ಬಿಹಾರ ಚುನಾವಣೆ 2025 ; ‘ಕುತ್ತಾ ಬಾಬು’ವಿನ ಪುತ್ರ ʼಡಾಗ್ ಬಾಬು’ ಎಂಬ ನಾಯಿಗೂ ನಿವಾಸಿ ಪ್ರಮಾಣ ಪತ್ರ ನೀಡಿದ್ದು ಬೆಳಕಿಗೆ..!

ಪಾಟ್ನಾ : ಬಿಹಾರದಲ್ಲಿ ರಾಜ್ಯ ಗುರುತಿನ ನೋಂದಣಿ (State Identification Registry-SIR ) ಉಪಕ್ರಮದ ಅಡಿಯಲ್ಲಿ ನಾಗರಿಕ ದಾಖಲೆಗಳನ್ನು ಪರಿಷ್ಕರಣೆ ನಡೆಸುತ್ತಿರುವ ಅಭಿಯಾನದ ಭಾಗವಾಗಿ, ನಿವಾಸಿಗಳಿಗೆ ತಮ್ಮ ಅಧಿಕೃತ ದಾಖಲೆಗಳನ್ನು ಪರಿಶೀಲಿಸಲು ಮತ್ತು ಸರಿಪಡಿಸಲು ಸೂಚಿಸಲಾಗಿದೆ. ಆದಾಗ್ಯೂ, ಈ ಪರಿಷ್ಕರಣೆಯ ಪ್ರಕ್ರಿಯೆಯ ವೇಳೆ ಅಪನಂಬಿಕೆಗೆ ಕಾರಣವಾದ ವಿಲಕ್ಷಣ ನಿವಾಸಿ ಪ್ರಮಾಣ ಪತ್ರ ನೀಡಿರುವುದು ಕಂಡುಬಂದಿದೆ. ‘ಡಾಗ್ … Continued

ಅಚ್ಚರಿಯ ಘಟನೆ..| ಸಮೀಪ ಬಂದ ನಾಗರಹಾವನ್ನು ಹಿಡಿದು ಕಚ್ಚಿ ಕೊಂದ ಒಂದು ವರ್ಷದ ಮಗು…!

ಪಾಟ್ನಾ: ಬಿಹಾರದ ಹಳ್ಳಿಯೊಂದರಲ್ಲಿ ಒಂದು ವರ್ಷದ ಮಗುವೊಂದು ಹಾವನ್ನು ಕಚ್ಚಿದ ನಂತರ ಅದು ಸಾವಿಗೀಡಾದ ವಿಚಿತ್ರ ಘಟನೆ ನಡೆದಿದೆ. ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಮೊಹಚ್ಚಿ ಬಂಕಟ್ವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಂತರ ಪ್ರಜ್ಞೆ ತಪ್ಪಿದ್ದ ಗೋವಿಂದಕುಮಾರ ಎಂದು ಗುರುತಿಸಲಾದ ಒಂದು ವರ್ಷದ ಮಗುವನ್ನು ಚಿಕಿತ್ಸೆಗಾಗಿ ಆತನ ಕುಟುಂಬ ಸದಸ್ಯರು ಬೆಟ್ಟಿಯಾ ಪಟ್ಟಣದ ಸರ್ಕಾರಿ … Continued

ಗೃಹರಕ್ಷಕ ದಳ ದೈಹಿಕ ಪರೀಕ್ಷೆ ವೇಳೆ ಪ್ರಜ್ಞೆ ತಪ್ಪಿದ ಯುವತಿ ; ಆಸ್ಪತ್ರೆಗೆ ಒಯ್ಯುವಾಗ ಆಂಬುಲೆನ್ಸ್‌ನಲ್ಲಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ

ಪಾಟ್ನಾ: ಬಿಹಾರದ ಗಯಾ ಜಿಲ್ಲೆಯಲ್ಲಿ ಗೃಹರಕ್ಷಕ ದಳದ ನೇಮಕಾತಿ ಅಭಿಯಾನದಲ್ಲಿ ಭಾಗವಹಿಸಿದ್ದ 26 ವರ್ಷದ ಯುವತಿ ದೈಹಿಕ ಪರೀಕ್ಷೆಯ ಸಮಯದಲ್ಲಿ ಕುಸಿದು ಬಿದ್ದು ಆಸ್ಪತ್ರೆಗೆ ಸಾಗಿಸುವಾಗ ಚಲಿಸುವ ಆಂಬ್ಯುಲೆನ್ಸ್‌ನಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ. ಜುಲೈ 24 ರಂದು ಬೋಧಗಯಾದ ಬಿಹಾರ ಮಿಲಿಟರಿ ಪೊಲೀಸ್ ಮೈದಾನದಲ್ಲಿ ನಡೆಯುತ್ತಿದ್ದ ಗೃಹರಕ್ಷಕ ದಳದ ನೇಮಕಾತಿ … Continued

ಪೆರೋಲ್ ಮೇಲೆ ಆಸ್ಪತ್ರೆ ಐಸಿಯುಗೆ ದಾಖಲಾಗಿದ್ದ ಕುಖ್ಯಾತ ಆರೋಪಿಗೆ ಗುಂಡಿಕ್ಕಿ ಹತ್ಯೆ ಮಾಡಿ ಪರಾರಿ : ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಪಾಟ್ನಾ: ಐವರು ಶಸ್ತ್ರಸಜ್ಜಿತ ವ್ಯಕ್ತಿಗಳು ಆಸ್ಪತ್ರೆಗೆ ನುಗ್ಗಿ, ರೋಗಿಯೊಬ್ಬರ ಕೋಣೆಗೆ ನಡೆದುಕೊಂಡು ಹೋಗಿ ಕುಖ್ಯಾತ ಆರೋಪಿಯ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಇದು ಸಿನಿಮಾ ಅಲ್ಲ. ಇದು ಬಿಹಾರದ ಭಯಾನಕ ವಾಸ್ತವ. ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಐವರು ಶೂಟರ್‌ಗಳು ಆಸ್ಪತ್ರೆಯ ಕಾರಿಡಾರ್‌ನಲ್ಲಿ ತಮ್ಮ ಬಂದೂಕುಗಳನ್ನು ಹೊರತೆಗೆದು, ಕ್ಯಾಬಿನ್‌ನ ಬಾಗಿಲು ತೆರೆದು ಒಳಹೊಕ್ಕಿರುವುದು ಹಾಗೂ ನಂತರ ಪರಾರಿಯಾಗಿರುವುದು … Continued

ಬಿಹಾರ ಚುನಾವಣೆಗೂ ಮುನ್ನ 125 ಯೂನಿಟ್ ಫ್ರೀ ವಿದ್ಯುತ್ ಘೋಷಿಸಿದ ಸಿಎಂ ನಿತೀಶಕುಮಾರ

ಪಾಟ್ನಾ: ಬಿಹಾರ ಚುನಾವಣೆಗೂ ಮುನ್ನ ಗುರುವಾರ (ಜುಲೈ 17) ಮುಖ್ಯಮಂತ್ರಿ ನಿತೀಶಕುಮಾರ ಅರ್ಹ ಮನೆಗಳಿಗೆ 125 ಯೂನಿಟ್ ವಿದ್ಯುತ್ ಅನ್ನು ಉಚಿತ(free)ವಾಗಿ ನೀಡುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯು ರಾಜ್ಯಾದ್ಯಂತ ಸುಮಾರು 1.67 ಕೋಟಿ ಕುಟುಂಬಗಳಿಗೆ ಅನುಕೂಲ ನೀಡುವ ನಿರೀಕ್ಷೆಯಿದೆ. ಆಗಸ್ಟ್ 1ರಿಂದ ರಾಜ್ಯದ ಗೃಹಬಳಕೆದಾರರು 125 ಯೂನಿಟ್‌ಗಳವರೆಗೆ ಉಚಿತವಾಗಿ ವಿದ್ಯುತ್ ಪಡೆಯಲಿದ್ದಾರೆ. ಪ್ರಸ್ತುತ ಕುಟೀರ ಜ್ಯೋತಿ … Continued

ಉದ್ಯಮಿ ಗೋಪಾಲ ಖೇಮ್ಕಾ ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರಿನಲ್ಲಿ ಹತ

ಪಾಟ್ನಾ : ಉದ್ಯಮಿ ಗೋಪಾಲ ಖೇಮ್ಕಾ ಅವರ ಹತ್ಯೆಗೆ ಸಂಬಂಧಿಸಿದ ಪ್ರಮುಖ ಆರೋಪಿ ಮಂಗಳವಾರ ಬೆಳಿಗ್ಗೆ ಪೊಲೀಸರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟಿದ್ದಾನೆ ಎಂದು ವರದಿಯಾಗಿದೆ. ಪಾಟ್ನಾ ನಗರದ ಮಾಲ್ ಸಲಾಮಿ ಪ್ರದೇಶದಲ್ಲಿ ಪೊಲೀಸರು ಶಂಕಿತನನ್ನು ಬಂಧಿಸಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಪೊಲೀಸರ ಪ್ರಕಾರ, ಖೇಮ್ಕಾ ಅವರನ್ನು ಕೊಲ್ಲಲು ಬಳಸಿದ ಆಯುಧವನ್ನು ಮೃತ … Continued

ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ; ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಆರ್‌ಜೆಡಿ

ಪಾಟ್ನಾ: ಈ ವರ್ಷದ ಕೊನೆಯಲ್ಲಿ ಚುನಾವಣೆಗೆ ಸಜ್ಜಾಗಲಿರುವ ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಪ್ರಕರಣದಲ್ಲಿ ಆರ್‌ಜೆಡಿ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಲಿದ್ದು, ಸೋಮವಾರ ವಿಚಾರಣೆ ನಡೆಸುವಂತೆ ಕೋರಿದ್ದಾರೆ. ಜೂನ್ … Continued

ಮನೆ ಮುಂದೆಯೇ ಗುಂಡು ಹಾರಿಸಿ ಬಿಜೆಪಿ ನಾಯಕ-ಖ್ಯಾತ ಉದ್ಯಮಿ ಗೋಪಾಲ ಖೇಮ್ಕಾ ಹತ್ಯೆ

ಪಾಟ್ನಾ : ಬಿಹಾರದ ಪಾಟ್ನಾದಲ್ಲಿರುವ ಅವರ ನಿವಾಸದ ಹೊರಗೆ ಬಿಜೆಪಿ ನಾಯಕ ಮತ್ತು ಉದ್ಯಮಿ ಗೋಪಾಲ ಖೇಮ್ಕಾ ಅವರನ್ನು ಶುಕ್ರವಾರ ರಾತ್ರಿ ಗುಂಡಿಕ್ಕಿ ಕೊಲ್ಲಲಾಗಿದೆ. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಗಾಂಧಿ ಮೈದಾನ ಪೊಲೀಸ್ ಠಾಣೆ ಪ್ರದೇಶದ ಪಣಾಚೆ ಹೋಟೆಲ್ ಪಕ್ಕದಲ್ಲಿರುವ ತಮ್ಮ ಮನೆಗೆ ಅವರು ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಅವರು ಟ್ವಿನ್ … Continued

ಮೈ ಜುಂ ಎನ್ನುವ ವೀಡಿಯೊ : ಒಮ್ಮೆಗೇ ಧುಮ್ಮಿಕ್ಕಿದ ನೀರಿನ ಝರಿಯಲ್ಲಿ ಜಾರಿಬಿದ್ದ 6 ಮಹಿಳೆಯರು ಸ್ವಲ್ಪದರಲ್ಲೇ ಪಾರು…!

ಗಯಾ: ಬಿಹಾರದ ಗಯಾ ಜಿಲ್ಲೆಯ ಲಂಗುರಿಯಾ ಬೆಟ್ಟದ  ದೊಡ್ಡ ಝರಿಯಲ್ಲಿ ಹಠಾತ್‌ ಹೆಚ್ಚಾದ ನೀರಿನ ರಭಸಕ್ಕೆ ಜಾರಿದ ಆರು ಮಹಿಳೆಯರು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾನುವಾರ ನಡೆದ ಘಟನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಜಲಮೂಲಗಳ ಬಳಿ ಮಳೆಗಾಲದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಜ್ಞಾಪನೆಯೂ ಆಗಿದೆ. ಸುಮಾರು ಎರಡು … Continued

ವರದಕ್ಷಿಣೆಯಾಗಿ ಕಿಡ್ನಿಯನ್ನೇ ನೀಡು ಎಂದು ಸೊಸೆಗೆ ಹೇಳಿದ ಅತ್ತೆ-ಮಾವ…!

ಪಾಟ್ನಾ:  ಬಿಹಾರದ ಮಹಿಳೆಯೊಬ್ಬರಿಗೆ ಬೈಕ್, ನಗದು ಮತ್ತು ಆಭರಣಗಳನ್ನು ವರದಕ್ಷಿಣೆಯಾಗಿ ತರಲು ಸಾಧ್ಯವಾಗದಿದ್ದರೆ ಅವರ ಪತಿಗೆ ಮೂತ್ರಪಿಂಡ ದಾನ ಮಾಡುವಂತೆ ಅವರ ಅತ್ತೆ-ಮಾವಂದಿರು ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ. ಉತ್ತರ ಬಿಹಾರದ ಮುಜಫರಪುರದಲ್ಲಿ ತಮ್ಮ ಮಗನಿಗೆ ವರದಕ್ಷಿಣೆಯಾಗಿ ಮೂತ್ರಪಿಂಡವನ್ನು ಬೇಡಿಕೆಯಿಟ್ಟ ವಿಚಿತ್ರ ಘಟನೆ ವರದಿಯಾಗಿದೆ. ಈ ಸಂಬಂಧ ಮುಜಫರಪುರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. … Continued