ಭಾರತದಲ್ಲಿ 159 ದಿನಗಳ ನಂತರ ಅತಿ ಹೆಚ್ಚು ದೈನಂದಿನ ಕೊರೊನಾ ಉಲ್ಬಣ…!!

ನವ ದೆಹಲಿ : ದೇಶದಲ್ಲಿ ಕೊರೋನಾ ಉಲ್ಬಣ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 59,118 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ. 257 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಅಕ್ಟೋಬರ್ 17ರ ನಂತರ 159 ದಿನಗಳಲ್ಲಿ ದೈನಂದನ ಅತಿ ಹೆಚ್ಚು ಪ್ರಕರಣ ದಾಖಲಾಗಿರುವುದಾಗಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 32,987 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೊಸ ಏರಿಕೆಯೊಂದಿಗೆ, ಭಾರತದಲ್ಲಿ ಪ್ರಕರಣಗಳ ಸಂಖ್ಯೆ 1,18,46,652 ಕ್ಕೆ ತಲುಪಿದೆ. ಇದುವರೆಗೆ 1,12,64,637 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ದೇಶಾದ್ಯಂತ 4,21,066 ಸಕ್ರಿಯ ಕೊರೋನಾ ಪ್ರಕರಣಗಳಿವೆ.
. ಕಳೆದ 24 ಗಂಟೆಯಲ್ಲಿ ಕೊರೋನಾ ಸೋಂಕಿತರಾದಂತ 257 ಜನರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಇದುವರೆಗೆ ದೇಶಾದ್ಯಂತ ಮೃತಪಟ್ಟವರ ಸಂಖ್ಯೆ 1,60,949ಕ್ಕೆ ಏರಿದೆ.

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement