ತನ್ನ ಚುನಾವಣೆಯಲ್ಲಿ ಭಾರತ ಸಂಭಾವ್ಯ ‘ವಿದೇಶಿ ಬೆದರಿಕೆ’ ಎಂದು ಹೊಸ ಆರೋಪ ಮಾಡಿದ ಕೆನಡಾ

ನವದೆಹಲಿ: ತಮ್ಮ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕನನ್ನು ಕೊಲ್ಲುವಲ್ಲಿ ಭಾರತದ ಪಾತ್ರವಿದೆ ಆರೋಪಿಸಿದ ತಿಂಗಳುಗಳ ನಂತರ, ಕೆನಡಾವು ಭಾರತವನ್ನು ತಮ್ಮ ದೇಶದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬಹುದಾದ ಸಂಭಾವ್ಯ ‘ವಿದೇಶಿ ಬೆದರಿಕೆ’ ಎಂದು ಹೆಸರಿಸಿದೆ. ಈ ಹೊಸ ಆರೋಪಕ್ಕೆ ಭಾರತ ಸರ್ಕಾರ ಇನ್ನೂ ಪ್ರತಿಕ್ರಿಯಿಸಿಲ್ಲ. ಈ ಆರೋಪವನ್ನು ಕೆನಡಾದ ಭದ್ರತಾ ಗುಪ್ತಚರ ಸೇವೆಯು ಡಿಕ್ಲಾಸಿಫೈಡ್ ಗುಪ್ತಚರ ವರದಿಯಲ್ಲಿ ಮಾಡಿದೆ. … Continued

‘ಭಾರತದ ಜೊತೆ ಕೆನಡಾ ಖಾಸಗಿಯಾಗಿ ಮಾತನಾಡಲು ಬಯಸುತ್ತದೆ…’: ತನ್ನ ರಾಜತಾಂತ್ರಿಕರನ್ನು ವಾಪಸ್‌ ಕರೆಸಿಕೊಳ್ಳುವಂತೆ ಭಾರತ ಸೂಚಿಸಿದೆ ಎಂಬ ವರದಿ ನಂತರ ಕೆನಡಾ ಹೇಳಿಕೆ

ಒಟ್ಟಾವಾ : ಭಾರತದಿಂದ ತನ್ನ 41 ರಾಜತಾಂತ್ರಿಕರನ್ನು ವಾಪಸ್‌ ಕರೆಸಿಕೊಳ್ಳುವಂತೆ ಭಾರತವು ಕೆನಡಾಕ್ಕೆ ಸೂಚಿಸಿದೆ ಎಂಬ ವರದಿಯ ನಂತರ, ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು, ರಾಜತಾಂತ್ರಿಕ ಬಿಕ್ಕಟ್ಟನ್ನು ಪರಿಹರಿಸಲು ಕೆನಡಾವು ಭಾರತದೊಂದಿಗೆ ಖಾಸಗಿ ಮಾತುಕತೆಗಳನ್ನು ಬಯಸುತ್ತದೆ ಎಂದು ಹೇಳಿದ್ದಾರೆ. ಒಟ್ಟಾವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು, ಕೆನಡಾ … Continued