ವಿಡಿಯೋ | ಕಾರವಾರದಿಂದ ಹೊರಟಿದ್ದ ತೈಲ ಸಾಗಣೆ ಹಡಗಿಗೆ ಒಮಾನ್‌ ಕರಾವಳಿಯಲ್ಲಿ ಹೊತ್ತಿಕೊಂಡ ಬೆಂಕಿ

ಮಸ್ಕತ್ (ಓಮನ್): ಕಾರವಾರದಿಂದ ಹೊರಟಿದ್ದ ಓಮನ್ ಕರಾವಳಿಯ ಸಮುದ್ರ ಪ್ರದೇಶದಲ್ಲಿ ಹೋಗುತ್ತಿದ್ದ  ‘ಮಾರಿವೆಕ್ಸ್’ (Marivex) ಎಂಬ ತೈಲ ಸಾಗಣೆ ಹಡಗಿನಲ್ಲಿ (ಆಯಿಲ್ ಟ್ಯಾಂಕರ್) ಸೋಮವಾರ ಭಾರಿ ಅಗ್ನಿ ಅವಘಡ ಸಂಭವಿಸಿದೆ ಎಂದುವರದಿಯಾಗಿದೆ.  ಅದೃಷ್ಟವಶಾತ್, ಹಡಗಿನಲ್ಲಿದ್ದ ಎಲ್ಲಾ 24 ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ. ಇರಾನ್ ಮತ್ತು ಇಸ್ರೇಲ್ ಗಳು ಕದನ ವಿರಾಮವನ್ನು ಉಲ್ಲಂಘಿಸಿ ಮತ್ತೆ … Continued

7 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಇರಾನಿನಿಂದ ತೈಲ ಖರೀದಿಸಿದ ಭಾರತ

ನವದೆಹಲಿ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಕಾರಣ, ಭಾರತೀಯ ತೈಲ ಸಂಸ್ಕರಣಾಗಾರಗಳು ಇರಾನ್‌ನಿಂದ ಕಚ್ಚಾ ತೈಲವನ್ನು ಖರೀದಿಸಿವೆ ಎಂದು ಪೆಟ್ರೋಲಿಯಂ ಸಚಿವಾಲಯ ಶನಿವಾರ ತಿಳಿಸಿದೆ. ಅಮೆರಿಕದ ಒತ್ತಡದ ಹಿನ್ನೆಲೆಯಲ್ಲಿ ಮೇ 2019 ರಿಂದ ಭಾರತವು ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿತ್ತು. ಆದರೆ ಪ್ರಸ್ತುತ ಹಾರ್ಮುಜ್ ಜಲಸಂಧಿಯ ಮೂಲಕ … Continued

ನೆಮ್ಮದಿ ಸುದ್ದಿ : ‘ಹಾರ್ಮುಜ್’ ಮೂಲಕ ಭಾರತದ 2 ಎಲ್‌ಪಿಜಿ ಹಡಗುಗಳ ಸಂಚಾರಕ್ಕೆ ಇರಾನ್ ಅನುಮತಿ, ಒಂದು ಹಡಗು ಭಾರತಕ್ಕೆ ಪ್ರಯಾಣ

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಆವರಿಸಿರುವ ಬೆನ್ನಲ್ಲೇ, ಭಾರತ ಮತ್ತು ಇರಾನ್ ನಡುವೆ ಹಡಗುಗಳ ಸಂಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ರಾಜತಾಂತ್ರಿಕ ಒಪ್ಪಂದ ಏರ್ಪಟ್ಟಿದೆ. ಇದರ ಫಲವಾಗಿ, ಸುಮಾರು 40,000 ಮೆಟ್ರಿಕ್ ಟನ್ ಅಡುಗೆ ಅನಿಲ (LPG) ಹೊತ್ತ ‘ಶಿವಾಲಿಕ’ ಹೆಸರಿನ ಬೃಹತ್ ಹಡಗು ಹಾರ್ಮುಜ್ ಜಲಸಂಧಿಯನ್ನು ದಾಟಿದ್ದು, ಮುಂದಿನ 7 ದಿನಗಳಲ್ಲಿ ಭಾರತದ ಕರಾವಳಿಯನ್ನು ತಲುಪಲಿದೆ … Continued

ವೀಡಿಯೊ..| ಕಗ್ಗತ್ತಲಲ್ಲಿ ಸಾಹಸಮಯ ಪಯಣ : ಹಾರ್ಮುಜ್ ಜಲಸಂಧಿಯ ಅಪಾಯಕಾರಿ ಹಾದಿ ದಾಟಿ ಮುಂಬೈಗೆ ಬಂದ ಮೊದಲ ತೈಲ ನೌಕೆ

ಮುಂಬೈ: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾದ ನಂತರ, ಸೌದಿ ಅರೇಬಿಯಾದಿಂದ ಕಚ್ಚಾ ತೈಲವನ್ನು ಹೊತ್ತು ತರುತ್ತಿರುವ ‘ಶೆನ್ಲಾಂಗ್ ಸೂಯೆಜ್‌ಮ್ಯಾಕ್ಸ್’ (Shenlong Suezmax) ಎಂಬ ತೈಲ ನೌಕೆಯು ಸದ್ಯ ಇರಾನ್‌ ದಾಳಿಗೆ ಒಳಗಾಗಿರುವ ಹಾರ್ಮುಜ್ ಜಲಸಂಧಿಯನ್ನು ದಾಟಿ ಮುಂಬೈ ಬಂದರನ್ನು ಸುರಕ್ಷಿತವಾಗಿ ತಲುಪಿದೆ. ಇರಾನ್‌ ಯುದ್ಧದ ಹಿನ್ನೆಲೆಯಲ್ಲಿ ಈ ಮಾರ್ಗದ ಮೂಲಕ ಭಾರತಕ್ಕೆ ಬಂದ ಮೊದಲ ನೌಕೆ … Continued

ಒಮಾನ್ ಕೊಲ್ಲಿಯಲ್ಲಿ ತೈಲ ನೌಕೆ ಮೇಲೆ ಡ್ರೋನ್ ದಾಳಿ: ಭಾರತೀಯ ಸಿಬ್ಬಂದಿ ಸಾವು

ಮಸ್ಕತ್: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಒಮಾನ್ ಕೊಲ್ಲಿಯಲ್ಲಿ ಸ್ಫೋಟಕ ತುಂಬಿದ ಡ್ರೋನ್ ಬೋಟ್ ತೈಲ ನೌಕೆಯೊಂದಕ್ಕೆ ಡಿಕ್ಕಿ ಹೊಡೆದಿದೆ. ಈ ಭೀಕರ ದಾಳಿಯಲ್ಲಿ ಭಾರತೀಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಪ್ರಚಲಿತ ಸಂಘರ್ಷದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿರುವುದು ಇದೇ ಮೊದಲು. ಒಮಾನ್‌ನ ಅಧಿಕೃತ ಸುದ್ದಿ ಸಂಸ್ಥೆಯ ಪ್ರಕಾರ, … Continued