ಜಗತ್ತಿನಾದ್ಯಂತ ಸಾವಿರಾರು ಬಳಕೆದಾರರಿಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಏಕಾಏಕಿ ಡೌನ್, ಲಾಗೌಟ್: ಬಳಕೆದಾರರ ಪರದಾಟ

ಜನಪ್ರಿಯ ಜಾಲತಾಣಗಳಾದ ಫೇಸ್​ಬುಕ್, ಇನ್ಸ್ಟಾಗ್ರಾಮ್ (Facebook And Instagram) ಸರ್ವರ್ ಡೌನ್ ಆಗಿದ್ದು, ಜಗತಿನಾದ್ಯಂತ ಏಕಾಏಕಿ ಖಾತೆಗಳು ಲಾಗೌಟ್ ಆಗಿವೆ. ಮಂಗಳವಾರ (ಮಾರ್ಚ್ 05) ರಾತ್ರಿ 9ರ ಆಸುಪಾಸು ಏಕಾಏಕಿ ಫೇಸ್​ಬುಕ್​ ಹಾಗೂ ಇನ್ಸ್ಟಾಗ್ರಾಮ್ ಲಾಗೌಟ್ ಆಗಿವೆ. ​ಇದರಿಂದ ಬಳಕೆದಾರರು ಕಂಗಲಾಗಿದ್ದಾರೆ. ಔಟ್ಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ Downdetector.com ಪ್ರಕಾರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಮಂಗಳವಾರ ಜಗತ್ತಿನಾದ್ಯಂತ … Continued

ಇಸ್ರೇಲಿನಲ್ಲಿ ಕ್ಷಿಪಣಿ ದಾಳಿ ; ಒಬ್ಬ ಭಾರತೀಯ ಸಾವು, ಇಬ್ಬರಿಗೆ ಗಾಯ : ವರದಿ

ಜೆರುಸಲೇಂ: ಲೆಬನಾನ್‌ನಿಂದ ಉಡಾವಣೆಯಾದ ಟ್ಯಾಂಕ್ ವಿರೋಧಿ ಕ್ಷಿಪಣಿ ಇಸ್ರೇಲ್‌ನ ಉತ್ತರ ಗಡಿ ವಸತಿ ಪ್ರದೇಶವಾದ ಮಾರ್ಗಲಿಯೊಟ್ ಬಳಿಯ ಹಣ್ಣಿನ ತೋಟಕ್ಕೆ ಸೋಮವಾರ ಅಪ್ಪಳಿಸಿದಾಗ ಭಾರತೀಯ ಪ್ರಜೆಯೊಬ್ಬರು ಸಾವಿಗೀಡಾಗಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂವರು ಕೇರಳ ರಾಜ್ಯದವರು ಎಂದು ಹೇಳಲಾಗಿದೆ. ಸೋಮವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಇಸ್ರೇಲ್‌ನ ಉತ್ತರದ ಗಲಿಲಿ ಪ್ರದೇಶದಲ್ಲಿ … Continued

ಪಾಕಿಸ್ತಾನದ ಪ್ರಧಾನಿಯಾಗಿ 2ನೇ ಬಾರಿಗೆ ಶೆಹಬಾಜ್ ಷರೀಫ್ ಆಯ್ಕೆ

ಇಸ್ಲಾಮಾಬಾದ್‌ : ಪಾಕಿಸ್ತಾನದ ಸಂಸತ್ತು ಭಾನುವಾರ ಶೆಹಬಾಜ್ ಷರೀಫ್ ಅವರನ್ನು ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಮಾಡಿದೆ ಎಂದು ಜಿಯೋ ಟಿವಿ ವರದಿ ಮಾಡಿದೆ. ವಿರೋಧ ಪಕ್ಷಗಳ ಘೋಷಣೆ ನಡುವೆ, ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್‌-ಎನ್), ಪಾಕಿಸ್ತಾನ ಪೀಪಲ್ಸ್ ಪಕ್ಷದ(ಪಿಪಿಪಿ) ಪಕ್ಷಗಳ ಒಮ್ಮತದ ಪ್ರಧಾನಿಯಾಗಿ 72 ವರ್ಷದ ಶೆಹಬಾಜ್ ಷರೀಫ್ ಆಯ್ಕೆಯಾಗಿದ್ದಾರೆ. ಸಂಸತ್ತಿನಲ್ಲಿ ಷರೀಫ್ ಅವರಿಗೆ ಸ್ಪಷ್ಟ … Continued

ಸೌದಿ ಅರೇಬಿಯಾ ಮಸೀದಿಗಳಲ್ಲಿ ಇಫ್ತಾರ್ ನಿಷೇಧ, ರಂಜಾನ್‌ಗೆ ಮೊದಲು ಇಫ್ತಾರ್‌ ದೇಣಿಗೆ ಸಂಗ್ರಹಿಸಲು ಇಮಾಮ್‌ ಗಳಿಗೆ ನಿರ್ಬಂಧ

ರಿಯಾದ್ : ಈ ವರ್ಷದ ರಂಜಾನ್ ಹಬ್ಬಕ್ಕೆ ಮುನ್ನ ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಮಸೀದಿಗಳಲ್ಲಿ ಇಫ್ತಾರ್ ಕೂಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ ಎಂದು ವರದಿಯಾಗಿದೆ. ಸೌದಿ ಅರೇಬಿಯಾದ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯವು ರಂಜಾನ್ ತಿಂಗಳಲ್ಲಿ ಮಸೀದಿ ನೌಕರರು ಅನುಸರಿಸಬೇಕಾದ ಸೂಚನೆಗಳ ಹೇಳಿಕೆಯನ್ನು ಹಂಚಿಕೊಂಡ ನಂತರ ಈ ಆದೇಶವು ಬಂದಿದೆ. ಆದೇಶವು … Continued

ಅನ್ಯಗ್ರಹದ ಲೋಹಗಳಿಂದ ತಯಾರಿಸಲಾದ 3000 ವರ್ಷಗಳಷ್ಟು ಪುರಾತನ ಚಿನ್ನದ ಕಲಾಕೃತಿಗಳು ಪತ್ತೆ…!

ಈಗಿನ ಕಾಲದಲ್ಲಿ ನಾವು ಬಾಹ್ಯಾಕಾಶ ಮತ್ತು ಬ್ರಹ್ಮಾಂಡದ ರಹಸ್ಯಗಳನ್ನು ಆಳವಾಗಿ ಪರಿಶೀಲಿಸಲು ಪ್ರಯತ್ನಿಸುತ್ತಿರುವಾಗ, 3000 ವರ್ಷಗಳ ಹಿಂದೆ ಸ್ಪೇನ್‌ನ ಸ್ಥಳೀಯ ಜನರು ಭೂಮ್ಯತೀತ (ಅನ್ಯಲೋಕ)ದ ಮೂಲದ ಲೋಹಗಳಿಂದ ಕಲಾಕೃತಿ ಅಥವಾ ಆಭರಣಗಳನ್ನು ರಚಿಸಿರುವುದು ಪತ್ತೆಯಾಗಿದೆ…! ಅನ್ಯಲೋಕದ ವಸ್ತುಗಳಿಂದ ರಚಿಸಲಾದ, ಟ್ರೆಷರ್ ಆಫ್ ವಿಲ್ಲೆನಾ(Treasure of Villena)ವು 60 ವರ್ಷಗಳ ಹಿಂದೆ ಸ್ಪೇನ್‌ನಲ್ಲಿ ಕಂಡುಬಂದ ಕಂಚಿನ ನಿಧಿ … Continued

ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಪಟ್ಟಿ : ಮೊದಲ ಸ್ಥಾನ ಹಂಚಿಕೊಂಡ 6 ರಾಷ್ಟ್ರಗಳು ; ಭಾರತದ ಶ್ರೇಯಾಂಕ..?

ನವದೆಹಲಿ: ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸಿಂಗಾಪುರ ಮತ್ತು ಸ್ಪೇನ್ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳನ್ನು ಹೊಂದಿದ ರಾಷ್ಟ್ರಗಳಾಗಿವೆ. 194 ಜಾಗತಿಕ ತಾಣಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ಅನುಮತಿಸುವ ಮೂಲಕ, ಈ ರಾಷ್ಟ್ರಗಳು ಇತ್ತೀಚಿನ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿವೆ. ಈ ರಾಷ್ಟ್ರಗಳನ್ನು ಫಿನ್‌ಲ್ಯಾಂಡ್, ನೆದರ್‌ಲ್ಯಾಂಡ್ಸ್, ದಕ್ಷಿಣ ಕೊರಿಯಾ ಮತ್ತು ಸ್ವೀಡನ್ ದೇಶಗಳು ಅನುಸರಿಸುತ್ತವೆ, … Continued

ವೀಡಿಯೊ…| ಅವಧಿ ಮುಗಿದು ಕೈಬಿಟ್ಟ ಬೋಯಿಂಗ್ 737 ವಿಮಾನವನ್ನು ಐಷಾರಾಮಿ ವಿಲ್ಲಾ ಆಗಿ ಪರಿವರ್ತಿಸಿದ ರಷ್ಯಾದ ವ್ಯಕ್ತಿ

ಟ್ವಿಟರ್‌ನಲ್ಲಿ ಸಾಕಷ್ಟು ಸಕ್ರಿಯರಾಗಿರುವ ಕೈಗಾರಿಕೋದ್ಯಮಿ ಆನಂದ ಮಹೀಂದ್ರಾ ಅವರು ಶನಿವಾರ, ವಾಣಿಜ್ಯ ವಿಮಾನವನ್ನು ಐಷಾರಾಮಿ ವಿಲ್ಲಾವನ್ನಾಗಿ ಪರಿವರ್ತಿಸಿದ ವ್ಯಕ್ತಿಯ ಆಕರ್ಷಕ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ರಷ್ಯಾದ ವಾಣಿಜ್ಯೋದ್ಯಮಿ ಫೆಲಿಕ್ಸ್ ಡೆಮಿನ್ ಎಂದು ಗುರುತಿಸಲಾದ ವ್ಯಕ್ತಿ, ಕೈಬಿಟ್ಟಿದ್ದ ಬೋಯಿಂಗ್ 737 ವಿಮಾನವನ್ನು ಐಷಾರಾಮಿ ಖಾಸಗಿ ವಿಲ್ಲಾವನ್ನಾಗಿ ಪರಿವರ್ತಿಸಿದ್ದಾರೆ, ಇದು ಎರಡು ಮಲಗುವ ಕೋಣೆಗಳು, ಹಿಂದೂ ಮಹಾಸಾಗರದ ವೀಕ್ಷಣೆಗಳ ಜೊತೆಗೆ … Continued

