ದೇಶದಲ್ಲಿ ಮತ್ತೆ ೧೮ ಸಾವಿರದ ಗಡಿ ದಾಟಿದ ಕೊರೊನಾ..!

ನವದೆಹಲಿ: ದೇಶದಲ್ಲಿ ಬಹುದಿನಗಳ ನಂತರ ಕೊರಿನಾ ಮತ್ತೆ ೧೮ ಸಾವಿರದ ಗಡಿ ದಾಟಿದೆ. ಮಹಾರಾಷ್ಟ್ರ ರಾಜ್ಯವೊಂದರಲ್ಲಿಯೇ ಕೊರೊನಾ ೧೦ ಸಾವಿರದ ಗಡಿ ದಾಟಿದ್ದು,  ಮತ್ತೆ ಎಚ್ಚರಿಕೆಗಂಟೆ ನೀಡಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 18,327 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ ಒ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಒಂದೇ ದಿನ ಮಹಾಮಾರಿ ವೈರಸ್ಸಿಗೆ 108 ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 1,57,656ಕ್ಕೆ ಏರಿಕೆಯಾಗಿದೆ.
ಶುಕ್ರವಾರ ಒಂದೇ ದಿನ 14,234 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 1,08,54,128ಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ 1,80,304 ಸಕ್ರಿಯ ಪ್ರಕರಣಗಳಿವೆ.
ಒಂದೇ ದಿನ 7,51,935 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ ದೇಶದಲ್ಲಿ 22,06,92,677 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
1.8 ಕೋಟಿ ಮಂದಿಗೆ ಕೊರೋನಾ ಲಸಿಕೆ: ಮಾರ್ಚ್ 4ರಂದು ಸುಮಾರು 14 ಲಕ್ಷ ಮಂದಿಗೆ ಕೋವಿಡ್-19 ಲಸಿಕೆ ನೀಡಲಾಗಿದೆ. ಇದುವರೆಗೆ ದೇಶದಲ್ಲಿ 1.8 ಕೋಟಿ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಪ್ರಮುಖ ಸುದ್ದಿ :-   ಪುತ್ರಿಯರ ಶಿಕ್ಷಣಕ್ಕಾಗಿ ಸೀರೆಯುಟ್ಟು ಬರಿಗಾಲಿನಲ್ಲಿ ಓಡಿ ʼಮ್ಯಾರಥಾನ್‌ʼನಲ್ಲಿ ಮೊದಲ ಸ್ಥಾನ ಪಡೆದ 47 ವರ್ಷದ ತಾಯಿ !

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement