170 ಕಿಮೀ ವೇಗ, 300 ಅಡಿ ಎತ್ತರದ ʼಜಲಸುನಾಮಿʼ, 7 ನಿಮಿಷದಲ್ಲಿ 21 ಕಿಮೀ ಪಯಣ : ನೇಪಾಳದ ವಿನಾಶಕಾರಿ ಪ್ರವಾಹಕ್ಕೆ ಕಾರಣಗಳೇನು?

ನೇಪಾಳದ ಹಿಮಾಲಯ ಪ್ರದೇಶದಲ್ಲಿ ಸಂಭವಿಸಿದ ಭೀಕರ ಹಠಾತ್‌ ಪ್ರವಾಹ (Flash Flood) ಕೇವಲ ಕೆಲವೇ ನಿಮಿಷಗಳಲ್ಲಿ ಹೇಗೆ ಮಹಾವಿಪತ್ತಾಗಿ ರೂಪುಗೊಂಡಿತು ಎಂಬುದನ್ನು ವಿವರಿಸುವ ವಿಶ್ಲೇಷಣಾತ್ಮಕ ವಿಡಿಯೊ ಒಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಈ ವಿಡಿಯೊ ಉಪಗ್ರಹ ಚಿತ್ರಗಳು, ಭೌಗೋಳಿಕ ಮಾಹಿತಿ, ಸಮಯದ ದಾಖಲೆಗಳು ಹಾಗೂ ವೈಜ್ಞಾನಿಕ ವಿಶ್ಲೇಷಣೆಗಳ ಆಧಾರದ ಮೇಲೆ ಘಟನೆ ಹೇಗೆ ನಡೆಯಿತು … Continued

ವೀಡಿಯೊಗಳು..| ಸ್ವಿಟ್ಜರ್‌ಲ್ಯಾಂಡ್‌ : ರಣಭೀಕರ ಭೂ ಕುಸಿತಕ್ಕೆ ಸುಂದರ ಹಳ್ಳಿಯೇ ನಾಶ ; ವೀಕ್ಷಿಸಿ

ರಮಣೀಯ ಸ್ಥಳಗಳು ಹಾಗೂ ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಸ್ವಿಟ್ಜರ್‌ಲ್ಯಾಂಡ್‌ ನಲ್ಲಿ ಹಿಮಚ್ಛಾದಿತ ಗುಡ್ಡವೊಂದು ಕುಸಿದ ನಂತರ ಬ್ಲಾಟೆನ್ ಎಂಬ ಗ್ರಾಮವೇ ಬಹುತೇಕ ನಾಶವಾಗಿದೆ. ಬಿರ್ಚ್ ಹಿಮನದಿ ಶಿಥಿಲಗೊಳ್ಳುತ್ತಿದೆ ಎಂಬ ಭಯದಿಂದಾಗಿ ಕೆಲವು ದಿನಗಳ ಹಿಂದೆ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದ್ದರೂ, ಒಬ್ಬ ವ್ಯಕ್ತಿ ಕಾಣೆಯಾಗಿದ್ದಾರೆ ಮತ್ತು ಅನೇಕ ಮನೆಗಳು ಸಂಪೂರ್ಣವಾಗಿ ನೆಲಸಮವಾಗಿವೆ. ಬ್ಲಾಟೆನ್‌ನ ಮೇಯರ್ ಮ್ಯಾಥಿಯಸ್ ಬೆಲ್‌ವಾಲ್ಡ್ ಅವರು, … Continued

9 ದಿನ ಭೂಕಂಪದ ರೀತಿ ಭೂಮಿ ಮೇಲೆ ಕಂಪನ ಉಂಟುಮಾಡಿದ ʼಗ್ರೀನ್‌ಲ್ಯಾಂಡ್ʼ ಭೂ ಕುಸಿತ : ಹವಾಮಾನ ಬದಲಾವಣೆ ಪರಿಣಾಮ ಎಂದು ಎಚ್ಚರಿಸಿದ ವಿಜ್ಞಾನಿಗಳು..!

ಸೆಪ್ಟೆಂಬರ್ 2023 ರಲ್ಲಿ, ವಿಶ್ವದಾದ್ಯಂತ ಭೂಕಂಪನ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುವ ವಿಜ್ಞಾನಿಗಳು ನಿಗೂಢ ಸಂಕೇತವನ್ನು ಪತ್ತೆಹಚ್ಚಿದ್ದರು. ಈ ಸಿಗ್ನಲ್ ಅನ್ನು, ಆರ್ಕ್ಟಿಕ್‌ನಿಂದ ಅಂಟಾರ್ಕ್ಟಿಕಾದ ವರೆಗೆ ಎಲ್ಲೆಡೆ ದಾಖಲಿಸಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪತ್ತೆಯಾದ ವಿಚಿತ್ರ ಭೂಕಂಪನ ಸಂಕೇತವು ವಿಶಿಷ್ಟವಾದ ಭೂಕಂಪವನ್ನು ಹೋಲುವಂತಿರಲಿಲ್ಲ, ಆದರೆ ನಿಧಾನವಾದ ನಡುಕವು ಹೆಚ್ಚುವರಿ ಮೂರು ದಿನಗಳವರೆಗೆ ಪ್ರತಿಧ್ವನಿಸಿತು. ಈ ಅಸಂಗತತೆಯು ವಿಜ್ಞಾನಿಗಳನ್ನು … Continued

ಉತ್ತರಾಖಂಡದಲ್ಲಿ ಹಿಮಪದರ ಕುಸಿತ: ೨೬ ಸಾವು, 15 ಜನರ ರಕ್ಷಣೆ

ಉತ್ತರಾಖಂಡ: ಚಮೋಲಿ ಜಿಲ್ಲೆಯಲ್ಲಿ ಹಿಮನದಿ ಸ್ಫೋಟಗೊಂಡ ನಂತರ ಉತ್ತರಾಖಂಡದ ತಪೋವನ್ ಜಲ-ವಿದ್ಯುತ್ ಶಕ್ತಿ ಅಣೆಕಟ್ಟು ಸಂಪೂರ್ಣವಾಗಿ ಕೊಚ್ಚಿ ಹೋಗಿದೆ ಎಂದು ಭಾರತೀಯ ವಾಯುಪಡೆಯ ಆರಂಭಿಕ ವರದಿಯಲ್ಲಿ ತೋರಿಸಲಾಗಿದೆ. ಧೌಲಿ ಗಂಗಾ ಮತ್ತು ರಿಷಿ ಗಂಗಾ ನದಿಗಳ ಸಂಗಮದಲ್ಲಿರುವ ಅಣೆಕಟ್ಟು ಸಂಪೂರ್ಣವಾಗಿ ನಾಶವಾಗಿದೆ ಎಂದು ಸಮೀಕ್ಷೆಯ ಚಿತ್ರಗಳು ತೋರಿಸಿದೆ. ಮಲಾರಿ ಕಣಿವೆಯ ಪ್ರವೇಶದ್ವಾರದಲ್ಲಿ ಮತ್ತು ತಪೋವನ್ ಬಳಿಯಿರುವ … Continued