ವೀಡಿಯೊಗಳು..| ದುಬೈನಲ್ಲಿ 1.5 ವರ್ಷಕ್ಕೆ ಬೀಳುವಷ್ಟು ಮಳೆ ಒಂದೇ ದಿನ ಸುರಿಯಿತು…! ಜನಜೀವನ ಅಸ್ತವ್ಯಸ್ತ; ರಸ್ತೆಗಳು ಜಲಾವೃತ, ವಿಮಾನಗಳ ಹಾರಾಟ ರದ್ದು

ದುಬೈ : ದುಬೈ ಸೇರಿದಂತೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ನ ಹಲವೆಡೆ ದಿಢೀರನೆ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ಥವಾಗಿದ್ದು, ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ದುಬೈನಲ್ಲಿ ಕಳೆದ 24 ಗಂಟೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಮಂಗಳವಾರ ಏಕಾಏಕಿ ಮಳೆಯಾಗಿದ್ದು ಒಂದೂವರೆ ವರ್ಷದಲ್ಲಿ ಸುರಿಯಬೇಕಿದ್ದ ಮಳೆ ಒಂದೇ ದಿನದಲ್ಲಿ ಸುರಿದಿದೆ. ಚಂಡಮಾರುತದ ಪರಿಣಾಮ ಈ ಮಳೆಯಾಗಿದೆ ಎಂದು … Continued

ಬರಪೀಡಿತ ಜಿಂಬಾಬ್ವೆ ರಾಷ್ಟ್ರೀಯ ಉದ್ಯಾನವನದಲ್ಲಿ ಕನಿಷ್ಠ 100 ಆನೆಗಳು ಸಾವು

ತೀವ್ರ ಬರಗಾಲದಿಂದಾಗಿ ಜಿಂಬಾಬ್ವೆಯ ಅತಿ ದೊಡ್ಡ ರಾಷ್ಟ್ರೀಯ ಉದ್ಯಾನವನದಲ್ಲಿ ಇತ್ತೀಚಿನ ವಾರಗಳಲ್ಲಿ ಕನಿಷ್ಠ 100 ಆನೆಗಳು ಸಾವಿಗೀಡಾಗಿವೆ. ಇದು ಹವಾಮಾನ ಬದಲಾವಣೆ ಮತ್ತು ಎಲ್ ನಿನೋ ಹವಾಮಾನ ವಿದ್ಯಮಾನದ ಪರಿಣಾಮ ಎಂದು ವನ್ಯಜೀವಿ ಅಧಿಕಾರಿಗಳು ಮತ್ತು ಸಂರಕ್ಷಣಾ ಗುಂಪುಗಳು ಹೇಳಿವೆ. ಹ್ವಾಂಗೆ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ದಕ್ಷಿಣ ಆಫ್ರಿಕಾದ ರಾಷ್ಟ್ರದ ಕೆಲವು ಭಾಗಗಳಲ್ಲಿ ಮಳೆಯ ಕೊರತೆ … Continued

‘ನಾವು ಭಯಪಡುತ್ತೇವೆ…ಈ ಶತಮಾನದಲ್ಲಿ ಜನ-ಸಮುದಾಯಕ್ಕೆ ವಿನಾಶಕಾರಿ ಆಪತ್ತು ಎದುರಾಗಬಹುದು : ಹವಾಮಾನ ವರದಿಯಲ್ಲಿ 15,000 ವಿಜ್ಞಾನಿಗಳ ಎಚ್ಚರಿಕೆ

163 ದೇಶಗಳ 15,000 ಸಂಶೋಧಕರು ಸಹಿ ಮಾಡಿದ ಹೊಸ “ಹವಾಮಾನ ಸ್ಥಿತಿ” ವರದಿಯಲ್ಲಿ ಮಾನವ-ಚಾಲಿತ ಹವಾಮಾನ ಬದಲಾವಣೆಯ ಪರಿಣಾಮವಾಗಿ ನಾವು ಈಗ “ಗುರುತಿಸದ ಪ್ರದೇಶ” ದಲ್ಲಿದ್ದೇವೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಹವಾಮಾನ ವೈಪರೀತ್ಯದಿಂದ ಉಂಟಾದ ಪ್ರಸ್ತುತ ಸಂಕಟವನ್ನು ಸಂಶೋಧಕರು ಒತ್ತಿಹೇಳಿದ್ದಾರೆ ಮತ್ತು ಭವಿಷ್ಯದಲ್ಲಿ ವ್ಯಾಪಕವಾದ ಸಾಮಾಜಿಕ ಮತ್ತು ಪರಿಸರ ಕುಸಿತದ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ, … Continued

ಹವಾಮಾನ ಬದಲಾವಣೆ..:2040 ವೇಳೆಗೆ ಜಾಗತಿಕ ತಾಪಮಾನ 1.5° ಸೆಂಟಿಗ್ರೇಡ್‌ ಮಿತಿ ದಾಟಬಹುದು- ಐಪಿಸಿಸಿ ಹೊಸ ವರದಿಯಲ್ಲಿ ಎಚ್ಚರಿಕೆ..!

ಮುಂದಿನ 20 ವರ್ಷಗಳಲ್ಲಿ ಭೂಮಿಯ ಸರಾಸರಿ ಮೇಲ್ಮೈ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್ ದಾಟುತ್ತದೆ ಮತ್ತು ಹೊರಸೂಸುವಿಕೆ (emissions) ತಗ್ಗಿಸದೆ ಇದ್ದರೆ ಈ ಶತಮಾನದ ಮಧ್ಯಭಾಗದಲ್ಲಿ 2ಡಿಗ್ರಿ ಸೆಲ್ಸಿಯಸ್‌ ದಾಟುವಷ್ಟು ಹವಾಮಾನ ಬದಲಾವಣೆ ಕುರಿತು ಅಂತರ್ ಸರ್ಕಾರಿ ಸಮಿತಿಯ (ಐಪಿಸಿಸಿ) ಇತ್ತೀಚಿನ ವರದಿಯಲ್ಲಿ ಎಚ್ಚರಿಸಿದೆ. ಮುಂಬರುವ ದಶಕಗಳಲ್ಲಿ ಜಾಗತಿಕ ಹೊರಸೂಸುವಿಕೆಗೆ ತಕ್ಷಣದ, ಬಲವಾದ ಮತ್ತು ಕ್ಷಿಪ್ರವಾದ … Continued