ವೀಡಿಯೊ…| ಚಿನ್ನಾಭರಣ ಅಂಗಡಿ ಮಾಲೀಕ-ದರೋಡೆಕೋರರ ನಡುವೆ ಗುಂಡಿನ ಚಕಮಕಿ ; 3 ಮಂದಿಗೆ ಗಾಯ

ನವದೆಹಲಿ : ಬಿಹಾರದ ಬೇಗುಸರಾಯ್‌ನಲ್ಲಿರುವ ಆಭರಣ ಮಳಿಗೆಯೊಂದರಲ್ಲಿ ಶಸ್ತ್ರಧಾರಿಗಳ ತಂಡವೊಂದು ಹಗಲು ದರೋಡೆ ನಡೆಸಿದ ನಾಟಕೀಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂಗಡಿಯ ಮಾಲೀಕರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಆಭರಣ ಅಂಗಡಿಯ ಉದ್ಯೋಗಿ ಮತ್ತು ಇಬ್ಬರು ದರೋಡೆಕೋರರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಇಬ್ಬರು ದರೋಡೆಕೋರರನ್ನು … Continued

ಬಿಹಾರದ ಕಳ್ಳಬಟ್ಟಿ ದುರಂತ ; ಸಾವಿನ ಸಂಖ್ಯೆ 35ಕ್ಕೆ ಏರಿಕೆ

ಪಾಟ್ನಾ: ಬಿಹಾರದ ಸಿವಾನ್ ಮತ್ತು ಸರನ್ ಜಿಲ್ಲೆಗಳಲ್ಲಿ ಅಕ್ರಮ ಮದ್ಯ ಸೇವಿಸಿದ ಹತ್ತು ಮಂದಿ ಸಾವಿಗೀಡಾಗಿದ್ದು ಈ ಕಳ್ಳಬಟ್ಟಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಸರನ್ ಪೊಲೀಸ್ ಉಪ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ನೀಲೇಶಕುಮಾರ ಶುಕ್ರವಾರ ಮಾತನಾಡಿ, ಸಿವಾನ್ 28 ಸಾವುಗಳಿಗೆ ಕಾರಣವಾಗಿದ್ದರೆ, ಸರನ್‌ ಜಿಲ್ಲೆಯಿಂದ ಏಳು ಸಾವುಗಳು … Continued

ವೀಡಿಯೊ : ವಿಷಕಾರಿ ಹಾವು ಕಚ್ಚಿದ ನಂತರ ಹಾವನ್ನು ಹಿಡಿದುಕೊಂಡೇ ಆಸ್ಪತ್ರೆಯೊಳಗೆ ಬಂದ ವ್ಯಕ್ತಿ…!

ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾದ ರಸೆಲ್ಸ್ ವೈಪರ್ ಬಿಹಾರದ ಭಾಗಲ್ಪುರದಲ್ಲಿ ವ್ಯಕ್ತಿಯನ್ನು ಕಚ್ಚಿದೆ. ಮುಂದೆ ನಡೆದಿದ್ದು ಮಾತ್ರ ಅನಿರೀಕ್ಷಿತ. ರಸೆಲ್ಸ್ ವೈಪರ್ ಕಚ್ಚಿದ ನಂತರ ಪ್ರಕಾಶ ಮಂಡಲ ಎಂಬ ವ್ಯಕ್ತಿ ವಿಷಪೂರಿತ ಹಾವಿನ ಬಾಯಿಯನ್ನು ಹಿಡಿದು ಕುತ್ತಿಗೆಗೆ ಸುತ್ತಿಕೊಂಡು ಆಸ್ಪತ್ರೆಗೆ ಬಂದಿದ್ದಾರೆ. ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ತುರ್ತು ಚಿಕಿತ್ಸಾ ಕೇಂದ್ರಕ್ಕೆ ಹಾವು ಹಿಡಿದು … Continued

ಬಿಹಾರ | ‘ಜೀವಿತ ಪುತ್ರಿಕಾ’ ಉತ್ಸವದಲ್ಲಿ ಪವಿತ್ರ ಸ್ನಾನ ಮಾಡುವಾಗ 37 ಮಕ್ಕಳು ಸೇರಿ 43 ಸಾವು

ಪಾಟ್ನಾ : ಬಿಹಾರದಲ್ಲಿ ‘ಜೀವಿತ್‌ ಪುತ್ರಿಕಾ’ ಹಬ್ಬದ ಸಂದರ್ಭದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ನದಿಗಳು ಮತ್ತು ಕೊಳಗಳಲ್ಲಿ ಪವಿತ್ರ ಸ್ನಾನ ಮಾಡುವಾಗ 37 ಮಕ್ಕಳು ಸೇರಿದಂತೆ ಕನಿಷ್ಠ 43 ಜನರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ ಹಾಗೂ ಮೂವರು ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ಸರ್ಕಾರ ಗುರುವಾರ ತಿಳಿಸಿದೆ. ಬುಧವಾರ ನಡೆದ ಉತ್ಸವದಲ್ಲಿ ರಾಜ್ಯದ 15 ಜಿಲ್ಲೆಗಳಲ್ಲಿ ಈ ಘಟನೆಗಳು … Continued

