ಪಾಕಿಸ್ತಾನದ ಪ್ರಧಾನಿಯಾಗಿ 2ನೇ ಬಾರಿಗೆ ಶೆಹಬಾಜ್ ಷರೀಫ್ ಆಯ್ಕೆ

ಇಸ್ಲಾಮಾಬಾದ್‌ : ಪಾಕಿಸ್ತಾನದ ಸಂಸತ್ತು ಭಾನುವಾರ ಶೆಹಬಾಜ್ ಷರೀಫ್ ಅವರನ್ನು ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಮಾಡಿದೆ ಎಂದು ಜಿಯೋ ಟಿವಿ ವರದಿ ಮಾಡಿದೆ.
ವಿರೋಧ ಪಕ್ಷಗಳ ಘೋಷಣೆ ನಡುವೆ, ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್‌-ಎನ್), ಪಾಕಿಸ್ತಾನ ಪೀಪಲ್ಸ್ ಪಕ್ಷದ(ಪಿಪಿಪಿ) ಪಕ್ಷಗಳ ಒಮ್ಮತದ ಪ್ರಧಾನಿಯಾಗಿ 72 ವರ್ಷದ ಶೆಹಬಾಜ್ ಷರೀಫ್ ಆಯ್ಕೆಯಾಗಿದ್ದಾರೆ. ಸಂಸತ್ತಿನಲ್ಲಿ ಷರೀಫ್ ಅವರಿಗೆ ಸ್ಪಷ್ಟ ಬಹುಮತ ಸಿಕ್ಕಿದೆ.
336 ಸದಸ್ಯರ ಸಂಸತ್ತಿನಲ್ಲಿ ಶೆಹಬಾಜ್ ಪರ 201 ಮತಗಳು ಬಿದ್ದಿದ್ದು, ಇದು ಸರಳ ಬಹುಮತಕ್ಕಿಂತ 32 ಹೆಚ್ಚಾಗಿದೆ. ಶೆಹಬಾಜ್ ಪ್ರತಿಸ್ಪರ್ಧಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರೀಕ್ ಇ ಇನ್‌ಸಾಫ್(ಪಿಟಿಐ) ಪಕ್ಷದ ಪ್ರಧಾನಿ ಅಭ್ಯರ್ಥಿ ಓಮರ್ ಅಯೂಬ್ ಖಾನ್ ಅವರಿಗೆ ಕೇವಲ 92 ಮತಗಳು ಬಿದ್ದಿವೆ. ಮೂರು ವಾರಗಳ ನಂತರ ಅನಿಶ್ಚಿತ ರಾಷ್ಟ್ರೀಯ ಚುನಾವಣೆಗಳು ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ವಿಳಂಬಕ್ಕೆ ಕಾರಣವಾಯಿತು.

ಶೆಹಬಾಜ್ ಅವರನ್ನು ಪಾಕಿಸ್ತಾನದ 24ನೇ ಪ್ರಧಾನಿಯಾಗಿ ನೇಮಕ ಮಾಡಿದ್ದು, ರಾಷ್ಟ್ರೀಯ ಸಂಸತ್ತಿನ ಸ್ಪೀಕರ್ ಸರ್ದಾರ್ ಅಯಾಜ್ ಸಾದಿಕ್ ಫಲಿತಾಂಶ ಪ್ರಕಟಿಸಿದ್ದಾರೆ. ಸೋಮವಾರ ಶೆಹಬಾಜ್ ಅವರಿಗೆ ಪ್ರಮಾಣ ವಚನ ಬೋಧಿಸಲಾಗುತ್ತದೆ. ಪಿಟಿಐ ಬೆಂಬಲಿತ ಸಂಸದರ ಘೋಷಣೆಗಳು ಮತ್ತು ಗದ್ದಲದ ನಡುವೆ ನೂತನ ಸಂಸತ್ತಿನ ಕಲಾಪ ಆರಂಭವಾಗಿತ್ತು.
ಕೆಲವರು ಆಜಾದಿ ಎಂದು ಘೋಷಣೆ ಕೂಗಿದರೆ, ಮತ್ತೆ ಕೆಲವರು ಇಮ್ರಾನ್ ಖಾನ್ ಚಿತ್ರವಿದ್ದ ಭಿತ್ತಿ ಪತ್ರ ಹಿಡಿದಿದ್ದರು.
ಪಾಕಿಸ್ತಾನದ ಮತದಾರರು ಫೆಬ್ರವರಿ 8 ರಂದು ಮತದಾನ ನಡೆದಿತ್ತು.
72 ವರ್ಷದ ಷರೀಫ್ ಅವರು ಮೂರು ಬಾರಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರ ಕಿರಿಯ ಸಹೋದರರಾಗಿದ್ದಾರೆ, ಅವರು ತಮ್ಮ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪಕ್ಷದ ಚುನಾವಣೆಯ ನೇತೃತ್ವ ವಹಿಸಿದ್ದರು.
ಖಾನ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳನ್ನು ಗಳಿಸಿದರು. ಆದರೆ PML-N ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP) ಸಮ್ಮಿಶ್ರ ಸರ್ಕಾರವನ್ನು ರಚಿಸಲು ಒಪ್ಪಿಕೊಂಡಿತು, ಇದು ಶೆಹಬಾಜ್ ಷರೀಫ್ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲು ಸಾಧ್ಯವಾಗಿಸಿತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement