ಭಾರತ-ಮಾಲ್ಡೀವ್ಸ್ ವಿವಾದ : ಟಾಟಾ ಸಮೂಹದಿಂದ ಲಕ್ಷದ್ವೀಪದಲ್ಲಿ 2 ತಾಜ್ ಬ್ರಾಂಡ್ ರೆಸಾರ್ಟ್‌ ನಿರ್ಮಾಣ…!

ಟಾಟಾ ಗ್ರೂಪ್‌ನ ಎರಡು ರೆಸಾರ್ಟ್‌ಗಳನ್ನು 2026 ರಲ್ಲಿ ಭಾರತದ ದ್ವೀಪಸಮೂಹವಾದ ಲಕ್ಷದ್ವೀಪದ ಸುಹೇಲಿ ಮತ್ತು ಕದ್ಮತ್ ದ್ವೀಪಗಳಲ್ಲಿ ತೆರೆಯಲು ನಿರ್ಧರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಮತ್ತು ನಂತರದ ಮಾಲ್ಡೀವ್ಸ್‌ನೊಂದಿಗಿನ ಉದ್ವಿಗ್ನತೆಯ ನಂತರ ಇದು ಗಮನ ಸೆಳೆದಿದೆ.
ಕಳೆದ ವರ್ಷ ಜನವರಿಯಲ್ಲಿ, ಟಾಟಾ ಗ್ರೂಪ್‌ನ ಅಂಗ ಸಂಸ್ಥೆಯಾದ ಇಂಡಿಯನ್ ಹೋಟೆಲ್ಸ್ ಕಂಪನಿಯು ಲಕ್ಷದ್ವೀಪದಲ್ಲಿ ಎರಡು ತಾಜ್-ಬ್ರಾಂಡ್ ರೆಸಾರ್ಟ್‌ಗಳಿಗೆ ಸಹಿ ಹಾಕುವುದಾಗಿ ಘೋಷಿಸಿತು. “ಗ್ರೀನ್‌ಫೀಲ್ಡ್ ಯೋಜನೆಗಳನ್ನು 2026 ರಲ್ಲಿ ತೆರೆಯಲು ನಿರ್ಧರಿಸಲಾಗಿದೆ ಮತ್ತು ಇದನ್ನು ಐಎಚ್‌ ಸಿಎಲ್‌ (IHCL) ಅಭಿವೃದ್ಧಿಪಡಿಸುತ್ತದೆ” ಎಂದು ಕಂಪನಿ ಹೇಳಿದೆ.
ಪ್ರಧಾನಿ ಮೋದಿ ಅವರು ಲಕ್ಷದ್ವೀಪದ ಬೀಚ್‌ ಚಿತ್ರಗಳನ್ನು ಹಂಚಿಕೊಂಡ ನಂತರ ಮತ್ತು ಅವುಗಳನ್ನು ಪ್ರವಾಸಿ ತಾಣವಾಗಿ ಪಿಚ್ ಮಾಡಿದ ನಂತರ ಲಕ್ಷದ್ವೀಪ ಜಾಗತಿಕ ಗಮನ ಸೆಳೆದಿದೆ. ಆದರೆ, ಮಾಲ್ಡೀವ್ಸ್​ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಗದ್ದಲದ ನಡುವೆ ಇದು ತಾಜ್​ ಹೋಟೆಲ್ ಮತ್ತೆ ಮುನ್ನೆಲೆಗೆ ಬಂದಿದೆ.
ಕಳೆದ ವರ್ಷ ರೆಸಾರ್ಟ್‌ಗಳಿಗೆ ಸಹಿ ಹಾಕುವುದಾಗಿ ಐಎಚ್‌ಸಿಎಲ್ ಎಂಡಿ ಮತ್ತು ಸಿಇಒ ಪುನೀತ ಛತ್ವಾಲ್ ಅವರು, ಎರಡು ವಿಶ್ವ ದರ್ಜೆಯ ತಾಜ್ ರೆಸಾರ್ಟ್‌ಗಳು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಯಾಣಿಕರನ್ನು ಆಕರ್ಷಿಸುತ್ತವೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ್ದಕ್ಕೆ ವಿರೋಧ : ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಪಕ್ಷದ ರಾಷ್ಟ್ರೀಯ ವಕ್ತಾರೆ ರಾಧಿಕಾ ಖೇರಾ

36 ದ್ವೀಪಗಳ ಸಮೂಹವನ್ನು ಹೊಂದಿರುವ ಲಕ್ಷದ್ವೀಪವು ಬಂಗಾರಂ, ಅಗತ್ತಿ, ಕಡಮತ್, ಮಿನಿಕಾಯ್, ಕವರಟ್ಟಿ ಮತ್ತು ಸುಹೇಲಿಯಂತಹ ಅನೇಕ ಪ್ರಸಿದ್ಧ ಪ್ರವಾಸಿ ಸ್ಥಳಗಳನ್ನು ಹೊಂದಿದೆ. ಕದ್ಮತ್ ಭಾರತದ ಅತ್ಯಂತ ಸುಂದರವಾದ ಡೈವಿಂಗ್ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ಸುಹೇಲಿಯಲ್ಲಿರುವ ತಾಜ್ ಬೀಚ್‌ನಲ್ಲಿ 60 ವಿಲ್ಲಾಗಳು ಮತ್ತು 50 ವಾಟರ್ ವಿಲ್ಲಾಗಳು ಸೇರಿದಂತೆ 110 ಕೊಠಡಿಗಳನ್ನು ಹೊಂದಿರಲಿದೆ ಎಂದು ಕಂಪನಿ ತಿಳಿಸಿದೆ. ಒಂದು ದೊಡ್ಡ ಆವೃತ ಹೊಂದಿರುವ ಹವಳದ ದ್ವೀಪವಾದ ಕಡ್ಮತ್ ದ್ವೀಪವನ್ನು ಏಲಕ್ಕಿ ದ್ವೀಪ ಎಂದೂ ಕರೆಯುತ್ತಾರೆ, ಇದು ಸಮುದ್ರ ಸಂರಕ್ಷಿತ ಪ್ರದೇಶವಾಗಿದ್ದು, ಸಮುದ್ರ ಹುಲ್ಲು ಹಾಸುಗಳನ್ನು ಹೊಂದಿದೆ. 110 ಕೊಠಡಿಗಳನ್ನು ಒಳಗೊಂಡಿರುವ ಕದ್ಮತ್‌ನಲ್ಲಿರುವ ತಾಜ್ ಹೋಟೆಲ್ 75 ಬೀಚ್ ವಿಲ್ಲಾಗಳು ಮತ್ತು 35 ವಾಟರ್ ವಿಲ್ಲಾಗಳನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.

ಲಕ್ಷದ್ವೀಪವು ಕೇರಳದ ಪಶ್ಚಿಮಕ್ಕೆ ಇರುವ ಅರಬ್ಬೀ ಸಮುದ್ರದ ದ್ವೀಪಸಮೂಹ, ಸುಂದರ ಕಡಲತೀರಗಳು, ಹವಳದ ಬಂಡೆಗಳು ಮತ್ತು ಖಾರಿಗಳೊಂದಿಗೆ ತನ್ನ ರಮಣೀಯ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. “ಇದು ಸ್ಕೂಬಾ ಡೈವಿಂಗ್, ವಿಂಡ್‌ಸರ್ಫಿಂಗ್, ಸ್ನಾರ್ಕ್ಲಿಂಗ್, ಸರ್ಫಿಂಗ್, ವಾಟರ್ ಸ್ಕೀಯಿಂಗ್ ಮತ್ತು ವಿಹಾರ ನೌಕೆ ಸೇರಿದಂತೆ ಜಲ ಕ್ರೀಡೆಗಳಿಗೆ ಸ್ವರ್ಗವಾಗಿದೆ” ಎಂದು ಕಂಪನಿ ಹೇಳಿದೆ.
ಜನವರಿ 4 ರಂದು ತಮ್ಮ ಟ್ವೀಟ್‌ನಲ್ಲಿ, ಪ್ರಧಾನಿ ಮೋದಿ ಅವರು “ಲಕ್ಷದ್ವೀಪದ ಬೆರಗುಗೊಳಿಸುವ ಸೌಂದರ್ಯದ ಬಗ್ಗೆ ವಿಸ್ಮಯಗೊಂಡಿದ್ದೇನೆ. ರಮಣೀಯ ಸೌಂದರ್ಯದ ಜೊತೆಗೆ ಲಕ್ಷದ್ವೀಪದ ಪ್ರಶಾಂತತೆಯೂ ಮನಮೋಹಕವಾಗಿದೆ ಎಂದರು. “ತಮ್ಮಲ್ಲಿರುವ ಸಾಹಸಿಗಳನ್ನು ಅಪ್ಪಿಕೊಳ್ಳಲು ಬಯಸುವವರಿಗೆ, ಲಕ್ಷದ್ವೀಪವು ನಿಮ್ಮ ಪಟ್ಟಿಯಲ್ಲಿರಬೇಕು ಎಂದು ಹೇಳಿದ್ದರು.

ಪ್ರಮುಖ ಸುದ್ದಿ :-   ಮೊಬೈಲ್ ನಲ್ಲಿ ಹುಡುಗರ ಜೊತೆ ಹರಟೆ ಬೇಡ ಅಂದಿದ್ದಕ್ಕೆ ಅಣ್ಣನನ್ನೇ ಕೊಡಲಿಯಿಂದ ಹೊಡೆದು ಕೊಂದ 14 ವರ್ಷದ ಬಾಲಕಿ...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement