ಲಾಲು ಪ್ರಸಾದ ಮನೆಯಲ್ಲಿ ಒಡಕು ತೀವ್ರ : ರೋಹಿಣಿ ಬೆನ್ನಲ್ಲೇ ಪಾಟ್ನಾ ಮನೆ ತೊರೆದ ಮತ್ತೆ ಮೂವರು ಪುತ್ರಿಯರು…!

ರೋಹಿಣಿ ಆಚಾರ್ಯ ಅವರ ಆಘಾತಕಾರಿ ಬಹಿರಂಗ ಹೇಳಿಕೆ ಮತ್ತು ಕುಟುಂಬದ ಜೊತೆ ಸಂಬಂಧ ಕಡಿದುಕೊಳ್ಳುವ ನಿರ್ಧಾರದ ಒಂದು ದಿನದ ನಂತರ, ಲಾಲು ಪ್ರಸಾದ ಯಾದವ್ ಅವರ ಮನೆಯೊಳಗಿನ ಬಿಕ್ಕಟ್ಟು ಭಾನುವಾರ ಇನ್ನಷ್ಟು ತೀವ್ರಗೊಂಡಿದೆ. ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥರಾದ ಲಾಲು ಪ್ರಸಾದ ಯಾದವ್‌ ಅವರ ಇತರ ಮೂವರು ಪುತ್ರಿಯರಾದ ರಾಜಲಕ್ಷ್ಮಿ, ರಾಗಿಣಿ ಮತ್ತು ಚಂದಾ … Continued

ಬಿಹಾರ ಚುನಾವಣೆ ಸೋಲಿನ ಬೆನ್ನಲ್ಲೇ ರಾಜಕೀಯಕ್ಕೆ ಲಾಲು ಪುತ್ರಿ ಗುಡ್‌ ಬೈ : ಕುಟುಂಬದ ಜೊತೆ ಸಂಬಂಧ ಕಡಿದುಕೊಳ್ಳುವುದಾಗಿ ಘೋಷಣೆ..!

 ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಹೀನಾಯ ಸೋಲು ಅನುಭವಿಸಿದ ಒಂದು ದಿನದ ನಂತರ, ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ ಮತ್ತು ತಮ್ಮ ಕುಟುಂಬದಿಂದ ದೂರವಾಗುವುದಾಗಿ ಪ್ರಕಟಿಸಿದ್ದಾರೆ. ಎಕ್ಸ್ ಪೋಸ್ಟ್‌ನಲ್ಲಿ, ತೇಜಸ್ವಿ ಯಾದವ್ … Continued

ಬಿಹಾರ ಚುನಾವಣೆ: ಇಂಡಿ ಬ್ಲಾಕ್‌ ನ ‘ಎಂವೈ’ ಸೂತ್ರಕ್ಕೆ ‘ಎಂವೈಇ’ ಸೂತ್ರ ಬಳಸಿ ಭರ್ಜರಿ ಗೆಲುವು ಸಾಧಿಸಿದ ಎನ್‌ಡಿಎ ; ಏನಿದು ಎಂವೈಇ..?

 ಪಾಟ್ನಾ: ಬಿಹಾರದ ರಾಜಕಾರಣದಲ್ಲಿ ಸುಮಾರು ಮೂರು ದಶಕಗಳ ಕಾಲ ಲಾಲು ಪ್ರಸಾದ ಯಾದವ್ ಅವರ ಆರ್‌ಜೆಡಿ ಪಕ್ಷದ ಏಳಿಗೆಗೆ ಶಕ್ತಿಯಾಗಿದ್ದ ‘ಎಂವೈ’ (ಮುಸ್ಲಿಂ-ಯಾದವ್) ಸಮೀಕರಣವು ಈಗ ಬದಲಾಗಿದೆ. 2025ರ ಬಿಹಾರ ಚುನಾವಣೆಯಲ್ಲಿ, ಹೊಸ ‘ಎಂವೈಇ’ (ಮಹಿಳೆ, ಯುವಜನತೆ ಮತ್ತು ಅತಿ ಹಿಂದುಳಿದ ವರ್ಗ-EBC) ಸಮೀಕರಣವು ಹೊರಹೊಮ್ಮಿದ್ದು, ಇದು ಈ ಸಲದ ಚುನಾವಣೆಯಲ್ಲಿ ಎನ್‌ಡಿಎಗೆ ಅಭೂತಪೂರ್ವ ಜಯ … Continued

ಬಿಹಾರ ವಿಧಾನಸಭಾ ಚುನಾವಣೆ : ರಾಘೋಪುರ ಕ್ಷೇತ್ರದಲ್ಲಿ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವಗೆ ಹಿನ್ನಡೆ

ಪಾಟ್ನಾ : ಬಿಹಾರದ ಚುನಾವಣೆಯಲ್ಲಿ ಬಹಳ ದೊಡ್ಡ ಬುಡಮೇಲು ಫಲಿತಾಂಶ ಆಗಲಿದೆಯೇ..? ಆರ್‌ಜೆಡಿ ಮುಖ್ಯಸ್ಥ ಹಾಗೂ ಮಹಾಘಟಬಂಧನದ ಮುಖ್ಯಮಂತ್ರಿ ಮುಖವಾಗಿದ್ದ ತೇಜಸ್ವಿ ಯಾದವ್ ಅವರು ರಾಘೋಪುರ ಕ್ಷೇತ್ರದಲ್ಲಿ ಬಿಜೆಪಿಯ ಸತೀಶಕುಮಾರ ಯಾದವ್ ಅವರ ವಿರುದ್ಧದ ಸ್ಪರ್ಧೆಯಲ್ಲಿ ಹಿಂದಿ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ ಬೆಳಿಗ್ಗೆ 11:10 ಕ್ಕೆ ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ರಾಘೋಪುರ ಸ್ಥಾನದಲ್ಲಿ … Continued

ಬಿಹಾರ ಚುನಾವಣಾ ಫಲಿತಾಂಶ : ಭಾರೀ ಗೆಲುವಿನತ್ತ ಎನ್‌ ಡಿಎ, ಮಹಾಘಟಬಂಧನಕ್ಕೆ ಹಿನ್ನಡೆ

ಪಾಟ್ನಾ : ಬಿಹಾರದ ಬಹು ನಿರೀಕ್ಷಿತ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದ್ದು, ಆರಂಭಿಕ ಟ್ರೆಂಡ್‌ಗಳಲ್ಲಿ ಮುಖ್ಯಮಂತ್ರಿ ನಿತೀಶಕುಮಾರ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟವು ಭಾರೀ ಮುನ್ನಡೆ ಸಾಧಿಸಿದೆ. ಆರ್‌ಜೆಡಿ ನೇತೃತ್ವದ ಮಹಾಘಟಬಂಧನ (Mahagathbandhan) ಹಿನ್ನಡೆಯಲ್ಲಿದೆ. ಬಿಹಾರದಲ್ಲಿ ಬಹುತೇಕ ಎಲ್ಲಾ ಚುನಾವಣಾ ಸಮೀಕ್ಷೆಗಳು (Exit Polls) ಎನ್‌ಡಿಎಗೆ ಸ್ಪಷ್ಟ ಮುನ್ನಡೆ … Continued

ಬಿಹಾರ ಚುನಾವಣೆ : ಈ ಬಾರಿ ಅಧಿಕಾರಿ ಯಾರಿಗೆ ? ಜೆವಿಸಿ ಸಮೀಕ್ಷೆಯಲ್ಲಿ ಕಂಡುಬಂದಿದ್ದೇನು..?

ಬಿಹಾರ ವಿಧಾನಸಭಾ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ, ಪ್ರಶಾಂತ್ ಕಿಶೋರ್ ಅವರ ಜನ್‌ ಸುರಾಜ್‌ ಪಕ್ಷವು ಎನ್‌ಡಿಎ (NDA) ಮತ್ತು ಮಹಾ ಮೈತ್ರಿಕೂಟದ ಜೊತೆಗೆ ಸ್ಪರ್ಧಿಸುತ್ತಿದ್ದು, ಸ್ಪರ್ಧೆಯನ್ನು ಆಸಕ್ತಿದಾಯಕವಾಗಿಸಿದೆ. ಚುನಾವಣೆಗೆ ಕೆಲದಿನಗಳ ಮೊದಲು, ಟೈಮ್ಸ್ ನೌ ಸುದ್ದಿ ಚಾನೆಲ್ -ಜೆವಿಸಿ (JVC) ನಡೆಸಿದ ಅಭಿಪ್ರಾಯ ಸಮೀಕ್ಷೆಯು … Continued

ನಕಲಿ ಮತದಾರರ ಗುರುತಿನ ಚೀಟಿಗಳ ಬಗ್ಗೆ ವಿವರ ನೀಡುವಂತೆ ಚುನಾವಣಾ ಆಯೋಗದಿಂದ ತೇಜಸ್ವಿ ಯಾದವಗೆ ನೋಟಿಸ್

ನವದೆಹಲಿ: ಬಿಹಾರದ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದುಹಾಕಲಾಗಿದೆ ಎಂಬ ಹೇಳಿಕೆಯನ್ನು ಸಾಬೀತುಪಡಿಸುವಂತೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರಿಗೆ ಚುನಾವಣಾ ಆಯೋಗ ಸೂಚಿಸಿದೆ. ಹಾಗೂ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಉಲ್ಲೇಖಿಸಿದ ಎಪಿಕ್ ಕಾರ್ಡ್ ಸಂಖ್ಯೆಯನ್ನೂ ನೀಡುವಂತೆ ಕೋರಿದೆ. ತೇಜಸ್ವಿ ಯಾದವ್‌ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಇಲ್ಲ ಎಂದು ಶನಿವಾರ … Continued

“ವಿರಾಟ್ ಕೊಹ್ಲಿ ನನ್ನ ನಾಯಕತ್ವದ ಅಡಿಯಲ್ಲಿ ಆಡಿದ್ದಾರೆ, ಭಾರತದ ಅನೇಕ ಆಟಗಾರರು ನನ್ನ ಬ್ಯಾಚ್‌ಮೇಟ್‌ಗಳು..”: ತೇಜಸ್ವಿ ಯಾದವ್ ಹೇಳಿಕೆ ವೈರಲ್‌

ನವದೆಹಲಿ: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರು ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ನಾಯಕತ್ವದ ಅಡಿಯಲ್ಲಿ ಭಾರತದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಆಡಿದ್ದಾರೆ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ ಯಾದವ್ ಅವರ ಪುತ್ರ ತೇಜಸ್ವಿ ಯಾದವ್‌, ತಾನು ದೇಶೀಯ ಕ್ರಿಕೆಟ್‌ನಲ್ಲಿ … Continued