ಭಾರತದಲ್ಲಿ ಒಂದೇ ದಿನಕ್ಕೆ 62 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕು ದಾಖಲು..ಮಹಾರಾಷ್ಟ್ರದಲ್ಲೇ ಶೇ.60ಕ್ಕಿಂತ ಹೆಚ್ಚು..!!

ನವ ದೆಹಲಿ: ಕಳೆದ 24 ತಾಸಿನಲ್ಲಿ ಭಾರತದಲ್ಲಿ ಒಟ್ಟು 62,258 ಹೊಸ ಕೊರೊನಾ ಸೋಂಕುಗಳು ಪತ್ತೆಯಾಗಿದ್ದು, ಇದು ಕಳೆದ ಅಕ್ಟೋಬರ್‌ 16ರ ಈಚೆಗೆ ಕಂಡುಬಂದ ಅತಿ ಹೆಚ್ಚು ದೈನಂದಿನ ಪ್ರಕರಣಗಳಾಗಿವೆ. ಈ ಪೈಕಿ 36,902 ಪ್ರರಣಗಳು ಅಂದರೆ ಶೇ62ರಷ್ಟು ಪ್ರಕರಣಗಳು ಮಹಾರಾಷ್ಟ್ರದಲ್ಲೇ ದಾಖಲಾಗಿವೆ.
ಒಟ್ಟು 291 ಸಾವುಗಳು ವರದಿಯಾಗಿದ್ದು, ದರಲ್ಲಿ ಮಹಾರಾಷ್ಟ್ರದಲ್ಲಿ 117 ಮತ್ತು ಪಂಜಾಬ್‌ನಲ್ಲಿ 59 ಸಾವುಗಳು ಸಂಭವಿಸಿವೆ. ಪಂಜಾಬ್ ಮತ್ತು ಗುಜರಾತ್ ಸಹ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳನ್ನು ವರದಿ ಮಾಡಿದೆ. ಈಗ ದೇಶದಲ್ಲಿ ಒಟ್ಟಾರೆ 4.52 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ, ಇ
ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ಸ್ಥಿರ ಏರಿಕೆ ತೋರಿಸುತ್ತಿರುವುದರಿಂದ ಮಾರ್ಚ್ 28 ರಿಂದ ರಾತ್ರಿ ಕರ್ಫ್ಯೂ ವಿಧಿಸುವುದಾಗಿ ಮಹಾರಾಷ್ಟ್ರ ಹೇಳಿದೆ. ರಾಜ್ಯದಲ್ಲಿ ರಾತ್ರಿ 8 ರಿಂದ ಬೆಳಿಗ್ಗೆ 7 ರ ವರೆಗೆ ಮಾಲ್‌ಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದೆ. ಈ ನಿಟ್ಟಿನಲ್ಲಿ ವಿಪತ್ತು ನಿರ್ವಹಣೆ ಮತ್ತು ಪುನರ್ವಸತಿ ಇಲಾಖೆ ಪ್ರತ್ಯೇಕ ಆದೇಶ ಹೊರಡಿಸಲಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ಹಬ್ಬಗಳಿಗಿಂತ ಮುಂಚಿತವಾಗಿ ಜನಸಂದಣಿಯನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಗೃಹ ಸಚಿವಾಲಯ (ಎಂಎಚ್‌ಎ) ಶುಕ್ರವಾರ ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳನ್ನು ಕೇಳಿದೆ. ಭಾರತವು ಶುಕ್ರವಾರ ಹೊಸದಾಗಿ 59,118 ಹೊಸ ಪ್ರಕರಣಗಳನ್ನು ದಾಖಲಿಸಿದ್ದು, 1,18,46,652 ಕ್ಕೆ ತಲುಪಿದೆ. ಅಧಿಕೃತ ಮಾಹಿತಿಯು ಮಹಾರಾಷ್ಟ್ರ, ಪಂಜಾಬ್, ಕೇರಳ, ಕರ್ನಾಟಕ, ಛತ್ತೀಸ್‌ಗಡ ಮತ್ತು ಗುಜರಾತ್ ಆರು ರಾಜ್ಯಗಳಲ್ಲಿ ಎರಡನೇ ಸೋಂಕಿನ ಅಲೆಗಳನ್ನು ತೋರಿಸುತ್ತಿದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಚುನಾವಣಾ ಆಯೋಗದಿಂದ 8,889 ಕೋಟಿ ರೂ.ಮೌಲ್ಯದ ವಸ್ತುಗಳ ವಶ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement