್ತಾರೆ, ಅದಕ್ಕಾಗಿ ಮಕ್ಕಳ ರಕ್ತ ಚೆಲ್ತಾರೆ : ಹಮಾಸ್‌ ಸಂಸ್ಥಾಪಕನ ಪುತ್ರ ಬಿಚ್ಚಿಟ್ಟ ಹಮಾಸ್‌ ಅಸಲಿಮುಖ | ವೀಕ್ಷಿಸಿ

ಹಮಾಸ್ ಸಂಸ್ಥಾಪಕ ನಾಯಕರಲ್ಲಿ ಒಬ್ಬರಾದ ಶೇಖ್ ಹಸನ್ ಯೂಸೆಫ್ ಅವರ ಪುತ್ರ ಮೊಸಾಬ್ ಹಸನ್ ಯೂಸೆಫ್ ಅವರು, ಹಮಾಸ್‌ ಸಂಘಟನೆ ಬಗ್ಗೆ ನೈಜತೆಯನ್ನು ಎಲ್ಲರಿಗೂ ತಿಳಿಸಿದ್ದಾರೆ.
ಮೊಸಾಬ್ ಹಸನ್ ಯೂಸೆಫ್ ಅವರು ಗಾಜಾದ ಜನರ ದೀರ್ಘಕಾಲದ ನೋವು ಮತ್ತು ಪ್ಯಾಲೆಸ್ತೀನಿಯನ್‌ ಬಗ್ಗೆ ಮೇಲೆ ಬೆಳಕು ಚೆಲ್ಲುವ ಸಂದೇಶವನ್ನು ನೀಡಿದ್ದಾರೆ. ಗಾಜಾದ ದುಃಖವನ್ನು ಶಾಶ್ವತಗೊಳಿಸುವಲ್ಲಿ ಭಯೋತ್ಪಾದಕ ಸಂಘಟನೆ ಪಾತ್ರದ ಬಗ್ಗೆ ಹೇಳಿದ್ದಾರೆ. “ಗಾಜಾದ ಜನರು ಇಷ್ಟು ದಿನ ತುಳಿತಕ್ಕೊಳಗಾಗಿದ್ದಾರೆ ಮತ್ತು ಅವರು ಮುತ್ತಿಗೆಯನ್ನು ಸಹಿಸಬೇಕಾಯಿತು, ಅವರು ಹಿಂಸೆಯನ್ನು ಸಹಿಸಬೇಕಾಯಿತು, ಹಮಾಸ್‌ ಗುಂಪಿನ ಅಧಿಕಾರದ ಲಾಲಸೆಗಾಗಿ ಮತ್ತು ಹಮಾಸ್‌ನ ರಾಜಕೀಯ ಮಹತ್ವಾಕಾಂಕ್ಷೆಗಾಗಿ ಅನೇಕ ಯುದ್ಧಗಳನ್ನು ಎದುರಿಸಬೇಕಾಯಿತು” ಎಂದು ಅವರು ಹೇಳಿದ್ದಾರೆ.
ಇಸ್ರೇಲ್ ಡಿಫೆನ್ಸ್ ಫೋರ್ಸಸ್ (IDF) ಹಂಚಿಕೊಂಡಿರುವ ವೀಡಿಯೊದಲ್ಲಿ ಅವರು ಮಾತನಾಡಿದ್ದಾರೆ. ಐಡಿಎಫ್‌ X ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಯೂಸೆಫ್ ಅವರು ಹಮಾಸ್ ಬಗ್ಗೆ ಬಹಳಷ್ಟು ಮಾತನಾಡಿದ್ದಾರೆ.
ಹಮಾಸ್‌ ನ ಅಧಿಕಾರದ ಲಾಲಸೆ ಮತ್ತು ಅದರ ರಾಜಕೀಯ ಲಾಭಕ್ಕಾಗಿ ಗಾಜಾದ ಜನರು ನರಳುತ್ತಿದ್ದಾರೆ ಎಂದು ಎರಡು ನಿಮಿಷಗಳ ಸುದೀರ್ಘ ವೀಡಿಯೊದಲ್ಲಿ ಯೂಸೆಫ್ ಹೇಳಿದ್ದಾರೆ.
