ಅನ್ಯಗ್ರಹದ ಲೋಹಗಳಿಂದ ತಯಾರಿಸಲಾದ 3000 ವರ್ಷಗಳಷ್ಟು ಪುರಾತನ ಚಿನ್ನದ ಕಲಾಕೃತಿಗಳು ಪತ್ತೆ…!

ಈಗಿನ ಕಾಲದಲ್ಲಿ ನಾವು ಬಾಹ್ಯಾಕಾಶ ಮತ್ತು ಬ್ರಹ್ಮಾಂಡದ ರಹಸ್ಯಗಳನ್ನು ಆಳವಾಗಿ ಪರಿಶೀಲಿಸಲು ಪ್ರಯತ್ನಿಸುತ್ತಿರುವಾಗ, 3000 ವರ್ಷಗಳ ಹಿಂದೆ ಸ್ಪೇನ್‌ನ ಸ್ಥಳೀಯ ಜನರು ಭೂಮ್ಯತೀತ (ಅನ್ಯಲೋಕ)ದ ಮೂಲದ ಲೋಹಗಳಿಂದ ಕಲಾಕೃತಿ ಅಥವಾ ಆಭರಣಗಳನ್ನು ರಚಿಸಿರುವುದು ಪತ್ತೆಯಾಗಿದೆ…!
ಅನ್ಯಲೋಕದ ವಸ್ತುಗಳಿಂದ ರಚಿಸಲಾದ, ಟ್ರೆಷರ್ ಆಫ್ ವಿಲ್ಲೆನಾ(Treasure of Villena)ವು 60 ವರ್ಷಗಳ ಹಿಂದೆ ಸ್ಪೇನ್‌ನಲ್ಲಿ ಕಂಡುಬಂದ ಕಂಚಿನ ನಿಧಿ ನಿಕ್ಷೇಪವಾಗಿದೆ. ಈ ತಿಂಗಳ ಆರಂಭದಲ್ಲಿ ಲೈವ್ ಸೈನ್ಸ್ ಪ್ರಕಟಿಸಿದ ವರದಿಯಲ್ಲಿ 1963 ರಲ್ಲಿ ಪತ್ತೆಯಾದ ಈ ನಿಧಿಯು ಚಿನ್ನ, ಬೆಳ್ಳಿ, ಅಂಬರ್ ಮತ್ತು ಕಬ್ಬಿಣದಿಂದ ಅಂದವಾಗಿ ವಿನ್ಯಾಸಗೊಳಿಸಲಾದ 59 ಬಾಟಲಿಗಳು, ಬಟ್ಟಲುಗಳು ಮತ್ತು ಆಭರಣದ ತುಣುಕುಗಳನ್ನು ಒಳಗೊಂಡಿದೆ ಎಂದು ಹೇಳಿದೆ.
ನಿಧಿಯನ್ನು ಕಂಡುಹಿಡಿದ ಸಂಶೋಧಕರು ಕೆಲವು ಕಬ್ಬಿಣದ ತುಂಡುಗಳ ಬಗ್ಗೆ ಕೆಲವು ಕುತೂಹಲಕಾರಿ

