ಬೆಂಗಳೂರಿನಲ್ಲಿ ಅಡಗಿಕೊಂಡಿದ್ದ 24 ಕೊಲೆ ಪ್ರಕರಣಗಳಲ್ಲಿ ಬೇಕಾಗಿದ್ದ ಬಿಹಾರದ ತಂದೆ-ಮಗನ ಬಂಧನ….

ಪಾಟ್ನಾ: ಸುಮಾರು 40ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಬಿಹಾರದ ಕುಖ್ಯಾತ ಅಪರಾಧಿಗಳಾದ ಮನೋಜ ಸಿಂಗ್ ಮತ್ತು ಆತನ ಪುತ್ರ ಮಾಣಿಕ್ ಸಿಂಗ್‌ನನ್ನು ಬಿಹಾರ ವಿಶೇಷ ಕಾರ್ಯಪಡೆ (STF) ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಂಧಿಸಿದೆ. ಈ ಕಾರ್ಯಾಚರಣೆಗೆ ಬೆಂಗಳೂರಿನ ರಾಜ್ಯ ಗುಪ್ತಚರ ವಿಭಾಗದ ಪೊಲೀಸರು ಸಾಥ್ ನೀಡಿದ್ದಾರೆ. ಬಂಧಿತರಿಂದ ಎಂಟು ಡಾಂಗಲ್‌ಗಳು, ಒಂಬತ್ತು … Continued

ದೆಹಲಿಯಲ್ಲಿ ಎನ್‌ಕೌಂಟರ್ : ‘ಸಿಗ್ಮಾ ಗ್ಯಾಂಗ್’ ನ ನಾಲ್ವರು ʼಮೋಸ್ಟ್ ವಾಂಟೆಡ್ʼ ಗ್ಯಾಂಗ್‌ಸ್ಟರ್‌ ಗಳು ಹತ

ನವದೆಹಲಿ: ದೆಹಲಿಯಲ್ಲಿ ಬಿಹಾರ ಪೊಲೀಸರ ಸಹಯೋಗದೊಂದಿಗೆ ನಡೆದ ಪ್ರಮುಖ ಎನ್‌ಕೌಂಟರ್‌ನಲ್ಲಿ ನಾಲ್ವರು ಮೋಸ್ಟ್‌ ವಾಂಟೆಡ್‌ ಗ್ಯಾಂಗ್‌ಸ್ಟರ್‌ಗಳು ಹತರಾಗಿದ್ದಾರೆ. ಈ ಘಟನೆ ಗುರುವಾರ ಮುಂಜಾನೆ ದೆಹಲಿಯ ರೋಹಿಣಿಯಲ್ಲಿ ನಡೆದಿದೆ. ದೆಹಲಿ ಪೊಲೀಸರ ಪ್ರಕಾರ, ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬಹದ್ದೂರ್ ಶಾ ರಸ್ತೆಯಲ್ಲಿ ಗುಂಡಿನ ಚಕಮಕಿ ಆರಂಭವಾಯಿತು. ಹತರಾದವರನ್ನು ರಂಜನ್ ಪಾಠಕ್ (25), ಬಿಮಲೇಶ್ … Continued

ವೀಡಿಯೊ..| ಆರೋಪಿಗಳನ್ನು ಕೋರ್ಟ್‌ಗೆ ಕರೆದೊಯ್ಯುವಾಗ ಪೆಟ್ರೋಲ್‌ ಖಾಲಿ : ಆರೋಪಿಗಳಿಂದ ಅರ್ಧ ಕಿಮೀ ವಾಹನ ತಳ್ಳಿಸಿದ ಪೊಲೀಸರು…!

ಒಂದು ವಿಲಕ್ಷಣ ಘಟನೆಯಲ್ಲಿ, ವಾಹನದಲ್ಲಿ ಇಂಧನ ಖಾಲಿಯಾದ ನಂತರ ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ನಾಲ್ವರು ಆರೋಪಿಗಳು ಪೊಲೀಸ್ ವ್ಯಾನ್ ಅನ್ನು ನ್ಯಾಯಾಲಯದ ವರೆಗೂ ತಳ್ಳಿದ್ದಾರೆ ಎಂದು ವರದಿಯಾಗಿದೆ. ಕೈದಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ವಾಹನದಲ್ಲಿ ಇಂಧನ ಖಾಲಿಯಾಗಿದೆ ಎಂದು ವರದಿಗಳು ತಿಳಿಸಿವೆ. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದ್ದು, ವೀಡಿಯೊದಲ್ಲಿ, ನಾಲ್ವರು ಆರೋಪಿಗಳು  … Continued

ಕ್ಯಾಮರಾದಲ್ಲಿ ಸೆರೆ : ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನು ಕಾಲುವೆಗೆ ಎಸೆದ ಪೊಲೀಸರು…!

ಪಾಟ್ನಾ: ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಅಪಘಾತಕ್ಕೀಡಾದ ವ್ಯಕ್ತಿಯ ಶವವನ್ನು ಪೊಲೀಸರು ಕಾಲುವೆಗೆ ಎಸೆಯುತ್ತಿರುವ ದೃಶ್ಯ ಸೆರೆಯಾಗಿದೆ. ದಾರಿಹೋಕರೊಬ್ಬರು ತೆಗೆದ ವಿಡಿಯೋ ತುಣುಕಿನಲ್ಲಿ ಪೊಲೀಸರು ತಮ್ಮ ಲಾಠಿಗಳಿಂದ ಶವವನ್ನು ಕಾಲುವೆಗೆ ತಳ್ಳುತ್ತಿರುವುದನ್ನು ತೋರಿಸುತ್ತದೆ. ವೀಡಿಯೊ ವ್ಯಾಪಕವಾಗಿ ಪ್ರಸಾರವಾದ ನಂತರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಲೋಪವನ್ನು ಒಪ್ಪಿಕೊಂಡ ಸ್ಥಳೀಯ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು, ರಕ್ಷಿಸಲು ಸಾಧ್ಯವಾಗದ ದೇಹದ … Continued

ದಲೈಲಾಮಾ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದ ಶಂಕೆ ಮೇಲೆ ಚೀನಾ ಮಹಿಳೆ ಬಂಧನ

ಪಾಟ್ನಾ: ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದ ಶಂಕಿತ ಚೀನಾ ಮಹಿಳೆಯನ್ನು ಬಿಹಾರ ಪೊಲೀಸರು ಗುರುವಾರ ಬಂಧಿಸಿದ್ದಾರೆ. ದಲೈ ಲಾಮಾ ಅವರ ಭೇಟಿಯ ನಡುವೆ ಗುರುವಾರ ಬೆಳಿಗ್ಗೆ ಬಿಹಾರದ ಬೋಧಗಯಾದಲ್ಲಿ ಭದ್ರತಾ ಎಚ್ಚರಿಕೆಯನ್ನು ನೀಡಲಾಗಿತ್ತು, ಪೊಲೀಸರು ಚೀನಾ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದರು. ದಲೈ ಲಾಮಾ ಆಧ್ಯಾತ್ಮಿಕ ಪ್ರವಚನಗಳನ್ನು ನೀಡುವ ಕಾಲಚಕ್ರ … Continued