ಸಂಘಟನೆಯೊಳಗೆ ನಾಯಕತ್ವದ ಸ್ಥಾನ ವಹಿಸಿಕೊಳ್ಳಲು ಚಿಕ್ಕ ವಯಸ್ಸಿನಿಂದಲೇ ಬೆಳೆಸಲ್ಪಟ್ಟ ಮೊಸಾಬ್ ಹಸನ್ ಯೂಸೆಫ್, ನಂತರ ಜೀವನದಲ್ಲಿ ಹಮಾಸ್‌ ಗುಂಪಿನ ರಾಜಕೀಯ ಮತ್ತು ಮಿಲಿಟರಿ ಉದ್ದೇಶಗಳನ್ನು ತಿರಸ್ಕರಿಸಿದರು ಮತ್ತು ಕ್ರೈಸ್ತ ಧರ್ಮವನ್ನು ಅಳವಡಿಸಿಕೊಂಡರು.

ಹಮಾಸ್‌ ಗೆ ಯುದ್ಧ ಒಂದು ಹಣಕಾಸಿನ ಆಟ
ಹಮಾಸ್ ಗುಂಪಿನವರು ಹಣ ಬಯಸಿದಾಗ ಯುದ್ಧ ಪ್ರಾರಂಭಿಸುತ್ತಾರೆ. ಅವರು ಅದಕ್ಕಾಗಿ ಮಕ್ಕಳ ರಕ್ತವನ್ನು ಚೆಲ್ಲುತ್ತಾರೆ. ಇದು ಅವರ ಅವರಿಗೆ ಆಟ ಎನ್ನುವಂತಾಗಿದೆ ಎಂದು ಭಯೋತ್ಪಾದಕ ಗುಂಪಿನಿಂದ ಪಕ್ಷಾಂತರಗೊಂಡ ಯೂಸೆಫ್ ಹೇಳಿದ್ದಾರೆ.
ವೀಡಿಯೊ ಸಂದೇಶದಲ್ಲಿ, ಮೊಸಾಬ್ ಹಸನ್ ಯೂಸೆಫ್ ಅವರು, ಹಮಾಸ್ ಪದೇ ಪದೇ ಘರ್ಷಣೆಗಳನ್ನು ಪ್ರಾರಂಭಿಸುತ್ತದೆ, ಇದು ಅವರ ಹಣಕಾಸಿನ ಉದ್ದೇಶಗಳೊಂದಿಗೆ ಸಂಬಂಧ ಹೊಂದಿದೆ ಮತ್ತು ಹಾಗೆ ಮಾಡುವುದರಿಂದ ಮಕ್ಕಳು ಸೇರಿದಂತೆ ಅಸಂಖ್ಯಾತ ಮುಗ್ಧ ಜೀವಗಳನ್ನು ಹಮಾಸ್‌ನವರು ಅಪಾಯಕ್ಕೆ ಸಿಲುಕಿಸುತ್ತಾರೆ ಎಂದು ವಾದಿಸಿದರು. ಈ ಕ್ರಮಗಳ ಭೀಕರ ಪರಿಣಾಮಗಳನ್ನು ಒತ್ತಿಹೇಳುವ ಒಂದು ದುರಂತ ಘಟನೆಯೆಂದರೆ, ಆಸ್ಪತ್ರೆಯಲ್ಲಿ ಆಶ್ರಯ ಪಡೆದ ನೂರಾರು ನಿರಾಶ್ರಿತರನ್ನು ಸಾವಿಗೆ ಕಾರಣವಾದ ಏಕೈಕ ಮಿಸ್‌ಫೈರ್. ಜವಾಬ್ದಾರಿಯನ್ನು ತೆಗೆದುಕೊಳ್ಳುವ ಬದಲು, ಹಮಾಸ್ ಈ ದುರಂತಗಳಿಗೆ ಇಸ್ರೇಲ್ ಅನ್ನು ದೂಷಿಸಲು ಪ್ರಯತ್ನಿಸುತ್ತದೆ, ಈ ತಂತ್ರವನ್ನು ‘ಸನ್ ಆಫ್ ಹಮಾಸ್’ ಪುಸ್ತಕದ ಲೇಖಕರಾದ ಮೊಸಾಬ್ ಹಸನ್ ಯೂಸೆಫ್ ʼ ಇದು ಸುಳ್ಳು ನಿರೂಪಣೆಯನ್ನು ಕುಶಲತೆಯಿಂದ ನಿರ್ವಹಿಸುವ ಪ್ರಯತ್ನʼ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿ ರಾಮಲಲ್ಲಾ ದರ್ಶನ ಪಡೆದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

ಇಸ್ರೇಲ್ ಪ್ಯಾಲೆಸ್ತೀನ್ ರಕ್ತಕ್ಕಾಗಿ ಹಾತೊರೆಯುತ್ತಿಲ್ಲ…..
“ಅವರ ಮಿಸ್‌ಫೈರ್ ಆಸ್ಪತ್ರೆಯಲ್ಲಿ ಆಶ್ರಯ ಪಡೆದ ನೂರಾರು ನಿರಾಶ್ರಿತರನ್ನು ಕೊಂದಿತು ಮತ್ತು ಅದಕ್ಕೆ ಅವರು ಇಸ್ರೇಲ್ ಅನ್ನು ದೂರುತ್ತಾರೆ. ನಾವು ಇಲ್ಲಿ ಏನು ಮಾತನಾಡುತ್ತಿದ್ದೇವೆ? ಇಸ್ರೇಲ್ ಪ್ರಜಾಪ್ರಭುತ್ವ ದೇಶವಾಗಿದೆ, ಇಸ್ರೇಲ್ ಜವಾಬ್ದಾರಿಯುತವಾಗಿದೆ, ಇಸ್ರೇಲ್ ಪ್ಯಾಲೆಸ್ತೀನ್ ರಕ್ತಕ್ಕಾಗಿ ಹಾತೊರೆಯುತ್ತಿಲ್ಲ, ಆದರೆ, ಪ್ಯಾಲೆಸ್ತೀನ್ ಮಕ್ಕಳು, ಪ್ಯಾಲೆಸ್ತೀನ್ ಸಮಾಜವನ್ನು ಈ ಅಪರಾಧಿಗಳು ಹೈಜಾಕ್ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಯೂಸೆಫ್ ಅವರು ಹಮಾಸ್‌ ಗಾಗಿಯೂ ಸಂದೇಶ ಹಂಚಿಕೊಂಡಿದ್ದು, ನೀವು (ಹಮಾಸ್) ರಕ್ಷಣೆಯಿಲ್ಲದ ನಾಗರಿಕರ ಜೀವಗಳನ್ನು ಅಪಾಯಕ್ಕೆ ಒಳಪಡಿಸುತ್ತೀರಿ, ಜನರು ಆಡಳಿತ ನಡೆಸಲು ನಿಮಗೆ ವಹಿಸಿಕೊಟ್ಟರು, ಆದರೆ ನೀವು ಅವರನ್ನು ಮಾನವ ಗುರಾಣಿಗಳಾಗಿ ಬಳಸುವುದನ್ನು ಮಾಡಬೇಡಿ. ಗಾಜಾದಲ್ಲಿ ನಿರಾಶ್ರಿತರು ಹಸಿವಿನಿಂದ ಬಳಲುತ್ತಿರುವಾಗ ನೀವು ಐಷಾರಾಮಿ ಬದುಕು ನಡೆಸುತ್ತಿದೀರಿ ಎಂದು ಹೇಳಿದ್ದಾರೆ.
ನೀವು ನಿಮ್ಮ ಆದರ್ಶಗಳನ್ನು ಗೌರವಿಸುತ್ತೀರಿ. ನಿಮ್ಮ ನಿಷ್ಪ್ರಯೋಜಕ ಪ್ರಯತ್ನವು ಪ್ಯಾಲೆಸ್ತೀನ್ ರಾಷ್ಟ್ರವನ್ನು ನಿರ್ಮಿಸಲು ಅಲ್ಲ, ಬದಲಾಗಿ ಯಾವಾಗಲೂ ಇಸ್ರೇಲ್ ಅನ್ನು ನಾಶಮಾಡುವುದಾಗಿದೆ ಎಂದು ಹರಿಹಾಯ್ದಿದ್ದಾರೆ.

