ಚಂದ್ರನ ಮೇಲೆ ಇಸ್ರೋದ ಮಹತ್ವದ ಆವಿಷ್ಕಾರ ; ಚಂದ್ರನ ದಕ್ಷಿಣ ಧ್ರುವದಲ್ಲಿ ʼಹಿಮʼ ಪತ್ತೆ ಮಾಡಿದ ಚಂದ್ರಯಾನ-2; ಇದು ಯಾಕೆ ಮುಖ್ಯ?

ಅಹಮದಾಬಾದ್: ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ ಯೋಜನೆ ಮತ್ತೊಂದು ಐತಿಹಾಸಿಕ ವೈಜ್ಞಾನಿಕ ಮೈಲಿಗಲ್ಲನ್ನು ಸಾಧಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹಮ್ಮಿಕೊಂಡಿದ್ದ ಎರಡನೇ ಚಂದ್ರಯಾನ (ಚಂದ್ರಯಾನ-2) ಮಿಷನ್‌ನ ದತ್ತಾಂಶಗಳನ್ನು ವಿಶ್ಲೇಷಿಸಿರುವ ವಿಜ್ಞಾನಿಗಳು, ಚಂದ್ರನ ದಕ್ಷಿಣ ಧ್ರುವದ ಬಳಿಯ ಕುಳಿಗಳ (Craters) ಮೇಲ್ಮೈ ಅಡಿಯಲ್ಲಿ ನೀರ್ಗಲ್ಲು ಅಥವಾ ಹಿಮ (Water-ice) ಇರುವುದಕ್ಕೆ ಬಲವಾದ ಪುರಾವೆಗಳನ್ನು ಪತ್ತೆಹಚ್ಚಿದ್ದಾರೆ. ಸೌರಮಂಡಲದ … Continued

ಚಂದ್ರಯಾನ-3 : ಚಂದ್ರನ ಮೇಲೆ ವಿಕ್ರಂ ಲ್ಯಾಂಡರಿನ ಸಣ್ಣ ಜಿಗಿತ ; ವಿಜ್ಞಾನಲೋಕವನ್ನೇ ಬೆರಗುಗೊಳಿಸಿದ ಇಸ್ರೋದ ಮಹಾ ಆವಿಷ್ಕಾರ !

ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಮಾಡಿದ ಆ ಒಂದು ಸಣ್ಣ ‘ಹಾಪ್’ (ಜಿಗಿತ), ಚಂದ್ರನ ಭೂವಿಜ್ಞಾನದ ರಹಸ್ಯಗಳನ್ನು ಬಿಚ್ಚಿಡುವಲ್ಲಿ ಒಂದು ದೈತ್ಯ ಹೆಜ್ಜೆಯನ್ನೇ ಇಟ್ಟಿದೆ. ಭಾರತದ ಈ ಐತಿಹಾಸಿಕ ಮಿಷನ್ ತನ್ನ ನಿಗದಿತ ಅವಧಿಯನ್ನು ಪೂರ್ಣಗೊಳಿಸಿದ ನಂತರವೂ ಜಗತ್ತಿಗೆ ನಿರಂತರ ಅಚ್ಚರಿಗಳನ್ನು ನೀಡುತ್ತಲೇ ಇದೆ. ಈ ಹೊಸ ಸಂಶೋಧನೆಯು ನಾಸಾ (NASA) ತನ್ನ ‘ಆರ್ಟೆಮಿಸ್’ ಮಿಷನ್ ಮೂಲಕ … Continued

ವೀಡಿಯೊ..| ಇಂದು ಚಂದ್ರನ ಅಮೆರಿಕದ ಬಾಹ್ಯಾಕಾಶ ನೌಕೆ ಲ್ಯಾಂಡಿಂಗ್‌ ; ಅದು ತೆಗೆದ ಚಂದ್ರನ ಮೇಲ್ಮೈನ ಅದ್ಭುತ ವೀಡಿಯೊ ಹಂಚಿಕೊಂಡ ಫೈರ್‌ ಫ್ಲೈ ಏರೋಸ್ಪೇಸ್‌

ಸುದೀರ್ಘ ಪ್ರಯಾಣದ ನಂತರ, ಅಮೆರಿಕದ ಕಂಪನಿಯೊಂದು ಚಂದ್ರನ ಮೇಲೆ ಇಳಿಯಲು ಕೆಲವೇ ಗಂಟೆಗಳ ದೂರದಲ್ಲಿದೆ. ಅದು ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್‌ ಮಾಡುವ ಎರಡನೇ ಖಾಸಗಿ ಲ್ಯಾಂಡರ್ ಆಗಲಿದೆ. ಫೈರ್‌ಫ್ಲೈ ಏರೋಸ್ಪೇಸ್‌ನ ಬ್ಲೂ ಘೋಸ್ಟ್ ಮಿಷನ್ 1 ಭಾನುವಾರ ಅಮೆರಿಕದ ಈಸ್ಟರ್ನ್ ಸಮಯ (0834 GMT) 3:34 ಕ್ಕಿಂತ ಮುಂಚೆಯೇ ಲ್ಯಾಂಡಿಂಗ್ ಮಾಡಲು ಸಮಯ ನಿಗದಿಪಡಿಸಿಕೊಂಡಿದೆ. … Continued

ಜಾಗತಿಕ ಸಂಶೋಧಕರಿಗಾಗಿ ಚಂದ್ರಯಾನ-3 ವೈಜ್ಞಾನಿಕ ಡೇಟಾ ಬಿಡುಗಡೆ ಮಾಡಿದ ಇಸ್ರೋ

ನವದೆಹಲಿ : ಭಾರತವು ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ವರ್ಷಾಚರಣೆ ಅಂಗವಾಗಿ ಇಸ್ರೋ ವಿಶ್ವಾದ್ಯಂತದ ಸಂಶೋಧಕರಿಗೆ ಚಂದ್ರಯಾನ-3 ಮಿಷನ್‌ನಿಂದ ಸಂಗ್ರಹಿಸಲಾದ ತನ್ನ ವೈಜ್ಞಾನಿಕ ಡೇಟಾವನ್ನು ವಿಶ್ಲೇಷಣೆಗಾ ಶುಕ್ರವಾರ ಬಿಡುಗಡೆ ಮಾಡಿದೆ. ಕಳೆದ ವರ್ಷ ಆಗಸ್ಟ್ 23 ರಂದು ಇದುವರೆಗೆ ಯಾರೂ ಅನ್ವೇಷಿಸದ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಸಾಫ್ಟ್ ಲ್ಯಾಂಡಿಂಗ್ ಮಾಡುವ … Continued

ಭೂಮಿಯಿಂದ ದೂರ ಸರಿಯುತ್ತಿರುವ ಚಂದ್ರ ; ಭೂಮಿಯ ಮೇಲಿನ ಒಂದು ದಿನ ಎಂದರೆ 25 ಗಂಟೆಗಳು ಎಂದಾಗಬಹುದು…!

ಭೂಮಿಯ ಮೇಲಿನ ಒಂದು ದಿನವನ್ನು 25 ಗಂಟೆಗಳೆಂದು ಅರ್ಥೈಸುವ ಕಾಲ ಮುಂದೊಂದು ದಿನ ಬರಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ, ಯಾಕೆಂದರೆ ಚಂದ್ರನು ಭೂಮಿಯಿಂದ ನಿಧಾನವಾಗಿ ದೂರ ಸರಿಯುತ್ತಿದ್ದಾನೆ ಎಂದು ಸಂಶೋಧನೆಯೊಂದು ಹೇಳಿದೆ. ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾನಿಲಯವು ನಡೆಸಿದ ಸಂಶೋಧನೆಯ ಪ್ರಕಾರ ಚಂದ್ರನು ಭೂಮಿಯಿಂದ ವರ್ಷಕ್ಕೆ ಸರಿಸುಮಾರು 3.8 ಸೆಂಟಿಮೀಟರ್‌ ಗಳಷ್ಟು ದೂರ ಹೋಗುತ್ತಿದ್ದಾನೆ. ಇದು ನಮ್ಮ ಗ್ರಹದಲ್ಲಿನ … Continued

