ಸೇತುವೆ ಕೆಳಗೆ ಸಿಲುಕಿಕೊಂಡ ಮುಂಬೈನಿಂದ ಹೊರಟ ಬೃಹತ್‌ ವಿಮಾನ..| ವೀಕ್ಷಿಸಿ

ಶುಕ್ರವಾರ (ಡಿಸೆಂಬರ್ 29) ಮುಂಬೈನಿಂದ ಅಸ್ಸಾಮಿಗೆ (Mumbai to Assam) ಸಾಗಿಸುತ್ತಿದ್ದ ಸ್ಕ್ಯ್ರಾಪ್ ವಿಮಾನವು ಬಿಹಾರದ ಮೋತಿಹಾರಿಯಲ್ಲಿ ವಿಮಾನವು ಸೇತುವೆಯ ಕೆಳಗೆ ಸಿಲುಕಿಕೊಂಡಿದೆ.
ಈ ವಿಮಾನವು ಮೋತಿಹಾರಿಯ ಪಿಪ್ರಕೋಥಿ ಸೇತುವೆಯ ಕೆಳಗೆ ಸಿಲುಕಿಕೊಂಡಿತ್ತು. ಟ್ರಕ್ ಚಾಲಕರು ಮತ್ತು ಸ್ಥಳೀಯರ ಸಹಾಯದಿಂದ ಸ್ಕ್ಯ್ರಾಪ್ ವಿಮಾನವನ್ನು ಹೊರತೆಗೆಯಲಾಯಿತು.
ವಿವರಗಳ ಪ್ರಕಾರ, ವಿಮಾನವನ್ನು ದೊಡ್ಡ ಟ್ರಕ್ ನಲ್ಲಿ ಸಾಗಿಸಲಾಗುತ್ತಿತ್ತು. ಮೇಲ್ಸೇತುವೆ ಅಡಿಯಲ್ಲಿ ವಿಮಾನ ಸಿಕ್ಕಿಹಾಕಿಕೊಂಡ ಸುದ್ದಿ ತಿಳಿದು ಅಕ್ಕಪಕ್ಕದಲ್ಲಿದ್ದವರು ಅದನ್ನು ನೋಡಲು ಓಡಿ ಬಂದರು. ಸೇತುವೆಯ ಮೇಲೆ ಸಿಲುಕಿರುವ ವಿಮಾನದ ಚಿತ್ರಗಳು ಮತ್ತು ಸೆಲ್ಫಿಗಳನ್ನು ತೆಗೆದುಕೊಳ್ಳುವಲ್ಲಿ ಹಲವರು ನಿರತರಾಗಿದ್ದರು, ಆದರೆ ಪೊಲೀಸರು ಹೇಗಾದರೂ ಮೇಲ್ಸೇತುವೆಯ ಕೆಳಗೆ ಲಾರಿಯ ಮೇಲೆ ಇರಿಸಿದ್ದ ವಿಮಾನವನ್ನು ಹೊತರಲು ಹರಸಾಹಸಪಟ್ಟರು.

ನಂತರ ಟ್ರಕ್ ನ ಎಲ್ಲಾ ಟೈರ್‌ಗಳನ್ನು ಡಿಫ್ಲೇಟ್ ಮಾಡಿ ಮೇಲ್ಸೇತುವೆಯ ಕೆಳಗೆ ಸಿಲುಕಿದ್ದ ವಿಮಾನವನ್ನು ಹೊರತೆಗೆಯಲಾಯಿತು. ಸೇತುವೆಯಿಂದ ವಿಮಾನ ಹೊರತೆಗೆದ ಬಳಿಕ ಅಲ್ಲಿದ್ದ ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದ ನೂರಾರು ಜನ ಕೂಡ ನಿಟ್ಟುಸಿರು ಬಿಟ್ಟರು.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ಮುಸ್ಲಿಂ ಮತಗಳು ಬೇಕು, ಆದರೆ ಟಿಕೆಟ್‌ ಕೊಡಲ್ಲ : ಕಾಂಗ್ರೆಸ್‌ ಬಗ್ಗೆ ನಸೀಂ ಖಾನ್ ತೀವ್ರ ಅಸಮಾಧಾನ, ಹುದ್ದೆಗೆ ರಾಜೀನಾಮೆ

ನವೆಂಬರ್ 2022 ರಲ್ಲಿ ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ರಸ್ತೆಯ ಅಂಡರ್‌ಪಾಸ್‌ನಲ್ಲಿ ವಿಮಾನವೊಂದು ಇದೇ ರೀತಿಯಲ್ಲಿ ಸಿಲುಕಿಕೊಂಡಿತ್ತು. ಟ್ರಕ್‌ನ ಟ್ರೈಲರ್‌ನಲ್ಲಿ ವಿಮಾನವನ್ನು ಕೊಚ್ಚಿಯಿಂದ ಹೈದರಾಬಾದ್‌ಗೆ ಸ್ಥಳಾಂತರಿಸುವಾಗ ಈ ಘಟನೆ ಸಂಭವಿಸಿತ್ತು. 2021ರ ಡಿಸೆಂಬರ್‌ನಲ್ಲಿ ದಿಲ್ಲಿಯಲ್ಲೂ ಇದೇ ರೀತಿಯಾಗಿತ್ತು. ಕಾರ್ಯಾಚರಣೆಯನ್ನು ನಿಲ್ಲಿಸಿದ್ದ ಏರ್ ಇಂಡಿಯಾ ಎ320 ವಿಮಾನವನ್ನು ಟ್ರಕ್‌ನಲ್ಲಿ ಸಾಗಿಸಲಾಗುತ್ತಿತ್ತು. ಆಗಲೂ ದಿಲ್ಲಿ ವಿಮಾನ ನಿಲ್ದಾಣ ಬಳಿಯೇ ಈ ಸ್ಕ್ಯ್ರಾಪ್ ವಿಮಾನ ಸಿಲುಕಿಕೊಂಡಿತ್ತು.

ಪ್ರಮುಖ ಸುದ್ದಿ :-   ಉತ್ತರ ಪತ್ರಿಕೆಗಳಲ್ಲಿ ಜೈ ಶ್ರೀ ರಾಮ, ಕ್ರಿಕೆಟ್‌ ಆಟಗಾರರ ಹೆಸರು ಬರೆದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣ ; ಇಬ್ಬರು ಪ್ರಾಧ್ಯಾಪಕರು ಅಮಾನತು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement