ಚೀನಾ ಪರ ಅಧ್ಯಕ್ಷ ಮೊಹಮ್ಮದ್ ಮುಯಿಝು ವಿರುದ್ಧ ಮಹಾಭಿಯೋಗಕ್ಕೆ ಮುಂದಾದ ಮಾಲ್ಡೀವ್ಸ್ ವಿಪಕ್ಷಗಳು

ನವದೆಹಲಿ : ಮಾಲ್ಡೀವ್ಸ್‌ನ ಪ್ರಮುಖ ವಿರೋಧ ಪಕ್ಷವು ತನ್ನ ಚೀನಾ ಪರ ಅಧ್ಯಕ್ಷ ಮೊಹಮ್ಮದ್ ಮುಯಿಝು ವಿರುದ್ಧ ಮಹಾಭಿಯೋಗ ಪ್ರಕ್ರಿಯೆ (impeachment proceedings)ಆರಂಭಿಸಲು ಸಜ್ಜಾಗಿದೆ.
ಪ್ರಮುಖ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷ( MDP)ವು ಸಂಸತ್ತಿನಲ್ಲಿ ಬಹುಮತ ಹೊಂದಿದೆ ಮತ್ತು ದೋಷಾರೋಪಣೆ ಸಲ್ಲಿಕೆಯನ್ನು ಪ್ರಾರಂಭಿಸಲು ಸಹಿಗಳ ಸಂಗ್ರಹವು ಈಗಾಗಲೇ ಪ್ರಾರಂಭವಾಗಿದೆ. ಚೀನಾದ ಬೇಹುಗಾರಿಕಾ ಹಡಗಿಗೆ ಮಾಲೆಯಲ್ಲಿ ಲಂಗರು ಹಾಕಲು ಸರ್ಕಾರವು ಅನುಮತಿ ನೀಡಿದ ನಂತರ ವಿರೋಧ ಪಕ್ಷಗಳು ಅಧ್ಯಕ್ಷ ಮುಯಿಜ್ಜು ಅವರ ಚೀನಾ ಪರ ನಿಲುವುಗಾಗಿ ವಾಗ್ದಾಳಿ ನಡೆಸಿವೆ.
ಭಾನುವಾರ ಸಂಸತ್ತಿನಲ್ಲಿ ಭಾರೀ ಗದ್ದಲ ನಡೆದಿದ್ದು, ನಂತರ ಪ್ರತಿಪಕ್ಷಗಳು ಮಹಾಭಿಯೋಗ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಿವೆ.

ಮುಯಿಝು ಸರ್ಕಾರಕ್ಕೆ ಸಂಸತ್ತಿನ ಅನುಮೋದನೆಯ ಪ್ರಮುಖ ಮತದಾನವನ್ನು ಭಾನುವಾರ ನಿಗದಿಪಡಿಸಲಾಗಿತ್ತು ಮತ್ತು ಸರ್ಕಾರದ ಸಂಸದರು (PPM/PNC ಪಕ್ಷ) ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಗದ್ದಲ ಪ್ರಾರಂಭವಾಯಿತು.
ಭಾರತ-ವಿರೋಧಿ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ಅಧ್ಯಕ್ಷ ಮುಯಿಜ್ಜು, ನಂತರ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪ ದ್ವೀಪಗಳಿಗೆ ಭೇಟಿಯ ಪೋಸ್ಟ್‌ನ ಕುರಿತು ನವದೆಹಲಿಯೊಂದಿಗಿನ ರಾಜತಾಂತ್ರಿಕ ಗದ್ದಲದ ನಂತರ ವಿರೋಧವನ್ನು ಎದುರಿಸುತ್ತಿದ್ದಾರೆ. ಭಾರತ ಮತ್ತು ಪ್ರಧಾನಿ ಬಗ್ಗೆ ಅವಹೇಳನದ ಹೇಳಿಕೆ ಪೋಸ್ಟ್‌ ಮಾಡಿದ್ದ ಮೂವರು ಸಚಿವರನ್ನು ಅಮಾನತಿನಲ್ಲಿರಿಸಲಾಗಿದೆ.

ಮಾರ್ಚ್ ಮಧ್ಯದ ವೇಳೆಗೆ ಭಾರತವು ಮಾಲ್ಡೀವ್ಸ್‌ನಲ್ಲಿ ನೆಲೆಸಿರುವ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಬೇಕು ಎಂಬ ಅಧ್ಯಕ್ಷ ಮುಯಿಜ್ಜು ಅವರು ಭಾರತ ಸರ್ಕಾರಕ್ಕೆ ಸೂಚಿಸಿದ್ದಾರೆ. 80ರ ಆಸುಪಾಸು ಭಾರತೀಯ ಸೈನಿಕರ ಉಪಸ್ಥಿತಿಯನ್ನು ದ್ವೀಪ ರಾಷ್ಟ್ರಕ್ಕೆ ಭದ್ರತಾ ಬೆದರಿಕೆ ಎಂದು ಬಿಂಬಿಸಲಾಗಿದೆ. ಮಾಲ್ಡೀವ್ಸ್‌ ನೀತಿಯಲ್ಲಿನ ಹಠಾತ್ ಬದಲಾವಣೆಯಿಂದಾಗಿ ಭಾರತ ಸೈನ್ಯದ ಉಪಸ್ಥಿತಿಯನ್ನು ತನ್ನ ಪ್ರದೇಶದಿಂದ ಹಿಂತೆಗೆದುಕೊಳ್ಳಲು ಸೂಚಿಸಿದೆ.

ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (MDP)ಯು ಸರ್ಕಾರವನ್ನು “ಕಟುವಾದ” ಭಾರತ ವಿರೋಧಿ ಪಿವೋಟ್ ಎಂದು ಆರೋಪಿಸಿದೆ ಮತ್ತು ಜಂಟಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಸರ್ಕಾರದ ನೀತಿ ಬದಲಾವಣೆಯು ದೇಶದ ದೀರ್ಘಕಾಲೀನ ಅಭಿವೃದ್ಧಿಗೆ “ಅತ್ಯಂತ ಹಾನಿಕಾರಕ” ಎಂದು ಹೇಳಿದೆ..
ಯಾವುದೇ ಅಭಿವೃದ್ಧಿ ಪಾಲುದಾರರನ್ನು ಮತ್ತು ವಿಶೇಷವಾಗಿ ದೇಶದ ಅತ್ಯಂತ ದೀರ್ಘಕಾಲದ ಮಿತ್ರರನ್ನು ದೂರವಿಡುವುದು ದೇಶದ ದೀರ್ಘಾವಧಿಯ ಅಭಿವೃದ್ಧಿಗೆ ಅತ್ಯಂತ ಹಾನಿಕಾರಕವಾಗಿದೆ” ಎಂದು ಹೇಳಿಕೆ ತಿಳಿಸಿದೆ. “ಹಿಂದೂ ಮಹಾಸಾಗರದಲ್ಲಿ ಸ್ಥಿರತೆ ಮತ್ತು ಭದ್ರತೆಯು ಮಾಲ್ಡೀವ್ಸ್‌ನ ಸ್ಥಿರತೆ ಮತ್ತು ಭದ್ರತೆಗೆ ಅತ್ಯಗತ್ಯ” ಎಂದು ಅದು ಒತ್ತಿಹೇಳಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement