ದಕ್ಷಿಣ ಆಫ್ರಿಕಾದಿಂದಲೇ ಚಂದ್ರನ ಮೇಲೆ ಚಂದ್ರಯಾನ-3 ಇಳಿಯಲಿರುವ ಐತಿಹಾಸಿಕ ಕ್ಷಣ ವೀಕ್ಷಿಸಲಿರುವ ಪ್ರಧಾನಿ ಮೋದಿ

ನವದೆಹಲಿ : ಇಂದು ಐತಿಹಾಸಿಕ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ, ಪ್ರಧಾನಿ ನರೇಂದ್ರ ಮೋದಿ ಅವರು 15 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾಕಕ್ಕೆ ಭೇಟಿ ನೀಡಿದ್ದು, ಅಲ್ಲಿಂದಲೇ ವಿಕ್ರಂ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯಲಿರುವ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲಿದ್ದಾರೆ.
ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ (LM) – ಲ್ಯಾಂಡರ್ ವಿಕ್ರಂ ಮತ್ತು ರೋವರ್ ಪ್ರಗ್ಯಾನ್ ಇಂದು (ಆಗಸ್ಟ್‌ ೨೩) ಸಂಜೆ 6.04 ಕ್ಕೆ ಚಂದ್ರನ ದಕ್ಷಿಣ ಧ್ರುವದ ಬಳಿ ಸ್ಪರ್ಶಿಸಲಿದೆ.
ಚಂದ್ರಯಾನ-3ರ ಯಶಸ್ಸು ಚಂದ್ರನ ಮೇಲ್ಮೈಯಲ್ಲಿ ಇಳಿದರೆ ಭಾರತವು ಈ ಸಾಧನೆ ಮಾಡಿದ ಅಮೆರಿಕ, ರಷ್ಯಾ ಹಾಗೂ ಚೀನಾ ರಾಷ್ಟ್ರಗಳ ಸಾಲಿನಲ್ಲಿ ಸೇರಲಿದೆ.
ಚಂದ್ರನತ್ತ ಸಾಗುವ ಭಾರತೀಯ ಬಾಹ್ಯಾಕಾಶ ನೌಕೆಯಲ್ಲಿನ ಎಲ್ಲಾ ವ್ಯವಸ್ಥೆಗಳು “ಸಂಪೂರ್ಣವಾಗಿ” ಕಾರ್ಯನಿರ್ವಹಿಸುತ್ತಿವೆ ಮತ್ತು ಲ್ಯಾಂಡಿಂಗ್ ದಿನದಂದು ಯಾವುದೇ ಅಡಚಣೆ ಉಂಟಾಗುವುದಿಲ್ಲ ಎಂಬ ಭರವಸೆ ಇದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.

ಚಂದ್ರಯಾನ-3ರ ನೌಕೆಯನ್ನು ಜುಲೈ 14ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು.
ಸೆಪ್ಟೆಂಬರ್ 7, 2019 ರಂದು ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುವಾಗ ಲ್ಯಾಂಡರ್‌ನಲ್ಲಿನ ಬ್ರೇಕಿಂಗ್ ಸಿಸ್ಟಂನಲ್ಲಿ ಕಾಣಿಸಿಕೊಂಡ ತೊಂದರೆಯ ನಂತರ ಅದರ ಲ್ಯಾಂಡರ್ ಚಂದ್ರನ ಮೇಲ್ಮೈಗೆ ಅಪ್ಪಳಿಸಿ ಚಂದ್ರಯಾನ-2 ಸುರಕ್ಷಿತ ಲ್ಯಾಂಡಿಂಗ್‌ ಮಾಡಲು ವಿಫಲವಾಗಿತ್ತು.

ಪ್ರಮುಖ ಸುದ್ದಿ :-   ದೆಹಲಿ ಸಿಎಂ ಅರವಿಂದ ಕೇಜ್ರಿವಾಲಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್‌

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement