ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು : ಕತಾರ್​ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತದ ನೌಕಾಪಡೆ 8 ಮಾಜಿ ಅಧಿಕಾರಿಗಳ ಬಿಡುಗಡೆ

ನವದೆಹಲಿ: ಭಾರತಕ್ಕೆ ಪ್ರಮುಖ ರಾಜತಾಂತ್ರಿಕ ಗೆಲುವಿನಲ್ಲಿ, ಗೂಢಚರ್ಯೆಯ ಆರೋಪದ ಪ್ರಕರಣದಲ್ಲಿ ಕತಾರ್‌ ದೇಶದಲ್ಲಿ ಬಂಧಿತರಾಗಿದ್ದ ಭಾರತೀಯ ನೌಕಾಪಡೆಯ ಎಂಟು ಮಾಜಿ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗಿದೆ. ಸೋಮವಾರ ಮುಂಜಾನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), ಬೆಳವಣಿಗೆಯನ್ನು ಸ್ವಾಗತಿಸಿದೆ ಮತ್ತು ಖಾಸಗಿ ಸಂಸ್ಥೆಯಾದ ಅಲ್ ದಹ್ರಾ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡುವ ಭಾರತೀಯ ನೌಕಾಪಡೆಯ … Continued

ಎಲ್ ನಿನೊ ದುರ್ಬಲ ; ಈ ಬಾರಿ ಭಾರತದಲ್ಲಿ ‘ಉತ್ತಮ ಮುಂಗಾರು ಮಳೆ’ ನಿರೀಕ್ಷೆ : ಹವಾಮಾನ ತಜ್ಞರು

ನವದೆಹಲಿ: ಅತ್ಯಂತ ಬಿಸಿಯಾದ 2023ರ ನಂತರ, ಎಲ್ ನಿನೊ ಪರಿಸ್ಥಿತಿಗಳು ಈ ವರ್ಷದ ಜೂನ್ ವೇಳೆಗೆ ಕರಗುತ್ತವೆ ಎಂದು ಹವಾಮಾನಶಾಸ್ತ್ರಜ್ಞರು ಭವಿಷ್ಯ ನುಡಿದಿದ್ದಾರೆ. ಪ್ರಪಂಚದಾದ್ಯಂತ ಹವಾಮಾನದ ಮೇಲೆ ಪರಿಣಾಮ ಬೀರುವ ಸಮಭಾಜಕ ಪೆಸಿಫಿಕ್ ಮಹಾಸಾಗರದ ತಾಪಮಾನ ಏರಿಕೆಯಾದ ಎಲ್ ನಿನೊ ದುರ್ಬಲಗೊಳ್ಳಲು ಪ್ರಾರಂಭಿಸಿದೆ ಮತ್ತು ಆಗಸ್ಟ್ ವೇಳೆಗೆ ಲಾ ನಿನಾ ಪರಿಸ್ಥಿತಿಗಳು ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು … Continued

ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್‌) ಬಡ್ಡಿ ದರದಲ್ಲಿ ಹೆಚ್ಚಳ : ಮೂರು ವರ್ಷದಲ್ಲೇ ಗರಿಷ್ಠ ಬಡ್ಡಿ ದರ ನಿಗದಿ

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಶನಿವಾರ 2023-24ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲೆ ಮೂರು ವರ್ಷಗಳ ಗರಿಷ್ಠ ಬಡ್ಡಿ ದರ ಶೇ.8.25 ನಿಗದಿಪಡಿಸಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) 2021-22 ರಲ್ಲಿ 8.10 ಶೇಕಡಾದಿಂದ 2022-23 ಕ್ಕೆ EPF ಮೇಲಿನ ಬಡ್ಡಿ ದರವನ್ನು 8.15 ಶೇಕಡಾಕ್ಕೆ ಸ್ವಲ್ಪಮಟ್ಟಿಗೆ ಹೆಚ್ಚಿಸಿತ್ತು. 2021-22ನೇ … Continued

ಈಗಲೇ ಲೋಕಸಭೆ ಚುನಾವಣೆ ನಡೆದರೆ ಕರ್ನಾಟಕದಲ್ಲಿ ಬಿಜೆಪಿ – ಜೆಡಿಎಸ್‌ ಮೈತ್ರಿ 24 ಸ್ಥಾನಗಳಲ್ಲಿ ಗೆಲ್ಲಬಹುದು.; ಮೂಡ್ ಆಫ್ ದಿ ನೇಷನ್ ಸಮೀಕ್ಷೆ

ನವದೆಹಲಿ: ಈಗಲೇ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 28 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಯ ಎನ್‌ಡಿಎ 24 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ ಎಂದು ಖಾಸಗಿ ಸುದ್ದಿವಾಹಿನಿ ಇಂಡಿಯಾ ಟುಡೇ ‘ಮೂಡ್ ಆಫ್ ದಿ ನೇಷನ್‌ ಸಮೀಕ್ಷೆ’ ತಿಳಿಸಿದೆ. ರಾಜ್ಯದ ಲೋಕಸಭಾ ಕ್ಷೇತ್ರಗಳಲ್ಲಿ 2023 ಡಿಸೆಂಬರ್ 15 ರಿಂದ 2024 ಜನವರಿ 28 ರ ನಡುವೆ ನಡೆಸಿದ ಚುನಾವಣಾ … Continued

ಅಯೋಧ್ಯೆ ರಾಮಮಂದಿರ ಕುರಿತು ಆಕ್ಷೇಪಾರ್ಹ ಹೇಳಿಕೆ: ಮಣಿಶಂಕರ ಅಯ್ಯರ್ ಪುತ್ರಿ ವಿರುದ್ಧ ದೂರು ದಾಖಲು

ನವದೆಹಲಿ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ‘ಪ್ರಾಣ ಪ್ರತಿಷ್ಠೆ’ ಖಂಡಿಸಿ ಜನವರಿ 20 ರಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್ ಅವರ ಪುತ್ರಿ ಸುರಣ್ಯಾ ಅಯ್ಯರ್ ವಿರುದ್ಧ ದೂರು ದಾಖಲಿಸಲಾಗಿದೆ. ಸುಪ್ರೀಂ ಕೋರ್ಟ್ ವಕೀಲ ಮತ್ತು ಬಿಜೆಪಿ ನಾಯಕರಾದ ಅಜಯ ಅಗರ್ವಾಲ್ ಅವರು ದೆಹಲಿಯ ಸೈಬರ್ ಕ್ರೈಂ ಪೊಲೀಸ್ … Continued

ಪಾಕಿಸ್ತಾನ ಐಎಸ್‌ಐಗೆ ಭಾರತದ ಸೇನೆ ಬಗ್ಗೆ ಮಾಹಿತಿ ನೀಡುತ್ತಿದ್ದ ಭಾರತದ ರಾಯಭಾರಿ ಕಚೇರಿ ಕೆಲಸಗಾರನ ಬಂಧನ

ನವದೆಹಲಿ: ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಉತ್ತರ ಪ್ರದೇಶ ಎಟಿಎಸ್)ವು ಮಾಸ್ಕೋದ ಭಾರತೀಯ ರಾಯಭಾರ ಕಚೇರಿಯಲ್ಲಿ ನಿಯೋಜನೆಗೊಂಡಿದ್ದ ಪಾಕಿಸ್ತಾನಿ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಏಜೆಂಟ್‌ನನ್ನು ಬಂಧಿಸಿದೆ. ಸತ್ಯೇಂದ್ರ ಸಿವಾಲ್ ಎಂಬವರನ್ನು 2021 ರಿಂದ ರಾಯಭಾರ ಕಚೇರಿಯಲ್ಲಿ ಪೋಸ್ಟ್ ಮಾಡಲಾಗಿತ್ತು. ಹಾಪುರ ಮೂಲದ ಆತ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ(ಮಲ್ಟಿ-ಟಾಸ್ಕಿಂಗ್ ಸ್ಟಾಫ್ ( MTS) ಆಗಿ ಕೆಲಸ … Continued

ತನ್ನ ಚುನಾವಣೆಯಲ್ಲಿ ಭಾರತ ಸಂಭಾವ್ಯ ‘ವಿದೇಶಿ ಬೆದರಿಕೆ’ ಎಂದು ಹೊಸ ಆರೋಪ ಮಾಡಿದ ಕೆನಡಾ

ನವದೆಹಲಿ: ತಮ್ಮ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕನನ್ನು ಕೊಲ್ಲುವಲ್ಲಿ ಭಾರತದ ಪಾತ್ರವಿದೆ ಆರೋಪಿಸಿದ ತಿಂಗಳುಗಳ ನಂತರ, ಕೆನಡಾವು ಭಾರತವನ್ನು ತಮ್ಮ ದೇಶದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬಹುದಾದ ಸಂಭಾವ್ಯ ‘ವಿದೇಶಿ ಬೆದರಿಕೆ’ ಎಂದು ಹೆಸರಿಸಿದೆ. ಈ ಹೊಸ ಆರೋಪಕ್ಕೆ ಭಾರತ ಸರ್ಕಾರ ಇನ್ನೂ ಪ್ರತಿಕ್ರಿಯಿಸಿಲ್ಲ. ಈ ಆರೋಪವನ್ನು ಕೆನಡಾದ ಭದ್ರತಾ ಗುಪ್ತಚರ ಸೇವೆಯು ಡಿಕ್ಲಾಸಿಫೈಡ್ ಗುಪ್ತಚರ ವರದಿಯಲ್ಲಿ ಮಾಡಿದೆ. … Continued

ಕೆಜಿಗೆ 29 ರೂ.ಗಳಂತೆ ‘ಭಾರತ ರೈಸ್’ ಅಕ್ಕಿ ಮಾರಾಟ ಮಾಡಲಿದೆ ಕೇಂದ್ರ ಸರ್ಕಾರ

ನವದೆಹಲಿ: ಜನಸಾಮಾನ್ಯರಿಗೆ ಅನುಕೂಲವಾಗಲು ಮುಂದಿನ ವಾರದಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ‘ಭಾರತ ರೈಸ್’ ಅನ್ನು ಪ್ರತಿ ಕೆಜಿಗೆ 29 ರೂ.ಗಳಿಗೆ ಮಾರಾಟ ಮಾಡುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ. ಹಾಗೂ ಅದರ ನಿಯಂತ್ರಣದ ಭಾಗವಾಗಿ ಅಕ್ಕಿ/ಭತ್ತದ ದಾಸ್ತಾನಿನ ಬಗ್ಗೆ ಮಾಹಿತಿ ನೀಡುವಂತೆ ವ್ಯಾಪಾರಿಗಳಿಗೆ ನಿರ್ದೇಶನ ನೀಡಿದೆ. ಕಳೆದ ಒಂದು ವರ್ಷದಲ್ಲಿ ಅಕ್ಕಿ ಬೆಲೆ ಸುಮಾರು 15 ಪ್ರತಿಶತದಷ್ಟು … Continued

ಸುಮಾರು $4 ಬಿಲಿಯನ್‌ ಮೌಲ್ಯದ ಒಪ್ಪಂದದಲ್ಲಿ ಭಾರತಕ್ಕೆ 31 MQ-9B ಸಶಸ್ತ್ರ ಡ್ರೋನ್‌ ಮಾರಾಟಕ್ಕೆ ಒಪ್ಪಿಗೆ ನೀಡಿದ ಅಮೆರಿಕ

ನವದೆಹಲಿ: ಸುಮಾರು $4 ಬಿಲಿಯನ್ ಮೌಲ್ಯದ ಒಪ್ಪಂದದಲ್ಲಿ ಭಾರತಕ್ಕೆ MQ-9B ಸೀ ಗಾರ್ಡಿಯನ್ ಡ್ರೋನ್‌ಗಳ ಮಾರಾಟಕ್ಕೆ ಅಮೆರಿಕ ಒಪ್ಪಿಗೆ ನೀಡಿದೆ. ಡಿಫೆನ್ಸ್ ಸೆಕ್ಯುರಿಟಿ ಕೋಆಪರೇಶನ್ ಏಜೆನ್ಸಿಯು ಅಗತ್ಯವಿರುವ ಪ್ರಮಾಣೀಕರಣವನ್ನು ತಲುಪಿಸಿದೆ, ಗುರುವಾರ ಸಂಭವನೀಯ ಮಾರಾಟದ ಕುರಿತು ಅಮೆರಿಕ ಕಾಂಗ್ರೆಸ್‌ಗೆ ಸೂಚಿಸಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ವೇಳೆ ಭಾರತವು 31 … Continued

ರಾಮಮಂದಿರ ಪ್ರತಿಷ್ಠಾಪನೆ ಪ್ರಾದೇಶಿಕ ಶಾಂತಿಗೆ ದೊಡ್ಡ ಬೆದರಿಕೆ : ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಕ್ಯಾತೆ

ವಿಶ್ವಸಂಸ್ಥೆ : ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯು ‘ಪ್ರದೇಶದ ಶಾಂತಿ’ಗೆ ‘ದೊಡ್ಡ ಬೆದರಿಕೆಯಾಗಿದೆ’ ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರಿಗೆ ಪತ್ರ ಬರೆದು ಎಚ್ಚರಿಸುವ ಮೂಲಕ ಪಾಕಿಸ್ತಾನವು ರಾಮ ಮೀದರದ ಉದ್ಘಾಟನೆಗೆ ಕ್ಯಾತೆ ತೆಗೆದಿದೆ. ಅಯೋಧ್ಯೆಯಲ್ಲಿ ಧ್ವಂಸಗೊಂಡ ಬಾಬರಿ ಮಸೀದಿಯ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮತ್ತು ಪವಿತ್ರೀಕರಣವನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸುತ್ತದೆ ಎಂದು ಪಾಕಿಸ್ತಾನದ ವಿಶ್ವ ಸಂಸ್ಥೆಯ ಕಾಯಂ … Continued