ಶವಪರೀಕ್ಷೆಗೆ ಒಯ್ಯುವಾಗ ಎದ್ದು ಕುಳಿತ ʼಸತ್ತʼ ವ್ಯಕ್ತಿ…!

ಬಿಹಾರದಲ್ಲಿ ಗೊಂದಲಕಾರಿ ಘಟನೆಯೊಂದು ತೆರೆದುಕೊಂಡಿದ್ದು, ʼಸತ್ತಿದ್ದಾನೆʼ ಎಂದು ಘೋಷಿಸಿದ್ದ ವ್ಯಕ್ತಿಯೊಬ್ಬ ಕೆಲವು ಗಂಟೆಗಳ ನಂತರ ಇದ್ದಕ್ಕಿದ್ದಂತೆ ಜೀವಂತವಾಗಿ ಎದ್ದು ಕುಳಿತಿದ್ದಾನೆ..! ಇದು ವೈದ್ಯರು ಮತ್ತು ಪೊಲೀಸರನ್ನು ಬೆರಗುಗೊಳಿಸಿತು. ನಂತರ ವ್ಯಕ್ತಿಯನ್ನು ಬಿಹಾರ ಷರೀಫ್‌ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವರದಿಗಳ ಪ್ರಕಾರ, ವ್ಯಕ್ತಿ ಸ್ನಾನಗೃಹದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಇದು ಸ್ವಚ್ಛತಾ ಸಿಬ್ಬಂದಿ ಸ್ನಾನಗೃಹದ ಬಾಗಿಲು … Continued

ಯೂ ಟ್ಯೂಬ್ ವೀಡಿಯೊ ನೋಡಿ ಶಸ್ತ್ರಚಿಕಿತ್ಸೆ ; ಬಾಲಕ ಸಾವು…

ಪಾಟ್ನಾ: ಯೂಟ್ಯೂಬ್ ವೀಡಿಯೊ ನೆಚ್ಚಿಕೊಂಡ ವೈದ್ಯನೊಬ್ಬ ಪಿತ್ತಕೋಶದಿಂದ ಕಲ್ಲು ತೆಗೆಯಲು ಆಪರೇಷನ್ ಮಾಡಿ 15 ವರ್ಷದ ಬಾಲಕ ಸಾವಿಗೀಡಾಗಿರುವ ಘಟನೆ ಬಿಹಾರದ ಸರನ್ ನಲ್ಲಿ ನಡೆದಿದೆ. ಬಾಲಕನ ಪರಿಸ್ಥಿತಿ ಹದಗೆಡುತ್ತಿದ್ದಂತೆ, ರಾಜ್ಯ ರಾಜಧಾನಿ ಪಾಟ್ನಾದ ಆಸ್ಪತ್ರೆಗೆ ಆತನನ್ನು ಸಾಗಿಸಲು ‘ವೈದ್ಯರು’ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು. ಮಾರ್ಗಮಧ್ಯೆ ಬಾಲಕ ಮೃತಪಟ್ಟಿದ್ದು, ಆತನೊಂದಿಗೆ ಇದ್ದ ‘ವೈದ್ಯ’ ಮತ್ತು ಇತರರು … Continued

34 ವರ್ಷದ ಹಿಂದೆ ₹20 ಲಂಚ ಪಡೆದ ಪ್ರಕರಣ : ಮಾಜಿ ಕಾನ್‌ಸ್ಟೆಬಲ್ ಬಂಧನಕ್ಕೆ ಕೋರ್ಟ್ ಆದೇಶ…

ಪಾಟ್ನಾ: 34 ವರ್ಷಗಳ ಹಿಂದಿನ 20 ರೂಪಾಯಿಯ ಲಂಚ ಪ್ರಕರಣವೊಂದು ಈಗ ಮತ್ತೆ ಸುದ್ದಿಯಲ್ಲಿದೆ. 1990ರಲ್ಲಿ ಬಿಹಾರದ ಸಹರ್ಸಾ ರೈಲ್ವೇ ನಿಲ್ದಾಣದಲ್ಲಿ ತರಕಾರಿ ಸಾಗಿಸುತ್ತಿದ್ದ ಮಹಿಳೆಯೊಬ್ಬರಿಂದ 20 ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ನ್ಯಾಯಾಲಯವೊಂದು ಮಾಜಿ ಕಾನ್‌ಸ್ಟೆಬಲ್‌ನನ್ನು ಬಂಧಿಸಲು ಆದೇಶಿಸಿದೆ. 1990ರ ಮೇ 6ರಂದು ಸಹಾರ್ಸ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯಕ್ಕೆ ನಿಯೋಜಿತನಾಗಿದ್ದ ಬರಾಹಿಯಾದ ಕಾನ್‌ಸ್ಟೆಬಲ್ … Continued

