47,262 ಜನರಿಗೆ ಸೋಂಕು.. ಭಾರತ 130 ದಿನಗಳಲ್ಲಿ ಕಂಡ ದೈನಂದಿನ ಅತಿದೊಡ್ಡ ಏರಿಕೆ..!!

ನವ ದೆಹಲಿ: ಕಳೆದ 24 ತಾಸಿನಲ್ಲಿ ದೇಶದಲ್ಲಿ 47,262 ಜನರು ಕೊರೊನಅ ಸೋಂಕು ದಾಖಲಾದ ವರದಿಯಾಗಿದೆ. ಇದೇ ಅವಧಿಯಲ್ಲಿ 275 ಜನರು ಈ ಕಾಯಿಲೆಗೆ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದು 130 ದಿನಗಳಲ್ಲಿ ದೇಶವು ಕಂಡ ದೈನಂದಿನ ಪ್ರಕರಣಗಳಲ್ಲಿ ಇದು ಅತಿದೊಡ್ಡ ಏರಿಕೆಯಾಗಿದೆ.. ಭಾರತವು ಕೊನೆಯದಾಗಿ 2020ರ ನವೆಂಬರ್‌ನಲ್ಲಿ 47,000 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿತ್ತು.
ಭಾರತದಲ್ಲಿ ಒಟ್ಟು ಪ್ರಕರಣಗಳ 1,17,34,058 ತಲುಪಿದೆ.
ಒಂದು ದಿನದ ಹಿಂದೆ ದೈನಂದಿನ ಪ್ರಕರಣಗಳು ಸ್ವಲ್ಪ ಕುಸಿತ ಕಂಡು 40,715 ಕ್ಕೆ ತಲುಪಿತ್ತು. ಬುಧವಾರದ ಮತ್ತೆ ಹೆಚ್ಚಳವಾಗಿದೆ.
ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಗುಜರಾತ್, ಛತ್ತೀಸ್‌ಗಡ ಮತ್ತು ತಮಿಳುನಾಡುಗಳಲ್ಲಿ ಹೊಸ ಸೋಂಕುಗಳ ಹೆಚ್ಚಳವು ಒಟ್ಟಾರೆ ಹೆಚ್ಚಳಕ್ಕೆ ಕಾರಣವಾಗಿದೆ. ಈ ರಾಜ್ಯಗಳ್ಲಿ ದೇಶದ 80.90% ಪ್ರಕರಣಗಳು ದಾಖಲಾಗಿದ್ದು, ಮಹಾರಾಷ್ಟ್ರದಲ್ಲಿಯೇ ದೇಶದ ಒಟ್ಟಾರೆ ಪ್ರಕರಣದ ಶೇ.೬೦ರಷ್ಟು ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರಲ್ಲಿ 28,699 ಹೊಸ ಸೋಂಕುಗಳು ಪತ್ತೆಯಾಗಿದ್ದವು.
ಕಳೆದ 24 ಗಂಟೆಗಳಲ್ಲಿ 275 ಜನರು ದೇಶದಲ್ಲಿ ಸಾವಿನ ಸಂಖ್ಯೆ 1,60,441 ಕ್ಕೆ ತಲುಪಿದೆ. ಮಂಗಳವಾರ 199ಜನ ಮೃತಪಟ್ಟಿದ್ದರು. ಸಾವುನೋವುಗಳಲ್ಲಿಯೂ ದೊಡ್ಡ ಜಿಗಿತ ಕಂಡಿವೆ.
ಕಳೆದ 24 ಗಂಟೆಗಳಲ್ಲಿ 23,907 ಜನರುಗುಣಮುಖರಾಗಿ ಬಿಡುಗಡೆಯಾಗಿದ್ದಾರೆ, ಒಟ್ಟು ಚೇತರಿಕೆಯ ಸಂಖ್ಯೆ 1,12,05,160. ದೇಶದಲ್ಲಿ ಸಕ್ರಿಯ ಪ್ರಕರಣಗಳು 3,68,457 ರಷ್ಟಿದೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ : ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಪ್ತ ಸಹಾಯಕನ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement