ಭಾರತಕ್ಕೆ ಕಚ್ಚಾ ತೈಲ ನೀಡಿ ಮತ್ತೆ ಭಾರತದಿಂದಲೇ ಪೆಟ್ರೋಲ್‌ ಖರೀದಿಸುತ್ತಿರುವ ರಷ್ಯಾ…! ಇದಕ್ಕೆ ಕಾರಣ…?

ನವದೆಹಲಿ : ಉಕ್ರೇನ್ ನಡೆಸುತ್ತಿರುವ ಡ್ರೋನ್ ದಾಳಿಗಳಿಂದ ತನ್ನ ಇಂಧನ ಉತ್ಪಾದನಾ ಘಟಕಕ್ಕೆ ಉಂಟಾದ ಹಾನಿಯ   ಪರಿಣಾಮವಾಗಿ ಎದುರಾಗಿರುವ ಪೆಟ್ರೋಲ್ ಕೊರತೆಯನ್ನು ನಿವಾರಿಸಲು ರಷ್ಯಾವು ಸಮುದ್ರ ಮಾರ್ಗದ ಮೂಲಕ ಭಾರತದಿಂದ ಪೆಟ್ರೋಲ್ (ಗ್ಯಾಸೋಲಿನ್) ಆಮದು ಮಾಡಿಕೊಳ್ಳಲು ಆರಂಭಿಸಿದೆ ಎಂದು ಕೈಗಾರಿಕಾ ವಲಯದ ಮೂಲಗಳನ್ನು ಉಲ್ಲೇಖಿಸಿಹಲವಾರು ವರದಿಗಳು ತಿಳಿಸಿವೆ. ರಷ್ಯಾದ ಹಲವು ಪ್ರದೇಶಗಳಲ್ಲಿ ಇತ್ತೀಚೆಗೆ ಪೆಟ್ರೋಲ್ ಕೊರತೆ … Continued

ಪಾಕಿಸ್ತಾನದಲ್ಲಿ 125 ವರ್ಷದ ಗುರುದ್ವಾರ ಧ್ವಂಸ; ‘ಅತ್ಯಂತ ಖಂಡನೀಯ ಕೃತ್ಯ’ ಎಂದ ಭಾರತ

ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ 125 ವರ್ಷಗಳಷ್ಟು ಹಳೆಯ ಐತಿಹಾಸಿಕ ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್ (Gurdwara Sri Guru Singh Sabha Sahib) ಅನ್ನು ಸ್ಥಳೀಯ ಉದ್ಯಮಿಯೊಬ್ಬರು ನೆಲಸಮಗೊಳಿಸಿರುವ ಘಟನೆ ಅಲ್ಪಸಂಖ್ಯಾತ ಸಿಖ್ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಇದು ಸಿಖ್ ಧರ್ಮದ ಪವಿತ್ರ … Continued

ವೆನೆಜುವೆಲಾದಲ್ಲಿ ಮೃತಪಟ್ಟ ಭಾರತದ ನಾವಿಕನ ಶವದ ಮೆದುಳು, ಹೃದಯ, ಶ್ವಾಸಕೋಶ ಸೇರಿ ಎಲ್ಲ ಪ್ರಮುಖ ಅಂಗಗಳು ನಾಪತ್ತೆ !

ನವದೆಹಲಿ: ವೆನೆಜುವೆಲಾದಲ್ಲಿ ಕಳೆದ ಮೇ ತಿಂಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾದ ಭಾರತೀಯ ನಾವಿಕನ ಸಾವಿನ ಪ್ರಕರಣ ಇದೀಗ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ವೆನೆಜುವೆಲಾದಿಂದ ಭಾರತಕ್ಕೆ ಮೃತದೇಹವನ್ನು ತಂದ ಬಳಿಕ, ಮೃತನ ದೇಹದಲ್ಲಿ ಮೆದುಳು, ಹೃದಯ, ಶ್ವಾಸಕೋಶ ಸೇರಿದಂತೆ ಬಹುತೇಕ ಎಲ್ಲಾ ಆಂತರಿಕ ಅಂಗಗಳು ಕಾಣೆಯಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಇದರಿಂದ ಈ ಸಾವಿನ … Continued

ವಿಡಿಯೋ | ಪಿಒಕೆ ಪಾಕಿಸ್ತಾನದ ಭಾಗವಲ್ಲ ; ಪಿಒಕೆಯಲ್ಲಿ ಪಾಕ್ ವಿರುದ್ಧ ಭುಗಿಲೆದ್ದ ಆಕ್ರೋಶ ; ಭಾರತದತ್ತ ಮುಖ ಮಾಡ್ತೀವಿ ಎಂದು ಎಚ್ಚರಿಕೆ !

ರಾವಲಕೋಟ್ (ಪಿಒಕೆ): ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪಾಕಿಸ್ತಾನ ಸರ್ಕಾರದ ದಬ್ಬಾಳಿಕೆ ಮತ್ತು ನಿಯಂತ್ರಣದ ವಿರುದ್ಧ ನಾಗರಿಕರ ಆಕ್ರೋಶ ತಾರಕಕ್ಕೇರಿದೆ. ರಾವಲಕೋಟದಲ್ಲಿ ಪಾಕ್ ಸರ್ಕಾರದ ವಿರುದ್ಧ ನಡೆಯುತ್ತಿರುವ ಬೃಹತ್ ಧರಣಿ ಸತ್ಯಾಗ್ರಹವು ಮಂಗಳವಾರದ ವೇಳೆಗೆ 22ನೇ ದಿನಕ್ಕೆ ಕಾಲಿಟ್ಟಿದ್ದು, ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದು ಪಾಕಿಸ್ತಾನ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾವಲಕೋಟ್‌ನ ಪ್ರಸಿದ್ಧ ಈದ್ಗಾ … Continued

ಕೈಕೊಟ್ಟ ಮುಂಗಾರು: 126 ವರ್ಷಗಳಲ್ಲಿ ಮಳೆಯಿಲ್ಲದೆ ಕಂಗಾಲಾಗಿಸಿದ ಜೂನ್ ತಿಂಗಳಿಗೆ ಈ ವರ್ಷದ ಜೂನ್‌ ತಿಂಗಳೂ ಸೇರ್ಪಡೆ…!

ನವದೆಹಲಿ: ಭಾರತದಲ್ಲಿ ಈ ವರ್ಷದ (2026) ಮುಂಗಾರು ಆರಂಭದಲ್ಲೇ ತೀವ್ರ ನಿರಾಸೆ ಮೂಡಿಸಿದೆ. ಜೂನ್ ತಿಂಗಳಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿದ್ದು, ವಾಯುವ್ಯ ಭಾರತದ ಹಲವು ಭಾಗಗಳಿಗೆ ಮುಂಗಾರು ಮಾರುತಗಳ ಆಗಮನ ಮತ್ತಷ್ಟು ವಿಳಂಬವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮುಂಗಾರಿನ ಪ್ರಗತಿ ತೀವ್ರ ಅಸಮತೋಲನದಿಂದ ಕೂಡಿದ್ದು, ದೇಶದ ಬಹುದೊಡ್ಡ ಭಾಗಗಳು ಇನ್ನೂ ಮಳೆಯ … Continued

ಇನ್ಮುಂದೆ ಜೋರಾಗಿ ಅಬ್ಬರಿಸಲಿದೆಯಂತೆ ಮುಂಗಾರು ; ಅವಳಿ ಹವಾಮಾನ ವ್ಯವಸ್ಥೆಯಿಂದ ದೇಶಾದ್ಯಂತ ಭಾರಿ ಮಳೆಯ ಮುನ್ಸೂಚನೆ

ನವದೆಹಲಿ: ಹಲವು ವಾರಗಳಿಂದ ದೇಶದ ಬಹುತೇಕ ಕಡೆ  ನೈರುತ್ಯ ಮುಂಗಾರು ಮಳೆಯ ಕೊರತೆ ದಿನೇದಿನೇ ಹೆಚ್ಚಾಗುತ್ತಿದ್ದ  ವೇಳೆ ಈಗ ಅದು ಮತ್ತೆ ಚುರುಕುಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಹವಾಮಾನ ತಜ್ಞರ ಪ್ರಕಾರ, ಈ ವಾರ ಬಂಗಾಳ ಕೊಲ್ಲಿ ಮತ್ತು ಮಧ್ಯ ಭಾರತದ ಭಾಗಗಳಲ್ಲಿ ಎರಡು ಮಹತ್ವದ ಹವಾಮಾನ ವ್ಯವಸ್ಥೆಗಳು (ಕಡಿಮೆ ಒತ್ತಡದ ಪ್ರದೇಶಗಳು) ರೂಪುಗೊಳ್ಳುವ ಸಾಧ್ಯತೆ ಇದೆ. … Continued

ಇರಾನಿನ ಖಮೇನಿ ಅಂತ್ಯಕ್ರಿಯೆಯಲ್ಲಿ ಭಾರತದ ಪರವಾಗಿ ಕೇಂದ್ರ ಸಚಿವೆ ಪಬಿತ್ರಾ, ಬಿಹಾರ ರಾಜ್ಯಪಾಲರು ಭಾಗಿ

ನವದೆಹಲಿ: ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾರತ ಸರ್ಕಾರದ ಪರವಾಗಿ ಬಿಹಾರದ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸಯ್ಯದ್ ಅತಾ ಹಸ್ನೈನ್ ಹಾಗೂ ವಿದೇಶಾಂಗ ಖಾತೆ ರಾಜ್ಯ ಸಚಿವರಾದ ಪಬಿತ್ರ ಮಾರ್ಗರಿಟಾ ಭಾಗವಹಿಸಲಿದ್ದಾರೆ ಎಂದು ಸರ್ಕಾರದ ಮೂಲಗಳು ಸೋಮವಾರ ತಿಳಿಸಿವೆ. ಕಳೆದ ವಾರ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ … Continued

ವಿಶ್ವದಲ್ಲಿ 2ನೇ ಅತಿ ಹೆಚ್ಚು ವೇತನ ಪಡೆವ ಭಾರತೀಯ ಮೂಲದ ಸಿಇಒ ; ₹7,744 ಕೋಟಿ ಸಂಬಳದ ಈ ಶಂಖ್‌ ಮಿತ್ರ ಯಾರು?

ನ್ಯೂಯಾರ್ಕ್: ಅಮೆರಿಕ ಮೂಲದ ಆರೋಗ್ಯ ಕ್ಷೇತ್ರದ ರಿಯಲ್ ಎಸ್ಟೇಟ್ ದೈತ್ಯ ಸಂಸ್ಥೆ ‘ವೆಲ್‌ಟವರ್ (Welltower)’‌ನ ಭಾರತೀಯ ಮೂಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಶಂಖ್ ಮಿತ್ರ ಅವರು 2025ರಲ್ಲಿ 821 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹7,744 ಕೋಟಿ) ಮೌಲ್ಯದ ಸಂಭಾವನೆ ಪ್ಯಾಕೇಜ್ ಪಡೆದು ವಿಶ್ವದ ಎರಡನೇ ಅತಿ ಹೆಚ್ಚು ಸಂಭಾವನೆ ಪಡೆದ ಸಿಇಒ ಎಂಬ … Continued

ವಿಶ್ವದ ಅತಿ ಹೆಚ್ಚು ವಯಸ್ಸಿನ ಜೀವಂತ ಭೂಚರ ಪ್ರಾಣಿ ಜೋನಾಥನ್‌ ಭೇಟಿಯಾಗಲಿರುವ ಪ್ರಧಾನಿ ಮೋದಿ

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮುಂಬರುವ ಸೀಶೆಲ್ಸ್‌ ಪ್ರವಾಸದ ವೇಳೆ ವಿಶ್ವದ ಅತಿ ಹೆಚ್ಚು ವಯಸ್ಸಿನ ಜೀವಂತ ಭೂಚರ ಪ್ರಾಣಿ ಎಂದು ಗುರುತಿಸಲ್ಪಟ್ಟಿರುವ ‘ಜೋನಾಥನ್’ ಎಂಬ ದೈತ್ಯ ಆಮೆಯನ್ನು ಭೇಟಿ ಮಾಡಲಿದ್ದಾರೆ. ಭಾರತ ಮತ್ತು ಸೀಶೆಲ್ಸ್ ನಡುವಿನ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾಗಿ 50 ವರ್ಷಗಳು ಪೂರ್ಣಗೊಂಡಿರುವ ಸುವರ್ಣ ಮಹೋತ್ಸವದ ಅಂಗವಾಗಿ ಈ … Continued

ಮುಂಗಾರು ಕುಂಠಿತ ? ಭಾರತದ ಬಹುತೇಕ ಭಾಗಗಳಲ್ಲಿ ಮಳೆಮೋಡಗಳೇ ಕಾಣುತ್ತಿಲ್ಲ ; ಉಪಗ್ರಹ ಚಿತ್ರದಲ್ಲಿ ಆತಂಕಕಾರಿ ದೃಶ್ಯ

ನವದೆಹಲಿ : ನೈಋತ್ಯ ಮುಂಗಾರು ದೇಶದ ಬಹುತೇಕ ಭಾಗಗಳಿಗೆ ಅಧಿಕೃತವಾಗಿ ಪ್ರವೇಶಿಸಿದ್ದರೂ, ಮಧ್ಯ, ಪಶ್ಚಿಮ ಹಾಗೂ ವಾಯವ್ಯ ಭಾರತದ ವಿಶಾಲ ಪ್ರದೇಶಗಳಲ್ಲಿ ಅಸಾಮಾನ್ಯವಾಗಿ ಕಂಡುಬರುವ ಮೋಡರಹಿತ ವಾತಾವರಣ ಮುಂದುವರಿದಿದೆ. ಇತ್ತೀಚಿನ ಉಪಗ್ರಹ ಚಿತ್ರಗಳು ದೇಶದ ಬಹುಭಾಗದಲ್ಲಿ ವ್ಯಾಪಕ ಮಳೆ ಸುರಿಸುವ ದಟ್ಟ ಮಳೆಮೋಡಗಳು ಕಾಣಿಸದಿರುವುದನ್ನು ಸ್ಪಷ್ಟವಾಗಿ ತೋರಿಸಿವೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂಕಿಅಂಶಗಳ ಪ್ರಕಾರ, … Continued