ವೈಶಿಷ್ಟ್ಯಗಳನ್ನು ಗುರುತಿಸಿದ್ದಾರೆ. ವರದಿಗಳ ಪ್ರಕಾರ, ತಜ್ಞರು ವಸ್ತುಗಳನ್ನು ‘ಕಪ್ಪು ಸೀಸದ ಲೋಹದಿಂದ ಮಾಡಲ್ಪಟ್ಟಿದೆ ಎಂದು ಸೂಚಿಸಿದ್ದಾರೆ. ವಸ್ತುಗಳು ಪ್ರಾಥಮಿಕವಾಗಿ ಮುರಿದುಹೋಗಿವೆ ಮತ್ತು ಕೆಲವು ಸ್ಥಳಗಳಲ್ಲಿ ಕಬ್ಬಿಣದ ಆಕ್ಸೈಡ್‌ನಿಂದ ಲೇಪಿತವಾಗಿವೆ.
ಇತ್ತೀಚಿನ ವಿಶ್ಲೇಷಣೆಯ ಪ್ರಕಾರ, ಎರಡು ಕಲಾಕೃತಿಗಳಲ್ಲಿ ಬಳಸಿದ ಕಬ್ಬಿಣವು ಸುಮಾರು ಹತ್ತು ಲಕ್ಷ ವರ್ಷಗಳ ಹಿಂದೆ ಭೂಮಿಗೆ ಬಡಿದ ಉಲ್ಕಾಶಿಲೆಯಿಂದ ಬಂದಿದ್ದಾಗಿದೆ. ಈ ತನಿಖೆಯಲ್ಲಿ ಎರಡು ಕಬ್ಬಿಣದ ತುಂಡುಗಳನ್ನು-ಚಿನ್ನದ ಪದರದಲ್ಲಿ ಮುಚ್ಚಿದ ಟೊಳ್ಳಾದ ಗೋಲಾಕಾರದ ಮತ್ತು C ಆಕಾರದ ಬಳೆಗೆ ಬಳಸಲಾಗಿದೆ. ಈ ಎರಡು ವಸ್ತುಗಳು ಕ್ರಿಸ್ತಪೂರ್ವ 1400 ಮತ್ತು 1200 B.C. ನಡುವೆ ಮಾಡಲ್ಪಟ್ಟವುಗಳಾಗಿವೆ ಎಂದು ಸಂಶೋಧನೆಯಲ್ಲಿ ಕಂಡುಬಂದಿದೆ. ಅಂದರೆ ಸುಮಾರು 3200-3400 ವರ್ಷಗಳಷ್ಟು ಹಿಂದಿನ ಕಲಾಕೃತಿಗಳಾಗಿವೆ ಎಂಬುದು ಕಂಡುಬಂದಿದೆ.

ಈ ಉಲ್ಕೆಗಳಲ್ಲಿ ಕಬ್ಬಿಣ ಮತ್ತು ನಿಕಲ್ ಜೊತೆಗೆ ಕೋಬಾಲ್ಟ್ ಕೂಡ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಬಾಹ್ಯಾಕಾಶದಿಂದ ಬಿದ್ದ ಅವಶೇಷಗಳನ್ನು ಬಳಸಿ ಬೆಲೆಬಾಳುವ ವಸ್ತುಗಳನ್ನು ತಯಾರಿಸುವ ಪರಿಪಾಠ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಟುಟಾನ್‌ಖಾಮನ್‌ನ ಸಮಾಧಿಯ ವಿಷಯದಲ್ಲೂ ಇದೇ ರೀತಿ ಮಾಡಲಾಯಿತು. ಸಂಶೋಧಕರಲ್ಲಿ ಒಬ್ಬರಾದ ಇಗ್ನಾಸಿಯೊ ಮೊಂಟೆರೊ ರೂಯಿಜ್ ಲೈವ್ ಸೈನ್ಸ್‌ಗೆ ವಿಲ್ಲೆನಾ ಅವಶೇಷಗಳು ಹೆಚ್ಚಾಗಿ ಪತ್ತೆಯಾಗದ ರತ್ನಗಳಾಗಿವೆ. ಅದು ಕೇವಲ ಒಬ್ಬ ವ್ಯಕ್ತಿ ಅಥವಾ ರಾಜಮನೆತನಕ್ಕಿಂತ ಹೆಚ್ಚಾಗಿ ಇಡೀ ಸಮುದಾಯಕ್ಕೆ ಸೇರಿರಬಹುದು ಎಂದು ಹೇಳಿದ್ದಾರೆ. ರೂಯಿಜ್ ಪ್ರಕಾರ, ಈ ಎರಡೂ ಅವಶೇಷಗಳು ಒಂದೇ ಉಲ್ಕಾಶಿಲೆಯಿಂದ ಬಂದಿರಬಹುದು. ಏಕೆಂದರೆ ಅವುಗಳ ಸಂಯೋಜನೆಗಳು ಅಷ್ಟೊಂದು ಹೋಲುತ್ತವೆ. ಯಾರು ವಸ್ತುಗಳನ್ನು ತಯಾರಿಸಿದ್ದಾರೆ ಮತ್ತು ಅವು ಎಲ್ಲಿಂದ ಬಂದವು ಎಂಬುದು ಸಂಶೋಧಕರಿಗೆ ತಿಳಿದಿಲ್ಲ. ಆದಾಗ್ಯೂ, ಇವು ಐಬೇರಿಯನ್ ಪೆನಿನ್ಸುಲಾದ ಮೊದಲ ಮತ್ತು ಹಳೆಯ ಉಲ್ಕಾಶಿಲೆಯ ಕಬ್ಬಿಣದ ವಸ್ತುಗಳು ಎಂದು ಅವರಿಗೆ ಗೊತ್ತಾಗಿದೆ.

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement