ಲಾಲು ಪ್ರಸಾದ ಮನೆಯಲ್ಲಿ ಒಡಕು ತೀವ್ರ : ರೋಹಿಣಿ ಬೆನ್ನಲ್ಲೇ ಪಾಟ್ನಾ ಮನೆ ತೊರೆದ ಮತ್ತೆ ಮೂವರು ಪುತ್ರಿಯರು…!

ರೋಹಿಣಿ ಆಚಾರ್ಯ ಅವರ ಆಘಾತಕಾರಿ ಬಹಿರಂಗ ಹೇಳಿಕೆ ಮತ್ತು ಕುಟುಂಬದ ಜೊತೆ ಸಂಬಂಧ ಕಡಿದುಕೊಳ್ಳುವ ನಿರ್ಧಾರದ ಒಂದು ದಿನದ ನಂತರ, ಲಾಲು ಪ್ರಸಾದ ಯಾದವ್ ಅವರ ಮನೆಯೊಳಗಿನ ಬಿಕ್ಕಟ್ಟು ಭಾನುವಾರ ಇನ್ನಷ್ಟು ತೀವ್ರಗೊಂಡಿದೆ. ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥರಾದ ಲಾಲು ಪ್ರಸಾದ ಯಾದವ್‌ ಅವರ ಇತರ ಮೂವರು ಪುತ್ರಿಯರಾದ ರಾಜಲಕ್ಷ್ಮಿ, ರಾಗಿಣಿ ಮತ್ತು ಚಂದಾ … Continued

ಬಿಹಾರ ಚುನಾವಣೆ ಸೋಲಿನ ಬೆನ್ನಲ್ಲೇ ರಾಜಕೀಯಕ್ಕೆ ಲಾಲು ಪುತ್ರಿ ಗುಡ್‌ ಬೈ : ಕುಟುಂಬದ ಜೊತೆ ಸಂಬಂಧ ಕಡಿದುಕೊಳ್ಳುವುದಾಗಿ ಘೋಷಣೆ..!

 ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಹೀನಾಯ ಸೋಲು ಅನುಭವಿಸಿದ ಒಂದು ದಿನದ ನಂತರ, ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ ಮತ್ತು ತಮ್ಮ ಕುಟುಂಬದಿಂದ ದೂರವಾಗುವುದಾಗಿ ಪ್ರಕಟಿಸಿದ್ದಾರೆ. ಎಕ್ಸ್ ಪೋಸ್ಟ್‌ನಲ್ಲಿ, ತೇಜಸ್ವಿ ಯಾದವ್ … Continued

ಐಆರ್‌ ಸಿಟಿಸಿ ಹಗರಣ: ಲಾಲು, ತೇಜಸ್ವಿ ಯಾದವ್, ರಾಬ್ಡಿ ದೇವಿ ವಿರುದ್ಧ ನ್ಯಾಯಾಲಯ ಆರೋಪ ನಿಗದಿ

 ನವದೆಹಲಿ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ ಯಾದವ್, ಅವರ ಪತ್ನಿ ರಾಬ್ರಿ ದೇವಿ, ಪುತ್ರ ತೇಜಸ್ವಿ ಯಾದವ್ ಮತ್ತು ಇತರರ ವಿರುದ್ಧದ ಬಹುಚರ್ಚಿತ ಐಆರ್‌ಸಿಟಿಸಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಇಂದು, ಸೋಮವಾರ (ಸೋಮವಾರ) ವಿವಿಧ ಕ್ರಿಮಿನಲ್ ಆರೋಪಗಳನ್ನು ನಿಗದಿಪಡಿಸಿದೆ. ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ (ಭ್ರಷ್ಟಾಚಾರ ನಿಯಂತ್ರಣ … Continued

ಲಾಲು ಕುಟುಂಬದಲ್ಲಿ ಬಿರುಗಾಳಿ ; ಹಿರಿಯ ಮಗನನ್ನು ಆರ್‌ ಜೆಡಿ ಪಕ್ಷ, ಕುಟುಂಬದಿಂದ ಹೊರಹಾಕಿದ ಲಾಲು ಪ್ರಸಾದ ಯಾದವ್‌…!