ವೀಡಿಯೊ…| ಸಂಗೀತ ಕಾರ್ಯಕ್ರಮದ ವೇಳೆ ಶೆಡ್ ಕುಸಿದು ಅವಘಡ ; 100ಕ್ಕೂ ಹೆಚ್ಚು ಮಂದಿಗೆ ಗಾಯ

ಛಾಪ್ರಾ : ಬಿಹಾರದ ಸರನ್ ಜಿಲ್ಲೆಯ ಛಪ್ರಾದಲ್ಲಿ ಶೆಡ್ ಕುಸಿದು 100 ಮಂದಿ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಈ ಪ್ರದೇಶದಲ್ಲಿ ನಡೆಯುತ್ತಿದ್ದ ಆರ್ಕೆಸ್ಟ್ರಾ ಕಾರ್ಯಕ್ರಮ ವೀಕ್ಷಿಸಲು ನೆರೆದಿದ್ದ ಜನರ ಭಾರ ತಾಳಲಾರದೆ ಶೆಡ್ ಕುಸಿದು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯ ಇಶಾವಪುರ ಬ್ಲಾಕ್‌ನ ಮಹಾವೀರ ಅಖಾಡ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ. ಮೆರವಣಿಗೆಯಲ್ಲಿ … Continued

ಜೆಡಿಯು ಪಕ್ಷದ ವಕ್ತಾರ ಸ್ಥಾನಕ್ಕೆ ಕೆ.ಸಿ.ತ್ಯಾಗಿ ರಾಜೀನಾಮೆ

ಪಾಟ್ನಾ : ಹಿರಿಯ ಜನತಾ ದಳ (ಯುನೈಟೆಡ್) ನಾಯಕ ಕೆ.ಸಿ. ತ್ಯಾಗಿ ಅವರುವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಪಕ್ಷದ ವಕ್ತಾರ ಸ್ಥಾನಕ್ಕೆ ಭಾನುವಾರ ರಾಜೀನಾಮೆ ನೀಡಿದ್ದಾರೆ. ಜೆಡಿಯು ತನ್ನ ಅಧ್ಯಕ್ಷ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರು ರಾಜೀವ ರಂಜನ್ ಪ್ರಸಾದ ಅವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಿದ್ದಾರೆ ಎಂದು ಜೆಡಿಯು ಹೇಳಿಕೆಯಲ್ಲಿ ತಿಳಿಸಿದೆ. ಆದರೆ, ಇತ್ತೀಚೆಗೆ ವಿವಿಧ … Continued

ವೀಡಿಯೊ..| ಭಾರತ್ ಬಂದ್ ವೇಳೆ ಜನರ ಗುಂಪು ಟೈರಿಗೆ ಬೆಂಕಿ ಹಚ್ಚಿದ ಸ್ಥಳದ ಮೂಲಕ ಹೋದ ಮಕ್ಕಳಿದ್ದ ಶಾಲಾ ಬಸ್‌ ; ಸ್ವಲ್ಪದರಲ್ಲಿ ಅಪಾಯದಿಂದ ಪಾರು

ಗೋಪಾಲಗಂಜ್‌ : ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡುವ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ನ ಇತ್ತೀಚಿನ ಆದೇಶದ ವಿರುದ್ಧ ಕೆಲವು ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‌ ವೇಳೆ ಪ್ರತಿಭಟನಾಕಾರರು ರಸ್ತೆಯಲ್ಲಿ ಹಲವಾರು ಟೈರ್‌ಗಳನ್ನು ಸುಟ್ಟುಹಾಕಿದ ಸ್ಥಳವನ್ನು ದಾಟುವಾಗ ಮಕ್ಕಳಿದ್ದ ಶಾಲಾ ಬಸ್‌ ಮಾರಣಾಂತಿಕ ಅಪಘಾತದಿಂದ ಪಾರಾದ ವಿದ್ಯಮಾನ ಬುಧವಾರ ಬಿಹಾರದ ಗೋಪಾಲ್‌ಗಂಜ್‌ನಲ್ಲಿ ನಡೆದಿದೆ. ದೃಶ್ಯಗಳ … Continued