ಪೋಪ್‌ ಫ್ರಾನ್ಸಿಸ್‌ ನಿಧನಕ್ಕೆ ಭಾರತದಲ್ಲಿ ಮೂರು ದಿನ ಶೋಕಾಚರಣೆ

ನವದೆಹಲಿ: ಕ್ರೈಸ್ತ ಧರ್ಮ ಗುರು ಪೋಪ್ ಫ್ರಾನ್ಸಿಸ್ ಅವರ ನಿಧನಕ್ಕೆ ಗೌರವ ಸೂಚಕವಾಗಿ ಕೇಂದ್ರ ಸರ್ಕಾರ ಸೋಮವಾರ ಮೂರು ದಿನಗಳ ರಾಜ್ಯ ಶೋಕಾಚರಣೆಯನ್ನು ಘೋಷಿಸಿದೆ. ಏಪ್ರಿಲ್ 22 (ಮಂಗಳವಾರ) ಮತ್ತು ಏಪ್ರಿಲ್ 23 (ಬುಧವಾರ) ಶೋಕಾಚರಣೆ ಇರಲಿದೆ. ನಂತರ ಪೋಪ್‌ ಅಂತ್ಯಕ್ರಿಯೆ ನಡೆಯಲಿರುವ ದಿನದಂದು ಒಂದು ದಿನದ ಶೋಕಾಚರಣೆ ಇರಲಿದೆ ಎಂದು ಕೇಂದ್ರ ಗೃಹಸಚಿವಾಲಯ ಹೇಳಿದೆ. … Continued

ವೀಡಿಯೊ…| 28 ಕಿಮೀ ರಾಮಸೇತು ಸಮುದ್ರ ಈಜಿದ ಹುಬ್ಬಳ್ಳಿ ಪೊಲೀಸ್‌ ಅಧಿಕಾರಿ…!

ಹುಬ್ಬಳ್ಳಿ : ಶ್ರೀಲಂಕಾದಿಂದ ಭಾರತದ ಧನುಷ್ ಕೋಡಿಯ ವರೆಗೆ ರಾಮ ಸೇತು ಸಮುದ್ರ ಮಾರ್ಗದಲ್ಲಿ 28 ಕಿ.ಮೀ.ಈಜುವ ಮೂಲಕ ಹುಬ್ಬಳ್ಳಿಯ ಹುಬ್ಬಳ್ಳಿಯ ಪೊಲೀಸ್ ಅಧಿಕಾರಿ ಇದ್ದ ಈಜು ತಂಡ ಜಾಗತಿಕವಾಗಿ ಗಮನ ಸೆಳೆದಿದೆ. ಈ ಸಾಧನೆ ಮಾಡಿದವರಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್‌ ಮುರುಗೇಶ ಚನ್ನಣ್ಣವರ ಅವರು ಒಬ್ಬರು. ಇವರ ಜೊತೆ ಹುಬ್ಬಳ್ಳಿಯ ವೈದ್ಯಕೀಯ ವಿದ್ಯಾರ್ಥಿ … Continued

ಟ್ರಂಪ್ ಸುಂಕ ಆದೇಶಕ್ಕೂ ಮುನ್ನ ಭಾರತದಿಂದ ಅಮೆರಿಕಕ್ಕೆ 600 ಟನ್ ಐಫೋನ್‌ಗಳನ್ನು ಏರ್‌ಲಿಫ್ಟ್ ಮಾಡಿದ ಆಪಲ್…!

ನವದೆಹಲಿ: ಆಪಲ್‌ನ ಭಾರತದ ಪ್ರಮುಖ ಪೂರೈಕೆದಾರರಾದ ಫಾಕ್ಸ್‌ಕಾನ್ ಮತ್ತು ಟಾಟಾ ಈ ಮಾರ್ಚ್‌ ತಿಂಗಳಲ್ಲಿ ಸುಮಾರು $2 ಬಿಲಿಯನ್ (ಶತಕೋಟಿ) ಮೌಲ್ಯದ ಐಫೋನ್‌ಗಳನ್ನು ಅಮೆರಿಕಕ್ಕೆ ರವಾನಿಸಿವೆ. ಇದು ಸಾರ್ವಕಾಲಿಕ ಗರಿಷ್ಠವಾಗಿದೆ, ಏಕೆಂದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಂಬರುವ ಸುಂಕಗಳನ್ನು ತಪ್ಪಿಸಲು ಅಮೆರಿಕದ ಕಂಪನಿಯು ಐಫೋನ್‌ಗಳನ್ನು ವಿಮಾನದಲ್ಲಿ ಸಾಗಿಸಿತು ಎಂದು ಕಸ್ಟಮ್ಸ್ ಡೇಟಾ ತೋರಿಸುತ್ತದೆ. ಟ್ರಂಪ್ … Continued

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ; ಪರಾರಿಯಾಗಿದ್ದ ಆರೋಪಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ಬಂಧನ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಕೇಂದ್ರ ತನಿಖಾ ದಳದ (ಸಿಬಿಐ) ಮೂಲಗಳು ದೃಢಪಡಿಸಿವೆ. ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಸೇರಿದಂತೆ ಭಾರತೀಯ ತನಿಖಾ ಸಂಸ್ಥೆಗಳ ಕೋರಿಕೆಯ ಮೇರೆಗೆ ಚೋಕ್ಸಿಯನ್ನು ಬಂಧಿಸಲಾಗಿದ್ದು, … Continued

ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಚಿಪ್‌ಗಳಿಗೆ ಪ್ರತಿಸುಂಕಗಳಿಂದ ವಿನಾಯಿತಿ ಘೋಷಿಸಿದ ಟ್ರಂಪ್‌

ವಾಷಿಂಗ್ಟನ್‌ : ಅಮೆರಿಕದ ಡೊನಾಲ್ಡ್ ಟ್ರಂಪ್ ಸರ್ಕಾರವು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಸೆಮಿಕಂಡಕ್ಟರ್ ಚಿಪ್‌ಗಳು ಸೇರಿದಂತೆ ಹಲವಾರು ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಪ್ರತಿ ಸುಂಕಗಳಿಂದ ವಿನಾಯಿತಿ ನೀಡುವುದಾಗಿ ಘೋಷಿಸಿದೆ. ಇದರಲ್ಲಿ ಚೀನಾದ ಎಲೆಕ್ಟ್ರಾನಿಕ್‌ ಉತ್ಪನ್ನಗಳು ಸೇರಿವೆ. ಈ ಉತ್ಪನ್ನಗಳು ಚೀನಾದ ಮೇಲೆ ವಿಧಿಸಲಾಗುವ ಪ್ರಸ್ತುತ ಶೇಕಡಾ 145 ಸುಂಕಗಳಿಗೆ ಅಥವಾ ಬೇರೆಡೆ ವಿಧಿಸಲಾಗುವ ಶೇಕಡಾ 10 ರಷ್ಟು … Continued

26/11 ಮುಂಬೈ ದಾಳಿ ಸಂಚುಕೋರ ತಹವ್ವೂರ್ ರಾಣಾನನ್ನು 18 ದಿನಗಳ ಎನ್‌ಐಎ ಕಸ್ಟಡಿಗೆ ಕಳುಹಿಸಿದ ನ್ಯಾಯಾಲಯ

ನವದೆಹಲಿ: ಗುರುವಾರ ಭಾರತಕ್ಕೆ ಹಸ್ತಾಂತರಿಸಲ್ಪಟ್ಟ 26/11 ಮುಂಬೈ ದಾಳಿಯ ಪ್ರಮುಖ ಆರೋಪಿ ತಹವ್ವೂರ್ ರಾಣಾನನ್ನು ನ್ಯಾಯಾಲಯವು 18 ದಿನಗಳ ರಾಷ್ಟ್ರೀಯ ತನಿಖಾ ದಳ(NIA)ದ ಕಸ್ಟಡಿಗೆ ಕಳುಹಿಸಿದೆ. ಎನ್‌ಐಎ ಗುರುವಾರ ಸಂಜೆ ರಾಣಾನನ್ನು ಔಪಚಾರಿಕವಾಗಿ ಬಂಧಿಸಿದ ನಂತರ ವಿಶೇಷ ಎನ್‌ಐಎ ನ್ಯಾಯಾಲಯದ ಮುಂದೆ ಹಾಜರುಪಡಿಸಿತು ಹಾಗೂ 20 ದಿನಗಳ ಕಸ್ಟಡಿಗೆ ಕೋರಿತು, ನಂತರ ಆದೇಶವನ್ನು ಕಾಯ್ದಿರಿಸಲಾಯಿತು. ವಾದಗಳನ್ನು … Continued

26/11 ಮುಂಬೈ ದಾಳಿ ಸಂಚುಕೋರ ತಹವ್ವೂರ್ ರಾಣಾನ ಅಮೆರಿಕದಿಂದ ದೆಹಲಿಗೆ ತಂದ ವಿಮಾನ ; ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಬಂಧನ

ನವದೆಹಲಿ: ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ ಸಂಚಿನಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಭಾರತದ ಮೋಸ್ಟ್‌ ವಾಂಟೆಡ್‌ ವ್ಯಕ್ತಿ ತಹವ್ವೂರ್ ಹುಸೇನ್ ರಾಣಾನನ್ನು ಅಮೆರಿಕದಿಂದ ದೆಹಲಿಗೆ ಕರೆತರಲಾಗಿದೆ. ಆತನನ್ನು ಬುಧವಾರ ವಿಶೇಷ ವಿಮಾನದಲ್ಲಿ ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡಲಾಯಿತು. ವಿಮಾನ ದೆಹಲಿಯಲ್ಲಿ ಲ್ಯಾಂಡ್‌ ಆಗುತ್ತಿದ್ದಂತೆಯೇ 64 ವರ್ಷದ ತಹವ್ವೂರ್ ರಾಣಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಲ್ಯಾಂಡಿಂಗ್ … Continued

ಇನ್ಮುಂದೆ ಆಧಾರ್ ಕಾರ್ಡ್ ಸ್ಕ್ಯಾನ್ ಮಾಡುವ, ಫೋಟೊಕಾಪಿ ಸಲ್ಲಿಸುವ ಅಗತ್ಯವಿಲ್ಲ ; ಕೇಂದ್ರ ಸರ್ಕಾರದಿಂದ ಹೊಸ ಆ್ಯಪ್ ಬಿಡುಗಡೆ

ನವದೆಹಲಿ: ಡಿಜಿಟಲ್ ಅನುಕೂಲತೆ ಮತ್ತು ಗೌಪ್ಯತೆ ರಕ್ಷಣೆ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ, ಕೇಂದ್ರವು ಮಂಗಳವಾರ ಹೊಸ ಆಧಾರ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಅದು ಬಳಕೆದಾರರು ತಮ್ಮ ಆಧಾರ್ ವಿವರಗಳನ್ನು ಡಿಜಿಟಲ್ ಆಗಿ ಪರಿಶೀಲಿಸಲು ಮತ್ತು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದರಿಂದ ಭೌತಿಕ ಆಧಾರ್ ಕಾರ್ಡ್‌ಗಳನ್ನು ಒಯ್ಯುವ ಅಥವಾ ಫೋಟೊಕಾಪಿಗಳನ್ನು ಸಲ್ಲಿಸುವ ಅಗತ್ಯ ಇಲ್ಲವಾಗುತ್ತದೆ. ಆ್ಯಪ್ … Continued

ಭಾರತ ಸೇರಿ 14 ದೇಶಗಳಿಗೆ ತಾತ್ಕಾಲಿಕವಾಗಿ ವೀಸಾ ಸ್ಥಗಿತಗೊಳಿಸಿದ ಸೌದಿ ಸೌದಿ ಅರೇಬಿಯಾ

ರಿಯಾದ್‌: ಈ ಬಾರಿ ಹಜ್‌ ಯಾತ್ರೆ ಸಮೀಪಿಸುತ್ತಿದ್ದಂತೆ ಸೌದಿ ಅರೇಬಿಯಾವು ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ 14 ದೇಶಗಳ ನಾಗರಿಕರಿಗೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸರಿಯಾದ ನೋಂದಣಿ ಹಾಗೂ ದಾಖಲೆ ಇಲ್ಲದ ವ್ಯಕ್ತಿಗಳು ಹಜ್ ಯಾತ್ರೆ ಮಾಡಲು ಪ್ರಯತ್ನಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಈಜಿಪ್ಟ್, … Continued

ಟ್ರಂಪ್ ಸುಂಕದ ಹೊಡೆತಕ್ಕೆ ಕಂಗೆಟ್ಟ ಶೇರು ಮಾರುಕಟ್ಟೆ ; ಕರಗಿಹೋದ ಹೂಡಿಕೆದಾರರ 20.16 ಲಕ್ಷ ಕೋಟಿ ರೂ.ಸಂಪತ್ತು…!

ಮುಂಬೈ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿ ಸುಂಕಗಳು ಜಗತ್ತಿನಾದ್ಯಂತ ಹಣಕಾಸು ವ್ಯವಸ್ಥೆಯಲ್ಲಿ ಅವ್ಯವಸ್ಥೆಯನ್ನು ಉಂಟುಮಾಡಿದ್ದು, ಭಾರತೀಯ ಶೇರು ಮಾರುಕಟ್ಟೆಗಳನ್ನು 10 ತಿಂಗಳಲ್ಲೇ ಅತಂತ್ಯ ಕಡಿಮೆ ಮಟ್ಟಕ್ಕೆ ಕುಸಿದಿದೆ. ಮತ್ತು 10 ಸೆಕೆಂಡುಗಳಲ್ಲಿ 20 ಲಕ್ಷ ಕೋಟಿ ರೂ.ಗಳ ಹೂಡಿಕೆದಾರರ ಸಂಪತ್ತನ್ನು ಕರಗಿಸಿ ಹಾಕಿದೆ. ಸೋಮವಾರ ಬೆಳಿಗ್ಗೆ ಸೆನ್ಸೆಕ್ಸ್ ಸುಮಾರು 4,000 ಪಾಯಿಂಟ್‌ಗಳ ಕುಸಿತ … Continued