ಚಂದ್ರಯಾನ-3 : ವಿಕ್ರಂ ಲ್ಯಾಂಡರ್ ಸ್ಪರ್ಶಿಸಿದ ಸ್ಥಳಕ್ಕೆ ‘ಶಿವ ಶಕ್ತಿ’ ಎಂದು ಹೆಸರಿಡಲು ಐಎಯು ಅನುಮೋದನೆ

ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಚಂದ್ರಯಾನ-3 ಮಿಷನ್‌ನ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಸ್ಥಳಕ್ಕೆ ‘ಶಿವ ಶಕ್ತಿ’ ಎಂದು ಹೆಸರಿಡಲು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ (IAU) ಅನುಮೋದನೆ ನೀಡಿದೆ. ಹೀಗಾಗಿ ವಿಕ್ರಂ ಲ್ಯಾಂಡರ್ ಇಳಿದ ಸ್ಥಳವನ್ನು ಅಧಿಕೃತವಾಗಿ ‘ಶಿವ ಶಕ್ತಿ’ ಎಂದು ಹೆಸರಿಸಲಾಗಿದೆ. ಚಂದ್ರನ ಮೇಲ್ಮೈಯಲ್ಲಿ ವಿಕ್ರಂ ಲ್ಯಾಂಡರ್ ಇಳಿದ ಸ್ಥಳಕ್ಕೆ … Continued

ಚಂದ್ರನ ಸೃಷ್ಟಿಯ ರಹಸ್ಯ..: ʼಮಂಗಳʼನ ಗಾತ್ರದ ʼಥಿಯಾʼ ಗ್ರಹ ಭೂಮಿಗೆ ಬಲವಾಗಿ ಅಪ್ಪಳಿಸಿ ಚಂದ್ರನ ಸೃಷ್ಟಿ….! ಭೂಮಿ ಒಳಗಿವೆ ʼಥಿಯಾʼ ಅವಶೇಷಗಳು…!!

ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಕ್ಯಾಲ್ಟೆಕ್) ಸಂಶೋಧಕರು ಭೂಮಿಯ ಹೊದಿಕೆ ಅಥವಾ ಪದರದ ಆಳವಾದ ಎರಡು ಬೃಹತ್ ರಚನೆಗಳನ್ನು ಪ್ರಸ್ತಾಪಿಸಿದ್ದಾರೆ, ಇದನ್ನು ದೊಡ್ಡ ಕಡಿಮೆ-ವೇಗದ ಪ್ರದೇಶಗಳು (ಎಲ್‌ಎಲ್‌ವಿಪಿ) ಎಂದು ಕರೆಯಲಾಗುತ್ತದೆ, ಇವು “ಥಿಯಾʼ ಎಂಬ ಪ್ರಾಚೀನ ಗ್ರಹದ ಅವಶೇಷಗಳಾಗಿವೆ. ಈ ಆಕಾಶಕಾಯವು ಶತಕೋಟಿ ವರ್ಷಗಳ ಹಿಂದೆ ಭೂಮಿಗೆ ಡಿಕ್ಕಿ ಹೊಡೆದಿದೆ ಹಾಗೂ ಇದು ನಮ್ಮ ಚಂದ್ರನ … Continued

ಚಂದ್ರಯಾನ-3 : ಚಂದ್ರನ ಮೇಲೆ ಬೆಳಗಾಗುತ್ತಿದ್ದಂತೆ ಪ್ರಗ್ಯಾನ್ ರೋವರ್, ವಿಕ್ರಂ ಲ್ಯಾಂಡರ್ ಪುನಶ್ಚೇತನಗೊಳಿಸಲು ಇಸ್ರೋ ಸಿದ್ಧತೆ

