ವೀಡಿಯೊ: ಇಸ್ರೇಲಿ ವಿಮಾನಗಳು ಇರಾನ್‌ ಹಾರಿಸಿದ ನೂರಾರು ಡ್ರೋನ್‌ಗಳು, ಕ್ಷಿಪಣಿಗಳನ್ನು ತಡೆದದ್ದು ಹೇಗೆ..?

ತನ್ನ ಭೂಪ್ರದೇಶದ ಮೇಲೆ ಇರಾನ್ ಹಾರಿಸಿದ ನೂರಾರು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಇಸ್ರೇಲ್‌ ಹೇಗೆ ತಡೆದಿದೆ ಎಂಬುದನ್ನು ತೋರಿಸುವ ವೀಡಿಯೊವನ್ನು ಇಸ್ರೇಲ್ ಭಾನುವಾರ ಹಂಚಿಕೊಂಡಿದೆ. ಇರಾನ್‌ ರಾತ್ರಿ ವೇಳೆ ಇಸ್ರೇಲ್‌ ಮೇಲೆ ಕ್ಷಿಪಣಿ ಹಾಗೂ ಡ್ರೋನ್‌ ದಾಳಿ ನಡೆಸಿತು. ಏಪ್ರಿಲ್ 1 ರಂದು ಡಮಾಸ್ಕಸ್‌ನಲ್ಲಿರುವ ಇರಾನ್‌ ರಾಯಭಾರ ಕಚೇರಿಯ ಮೇಲೆ ನಡೆದ ದಾಳಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ … Continued

ಪಾಕಿಸ್ತಾನ : ಭಾರತೀಯ ಕೈದಿಯ ಹಂತಕನನ್ನು ಗುಂಡಿಕ್ಕಿ ಕೊಂದ ಬಂದೂಕುಧಾರಿಗಳು

ಪಾಕಿಸ್ತಾನದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದ ಭಾರತೀಯ ಕೈದಿ ಸರಬ್ಜಿತ್ ಸಿಂಗ್ ಹತ್ಯೆಯ ಆರೋಪಿ ಮತ್ತು ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ ನ ನಿಕಟವರ್ತಿ ಅಮೀರ್ ಸರ್ಫರಾಜ್ ತಾಂಬಾ ಎಂಬಾತನನ್ನು ಪಾಕಿಸ್ತಾನ ಪಂಜಾಬ್‌ನ ಲಾಹೋರ್‌ನಲ್ಲಿ ಭಾನುವಾರ ಅಪರಿಚಿತ ಬಂದೂಕುಧಾರಿಗಳಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ಇಸ್ಲಾಂಪುರ ಪ್ರದೇಶದಲ್ಲಿ … Continued

ವೀಡಿಯೊಗಳು..| ಪ್ರತೀಕಾರವಾಗಿ ಇರಾನ್​ನಿಂದ ಇಸ್ರೇಲ್​ ಮೇಲೆ 200 ಡ್ರೋನ್-ಕ್ಷಿಪಣಿಗಳಿಂದ ದಾಳಿ : ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಭೀತಿ

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ ಭೀತಿಯ ಕಾರ್ಮೋಡಗಳು ಸೃಷ್ಟಿಯಾಗಿವೆ. ಪ್ರಮುಖ ಬೆಳವಣಿಗೆಯಲ್ಲಿ ಸಿರಿಯಾದಲ್ಲಿನ ತನ್ನ ದೂತಾವಾಸ ಕಟ್ಟಡದ ಮೇಲಿನ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದ ಇರಾನ್ ಈಗ ಇಸ್ರೇಲ್ ಮೇಲೆ ಅಭೂತಪೂರ್ವ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್ ಮೇಲೆ 200 ಡ್ರೋನ್ ಮತ್ತು ಕ್ಷಿಪಣಿಗಳನ್ನು ಇರಾನ್‌ ಉಡಾಯಿಸಿದೆ. ಇರಾನ್ ಸ್ಫೋಟಕ ಡ್ರೋನ್‌ಗಳ ಸಮೂಹವನ್ನೇ … Continued

ಸಿಂಹವೂ ಅಲ್ಲ, ಹುಲಿಯೂ ಅಲ್ಲ : ಈ ಪುಟ್ಟ ಪ್ರಾಣಿಯೇ ವಿಶ್ವದ ಅತ್ಯಂತ ನಿರ್ಭೀತ ಪ್ರಾಣಿ…!

ಹುಲಿಗಳು ಮತ್ತು ಸಿಂಹಗಳಂತಹ ಪರಭಕ್ಷಕಗಳು ಕಾಡಿನಲ್ಲಿ ಅತ್ಯಂತ ಅಪಾಯಕಾರಿ ಮತ್ತು ನಿರ್ಭೀತ ಪ್ರಾಣಿಗಳು ಎಂಬುದು ಜನರಲ್ಲಿ ಒಂದು ಸಾಮಾನ್ಯ ಊಹೆಯಾಗಿದೆ. ಆದರೆ, ಸಿಂಹ ಅಥವಾ ಹುಲಿಗಳ ಮೇಲೆ ದಾಳಿ ಮಾಡಲೂ ಹಿಂಜರಿಯದ ಮತ್ತೊಂದು ಪ್ರಾಣಿ ಜೇನು ಬ್ಯಾಡ್ಜರ್. ಇದು ಪ್ರಪಂಚದ ಅತ್ಯಂತ ನಿರ್ಭೀತ ಪ್ರಾಣಿ ಎಂಬ ಖ್ಯಾತಿ ಗಳಿಸಿದೆ. ಅದರ ಸಣ್ಣ ಗಾತ್ರದ ಹೊರತಾಗಿಯೂ, ಈ … Continued

ಬಾಹ್ಯಾಕಾಶದಿಂದ ಸಂಪೂರ್ಣ ಸೂರ್ಯ ಗ್ರಹಣ ಹೇಗೆ ಕಾಣುತ್ತದೆ..? : ವೀಡಿಯೊ ಹಂಚಿಕೊಂಡ ನಾಸಾ | ವೀಕ್ಷಿಸಿ

ನ್ಯೂಯಾರ್ಕ್: ಮೆಕ್ಸಿಕೊ, ಕೆನಡಾ ಮತ್ತು ಅಮೆರಿಕದ ಕೆಲವು ಭಾಗಗಳಲ್ಲಿ ಲಕ್ಷಾಂತರ ಜನರು ಸೋಮವಾರ ಅಪರೂಪದ ಸಂಪೂರ್ಣ ಸೂರ್ಯಗ್ರಹಣವನ್ನು ವೀಕ್ಷಿಸಿದರು. ಉತ್ತರ ಅಮೆರಿಕದ ಸಾವಿರಾರು ಜನರು, ಮೆಕ್ಸಿಕೊದ ಫೆಸಿಫಿಕ್ ಕಡಲತೀರದಿಂದ ಅಮೆರಿಕ-ಕೆನಡಾದ ನಯನ ಮನೋಹರ ನಯಾಗರ ಜಲಪಾತದವರೆಗೆ ಸೋಮವಾರ ಪೂರ್ಣ ಸೂರ್ಯಗ್ರಹಣ ವೀಕ್ಷಣೆಗೆ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ನಾಸಾ ಸೂರ್ಯಗ್ರಹಣ ವೀಕ್ಷಣೆಗಾಗಿ ವಿಶೇಷ ವ್ಯವಸ್ಥೆಯನ್ನು ಏರ್ಪಡಿಸಿತ್ತು. … Continued

ಪೈಶಾಚಿಕ ಕೃತ್ಯ…: ಪತ್ನಿ ಹತ್ಯೆ ಮಾಡಿ 224 ತುಂಡುಗಳಾಗಿ ಕತ್ತರಿಸಿ ಒಂದು ವಾರ ಅಡುಗೆ ಮನೆಯಲ್ಲಿ ಇಟ್ಟುಕೊಂಡಿದ್ದ ವ್ಯಕ್ತಿ…!

ಬೆಚ್ಚಿಬೀಳಿಸಿದ ಭೀಕರ ಹತ್ಯೆಯೊಂದರಲ್ಲಿ, 28 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಚಾಕುವಿನಿಂದ ಇರಿದು ಕೊಂದು, ಆಕೆಯ ದೇಹವನ್ನು 200 ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ಒಂದು ವಾರದವರೆಗೆ ತನ್ನ ಅಡುಗೆಮನೆಯಲ್ಲಿ ಬಚ್ಚಿಟ್ಟಿದ್ದ ಘಟನೆ ಬ್ರಿಟನ್ನಿನಲ್ಲಿ ನಡೆದಿದೆ. ನಂತರ ಆತ ತನ್ನ ಸ್ನೇಹಿತನ ಸಹಾಯದಿಂದ ಪತ್ನಿಯ ದೇಹದ ತುಂಡುಗಳನ್ನು ನದಿಗೆ ಎಸೆದಿದ್ದಾನೆ. ನಿಕೋಲಸ್ ಮೆಟ್ಸನ್(28) ಎಂಬ ವ್ಯಕ್ತಿ … Continued

ʼಮೂಲ ಸೂಪರ್‌ಮ್ಯಾನ್ ಕಾಮಿಕ್ʼ ದಾಖಲೆ ಬೆಲೆ 49 ಕೋಟಿ ರೂ.ಗೆ ಹರಾಜು..!

ಸೂಪರ್‌ಮ್ಯಾನ್‌ನ ಐಕಾನಿಕ್ ಚೊಚ್ಚಲ ಪ್ರದರ್ಶನ ಒಳಗೊಂಡಿರುವ ಆಕ್ಷನ್ ಕಾಮಿಕ್ಸ್ ನಂ. 1 ರ ಮೂಲ ಆವೃತ್ತಿಯು ದಾಖಲೆ ಬೆಲೆ $6 ಮಿಲಿಯನ್‌ಗೆ (ಅಂದಾಜು 49 ಕೋಟಿ ರೂ.) ಹರಾಜಾಯಿತು. ಇತ್ತೀಚಿನ ಈ ಹರಾಜು 2022 ರಲ್ಲಿ ಸೂಪರ್‌ಮ್ಯಾನ್ ನಂ. 1 ರ $ 5.3 ಮಿಲಿಯನ್ (ಅಂದಾಜು 44 ಕೋಟಿ ರೂ.) ಮಾರಾಟದ ದಾಖಲೆಯನ್ನು ಇದು … Continued

ವೀಡಿಯೊ..| ಇದು ಪಾಕಿಸ್ತಾನ ಕ್ರಿಕೆಟ್‌ ವಿಷ್ಯ…! ಪಾಕಿಸ್ತಾನ ಕ್ರಿಕೆಟ್ ತಂಡದ ಸೇನಾ ಶೈಲಿ ತರಬೇತಿ ವೀಡಿಯೊ ನೋಡಿ ಅಭಿಮಾನಿಗಳು ದಿಗ್ಭ್ರಮೆ…!

2024 ರ ಟಿ 20 ವಿಶ್ವಕಪ್‌ಗೆ ಮುಂಚಿತವಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ ಕುತೂಹಲಕಾರಿ ತರಬೇತಿಯು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದೆ. ಮಾರ್ಕ್ಯೂ ಈವೆಂಟ್‌ಗೆ ಮುಂಚಿತವಾಗಿ ತಂಡದಲ್ಲಿ ಶಿಸ್ತು ಬರಲು ಮತ್ತು ತಂಡದ ಫಿಟ್‌ನೆಸ್ ಸುಧಾರಿಸಲು ಬಾಬರ್ ಅಜಮ್ ಮತ್ತು ಅವರ ತಂಡ ಮಿಲಿಟರಿ ತರಬೇತಿಯನ್ನು ಪಡೆಯಲಿದೆ ಎಂದು ಕೆಲವು ವಾರಗಳ ಹಿಂದೆ ಪ್ರಕಟಿಸಲಾಗಿತ್ತು. ಆದರೆ, ಪಾಕಿಸ್ತಾನ … Continued

ವೀಡಿಯೊ…| ನಮಗೆ ಉಪನ್ಯಾಸ ನೀಡುವ ಹಕ್ಕನ್ನು ನಿಮಗೆ ನೀಡಿದವರು ಯಾರು..?: ʼ ಪಾಶ್ಚಿಮಾತ್ಯ ಬೂಟಾಟಿಕೆʼ ವಿರುದ್ಧ ಬಿಬಿಸಿ ವರದಿಗಾರನಿಗೆ ಪಾಠ ಮಾಡಿದ ಗಯಾನಾ ಅಧ್ಯಕ್ಷ

ಜಾರ್ಜ್‌ಟೌನ್: ಇಂಗಾಲದ ಹೊರಸೂಸುವಿಕೆಯ ಮೇಲೆ “ಪಾಶ್ಚಿಮಾತ್ಯ ಬೂಟಾಟಿಕೆ” ಯ ವಿರುದ್ಧ ಗಯಾನೀಸ್ ಅಧ್ಯಕ್ಷ ಇರ್ಫಾನ್ ಅಲಿ ವಾಗ್ದಾಳಿ ಭಾರೀ ವೈರಲ್ ಆಗಿದೆ. ಅಧ್ಯಕ್ಷ ಇರ್ಫಾನ್ ಅಲಿ ಅವರು ಬಿಬಿಸಿ (BBC) ಪತ್ರಕರ್ತ ಸ್ಟೀಫನ್ ಸಕ್ಕರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು, ಅವರು ಆ ದೇಶದ ಕರಾವಳಿಯಲ್ಲಿ ತೈಲ ಮತ್ತು ಅನಿಲವನ್ನು ಹೊರತೆಗೆಯಲು ಯೋಜನೆ ಕುರಿತಾದ ಪ್ರಶ್ನೆ … Continued

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ವ್ಯಭಿಚಾರ ನಡೆಸಿದರೆ ಸಾರ್ವಜನಿಕವಾಗಿ ಕಲ್ಲೆಸೆದು ಸಾಯಿಸುವ ಶಿಕ್ಷೆ : ತಾಲಿಬಾನ್‌ ಮುಖ್ಯಸ್ಥರ ಘೋಷಣೆ

ತಾಲಿಬಾನ್ ಅಫ್ಘಾನಿಸ್ತಾನವನ್ನು ಮತ್ತೆ ಕರಾಳ ಯುಗಕ್ಕೆ ಕೊಂಡೊಯ್ಯಬಹುದೆಂಬ ಆತಂಕಗಳು ನಿಜವಾಗಬಹುದು. ತಾಲಿಬಾನ್ ಮುಖ್ಯಸ್ಥ ಮುಲ್ಲಾ ಹಿಬತುಲ್ಲಾ ಅಖುಂದ್ಜಾದಾ ಅವರು ಅಫ್ಘಾನಿಸ್ತಾನದಲ್ಲಿ ಮಹಿಳೆಯರು ವ್ಯಭಿಚಾರ ನಡೆಸಿದರೆ ಸಾರ್ವಜನಿಕವಾಗಿ ಥಳಿಸಿ ಕಲ್ಲೆಸೆದು ಕೊಲ್ಲಲಾಗುವುದು ಎಂದು ಸರ್ಕಾರಿ ದೂರದರ್ಶನದಲ್ಲಿ ಧ್ವನಿ ಸಂದೇಶದಲ್ಲಿ ಪ್ರಕಟಿಸಿದ್ದಾರೆ. ಅವರು ಪಾಶ್ಚಿಮಾತ್ಯ ಪ್ರಜಾಪ್ರಭುತ್ವದ ವಿರುದ್ಧ ಹೋರಾಡುವುದನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದರು ಎಂದು ದಿ ಟೆಲಿಗ್ರಾಫ್ ವರದಿ … Continued