ನವದೆಹಲಿ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಂಸ್ಥಾಪಕ ಹಾಗೂ ವರಿಷ್ಠ ನೇತಾರ ಲಾಲು ಪ್ರಸಾದ ಯಾದವ್ ಭಾನುವಾರ ತಮ್ಮ ಹಿರಿಯ ಪುತ್ರ ತೇಜಪ್ರತಾಪ ಯಾದವ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದ್ದಾರೆ. ಅಲ್ಲದೆ, ತೇಜಪ್ರತಾಪ ಅವರನ್ನು ಕುಟುಂಬದಿಂದಲೂ ಹೊರಹಾಕಿದ್ದಾರೆ. ತೇಜಪ್ರತಾಪ ಅವರ “ಬೇಜವಾಬ್ದಾರಿಯುತ ನಡವಳಿಕೆ” ಮತ್ತು ಅವರು ಕುಟುಂಬದ ಮೌಲ್ಯಗಳು ಮತ್ತು ಸಾರ್ವಜನಿಕ ಸಭ್ಯತೆಯಿಂದ … Continued

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಬಂಧನ: ಈವರೆಗೆ ಜೈಲಿಗೆ ಹೋಗಿದ್ದ ಮಾಜಿ ಸಿಎಂಗಳ ಪಟ್ಟಿ ಇಲ್ಲಿದೆ…

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ)ವು ಗುರುವಾರ ರಾತ್ರಿ ಬಂಧಿಸಿದೆ. 2024 ರ ಲೋಕಸಭೆ ಚುನಾವಣೆಗೆ ಕೆಲವು ದಿನಗಳ ಮೊದಲು ಅವರ ಬಂಧನವನ್ನು ವಿಪಕ್ಷಗಳ ಮೈತ್ರಿಕೂಟ ಇಂಡಿಯಾ (I.N.D.I.A) ಬ್ಲಾಕ್ ಸೇರಿದಂತೆ ವಿರೋಧ ಪಕ್ಷಗಳು ಖಂಡಿಸಿವೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಕಾನೂನು ಜಾರಿ ಸಂಸ್ಥೆಯಿಂದ … Continued

ಅಕ್ರಮ ಮರಳು ಗಣಿಗಾರಿಕೆ ಪ್ರಕರಣ: ಆರ್‌ಜೆಡಿ ನಾಯಕ-ಲಾಲು ಯಾದವ್ ಆಪ್ತನ ಬಂಧನ

ನವದೆಹಲಿ: ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಪ್ರಮುಖ ನಾಯಕ ಮತ್ತು ಲಾಲು ಪ್ರಸಾದ ಯಾದವ್ ಅವರ ನಿಕಟವರ್ತಿ ಸುಭಾಷ ಯಾದವ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಆರ್‌ಜೆಡಿ ಸುಭಾಷ ಯಾದವಗೆ ಸಂಬಂಧಿಸಿದ ಎಂಟು ಸ್ಥಳಗಳಲ್ಲಿ ಇ.ಡಿ. ನಡೆಸಿದ 14 ಗಂಟೆಗಳ ಶೋಧ ಕಾರ್ಯಾಚರಣೆಯ ನಂತರ ಈ ಬಂಧನವಾಗಿದೆ. ಸುಭಾಷ … Continued

ಉದ್ಯೋಗಕ್ಕಾಗಿ ಭೂಮಿ ಹಗರಣ: ಬಿಹಾರ ಮಾಜಿ ಸಿಎಂ ರಾಬ್ರಿ ದೇವಿ, ಮಗಳು ಮಿಸಾ ಭಾರತಿ, ಇತರರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಇ.ಡಿ.

ನವದೆಹಲಿ: ಜಾರಿ ನಿರ್ದೇಶನಾಲಯ (ಇ.ಡಿ.) ಮಂಗಳವಾರ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಉದ್ಯೋಗಕ್ಕಾಗಿ ಭೂ ಹಗರಣ (land-for-job scam)ದ ಆರೋಪಪಟ್ಟಿ ಸಲ್ಲಿಸಿದೆ. ಇ.ಡಿ.ಆರೋಪಪಟ್ಟಿಯಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಮಗಳು ಮಿಸಾ ಭಾರತಿ, ಹಿಮಾ ಯಾದವ್, ಹೃದಯಾನಂದ ಚೌಧರಿ ಮತ್ತು ಅಮಿತ್ ಕತ್ಯಾಲ್ ಅವರ ಹೆಸರುಗಳಿವೆ. ಹೆಚ್ಚುವರಿಯಾಗಿ, ಆರೋಪಪಟ್ಟಿಯಲ್ಲಿ ಎರಡು ಸಂಸ್ಥೆಗಳನ್ನು ಆರೋಪಿಗಳೆಂದು ಹೆಸರಿಸಲಾಗಿದೆ. … Continued