ಮಾ.೧ರಿಂದ ಎರಡನೇ ಹಂತದ ಲಸಿಕೆಗೆ ಭಾರತ ಸಜ್ಜು

60 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ 45 ವರ್ಷ ಮೇಲ್ಪಟ್ಟ ಅನಾರೋಗ್ಯ ಹೊಂದಿರುವವರಿಗೆ ಮಾ.೧ರಿಂದ ಕೊರೊನಾ ಲಸಿಕೆ ನೀಡಲು ಭಾರತ ಸಜ್ಜಾಗುತ್ತಿದೆ.
ಸೋಮವಾರದಿಂದ ನಡೆಯಲಿರುವ ಕೊರೊನಾ ಲಸಿಕೆ ನೋಂದಣಿ ನಾಳೆ ಬೆಳಗ್ಗೆ 9 ಗಂಟೆಯಿಂದ ಆರಂಭವಾಗಲಿದೆ. https://www.cowin.gov.in/home ಲಿಂಕ್​ ಮೂಲಕ ಕೋವಿನ್​ ಪೋರ್ಟಲ್​ನ್ನು ಪ್ರವೇಶಿಸಬಹುದಾಗಿದೆ.ಇ ಪೋರ್ಟಲ್​​ ಅಥವಾ ಆರೋಗ್ಯ ಸೇತು ಮುಂತಾದ ಅಪ್ಲಿಕೇಶನ್​ಗಳ ಮೂಲಕ ಸಾರ್ವಜನಿಕರು ಲಸಿಕೆಗಾಗಿ ನೋಂದಣಿ ಮಾಡಬಹುದಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ.ಕೊರೊನಾ ಲಸಿಕೆಯ ನೋಂದಣಿ ಮಾಡುವವರಿಗೆ ಮಧ್ಯಾಹ್ನ 3ಗಂಟೆ ವರೆಗೆ ಅವಕಾಶ ಸಿಗಲಿದೆ. ಇದು ಮಾತ್ರವಲ್ಲದೇ ಮಾರ್ಚ್​ 1ರಂದು ಬೇರೆ ಯಾವುದೇ ದಿನಾಂಕಕ್ಕೆ ನೋಂದಣಿ ಮಾಡಬಹುದಾಗಿದೆ.
ಒಂದು ನಿಗದಿತ ದಿನಾಂಕಕ್ಕೆ ಲಸಿಕೆ ಪಡೆಯಲು ನೋಂದಾಯಿಸಿದ ಬಳಿಕ ಆ ದಿನಾಂಕದ 29 ದಿನದ ಬಳಿಕ ಎರಡನೇ ಡೋಸ್​ ತೆಗೆದುಕೊಳ್ಳಬೇಕಗುತ್ತದೆ. ಫಲಾನುಭವಿ ತನ್ನ ಮೊದಲ ಡೋಸ್‌ ದಿನಾಂಕ ರದ್ದು ಮಾಡಿದರೆ ಆತನ ಎರಡನೇ ಡೋಸ್​ ದಿನಾಂಕವೂ ರದ್ದಾಗಲಿದೆ.
45 ವರ್ಷದ ಒಳಗಿನವರು ಲಸಿಕೆ ಪಡೆದುಕೊಳ್ಳಲು 20 ಆರೋಗ್ಯ ಸಮಸ್ಯೆಗಳನ್ನ ಆಯ್ಕೆ ಮಾಡಲಾಗಿದೆ. ಇದರಲ್ಲಿ ಹೃದಯ ಸಮಸ್ಯೆ, ಮಧುಮೇಹ, ಕಿಡ್ನಿ ಸಮಸ್ಯೆ, ಕ್ಯಾನ್ಸರ್​ ಸೇರಿದಂತೆ ಇನ್ನೂ ಅನೇಕ ಕಾಯಿಲೆಗಳು ಸೇರಿವೆ.

ಪ್ರಮುಖ ಸುದ್ದಿ :-   ದೆಹಲಿಯಲ್ಲಿ ಮತ್ತೆ ಕಾಂಗ್ರೆಸ್ಸಿಗೆ ಆಘಾತ : ಪಕ್ಷಕ್ಕೆ ರಾಜೀನಾಮೆ ನೀಡಿದ ಇಬ್ಬರು ಹಿರಿಯ ನಾಯಕರು

 

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement