“ಅವರು ನಿಮ್ಮ ತಾಯಿಗೆ ಗುಂಡು ಹಾರಿಸಿದಾಗ ಮಾತ್ರ ಭಯೋತ್ಪಾದನೆ…ನಮ್ಮವರ ಮೇಲೆ ಗುಂಡು ಹಾರಿಸಿದಾಗ ಅಲ್ಲವೇ ?”: ಪಾಕಿಸ್ತಾನದ ಬಿಲಾವಲ್ ಭುಟ್ಟೋಗೆ ತಿವಿದ ಓವೈಸಿ

ನವದೆಹಲಿ: ಪಾಕಿಸ್ತಾನದ ಪೀಪಲ್‌ ಪಾರ್ಟಿ ನಾಯಕ ಬಿಲಾವಲ್ ಭುಟ್ಟೋ ಜರ್ದಾರಿ ಅವರ “ರಕ್ತ ಹರಿಯುತ್ತದೆ” ಎಂಬ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ ನಾಯಕ ತನ್ನ ತಾಯಿ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಮತ್ತು ಅವರ ಅಜ್ಜ ಮತ್ತು ದೇಶದ ಮಾಜಿ … Continued

ಪಹಲ್ಗಾಮ್ ದಾಳಿ | ಪಾಕಿಸ್ತಾನ ಸೇನೆಯಲ್ಲಿ ದಂಗೆ ? ಯುದ್ಧ ಭೀತಿ ನಡುವೆ ಸೇನೆಯಲ್ಲಿ ಸಾಮೂಹಿಕ ರಾಜೀನಾಮೆ ಬಗ್ಗೆ ರಹಸ್ಯ ಅಡ್ವೈಸರಿಯಲ್ಲಿ ಎಚ್ಚರಿಕೆ…!

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯ ನಂತರ,  ಪಾಕಿಸ್ತಾನದ ಸೇನೆಯೊಳಗೆ ಹೆಚ್ಚುತ್ತಿರುವ ಅಶಾಂತಿಯ ಬಗ್ಗೆ ಸೋರಿಕೆಯಾಗಿದ್ದು ಎನ್ನಲಾದ  ಅಲ್ಲಿನ ಸೇನೆಯ ರಹಸ್ಯ ಅಡ್ವೈಸರಿ ಆತಂಕ ವ್ಯಕ್ತಪಡಿಸಿದೆ. ಪಾಕಿಸ್ತಾನ ಸೇನೆಯೊಳಗಿನದ್ದು ಎನ್ನಲಾದ ಈಗ ವೈರಲ್‌ ಆಗಿರುವ ಒಂದು ರಹಸ್ಯ ಅಡ್ವೈಸರಿಯು ಕಳೆದ ವಾರ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯ ನಂತರ ಭಾರತದ ಜೊತೆ … Continued

ಪಹಲ್ಗಾಮ್ ಭಯೋತ್ಪಾದಕ ದಾಳಿ : ಭಾರತದಲ್ಲಿ 16 ಪಾಕಿಸ್ತಾನದ ಯೂಟ್ಯೂಬ್ ಚಾನೆಲ್‌ಗಳ ನಿಷೇಧ

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಷಯವನ್ನು ಹರಡಿದ್ದಕ್ಕಾಗಿ ಒಟ್ಟು 6.3 ಕೋಟಿ ಚಂದಾದಾರರನ್ನು ಹೊಂದಿರುವ 16 ಪಾಕಿಸ್ತಾನಿ ಯೂಟ್ಯೂಬ್ (YouTube) ಚಾನೆಲ್‌ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಕೇಂದ್ರ ಗೃಹ ಸಚಿವಾಲಯದ ಶಿಫಾರಸುಗಳ ಮೇರೆಗೆ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಲಾಗಿದೆ. ನಿಷೇಧಿತ ವೇದಿಕೆಗಳಲ್ಲಿ ಡಾನ್, ಸಮಾ ಟಿವಿ, … Continued

ಭಾರತದಿಂದ ಹೊರಹೋಗದ ಪಾಕಿಸ್ತಾನಿ ಪ್ರಜೆಗಳಿಗೆ 3 ವರ್ಷ ಜೈಲು ಶಿಕ್ಷೆ, 3 ಲಕ್ಷ ರೂ. ದಂಡ

ನವದೆಹಲಿ: ಸರ್ಕಾರ ನಿಗದಿಪಡಿಸಿದ ಗಡುವಿನ ಪ್ರಕಾರ ಭಾರತವನ್ನು ತೊರೆಯಲು ವಿಫಲರಾದ ಯಾವುದೇ ಪಾಕಿಸ್ತಾನಿ ವ್ಯಕ್ತಿಯನ್ನು ಬಂಧಿಸಲಾಗುತ್ತದೆ, ವಿಚಾರಣೆಗೆ ಒಳಪಡಿಸಲಾಗುತ್ತದೆ ಮತ್ತು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಗರಿಷ್ಠ 3 ಲಕ್ಷ ರೂ. ದಂಡ ಅಥವಾ ಎರಡನ್ನೂ ಎದುರಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನದ ಜೊತೆ ಸಂಬಂಧ … Continued

“ಅಲ್ಲಿ ಯಾರೂ ಇಲ್ಲ”..: 35 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿರುವ ಪಾಕ್ ಮಹಿಳೆಗೆ ವಾಪಸ್ ಹೋಗಲು ಸೂಚನೆ ; ಆಕೆಯ ಗಂಡ, ಮಕ್ಕಳು ಭಾರತದ ಪ್ರಜೆಗಳು…!

ನವದೆಹಲಿ: 35 ವರ್ಷಗಳಿಗೂ ಹೆಚ್ಚು ಕಾಲ ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆ ಶಾರದಾ ಬಾಯಿ ಅವರಿಗೆ ಒಡಿಶಾ ಪೊಲೀಸರು ತಕ್ಷಣ ಭಾರತ ಬಿಟ್ಟು ಹೋಗುವಂತೆ ಸೂಚಿಸಿದ್ದಾರೆ. ಪಹಲ್ಗಾಮ್ ಹತ್ಯಾಕಾಂಡದ ನಂತರ ಪಾಕಿಸ್ತಾನದ ವಿರುದ್ಧ ತೆಗೆದುಕೊಂಡ ಕ್ರಮಗಳ ಸರಣಿಯ ಭಾಗವಾಗಿ ಪೊಲೀಸ್ ಕ್ರಮ ಕೈಗೊಳ್ಳಲಾಗಿದೆ. ಶಾರದಾ ಬಾಯಿ ಅವರ ವೀಸಾವನ್ನು ರದ್ದುಗೊಳಿಸಲಾಗಿದೆ ಮತ್ತು ಅವರಿಗೆ ತಕ್ಷಣವೇ ಪಾಕಿಸ್ತಾನಕ್ಕೆ … Continued

ಪಹಲ್ಗಾಮ್‌ ದಾಳಿ; ಸೇನೆಯ ಸಿಡಿಎಸ್‌ ಜೊತೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಹತ್ವದ ಮಾತುಕತೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಭಾನುವಾರ (ಏ. 27) ಭಾರತೀಯ ಸೇನೆಯ ಚೀಫ್‌ ಆಫ್‌ ಜನರಲ್ ಸ್ಟಾಫ್ (CDS) ಜನರಲ್ ಅನಿಲ್ ಚೌಹಾಣ ಅವರೊಂದಿಗೆ ಸಭೆ ನಡೆಸಿದರು. ಏ. 22ರಂದು ಪಾಕಿಸ್ತಾನದ ಉಗ್ರರು … Continued

ಪಹಲ್ಗಾಮ್​ ದಾಳಿ: ಪಾಕ್​ ಮಾಧ್ಯಮಗಳಲ್ಲಿ ಸುದ್ದಿಯಾದ ಸಿದ್ದರಾಮಯ್ಯ

ಬೆಂಗಳೂರು : ಪಹಲ್ಗಾಮ್ ಉಗ್ರರ ದಾಳಿ ಸಂಬಂಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆಯಿಂದ ಪಾಕಿಸ್ತಾನ ಮಾಧ್ಯಮಗಳಲ್ಲೂ ಸುದ್ದಿಯಾಗಿದ್ದಾರೆ. ಪಾಕಿಸ್ತಾನದ ಮೇಲೆ ಭಾರತ ಯುದ್ಧ ಮಾಡುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯನವರು ನೀಡಿದ ಹೇಳಿಕೆ ಈಗ ಪಾಕಿಸ್ತಾನ ಮಾಧ್ಯಮಗಳಲ್ಲಿ ಹೈಲೈಟ್‌ ಆಗಿದೆ. ಈ ಹೇಳಿಕೆಯನ್ನು ಪಾಕ್ ಟಿವಿ ಮಾಧ್ಯಮಗಳು ಬ್ರೇಕ್​ ನ್ಯೂಸ್​ ಆಗಿ ಪ್ರಸಾರ ಮಾಡಿವೆ. ಇದನ್ನು ಪಾಕಿಸ್ತಾನ … Continued

ನಿಮ್ಮ ಮೇಲೆ 130 ಪರಮಾಣು ಬಾಂಬ್‌ಗಳು ಗುರಿ ಇಟ್ಟಿವೆ : ಭಾರತಕ್ಕೆ ಪಾಕ್ ಸಚಿವನ ಬಹಿರಂಗ ಬೆದರಿಕೆ

ಇಸ್ಲಾಮಾಬಾದ್‌: ಪಾಕಿಸ್ತಾನ ಸಚಿವ ಹನೀಫ್ ಅಬ್ಬಾಸಿ ಭಾರತಕ್ಕೆ ಪರಮಾಣು ಬಾಂಬ್‌ಬೆದರಿಕೆ ಹಾಕಿದ್ದಾರೆ. ಘೋರಿ, ಶಾಹೀನ್ ಮತ್ತು ಘಜ್ನವಿ ಕ್ಷಿಪಣಿಗಳು ಮತ್ತು 130 ಪರಮಾಣು ಬಾಂಬ್‌ಗಳನ್ನು ಭಾರತದ ಮೇಲೆ ಹಾಕಲಿಕ್ಕಾಗಿಯೇ ಪಾಕಿಸ್ತಾನದ ಶಸ್ತ್ರಾಗಾರದಲ್ಲಿ ಇಡಲಾಗಿದೆ ಎಂದು ಅವರು ಎಚ್ಚರಿಸಿದ್ದಾರೆ. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಮೂಲಕ ಭಾರತ ಪಾಕಿಸ್ತಾನದ ನೀರು ಸರಬರಾಜನ್ನು ನಿಲ್ಲಿಸಲು ಧೈರ್ಯ ಮಾಡಿದರೆ, ಅದು … Continued

ವೀಡಿಯೊ..| ಪಹಲ್ಗಾಮ್‌ ದಾಳಿ : ಅರಬ್ಬೀ ಸಮುದ್ರದಲ್ಲಿ ಕ್ಷಿಪಣಿ ದಾಳಿ ಪರೀಕ್ಷೆ ; ಭಾರತದ ನೌಕಾಪಡೆಯಿಂದ ಸಮರಾಭ್ಯಾಸ

ನವದೆಹಲಿ: ಭಾರತೀಯ ಯುದ್ಧನೌಕೆಗಳು ಅರೇಬಿಯನ್ ಸಮುದ್ರದಲ್ಲಿ ಅನೇಕ ಮಿಸೈಲ್‌ ಪರೀಕ್ಷೆಗಳನ್ನು ನಡೆಸಿದ್ದು, ದೀರ್ಘ-ಶ್ರೇಣಿಯ ನಿಖರ ದಾಳಿಗಳಿಗೆ ತಮ್ಮ ಸನ್ನದ್ಧತೆಯನ್ನು ಪ್ರದರ್ಶಿಸಿವೆ ಹಾಗೂ ನೌಕಾಪಡೆಯು ದೇಶದ ಹಿತಾಸಕ್ತಿಗಳನ್ನು ರಕ್ಷಿಸಲು ಯುದ್ಧಕ್ಕೆ ಸಿದ್ಧವಾಗಿದೆ ಎಂದು ಪ್ರತಿಪಾದಿಸಿದೆ. ಸಮುದ್ರದ ಮಧ್ಯದಲ್ಲಿರುವ ಯುದ್ಧನೌಕೆಗಳಿಂದ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಳನ್ನು ಹಾರಿಸುತ್ತಿರುವ ಬಹು ದೃಶ್ಯಗಳನ್ನು ನೌಕಾಪಡೆಯು ಹಂಚಿಕೊಂಡಿದೆ. ಈ ಯುದ್ಧನೌಕೆಗಳಲ್ಲಿ ಕೋಲ್ಕತ್ತಾ-ಕ್ಲಾಸ್‌ ವಿಧ್ವಂಸಕ ನೌಕೆಗಳು … Continued

ಭಾರತದ ಜೊತೆ ವ್ಯಾಪಾರ ಸ್ಥಗಿತ : ನೀರಿನ ನಂತರ ಈಗ ಔಷಧಕ್ಕಾಗಿ ಹೆಣಗಾಡುತ್ತಿರುವ ಪಾಕಿಸ್ತಾನ…!

ಇಸ್ಲಾಮಾಬಾದ್ : ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದೊಂದಿಗಿನ ವ್ಯಾಪಾರ ಸಂಬಂಧಗಳನ್ನು ಸ್ಥಗಿತಗೊಳಿಸಿದ ನಂತರ, ಪಾಕಿಸ್ತಾನ ಈಗ ತುರ್ತು ಅಗತ್ಯದ ಔಷಧದ ಕೊರತೆಯ ಸವಾಲುಗಳನ್ನು ಎದುರಿಸಬೇಕಾಗಿದೆ. ಯಾಕೆಂದರೆ ಪಾಕಿಸ್ತಾನವು ಭಾರತದ ಔಷಧದ ಪೂರೈಕೆಯನ್ನು ಹೆಚ್ಚು ಅವಲಂಬಿಸಿದೆ. ಹೀಗಾಗಿ ಪಾಕಿಸ್ತಾನದ ಆರೋಗ್ಯ ಅಧಿಕಾರಿಗಳು ಪರ್ಯಾಯ ಮೂಲಗಳಿಂದ ಔಷಧ ಸರಬರಾಜುಗಳನ್ನು ಪಡೆಯಲು ತುರ್ತು ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ. ಈ ಮಧ್ಯೆ … Continued