ಲೋಕಸಭೆ ಚುನಾವಣೆ : ಬಿಹಾರದಲ್ಲಿ ನಿತೀಶ ಲೆಕ್ಕಾಚಾರ ಫಲ ನೀಡುವುದೇ..? ; ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಏನು ಹೇಳುತ್ತದೆ..?

ಹಲವು ವರ್ಷಗಳಿಂದ ಅತ್ಯಂತ ಅಸ್ಥಿರವಾಗಿರುವ ಬಿಹಾರ ರಾಜಕೀಯವು ಹಲವಾರು ಸಮ್ಮಿಶ್ರ ಸರ್ಕಾರಗಳ ರಚನೆ ಮತ್ತು ಸಾಕಷ್ಟು ತಿರುವುಗಳಿಗೆ ಸಾಕ್ಷಿಯಾಗಿದೆ. ಆದಾಗ್ಯೂ, ರಾಜ್ಯದಲ್ಲಿನ ರಾಜಕೀಯ ಸನ್ನಿವೇಶದಲ್ಲಿನ ಕ್ರಿಯಾತ್ಮಕ ಬದಲಾವಣೆಗಳು 2024 ರ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದೇ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಮಾಡಿದೆ.
ಶನಿವಾರ (ಅಕ್ಟೋಬರ್ 7) ನಡೆಸಿದ ಇತ್ತೀಚಿನ ಇಂಡಿಯಾ ಟಿವಿ-ಸಿಎನ್‌ಎಕ್ಸ್ ಅಭಿಪ್ರಾಯ ಸಂಗ್ರಹದ ಪ್ರಕಾರ, ಬಿಜೆಪಿ ಬಿಹಾರದ 40 ಲೋಕಸಭಾ ಸ್ಥಾನಗಳಲ್ಲಿ ಅರ್ಧದಷ್ಟು ಅಂದರೆ 20 ಸ್ಥಾನಗಳನ್ನು ಪಡೆಯುತ್ತದೆ ಎಂದು ಅಂದಾಜಿಸಿದೆ. ಚಿರಾಗ್ ಪಾಸ್ವಾನ್ ನೇತೃತ್ವದ ಅದರ ಮಿತ್ರ ಪಕ್ಷ ಎಲ್‌ಜೆಪಿ (ರಾಮ್ ವಿಲಾಸ್) 3 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಆರ್‌ಎಲ್‌ಜೆಪಿ 1 ಸ್ಥಾನ ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ. ಬಿಹಾರದಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಒಟ್ಟು 40 ಸ್ಥಾನಗಳಲ್ಲಿ ಎನ್‌ಡಿಎ 24 ಸ್ಥಾನಗಳನ್ನು ಪಡೆಯಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.
ಆರ್‌ಜೆಡಿ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ 2 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ನಿತೀಶಕುಮಾರ ಅವರ ಜೆಡಿಯು 7 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದೆ, ಅದು ಹಿಂದಿನ ಚುನಾವಣೆಗೆ ಹೋಲಿಸಿದರೆ 9 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಯು 16 ಸ್ಥಾನಗಳನ್ನು ಗೆದ್ದಿದೆ. ಹೀಗಾಗಿ ವಿಪಕ್ಷಗಳ ಇಂಡಿಯಾ ಮೈತ್ರಿಕೂಟ 16 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

ಪ್ರಮುಖ ಸುದ್ದಿ :-   ನರೇಂದ್ರ ದಾಭೋಲ್ಕರ್‌ ಹತ್ಯೆ ಪ್ರಕರಣ : ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಖುಲಾಸೆ

ಮತ ಹಂಚಿಕೆಯ ಅಂದಾಜು..
ಇಂಡಿಯಾ ಟಿವಿ-ಸಿಎನ್‌ಎಕ್ಸ್ ನ ಅಭಿಪ್ರಾಯ ಸಂಗ್ರಹದ ಪ್ರಕಾರ, ಬಿಜೆಪಿ ಶೇಕಡಾ 35 ರಷ್ಟು ಮತಗಳನ್ನು ಪಡೆಯುತ್ತದೆ ಮತ್ತು ಅದರ ಮಿತ್ರ ಪಕ್ಷ ಎಲ್‌ಜೆಪಿ (ರಾಮ್ ವಿಲಾಸ್) ಶೇಕಡಾ 7 ರಷ್ಟು ಮತಗಳನ್ನು ಪಡೆಯುತ್ತದೆ. ವಿಪಕ್ಷಗಳ ಇಂಡಿಯಾ ಮೈತ್ರಿಕೂಟದಲ್ಲಿ ಆರ್‌ಜೆಡಿ 19 ಶೇಕಡಾ ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಜೆಡಿಯು 17 % ಮತಗಳನ್ನು ಪಡೆಯುವ ನಿರೀಕ್ಷೆಯಿದೆ ಹಾಗೂ ಕಾಂಗ್ರೆಸ್‌ ಶೇ. 8ರಷ್ಟು ಮತಗಳನ್ನು ಪಡೆಯಲಿದೆ. ಇತರರು ಶೇ 14ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಿದೆ.
ಬಿಹಾರ ಸರ್ಕಾರವು ಇತ್ತೀಚೆಗೆ ರಾಜ್ಯದಲ್ಲಿ ಜಾತಿ ಗಣತಿಯ ದತ್ತಾಂಶವನ್ನು ಬಹಿರಂಗಪಡಿಸಿದೆ, ಇದು ಆಡಳಿತಾರೂಢ ಜೆಡಿಯು-ಆರ್‌ಜೆಡಿ ಸರ್ಕಾರದ ಲಾಭದ ಬಗ್ಗೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಆದಾಗ್ಯೂ, ಅಭಿಪ್ರಾಯ ಸಂಗ್ರಹದ ಪ್ರಕಾರ, ಬಹುತೇಕ ದಲಿತ ಸಮುದಾಯದ ಮತಗಳು ಎನ್‌ಡಿಎ ಹೋಗುವ ಸಾಧ್ಯತೆಯಿದೆ. ದಲಿತರ ಪಾಸ್ವಾನ್ ಸಮುದಾಯದ ಶೇಕಡ 75 ರಷ್ಟು ಮತಗಳು ಎನ್‌ಡಿಎಗೆ ಮತ್ತು 12 ಪ್ರತಿಶತದಷ್ಟು ಮತಗಳು ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಹೋಗಬಹುದು ಎಂದು ಅಂದಾಜಿಲಸಾಗಿದೆ. 65 ರಷ್ಟು ದಲಿತ ಮುಸಾಹರ್ ಎನ್‌ಡಿಎಗೆ ಮತ ಹಾಕುವ ಸಾಧ್ಯತೆಯಿದೆ ಮತ್ತು ಐಎನ್‌ಡಿಐಎ ಬ್ಲಾಕ್ ಸಮುದಾಯದ ಶೇಕಡಾ 19 ರಷ್ಟು ಮತಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಯನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ ನಿವೃತ್ತ ನ್ಯಾಯಮೂರ್ತಿಗಳು

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement