ಜಗತ್ತಿನಲ್ಲೇ ಬೆಸ್ಟ್ 5ನೇ ತಲೆಮಾರಿನ ತಂತ್ರಜ್ಞಾನ” : Su-57 ಸ್ಟೆಲ್ತ್ ಯುದ್ಧ ವಿಮಾನ ಜಂಟಿ ಉತ್ಪಾದನೆಗೆ ಭಾರತಕ್ಕೆ ರಷ್ಯಾ ಅಧ್ಯಕ್ಷರ ದೊಡ್ಡ ಆಫರ್‌ !

ನವದೆಹಲಿ/ಮಾಸ್ಕೋ : ರಷ್ಯಾದ ಅತ್ಯಾಧುನಿಕ ಹಾಗೂ ಐದನೇ ತಲೆಮಾರಿನ (5th Generation) ರಹಸ್ಯ ಕಾರ್ಯಾಚರಣೆ ನಡೆಸಬಲ್ಲ ಸಾಮರ್ಥ್ಯದ ‘ಸುಖೋಯ್ ಸು-57’ (Sukhoi Su-57) ಸ್ಟೆಲ್ತ್ ಯುದ್ಧ ವಿಮಾನವನ್ನು ಭಾರತಕ್ಕೆ ನೀಡುವುದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಆಫರ್ ನೀಡಿದ್ದಾರೆ. ಅಷ್ಟೇ ಅಲ್ಲದೆ, ಈ ಅತ್ಯಾಧುನಿಕ ವಿಮಾನವನ್ನು ಭಾರತದಲ್ಲೇ ಜಂಟಿಯಾಗಿ ಉತ್ಪಾದಿಸುವ ಪ್ರಸ್ತಾಪವನ್ನೂ ಅವರು ಮುಂದಿಟ್ಟಿದ್ದಾರೆ. ಇದು … Continued

‘ಹಾರ್ಮುಜ್ ಜಲಸಂಧಿ’ ಬಿಕ್ಕಟ್ಟು : ಭಾರತ-ಒಮಾನ್ ಒಪ್ಪಂದದಿಂದ ಕೊಲ್ಲಿ ರಾಷ್ಟ್ರಗಳ ತೈಲ ಸಾಗಾಟಕ್ಕೆ ಭಾರತಕ್ಕೆ ಸಿಕ್ಕಿತು ಹೊಸ ದಾರಿ

 ನವದೆಹಲಿ: ಭಾರತದ ಶ್ರಮ-ಆಧಾರಿತ (ಲಾಭರ್-ಇಂಟೆನ್ಸಿವ್) ರಫ್ತು ಉತ್ಪನ್ನಗಳಿಗೆ ಶೂನ್ಯ-ಸುಂಕದ ಮುಕ್ತ ಪ್ರವೇಶವನ್ನು ಕಲ್ಪಿಸುವ ಭಾರತ ಮತ್ತು ಒಮಾನ್ ನಡುವಿನ ಐತಿಹಾಸಿಕ ‘ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ’ (CEPA) ಸೋಮವಾರದಿಂದ (ಜೂನ್‌ ೧) ಜಾರಿಗೆ ಬಂದಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಸ್ಕತ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಮಹತ್ವದ ವ್ಯಾಪಾರ ಒಪ್ಪಂದಕ್ಕೆ … Continued

ಭಾರತದ ಆಸಿಯಾನ್ ರಕ್ಷಣಾ ನೀತಿ: ವಿಯೆಟ್ನಾಂ ಜೊತೆ ಬ್ರಹ್ಮೋಸ್ ಕ್ಷಿಪಣಿ ಮಾರಾಟ ಒಪ್ಪಂದ; ಇಂಡೋನೇಷ್ಯಾ ಜೊತೆ ಅಂತಿಮ ಹಂತದಲ್ಲಿ

ನವದೆಹಲಿ: ರಕ್ಷಣಾ ಉತ್ಪಾದನೆ ಮತ್ತು ರಫ್ತು ವಲಯದಲ್ಲಿ ಸ್ವಾವಲಂಬನೆ ಸಾಧಿಸುತ್ತಿರುವ ಭಾರತ, ಆಗ್ನೇಯ ಏಷ್ಯಾ ರಾಷ್ಟ್ರಗಳ ಜೊತೆ ತನ್ನ ರಕ್ಷಣಾ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ವಿಯೆಟ್ನಾಂ ದೇಶಕ್ಕೆ ಭಾರತದ ಹೆಮ್ಮೆಯ ‘ಬ್ರಹ್ಮೋಸ್’ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಪೂರೈಸುವ ಬೃಹತ್ ಒಪ್ಪಂದಕ್ಕೆ ಉಭಯ ದೇಶಗಳು ಅಧಿಕೃತವಾಗಿ ಸಹಿ ಹಾಕಿವೆ. ಇದೇ ವೇಳೆ ಇಂಡೋನೇಷ್ಯಾ ಜೊತೆಗಿನ ಕ್ಷಿಪಣಿ ಖರೀದಿ … Continued