ನವದೆಹಲಿ : ಚಂದ್ರನ ದಕ್ಷಿಣ ಧ್ರುವದ ಮೇಲೆ ಬೆಳಕಾಗುತ್ತಿದ್ದಂತೆ, ಇಸ್ರೋ ಈಗ ತನ್ನ ಚಂದ್ರಯಾನ-3 ರ ಸೌರಶಕ್ತಿ ಚಾಲಿತ ಲ್ಯಾಂಡರ್ ವಿಕ್ರಂ ಮತ್ತು ರೋವರ್ ಪ್ರಗ್ಯಾನ್‌ನೊಂದಿಗೆ ಸಂವಹನವನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಿದೆ. ಅವುಗಳನ್ನು ಪುನರುಜ್ಜೀವನಗೊಳಿಸಿದರೆ ವೈಜ್ಞಾನಿಕ ಪ್ರಯೋಗಗಳನ್ನು ಮುಂದುವರಿಸಬಹುದಾಗಿದೆ. ಲ್ಯಾಂಡರ್ ಮತ್ತು ರೋವರ್ ಎರಡನ್ನೂ ಈ ತಿಂಗಳ ಆರಂಭದಲ್ಲಿ ಚಂದ್ರನಲ್ಲಿ ರಾತ್ರಿಯಾಗುವ ಮೊದಲು ಕ್ರಮವಾಗಿ ಸೆಪ್ಟೆಂಬರ್ 4 … Continued

ದಕ್ಷಿಣ ಆಫ್ರಿಕಾದಿಂದಲೇ ಚಂದ್ರನ ಮೇಲೆ ಚಂದ್ರಯಾನ-3 ಇಳಿಯಲಿರುವ ಐತಿಹಾಸಿಕ ಕ್ಷಣ ವೀಕ್ಷಿಸಲಿರುವ ಪ್ರಧಾನಿ ಮೋದಿ

ನವದೆಹಲಿ : ಇಂದು ಐತಿಹಾಸಿಕ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ, ಪ್ರಧಾನಿ ನರೇಂದ್ರ ಮೋದಿ ಅವರು 15 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾಕಕ್ಕೆ ಭೇಟಿ ನೀಡಿದ್ದು, ಅಲ್ಲಿಂದಲೇ ವಿಕ್ರಂ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯಲಿರುವ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲಿದ್ದಾರೆ. ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ (LM) – ಲ್ಯಾಂಡರ್ ವಿಕ್ರಂ … Continued

ಕೊನೆಯ ಹಂತದ ಚಂದ್ರನ ಕಕ್ಷೆಯ ಕಾರ್ಯಾಚರಣೆ ಪೂರ್ಣಗೊಳಿಸಿದ ಚಂದ್ರಯಾನ-3 : ಈಗ ಚಂದ್ರನ ಮೇಲೆ ಇಳಿಯುವುದೊಂದೇ ಬಾಕಿ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿಗಳು ಬುಧವಾರ ಚಂದ್ರನ ಮೇಲ್ಮೈಯಲ್ಲಿ ಬಾಹ್ಯಾಕಾಶ ನೌಕೆ ಇಳಿಯುವ ನಿರ್ಣಾಯಕ ಹಂತದ ಚಂದ್ರಯಾನ-3 ರ ಎರಡನೇ ಮತ್ತು ಅಂತಿಮ ಡಿ-ಬೂಸ್ಟ್ ಕಾರ್ಯಾಚರಣೆ ಇಂದು, ಭಾನುವಾರ ಬೆಳಿಗ್ಗೆ ಯಶಸ್ವಿಯಾಗಿ ಪೂರ್ಣಗೊಂಳಿಸಿದೆ. ಡಿ-ಬೂಸ್ಟ್ ಕಾರ್ಯಾಚರಣೆ ವಿಕ್ರಂ ಲ್ಯಾಂಡರ್ ಚಂದ್ರನಿಗೆ ಅತ್ಯಂತ ಸಮೀಪದ 25 ಕಿಮೀ x 134 ಕಿಮೀ ಕಕ್ಷೆಯಲ್ಲಿ … Continued