ಸೇತುವೆ ಕೆಳಗೆ ಸಿಲುಕಿಕೊಂಡ ಮುಂಬೈನಿಂದ ಹೊರಟ ಬೃಹತ್‌ ವಿಮಾನ..| ವೀಕ್ಷಿಸಿ

ಶುಕ್ರವಾರ (ಡಿಸೆಂಬರ್ 29) ಮುಂಬೈನಿಂದ ಅಸ್ಸಾಮಿಗೆ (Mumbai to Assam) ಸಾಗಿಸುತ್ತಿದ್ದ ಸ್ಕ್ಯ್ರಾಪ್ ವಿಮಾನವು ಬಿಹಾರದ ಮೋತಿಹಾರಿಯಲ್ಲಿ ವಿಮಾನವು ಸೇತುವೆಯ ಕೆಳಗೆ ಸಿಲುಕಿಕೊಂಡಿದೆ. ಈ ವಿಮಾನವು ಮೋತಿಹಾರಿಯ ಪಿಪ್ರಕೋಥಿ ಸೇತುವೆಯ ಕೆಳಗೆ ಸಿಲುಕಿಕೊಂಡಿತ್ತು. ಟ್ರಕ್ ಚಾಲಕರು ಮತ್ತು ಸ್ಥಳೀಯರ ಸಹಾಯದಿಂದ ಸ್ಕ್ಯ್ರಾಪ್ ವಿಮಾನವನ್ನು ಹೊರತೆಗೆಯಲಾಯಿತು. ವಿವರಗಳ ಪ್ರಕಾರ, ವಿಮಾನವನ್ನು ದೊಡ್ಡ ಟ್ರಕ್ ನಲ್ಲಿ ಸಾಗಿಸಲಾಗುತ್ತಿತ್ತು. ಮೇಲ್ಸೇತುವೆ … Continued

ಶಿಕ್ಷಕರನ್ನು ಅಪಹರಿಸಿ ಗನ್ ಪಾಯಿಂಟ್‌ನಲ್ಲಿ ಅಪಹರಣಕಾರನ ಮಗಳ ಜೊತೆ ಮದುವೆ

ಪಾಟ್ನಾ: ಬಿಹಾರದಲ್ಲಿ ಹೊಸದಾಗಿ ನೇಮಕಗೊಂಡ ಸರ್ಕಾರಿ ಶಿಕ್ಷಕರೊಬ್ಬರನ್ನು ಅವರ ಶಾಲೆಯಿಂದ ಬುಧವಾರ ಅಪಹರಿಸಲಾಗಿದೆ ಮತ್ತು ಬಂದೂಕು ತೋರಿಸಿ ಯುವತಿಯೊಬ್ಬರ ಜೊತೆ ಬಲವಂತವಾಗಿ ಮದುವೆ ಮಾಡಲಾಗಿದೆ ಎಂದು ಆರೋಪಿಸಿ ಶಿಕ್ಷಕನ ಪತ್ತೆ ಹಚ್ಚಿದ ನಂತರ ಪೊಲೀಸರು ಗುರುವಾರ ತಿಳಿಸಿದ್ದಾರೆ. ಯುವತಿ ತಂದೆ ವಿರುದ್ಧ ಪ್ರಕರಣ ದಾಖಲಾಗಿದೆ. ಇತ್ತೀಚೆಗಷ್ಟೇ ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಶಿಕ್ಷಕರಾಗಿದ್ದ … Continued

ಜಾತಿ ಆಧಾರಿತ ಮೀಸಲಾತಿ ಶೇ.65ಕ್ಕೆ ಹೆಚ್ಚಿಸುವ ಮಸೂದೆಗೆ ಬಿಹಾರ ವಿಧಾನಸಭೆ ಅಂಗೀಕಾರ

ಪಾಟ್ನಾ : ಬಿಹಾರದಲ್ಲಿ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಹೆಚ್ಚಿಸುವ ಮೀಸಲಾತಿ ತಿದ್ದುಪಡಿ ಮಸೂದೆಯನ್ನು ಗುರುವಾರ (ನವೆಂಬರ್‌ 9) ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ರಾಜ್ಯದಲ್ಲಿ ಇತರೆ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಕೋಟಾಗಳನ್ನು ಹೆಚ್ಚಿಸುವ ಪ್ರಸ್ತಾವನೆಗೆ ಬಿಹಾರ ಸಚಿವ ಸಂಪುಟ ಮಂಗಳವಾರ ಒಪ್ಪಿಗೆ ನೀಡಿದೆ. ನಿತೀಶಕುಮಾರ ಅವರ ಅನುಪಸ್ಥಿತಿಯಲ್ಲಿ … Continued

ಬಿಹಾರ ಜಾತಿ ಗಣತಿ : ಪರಿಶಿಷ್ಟ ಜಾತಿ-ಪಂಗಡದಲ್ಲಿ 42%ರಷ್ಟು, ಸಾಮಾನ್ಯ ವರ್ಗದಲ್ಲಿ 25%ರಷ್ಟು ಬಡವರು

ಪಾಟ್ನಾ : 215 ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಆರ್ಥಿಕ ಸ್ಥಿತಿಯನ್ನು ವಿವರಿಸುವ ಸಂಪೂರ್ಣ ವರದಿ ಮತ್ತು ಬಿಹಾರ ಸರ್ಕಾರದ ಜಾತಿ ಆಧಾರಿತ ಸಮೀಕ್ಷೆಯ ಅಂಕಿಅಂಶಗಳ ಎರಡನೇ ಭಾಗವನ್ನು ಇಂದು, ಮಂಗಳವಾರ ಬಿಹಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು. ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾದ ಜಾತಿ ಸಮೀಕ್ಷೆಯ ವಿಸ್ತೃತ ವರದಿಯು ಬಿಹಾರದಲ್ಲಿ … Continued

ಕಾಂಗ್ರೆಸ್ ಶಾಸಕಿ ಮನೆಯಲ್ಲಿ 20 ವರ್ಷದ ಯುವಕನ ಶವ ಪತ್ತೆ

ನವಡಾ: ಬಿಹಾರದ ನವಡಾ ಜಿಲ್ಲೆಯ ಕಾಂಗ್ರೆಸ್ ಶಾಸಕಿ ನೀತು ಸಿಂಗ್ ಅವರ ಮನೆಯಲ್ಲಿ 24 ವರ್ಷದ ಯುವಕನ ಶವ ಶನಿವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಯುವಕ ಪಿಯೂಷ್ ಸಿಂಗ್ ಎಂಬವರು ನೀತು ಸಿಂಗ್ ಅವರ ದೂರದ ಸಂಬಂಧಿಯಾಗಿದ್ದು, ಶವ ಪತ್ತೆಯಾದಾಗ ಶಾಸಕಿ ನೀತು ಸಿಂಗ್ ನರ್ಹತ್‌ನಲ್ಲಿರುವ ಅವರ ಮನೆಯಲ್ಲಿ ಇರಲಿಲ್ಲ ಎಂದು ನಾವಡಾ … Continued

ವೀಡಿಯೊ…| ಮೈದುನನ ಮದುವೆಯಾಗಲು ಅತ್ತಿಗೆಯಂದಿರ ಹೊಡೆದಾಟ : ಹಲವರಿಗೆ ಗಾಯ

ಬಿಹಾರದ ಹಿಲ್ಸಾ ಜಿಲ್ಲೆಯಲ್ಲಿ ಮೈದುನನ್ನು ಮದುವೆಯಾಗಲು ಇಬ್ಬರು ಅತ್ತಿಗೆಯಂದಿರು ಜಗಳ ಮಾಡಿಕೊಂಡ ವಿಚಿತ್ರ ಹಾಗೂ ಅಸಾಮಾನ್ಯ ಘಟನೆ ಇತ್ತೀಚಿಗೆ ನಡೆದಿರುವುದು ವರದಿಯಾಗಿದೆ. ಈ ಪರಿಸ್ಥಿತಿ ವೇಳೆ ಪರಿಸ್ಥಿತಿ ಉಲ್ಬಣಗೊಂಡಿದ್ದು, ಇಬ್ಬರು ಮಹಿಳೆಯರ ತವರು ಮನೆಯ ಕುಟುಂಬದ ಸದಸ್ಯರು ಕೂಡ ಜಗಳದಲ್ಲಿ ಸೇರಿಕೊಂಡು ಪರಸ್ಪರ ದೊಣ್ಣೆಯಿಂದ ಹೊಡೆದಾಡಿಕೊಂಡಿದ್ದಾರೆ. ನೋಡುಗರು ಈ ಘಟನೆಯನ್ನು ವೀಡಿಯೊದಲ್ಲಿ ಸೆರೆಹಿಡಿದಿದ್ದಾರೆ, ಅದು ತಕ್ಷಣವೇ … Continued

ಬಿಹಾರ ರೈಲು ಅಪಘಾತ: 4 ಸಾವು, 70 ಮಂದಿಗೆ ಗಾಯ

ನವದೆಹಲಿ: ಬಿಹಾರದ ಬಕ್ಸಾರ್‌ನಲ್ಲಿ ಬುಧವಾರ ಸಂಜೆ ದೆಹಲಿ-ಕಾಮಾಖ್ಯ ಈಶಾನ್ಯ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿ ಕನಿಷ್ಠ ನಾಲ್ವರು ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ರಘುನಾಥಪುರ ನಿಲ್ದಾಣದ ಬಳಿ ರೈಲಿನ ಆರು ಬೋಗಿಗಳು ಹಳಿತಪ್ಪಿದ ನಂತರ 70 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರೈಲು ಹಳಿತಪ್ಪಿ ಮೃತಪಟ್ಟ ಸಂಬಂಧಿಕರಿಗೆ ರೈಲ್ವೆ ಇಲಾಖೆ ಗುರುವಾರ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಗಾಯಗೊಂಡವರಿಗೆ … Continued

ಕ್ಯಾಮರಾದಲ್ಲಿ ಸೆರೆ : ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನು ಕಾಲುವೆಗೆ ಎಸೆದ ಪೊಲೀಸರು…!

ಪಾಟ್ನಾ: ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಅಪಘಾತಕ್ಕೀಡಾದ ವ್ಯಕ್ತಿಯ ಶವವನ್ನು ಪೊಲೀಸರು ಕಾಲುವೆಗೆ ಎಸೆಯುತ್ತಿರುವ ದೃಶ್ಯ ಸೆರೆಯಾಗಿದೆ. ದಾರಿಹೋಕರೊಬ್ಬರು ತೆಗೆದ ವಿಡಿಯೋ ತುಣುಕಿನಲ್ಲಿ ಪೊಲೀಸರು ತಮ್ಮ ಲಾಠಿಗಳಿಂದ ಶವವನ್ನು ಕಾಲುವೆಗೆ ತಳ್ಳುತ್ತಿರುವುದನ್ನು ತೋರಿಸುತ್ತದೆ. ವೀಡಿಯೊ ವ್ಯಾಪಕವಾಗಿ ಪ್ರಸಾರವಾದ ನಂತರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಲೋಪವನ್ನು ಒಪ್ಪಿಕೊಂಡ ಸ್ಥಳೀಯ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು, ರಕ್ಷಿಸಲು ಸಾಧ್ಯವಾಗದ ದೇಹದ … Continued

ಲೋಕಸಭೆ ಚುನಾವಣೆ : ಬಿಹಾರದಲ್ಲಿ ನಿತೀಶ ಲೆಕ್ಕಾಚಾರ ಫಲ ನೀಡುವುದೇ..? ; ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಏನು ಹೇಳುತ್ತದೆ..?

ಹಲವು ವರ್ಷಗಳಿಂದ ಅತ್ಯಂತ ಅಸ್ಥಿರವಾಗಿರುವ ಬಿಹಾರ ರಾಜಕೀಯವು ಹಲವಾರು ಸಮ್ಮಿಶ್ರ ಸರ್ಕಾರಗಳ ರಚನೆ ಮತ್ತು ಸಾಕಷ್ಟು ತಿರುವುಗಳಿಗೆ ಸಾಕ್ಷಿಯಾಗಿದೆ. ಆದಾಗ್ಯೂ, ರಾಜ್ಯದಲ್ಲಿನ ರಾಜಕೀಯ ಸನ್ನಿವೇಶದಲ್ಲಿನ ಕ್ರಿಯಾತ್ಮಕ ಬದಲಾವಣೆಗಳು 2024 ರ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದೇ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಮಾಡಿದೆ. ಶನಿವಾರ (ಅಕ್ಟೋಬರ್ 7) ನಡೆಸಿದ ಇತ್ತೀಚಿನ ಇಂಡಿಯಾ ಟಿವಿ-ಸಿಎನ್‌ಎಕ್ಸ್ … Continued

ರಸ್ತೆಯಲ್ಲಿ ಸಾರ್ವಜನಿಕರ ಎದುರೇ ಹೊಡೆದಾಡಿಕೊಂಡ ಇಬ್ಬರು ಪೊಲೀಸರು : ತನಿಖೆ ಆರಂಭ | ವೀಡಿಯೊ

ಬಿಹಾರದ ನಳಂದಾದಲ್ಲಿ ಇಬ್ಬರು ಪೊಲೀಸ್ ಪೇದೆಗಳು ಹಗಲು ಹೊತ್ತಿನಲ್ಲಿ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ಆಘಾತಕಾರಿ ವೀಡಿಯೊ ಆನ್‌ಲೈನ್‌ನಲ್ಲಿ ಹೊರಹೊಮ್ಮಿದೆ. ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಇಬ್ಬರು ಪೊಲೀಸರು ನಳಂದಾದಲ್ಲಿ ರಸ್ತೆಯ ಮಧ್ಯದಲ್ಲಿ ಹೊಡೆದಾಡಿಕೊಂಡಿದ್ದಾರೆ. ಒಬ್ಬ ಅಧಿಕಾರಿ ಸಾರ್ವಜನಿಕರ ಮುಂದೆಯೇ ಲಂಚ ಸ್ವೀಕರಿಸುತ್ತಿದ್ದಾರೆ ಎಂದು ಆರೋಪಿಸುವುದರೊಂದಿಗೆ ವೀಡಿಯೊ ಆರಂಭವಾಗುತ್ತದೆ. ಮೊದಲ ಪೋಲೀಸರು ಅಲ್ಲಿಂದ ತೆರಳಲು ಯತ್ನಿಸಿದಾಗ ಮತ್ತೋರ್ವ ಪೋಲೀಸ್‌ … Continued