ಮೊಸಾಬ್ ಹಸನ್ ಯೂಸೆಫ್ ಯಾರು?
ಮೊಸಾಬ್ ಹಸನ್ ಯೂಸೆಫ್ ಹಮಾಸ್ ಸಂಸ್ಥಾಪಕ ನಾಯಕರಲ್ಲಿ ಒಬ್ಬರಾದ ಶೇಖ್ ಹಸನ್ ಯೂಸೆಫ್ ಅವರ ಮಗ.
ಈ ವರ್ಷದ ಅಕ್ಟೋಬರ್ ಮಧ್ಯದಲ್ಲಿ ಪಶ್ಚಿಮ ದಂಡೆಯಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಅವರ ತಂದೆಯನ್ನು ಬಂಧಿಸಲಾಯಿತು.
‘ಗ್ರೀನ್ ಪ್ರಿನ್ಸ್’ ಎಂದು ಕರೆಯಲ್ಪಡುವ ಯೂಸೆಫ್, ಹಮಾಸ್‌ನಿಂದ ಪಕ್ಷಾಂತರಗೊಂಡಿದ್ದಾರೆ ಮತ್ತು 1997 ರಿಂದ 2007 ರವರೆಗೆ ಇಸ್ರೇಲಿ ಗೂಢಚಾರರಾಗಿ ಸೇವೆ ಸಲ್ಲಿಸಿದ್ದರು. ಅವರು ಆತ್ಮಹತ್ಯಾ ಬಾಂಬ್ ದಾಳಿಗಳು ಮತ್ತು ಭಯೋತ್ಪಾದಕ ಕೃತ್ಯಗಳನ್ನು ತಡೆಯಲು ಸಹಾಯ ಮಾಡುವ ಅಮೂಲ್ಯವಾದ ಗುಪ್ತಚರ ಮಾಹಿತಿಯನ್ನು ಒದಗಿಸಿದರು.
ಅಮೇರಿಕನ್ ಮಾಧ್ಯಮಗಳೊಂದಿಗಿನ ಅವರ ಹಲವಾರು ಸಂದರ್ಶನಗಳಲ್ಲಿ ಯೂಸೆಫ್ ಅವರು, ತಮ್ಮ ತಂದೆ ಮತ್ತು ಹಮಾಸ್ ಪ್ರಾದೇಶಿಕ ಪ್ಯಾಲೆಸ್ತೀನ್‌ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಮಾತ್ರ ಗಮನಹರಿಸಿಲ್ಲ. ಅವರು ಅಂತ್ಯವಿಲ್ಲದ ಧಾರ್ಮಿಕ ಯುದ್ಧದ ಮೇಲೆ ಕೇಂದ್ರೀಕರಿಸಿದ್ದಾರೆ ಎಂದು ಹೇಳಿದ್ದಾರೆ. ಇಸ್ರೇಲ್‌ನ ಅಸ್ತಿತ್ವವನ್ನು ಬೆಂಬಲಿಸುವ ಯಾರನ್ನಾದರೂ ಕೊಲ್ಲಲು ಹಮಾಸ್ ಬಯಸುತ್ತದೆ. ತರುವಾಯ ಇಸ್ಲಾಮಿಕ್ ದೇಶವನ್ನು ಸ್ಥಾಪಿಸಲು ಬಯಸುತ್ತದೆ ಎಂದು ಯೂಸೆಫ್ ಹೇಳಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ..| ದಕ್ಷಿಣ ಭಾರತದವರು ಆಫ್ರಿಕನ್ನರಂತೆ, ಪೂರ್ವ ಭಾರತದವರು ಚೀನಿಗಳಂತೆ ಕಾಣ್ತಾರೆ....: ಭಾರೀ ವಿವಾದ ಸೃಷ್ಟಿಸಿದ ಪಿತ್ರೋಡಾ ಹೇಳಿಕೆ ; ಕಾಂಗ್ರೆಸ್ಸಿಗೆ ಮುಜುಗರ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement