ಭಾರತದಲ್ಲಿ ಸೋಮವಾರವೂ 68 ಸಾವಿರ ದಾಟಿದ ದೈನಂದಿನ ಕೊರೊನಾ ಪ್ರಕರಣ..!

ನವ ದೆಹಲಿ: ದೇಶಾದ್ಯಂತ ಕೊರೊನಾ ಆರ್ಭಟ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ (ಸೋಮವಾರ) 68,020 ಜನರಲ್ಲಿ ಸೋಂಕು ಪತ್ತೆಯಾಗಿದೆ. 291 ಜನರು ಕೊರೊನಾ ಸೋಂಕಿಗೆ ಮೃತಪಟ್ಟಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,20,39,644ಕ್ಕೆ ಏರಿಕೆಯಾಗಿದೆ. ಹಾಗೂ ಕೊರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 1,61,843ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 5,21,808 ಕೊರೊನಾ ಸಕ್ರಿಯ ಪ್ರಕರಣಗಳಿದ್ದು 1,13,55,993 ಸೋಂಕಿತರು ಗುಣಮುಖರಾಗಿದ್ದಾರೆ. … Continued

ಭಾರತದಲ್ಲಿ 63 ಸಾವಿರದ ಸನಿಹಕ್ಕೆ ಬಂದ ದೈನಂದಿನ ಕೊರೊನಾ ಸೋಂಕು..!

ನವ ದೆಹಲಿ: ದೇಶಾದ್ಯಂತ ಕೊರೊನಾ ಆರ್ಭಟ ದಿನೇ ದಿನೇ ಹೆಚ್ಚುತ್ತಿದ್ದು, ದೇಶದಲ್ಲಿ ಕಳೆದ 24 ಗಂಟೆಯಲ್ಲಿ 62,714 ಜನರಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ 24 ತಾಸಿನಲ್ಲಿ 312 ಜನರು ಮಹಾಮಾರಿಗೆ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 1,61,552ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,19,71,624ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 4,86,310 … Continued

ಭಾರತದಲ್ಲಿ ಒಂದೇ ದಿನಕ್ಕೆ 62 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕು ದಾಖಲು..ಮಹಾರಾಷ್ಟ್ರದಲ್ಲೇ ಶೇ.60ಕ್ಕಿಂತ ಹೆಚ್ಚು..!!

ನವ ದೆಹಲಿ: ಕಳೆದ 24 ತಾಸಿನಲ್ಲಿ ಭಾರತದಲ್ಲಿ ಒಟ್ಟು 62,258 ಹೊಸ ಕೊರೊನಾ ಸೋಂಕುಗಳು ಪತ್ತೆಯಾಗಿದ್ದು, ಇದು ಕಳೆದ ಅಕ್ಟೋಬರ್‌ 16ರ ಈಚೆಗೆ ಕಂಡುಬಂದ ಅತಿ ಹೆಚ್ಚು ದೈನಂದಿನ ಪ್ರಕರಣಗಳಾಗಿವೆ. ಈ ಪೈಕಿ 36,902 ಪ್ರರಣಗಳು ಅಂದರೆ ಶೇ62ರಷ್ಟು ಪ್ರಕರಣಗಳು ಮಹಾರಾಷ್ಟ್ರದಲ್ಲೇ ದಾಖಲಾಗಿವೆ. ಒಟ್ಟು 291 ಸಾವುಗಳು ವರದಿಯಾಗಿದ್ದು, ದರಲ್ಲಿ ಮಹಾರಾಷ್ಟ್ರದಲ್ಲಿ 117 ಮತ್ತು ಪಂಜಾಬ್‌ನಲ್ಲಿ … Continued

ಭಾರತದಲ್ಲಿ 159 ದಿನಗಳ ನಂತರ ಅತಿ ಹೆಚ್ಚು ದೈನಂದಿನ ಕೊರೊನಾ ಉಲ್ಬಣ…!!

ನವ ದೆಹಲಿ : ದೇಶದಲ್ಲಿ ಕೊರೋನಾ ಉಲ್ಬಣ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 59,118 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ. 257 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಅಕ್ಟೋಬರ್ 17ರ ನಂತರ 159 ದಿನಗಳಲ್ಲಿ ದೈನಂದನ ಅತಿ ಹೆಚ್ಚು ಪ್ರಕರಣ ದಾಖಲಾಗಿರುವುದಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 32,987 … Continued

ಭಾರತದಲ್ಲಿ ಕೊರೊನಾ ಸ್ಫೋಟ:53 ಸಾವಿರ ದಾಟಿದ ಏಕದಿನದ ಸೋಂಕು..!!

ನವ ದೆಹಲಿ: ದೇಶಾದ್ಯಂತ ಕೊರೊನಾ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿತ್ತಲೇ ಇದೆ. ಭಾರತದಲ್ಲಿ ದೈನಂದಿನ ಸೋಂಕಿನ ಸಂಖ್ಯೆ ಗುರುವಾರದ ವರದಿಯಲ್ಲಿ 53 ಸಾವಿರ ದಾಟಿದೆ. ಕಳೆದ 24 ತಾಸಿನಲ್ಲಿ ದೇಶದಲ್ಲಿ 53,476 ಜನರಲ್ಲಿ ಸೋಂಕು ಪತ್ತೆಯಾಗಿದೆ ಹಾಗೂ 251 ಜನರು ಈ ಸೋಂಕಿಗೆ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ತಿಳಿಸಿದೆ. ದೇಶದಲ್ಲಿ … Continued

ಭಾರತದಲ್ಲಿ ಕಂಡುಬಂದ ಕೊರೊನಾದ ಹೊಸ ಡಬಲ್ ರೂಪಾಂತರಿ…ಏನಿದರ ಗುಣಲಕ್ಷಣ..?

ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ 18 ರಾಜ್ಯಗಳಲ್ಲಿ ಕೊರೊನಾ ವೈರಸ್‌ ಹೊಸ ‘ಡಬಲ್ ವೇರಿಯಂಟ್’ (ಎರಡು ರೂಪಾಂತರಿ) ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ . ಹಲವಾರು ರಾಜ್ಯಗಳಲ್ಲಿ ಇತ್ತೀಚಿನ ಕೊವಿಡ್‌-19 ಪ್ರಕರಣಗಳಲ್ಲಿನ ಹೆಚ್ಚಳ ವಿವರಿಸಲು ಸಾಕಷ್ಟು ಸಂಖ್ಯೆಯಲ್ಲಿ ಈ ರೂಪಾಂತರಗಳು ಪತ್ತೆಯಾಗಿಲ್ಲ. ರೂಪಾಂತರಗಳು ಸಂಭವಿಸುವುದು ವೈರಸ್‌ಗಳಲ್ಲಿ ಸ್ವಾಭಾವಿಕವಾಗಿದೆ ಮತ್ತು ತಜ್ಞರ … Continued

ಭಾರತದ 18 ರಾಜ್ಯಗಳಲ್ಲಿ ಕೋವಿಡ್ -19ರ ಹೊಸ ರೂಪಾಂತರಿ ವೈರಸ್‌ ಪತ್ತೆ: ಆರೋಗ್ಯ ಸಚಿವಾಲಯ

ಕೊರೊನಾ ವೈರಸ್ಸಿನ ಡಬಲ್ ರೂಪಾಂತರ”ವನ್ನು ದೇಶದ 18 ರಾಜ್ಯಗಳಲ್ಲಿ ಪತ್ತೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ಐಎನ್‌ಎಸ್‌ಎಸಿಒಜಿ (INSACOG ) ತನ್ನ ಕೆಲಸ ಪ್ರಾರಂಭಿಸಿದಾಗಿನಿಂದ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಹಂಚಿಕೊಂಡ ಒಟ್ಟು 10 787 ಕೊರೊನಾ ಪಾಸಿಟಿವ್‌ ಮಾದರಿಗಳಲ್ಲಿ 771 ರೂಪಾಂತರಿ ವೈರಸ್‌ ಪತ್ತೆಯಾಗಿವೆ. ಇವುಗಳಲ್ಲಿ ಬ್ರಿಟನ್‌ (ಬಿ .1.1.7) ವಂಶಾವಳಿಯ … Continued

47,262 ಜನರಿಗೆ ಸೋಂಕು.. ಭಾರತ 130 ದಿನಗಳಲ್ಲಿ ಕಂಡ ದೈನಂದಿನ ಅತಿದೊಡ್ಡ ಏರಿಕೆ..!!

ನವ ದೆಹಲಿ: ಕಳೆದ 24 ತಾಸಿನಲ್ಲಿ ದೇಶದಲ್ಲಿ 47,262 ಜನರು ಕೊರೊನಅ ಸೋಂಕು ದಾಖಲಾದ ವರದಿಯಾಗಿದೆ. ಇದೇ ಅವಧಿಯಲ್ಲಿ 275 ಜನರು ಈ ಕಾಯಿಲೆಗೆ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದು 130 ದಿನಗಳಲ್ಲಿ ದೇಶವು ಕಂಡ ದೈನಂದಿನ ಪ್ರಕರಣಗಳಲ್ಲಿ ಇದು ಅತಿದೊಡ್ಡ ಏರಿಕೆಯಾಗಿದೆ.. ಭಾರತವು ಕೊನೆಯದಾಗಿ 2020ರ ನವೆಂಬರ್‌ನಲ್ಲಿ 47,000 ಕ್ಕೂ … Continued

ತಮಿಳರ ವಿರುದ್ಧದ ಅಪರಾಧ: ಯುಎನ್‌ಹೆಚ್‌ಆರ್‌ಸಿಯಲ್ಲಿ ಶ್ರೀಲಂಕಾ ವಿರುದ್ಧದ ನಿರ್ಣಯಕ್ಕೆ ಮತದಾನದಿಂದ ದೂರ ಉಳಿದ ಭಾರತ

ನವ ದೆಹಲಿ: ಜಿನೀವಾದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (ಯುಎನ್‌ಹೆಚ್‌ಆರ್‌ಸಿ) ಶ್ರೀಲಂಕಾದ ತಮಿಳರ ವಿರುದ್ಧದ ಯುದ್ಧ ಅಪರಾಧಗಳಿಗೆ ಸಂಬಂಧಿಸಿದಂತೆ ಶ್ರೀಲಂಕಾ ವಿರುದ್ಧದ ನಿರ್ಣಯದ ಮೇಲೆ ಭಾರತ ಮತ್ತು ಇತರ 13 ದೇಶಗಳು ಮತದಾನದಿಂದ ದೂರವುಳಿದಿವೆ. 47ರಲ್ಲಿ 22 ಸದಸ್ಯರು ಪರವಾಗಿ ಮತ ಚಲಾಯಿಸಿದ ನಂತರ ‘ಶ್ರೀಲಂಕಾದಲ್ಲಿ ಸಾಮರಸ್ಯದ ಹೊಣೆಗಾರಿಕೆ ಮತ್ತು ಮಾನವ ಹಕ್ಕುಗಳ ಉತ್ತೇಜನ’ ಎಂಬ … Continued

ಭಾರತದಲ್ಲಿ 40,715 ದೈನಂದಿನ ಕೊರೊನಾ ಪ್ರಕರಣ

ನವ ದೆಹಲಿ : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 40,715 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಕಳೆದ ಎರಡು ದಿನಗಳಲ್ಲಿ ದಾಖಲಾದ ದೈನಂದಿನ ಸೋಂಕುಗಳಿಗಿಂತ ಕಡಿಮೆ ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ 199 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಮಂಗಳವಾರ ತಿಳಿಸಿದ್ದಾರೆ. ಸೋಂಕಿನ ಸಂಖ್ಯೆ 11.68 ದಶಲಕ್ಷಕ್ಕೆ ಏರಿಕೆಯಾಗಿದ್ದು, … Continued