ಚಂದ್ರನ ಮೇಲೆ ಇಸ್ರೋದ ಮಹತ್ವದ ಆವಿಷ್ಕಾರ ; ಚಂದ್ರನ ದಕ್ಷಿಣ ಧ್ರುವದಲ್ಲಿ ʼಹಿಮʼ ಪತ್ತೆ ಮಾಡಿದ ಚಂದ್ರಯಾನ-2; ಇದು ಯಾಕೆ ಮುಖ್ಯ?

ಅಹಮದಾಬಾದ್: ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ ಯೋಜನೆ ಮತ್ತೊಂದು ಐತಿಹಾಸಿಕ ವೈಜ್ಞಾನಿಕ ಮೈಲಿಗಲ್ಲನ್ನು ಸಾಧಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹಮ್ಮಿಕೊಂಡಿದ್ದ ಎರಡನೇ ಚಂದ್ರಯಾನ (ಚಂದ್ರಯಾನ-2) ಮಿಷನ್‌ನ ದತ್ತಾಂಶಗಳನ್ನು ವಿಶ್ಲೇಷಿಸಿರುವ ವಿಜ್ಞಾನಿಗಳು, ಚಂದ್ರನ ದಕ್ಷಿಣ ಧ್ರುವದ ಬಳಿಯ ಕುಳಿಗಳ (Craters) ಮೇಲ್ಮೈ ಅಡಿಯಲ್ಲಿ ನೀರ್ಗಲ್ಲು ಅಥವಾ ಹಿಮ (Water-ice) ಇರುವುದಕ್ಕೆ ಬಲವಾದ ಪುರಾವೆಗಳನ್ನು ಪತ್ತೆಹಚ್ಚಿದ್ದಾರೆ. ಸೌರಮಂಡಲದ … Continued

ವಿಡಿಯೋ | ಕಗ್ಗತ್ತಲಿನಲ್ಲಿ ಭಾರತ-ಪಾಕ್‌ ಗಡಿಯಲ್ಲಿ ʼಹೊಳೆಯುವ ಬೆಳಕಿನ ರೇಖೆʼ : ವಿಮಾನದಿಂದ ಪೈಲಟ್ ಸೆರೆಹಿಡಿದ ಅಪರೂಪದ ದೃಶ್ಯ !

ನವದೆಹಲಿ : ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿಯು ಆಕಾಶದಿಂದ ನೋಡಿದಾಗಲೂ ಎಷ್ಟು ಸ್ಪಷ್ಟವಾಗಿ ಮತ್ತು ಆಕರ್ಷಕವಾಗಿ ಕಾಣುತ್ತದೆ ಎಂಬುದನ್ನು ತೋರಿಸುವ ಅದ್ಭುತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇಂಡಿಗೊ (IndiGo) ವಿಮಾನದ ಪೈಲಟ್ ಕ್ಯಾಪ್ಟನ್ ಪ್ರದೀಪ ಕೃಷ್ಣನ್ ಅವರು ಕಾಕ್‌ಪಿಟ್‌ನಿಂದ ರಾತ್ರಿಯ ಸಮಯದಲ್ಲಿ ಚಿತ್ರೀಕರಿಸಿದ ಈ ಅಪರೂಪದ ದೃಶ್ಯ ನೆಟ್ಟಿಗರನ್ನು … Continued

10 ದಿನಗಳಲ್ಲಿ 3ನೇ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದು ಮತ್ತು ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಸಾರ್ವಜನಿಕ ವಲಯದ ತೈಲ ಕಂಪನಿಗಳು ಶನಿವಾರ ದೇಶಾದ್ಯಂತ ಇಂಧನ ದರಗಳನ್ನು ಮತ್ತೊಮ್ಮೆ ಪರಿಷ್ಕರಿಸಿವೆ. ಈ ತಿಂಗಳಲ್ಲೇ ನಡೆದಿರುವ ಮೂರನೇ ಬೆಲೆ ಏರಿಕೆ ಇದಾಗಿದ್ದು, ಲೀಟರ್ ಪೆಟ್ರೋಲ್ ದರದಲ್ಲಿ 87 ಪೈಸೆ ಹಾಗೂ ಡೀಸೆಲ್ ದರದಲ್ಲಿ … Continued

ಇನ್‌ಸ್ಟಾಗ್ರಾಂನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಹವಾ : 66 ಲಕ್ಷ ದಾಟಿದ ಇದರ ವೆಬ್‌ಸೈಟಿನ ಫಾಲೋವರ್ಸ್ ಸಂಖ್ಯೆ !

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಕೇವಲ ರಾಜಕೀಯ ಪ್ರಚಾರದ ವೇದಿಕೆಯಾಗಿ ಉಳಿದಿಲ್ಲ, ಬದಲಿಗೆ ತೀವ್ರ ವಿಡಂಬನೆ ಮತ್ತು ವ್ಯಂಗ್ಯದ ಕೇಂದ್ರಗಳಾಗಿಯೂ ಬದಲಾಗುತ್ತಿವೆ. ಇದಕ್ಕೆ ಹೊಸ ಉದಾಹರಣೆಯೆಂಬಂತೆ, ಕೇವಲ ಕೆಲವೇ ದಿನಗಳ ಹಿಂದೆ ಆರಂಭವಾದ ‘ಕಾಕ್ರೋಚ್ ಜನತಾ ಪಾರ್ಟಿ’ (Cockroach Janta Party) ಎಂಬ ವ್ಯಂಗ್ಯಭರಿತ ವೆಬ್‌ಸೈಟ್ ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಆರಂಭವಾದ ಕೆಲವೇ … Continued

ವಿಶ್ವದಲ್ಲೇ ಅತ್ಯಂತ ಬಿಸಿ ನಗರ ಎಂಬ ಕುಖ್ಯಾತಿಗೆ ಪಾತ್ರವಾದ ಭಾರತದ ʼಬಂಡಾʼ ನಗರ

ಉತ್ತರ ಪ್ರದೇಶದ ಬುಂದೇಲಖಂಡ ಜಿಲ್ಲೆಯ ‘ಬಂಡಾ’  ಪ್ರದೇಶವು  ಜಗತ್ತಿನಲ್ಲೇ ಅತ್ಯಂತ ಹೆಚ್ಚು ಉಷ್ಣಾಂಶ ದಾಖಲಾಗುವ ಭೀಕರ ಪ್ರದೇಶವಾಗಿ ಪದೇ ಪದೇ ಹೊರಹೊಮ್ಮುತ್ತಿದೆ. ಇತ್ತೀಚೆಗೆ ಇಲ್ಲಿ ಬರೋಬ್ಬರಿ 48.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ ದೇಶದಲ್ಲೇ ಅತಿ ಹೆಚ್ಚು ಮತ್ತು ಜಗತ್ತಿನಲ್ಲೇ ಅತ್ಯಂತ ಗರಿಷ್ಠ ಉಷ್ಣಾಂಶ ಹೊಂದಿದ ನಗರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇದಕ್ಕೂ ಎರಡು ದಿನ … Continued

ಚಂದ್ರಯಾನ-3 : ಚಂದ್ರನ ಮೇಲೆ ವಿಕ್ರಂ ಲ್ಯಾಂಡರಿನ ಸಣ್ಣ ಜಿಗಿತ ; ವಿಜ್ಞಾನಲೋಕವನ್ನೇ ಬೆರಗುಗೊಳಿಸಿದ ಇಸ್ರೋದ ಮಹಾ ಆವಿಷ್ಕಾರ !

ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಮಾಡಿದ ಆ ಒಂದು ಸಣ್ಣ ‘ಹಾಪ್’ (ಜಿಗಿತ), ಚಂದ್ರನ ಭೂವಿಜ್ಞಾನದ ರಹಸ್ಯಗಳನ್ನು ಬಿಚ್ಚಿಡುವಲ್ಲಿ ಒಂದು ದೈತ್ಯ ಹೆಜ್ಜೆಯನ್ನೇ ಇಟ್ಟಿದೆ. ಭಾರತದ ಈ ಐತಿಹಾಸಿಕ ಮಿಷನ್ ತನ್ನ ನಿಗದಿತ ಅವಧಿಯನ್ನು ಪೂರ್ಣಗೊಳಿಸಿದ ನಂತರವೂ ಜಗತ್ತಿಗೆ ನಿರಂತರ ಅಚ್ಚರಿಗಳನ್ನು ನೀಡುತ್ತಲೇ ಇದೆ. ಈ ಹೊಸ ಸಂಶೋಧನೆಯು ನಾಸಾ (NASA) ತನ್ನ ‘ಆರ್ಟೆಮಿಸ್’ ಮಿಷನ್ ಮೂಲಕ … Continued