ಇನ್ಮುಂದೆ ಅಪರಿಚಿತರು ಕಾಲ್‌ ಮಾಡಿದ್ರೂ ಮೊಬೈಲ್‌ನಲ್ಲಿ ಅವರ ಹೆಸರು ಕಾಣಿಸುತ್ತೆ ! ನ.1ರಿಂದ ಇದು ಜಾರಿ

ನವದೆಹಲಿ: ಇನ್ಮುಂದೆ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಅಪರಿಚಿತರ ಕಾಲ್‌ ಬಂದ್ರೂ ಕರೆ ಮಾಡುತ್ತಿರುವವರು ಯಾರು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಯಾಕೆಂದರೆ, ಕಾಲ್‌ ಮಾಡುವವರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಮೊಬೈಲ್‌ ಪರದೆಯ ಮೇಲೆ ತೋರಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ದೂರಸಂಪರ್ಕ ಇಲಾಖೆ (DoT) 2026ರ ನವೆಂಬರ್‌ 1ರಿಂದ ಕಾಲಿಂಗ್‌ ನೇಮ್‌ … Continued

ಪಿಐಎಸ್‌ಎ 2025 ವರದಿ : ಜಾಗತಿಕವಾಗಿ ವಿದ್ಯಾರ್ಥಿಗಳ ಓದು, ಗಣಿತ ಸಾಮರ್ಥ್ಯದಲ್ಲಿ ಭಾರಿ ಕುಸಿತ ; ಎಐ ಬಳಕೆಯಿಂದ ಮತ್ತಷ್ಟು ಸಂಕೀರ್ಣ

ಪ್ಯಾರಿಸ್: ಜಗತ್ತಿನಾದ್ಯಂತ 15 ವರ್ಷದ ವಿದ್ಯಾರ್ಥಿಗಳು ಏನು ಕಲಿಯುತ್ತಿದ್ದಾರೆ? ಅವರು ಓದಿದ್ದನ್ನು ಎಷ್ಟು ಆಳವಾಗಿ ಅರ್ಥಮಾಡಿಕೊಳ್ಳುತ್ತಿದ್ದಾರೆ? ಗಣಿತ ಮತ್ತು ವಿಜ್ಞಾನವನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಬಲ್ಲರು? ಸ್ಮಾರ್ಟ್‌ಫೋನ್‌, ಸಾಮಾಜಿಕ ಜಾಲತಾಣ, ಡಿಜಿಟಲ್ ಸಾಧನಗಳು ಹಾಗೂ ಕೃತಕ ಬುದ್ಧಿಮತ್ತೆ (AI) ಅವರ ಕಲಿಕೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿವೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಆರ್ಥಿಕ … Continued

ಮಕ್ಕಳ ಹೆರುವಿಕೆ ತಡೆದ ಐಫೋನ್ ಕ್ರಾಂತಿ ! 2007ರ ನಂತರ ವಿಶ್ವದಾದ್ಯಂತ ಜನನ ಪ್ರಮಾಣ ಕುಸಿತದ ಬೆಚ್ಚಿಬೀಳಿಸುವ ಸತ್ಯ ಬಿಚ್ಚಿಟ್ಟ ಅಧ್ಯಯನ

ಸಾಮಾನ್ಯವಾಗಿ ಒಂದು ದೇಶ ಅಥವಾ ಸಮಾಜದಲ್ಲಿ ಜನರ ಜೀವನಮಟ್ಟ ಸುಧಾರಿಸಿದಂತೆ ಅಲ್ಲಿನ ಜನನ ಪ್ರಮಾಣ (ಬರ್ತ್ ರೇಟ್) ಕಡಿಮೆಯಾಗುತ್ತಾ ಹೋಗುವುದು ಇತಿಹಾಸದುದ್ದಕ್ಕೂ ಕಂಡುಬಂದಿರುವ ಸಾಮಾನ್ಯ ಪ್ರವೃತ್ತಿ. ಆದರೆ, ಕಳೆದ ಎರಡು ದಶಕಗಳಲ್ಲಿ ಸಂಶೋಧಕರು ತೀರಾ ಭಿನ್ನವಾದ ಮತ್ತು ವಿಚಿತ್ರವಾದ ವಿದ್ಯಮಾನವೊಂದನ್ನು ಗಮನಿಸಿದ್ದಾರೆ. 2007ರಿಂದೀಚೆಗೆ ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳು ಬೇರೆ ಬೇರೆಯಾಗಿದ್ದರೂ … Continued

ಟ್ರಂಪ್ ಸುಂಕ ಆದೇಶಕ್ಕೂ ಮುನ್ನ ಭಾರತದಿಂದ ಅಮೆರಿಕಕ್ಕೆ 600 ಟನ್ ಐಫೋನ್‌ಗಳನ್ನು ಏರ್‌ಲಿಫ್ಟ್ ಮಾಡಿದ ಆಪಲ್…!

ನವದೆಹಲಿ: ಆಪಲ್‌ನ ಭಾರತದ ಪ್ರಮುಖ ಪೂರೈಕೆದಾರರಾದ ಫಾಕ್ಸ್‌ಕಾನ್ ಮತ್ತು ಟಾಟಾ ಈ ಮಾರ್ಚ್‌ ತಿಂಗಳಲ್ಲಿ ಸುಮಾರು $2 ಬಿಲಿಯನ್ (ಶತಕೋಟಿ) ಮೌಲ್ಯದ ಐಫೋನ್‌ಗಳನ್ನು ಅಮೆರಿಕಕ್ಕೆ ರವಾನಿಸಿವೆ. ಇದು ಸಾರ್ವಕಾಲಿಕ ಗರಿಷ್ಠವಾಗಿದೆ, ಏಕೆಂದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಂಬರುವ ಸುಂಕಗಳನ್ನು ತಪ್ಪಿಸಲು ಅಮೆರಿಕದ ಕಂಪನಿಯು ಐಫೋನ್‌ಗಳನ್ನು ವಿಮಾನದಲ್ಲಿ ಸಾಗಿಸಿತು ಎಂದು ಕಸ್ಟಮ್ಸ್ ಡೇಟಾ ತೋರಿಸುತ್ತದೆ. ಟ್ರಂಪ್ … Continued