ಮಕ್ಕಳ ಹೆರುವಿಕೆ ತಡೆದ ಐಫೋನ್ ಕ್ರಾಂತಿ ! 2007ರ ನಂತರ ವಿಶ್ವದಾದ್ಯಂತ ಜನನ ಪ್ರಮಾಣ ಕುಸಿತದ ಬೆಚ್ಚಿಬೀಳಿಸುವ ಸತ್ಯ ಬಿಚ್ಚಿಟ್ಟ ಅಧ್ಯಯನ

ಸಾಮಾನ್ಯವಾಗಿ ಒಂದು ದೇಶ ಅಥವಾ ಸಮಾಜದಲ್ಲಿ ಜನರ ಜೀವನಮಟ್ಟ ಸುಧಾರಿಸಿದಂತೆ ಅಲ್ಲಿನ ಜನನ ಪ್ರಮಾಣ (ಬರ್ತ್ ರೇಟ್) ಕಡಿಮೆಯಾಗುತ್ತಾ ಹೋಗುವುದು ಇತಿಹಾಸದುದ್ದಕ್ಕೂ ಕಂಡುಬಂದಿರುವ ಸಾಮಾನ್ಯ ಪ್ರವೃತ್ತಿ. ಆದರೆ, ಕಳೆದ ಎರಡು ದಶಕಗಳಲ್ಲಿ ಸಂಶೋಧಕರು ತೀರಾ ಭಿನ್ನವಾದ ಮತ್ತು ವಿಚಿತ್ರವಾದ ವಿದ್ಯಮಾನವೊಂದನ್ನು ಗಮನಿಸಿದ್ದಾರೆ. 2007ರಿಂದೀಚೆಗೆ ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳು ಬೇರೆ ಬೇರೆಯಾಗಿದ್ದರೂ … Continued

ʼಸುಶಿಕ್ಷಿತರಲ್ಲೇ ಹೆಚ್ಚು ಕುಸಿತʼ : ಭಾರತದಲ್ಲಿ ಕುಸಿಯುತ್ತಿರುವ ಜನನ ಪ್ರಮಾಣದ ಬಗ್ಗೆ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಆತಂಕ !

ನವದೆಹಲಿ: ಭಾರತದಲ್ಲಿ ಜನನ ಪ್ರಮಾಣವು ಜನಸಂಖ್ಯೆಯನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲು ಅಗತ್ಯವಿರುವ ಕನಿಷ್ಠ ಮಟ್ಟಕ್ಕಿಂತ (Replacement Level) ಕೆಳಗೆ ಕುಸಿದಿದೆ ಎಂದು ಸ್ಪೇಸ್‌ಎಕ್ಸ್ ಸಿಇಒ ಹಾಗೂ ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, “ಭಾರತದ ಜನನ ಪ್ರಮಾಣವು ಮರುಸ್ಥಾಪನೆ ಅಥವಾ … Continued

3ನೇ ಮಗು ಜನಿಸಿದರೆ ₹30 ಸಾವಿರ, 4ನೇ ಮಗು ಜನಿಸಿದರೆ ₹40 ಸಾವಿರ ಧನಸಹಾಯ ! ವಿಶಿಷ್ಟ ಯೋಜನೆ ಘೋಷಿಸಿದ ಆಂಧ್ರ ಸಿಎಂ…!

ವಿಜಯವಾಡ: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಜ್ಯದ ಜನಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿರುವ ವಿಶಿಷ್ಟವಾದ ಹೊಸ ಯೋಜನೆಯೊಂದನ್ನು ಶನಿವಾರ ಪ್ರಕಟಿಸಿದ್ದಾರೆ. ನರಸನ್ನಪೇಟೆಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಕುಟುಂಬದಲ್ಲಿ ಮೂರನೇ ಮಗು ಜನಿಸಿದರೆ ಸರ್ಕಾರದಿಂದ 30,000 ರೂಪಾಯಿ ಹಾಗೂ ನಾಲ್ಕನೇ ಮಗು ಜನಿಸಿದರೆ 40,000 ರೂಪಾಯಿ ನಗದು ಪ್ರೋತ್ಸಾಹಧನ ನೀಡಲಾಗುವುದು” ಎಂದು ಘೋಷಿಸಿದ್ದಾರೆ. … Continued