ಜೈವಿಕ ಶಸ್ತ್ರಾಸ್ತ್ರದಿಂದ ನೈಸರ್ಗಿಕ ವಿಕೋಪಗಳ ವರೆಗೆ..: ಬಾಬಾ ವಂಗಾ 2024ರ ಭಯಾನಕ ಭವಿಷ್ಯವಾಣಿಗಳು ನಿಜವಾಗುತ್ತಿವೆಯೇ…?

ಬಾಬಾ ವಂಗಾ ಎಂಬ ಕಣ್ಣು ಕಾಣದ ಬಲ್ಗೇರಿಯಾದ ಅತೀಂದ್ರಿಯ ಮಹಿಳೆ ತನ್ನ ಜೀವಿತಾವಧಿಯಲ್ಲಿ ಅನೇಕ ಭವಿಷ್ಯ ನುಡಿದಿದ್ದಾರೆ ಎಂದು ಹೇಳಲಾಗುತ್ತದೆ. ಅವರ ಹೆಸರು ವಾಂಜೆಲಿಯಾ ಪಾಂಡೆವಾ ಗುಶ್ಟೆರೋವಾ , ಆದರೆ ಜನರು ಅವರನ್ನು ಬಾಬಾ ವಂಗಾ ಎಂದೇ ಕರೆಯುತ್ತಿದ್ದರು. ಅವರು ಸುಮಾರು 26 ವರ್ಷಗಳ ಹಿಂದೆ 84 ನೇ ವಯಸ್ಸಿನಲ್ಲಿ ನಿಧನರಾದರು, ಆದರೆ ಅವರ ಭವಿಷ್ಯವಾಣಿಗಳು … Continued

ರಷ್ಯಾದ ವಿಪಕ್ಷದ ನಾಯಕ-ಅಧ್ಯಕ್ಷ ಪುತಿನ್ ಕಟು ಟೀಕಾಕಾರ ಅಲೆಕ್ಸಿ ನವಲ್ನಿ ಆರ್ಕ್ಟಿಕ್ ಜೈಲಿನಲ್ಲಿ ನಿಧನ

ಮಾಸ್ಕೋ: 19 ವರ್ಷಗಳ ಅವಧಿಗೆ ಜೈಲುವಾಸ ಅನುಭವಿಸುತ್ತಿದ್ದ ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರು ಆರ್ಕ್ಟಿಕ್ ಜೈಲು ಕಾಲೋನಿಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ ಎಂದು ರಷ್ಯಾದ ಫೆಡರಲ್ ಪೆನಿಟೆನ್ಷಿಯರಿ ಸರ್ವಿಸ್‌ ತಿಳಿಸಿದೆ. ನವಾಲ್ನಿ ಅವರು ವಾಕಿಂಗ್ ಹೋದ ನಂತರ ಪ್ರಜ್ಞೆ ಕಳೆದುಕೊಂಡರು ಮತ್ತು ವೈದ್ಯರಿಂದ ಅವರನ್ನು ಪುನಶ್ಚೇತನಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಜೈಲು ಸರ್ವಿಸ್‌ ತಿಳಿಸಿದೆ. … Continued

ಕ್ಯಾಲಿಫೋರ್ನಿಯಾದ ಮನೆಯಲ್ಲಿ ಇಬ್ಬರು ಮಕ್ಕಳು ಸೇರಿ ಭಾರತೀಯ ಕುಟುಂಬದ ನಾಲ್ವರು ಶವವಾಗಿ ಪತ್ತೆ : ದಂಪತಿಗೆ ಗುಂಡಿನ ಗಾಯ

ಭಾರತೀಯ ಮೂಲದ ಕುಟುಂಬದ ನಾಲ್ವರು ಅಮೆರಿಕದ ಸ್ಯಾನ್ ಮಾಟಿಯೊ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ, ಪೊಲೀಸರು ಇದನ್ನು ಕೊಲೆ-ಆತ್ಮಹತ್ಯೆಯ ಪ್ರಕರಣ ಎಂದು ತನಿಖೆ ಮಾಡುತ್ತಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಫಾಕ್ಸ್ ಕೆಟಿವಿಯು ವರದಿಯ ಪ್ರಕಾರ, ಮೆಟಾ ಕಂಪನಿಯ ಮಾಜಿ ಇಂಜಿನಿಯರ್ ಆನಂದ ಸುಜಿತ ಹೆನ್ರಿ (42) ತನ್ನ 4 ವರ್ಷದ ಅವಳಿ ಗಂಡು ಮಕ್ಕಳನ್ನು … Continued