ಜಾತಿ ಆಧಾರಿತ ಮೀಸಲಾತಿ ಶೇ.65ಕ್ಕೆ ಹೆಚ್ಚಿಸುವ ಮಸೂದೆಗೆ ಬಿಹಾರ ವಿಧಾನಸಭೆ ಅಂಗೀಕಾರ

ಪಾಟ್ನಾ : ಬಿಹಾರದಲ್ಲಿ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಹೆಚ್ಚಿಸುವ ಮೀಸಲಾತಿ ತಿದ್ದುಪಡಿ ಮಸೂದೆಯನ್ನು ಗುರುವಾರ (ನವೆಂಬರ್‌ 9) ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
ರಾಜ್ಯದಲ್ಲಿ ಇತರೆ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಕೋಟಾಗಳನ್ನು ಹೆಚ್ಚಿಸುವ ಪ್ರಸ್ತಾವನೆಗೆ ಬಿಹಾರ ಸಚಿವ ಸಂಪುಟ ಮಂಗಳವಾರ ಒಪ್ಪಿಗೆ ನೀಡಿದೆ. ನಿತೀಶಕುಮಾರ ಅವರ ಅನುಪಸ್ಥಿತಿಯಲ್ಲಿ ರಾಜ್ಯ ವಿಧಾನಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಲಾಯಿತು.
ಮುಖ್ಯಮಂತ್ರಿ ನಿತೀಶಕುಮಾರ ಅವರು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು, ಹಾಗೆಯೇ ಇತರ ಹಿಂದುಳಿದ ವರ್ಗಗಳು ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ರಾಜ್ಯದಲ್ಲಿ ಶೇ.65 ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಿದ ನಂತರ, ಸುಪ್ರೀಂ ಕೋರ್ಟ್ ನಿಗದಿಪಡಿಸಿದ 50 ರಷ್ಟು ಸೀಲಿಂಗ್‌ ಮಿತಿಯನ್ನು ಮೀರಿ ಅಂಗೀಕರಿಸಲಾಗಿದೆ.
ಆರ್ಥಿಕವಾಗಿ ದುರ್ಬಲ ವರ್ಗಗಳ ಕೋಟಾ (EWS) ಗಾಗಿ ಕೇಂದ್ರದ 10 ಪ್ರತಿಶತ ಕೋಟಾ ಸೇರಿ, ಪ್ರಸ್ತಾವಿತ ಮೀಸಲಾತಿಯು 75 ಪ್ರತಿಶತಕ್ಕೆ ಏರುತ್ತದೆ.

ಬಿಹಾರದಲ್ಲಿ ಪ್ರಸ್ತಾವಿತ ಮೀಸಲಾತಿಯ ವಿವರ ಇಲ್ಲಿದೆ:
ಪರಿಶಿಷ್ಟ ಜಾತಿಗಳು (SC): 20%
ಪರಿಶಿಷ್ಟ ಪಂಗಡಗಳು (ST): 2%
ಇತರೆ ಹಿಂದುಳಿದ ವರ್ಗಗಳು (OBC) ಮತ್ತು ಅತ್ಯಂತ ಹಿಂದುಳಿದ ವರ್ಗಗಳು (EBC): 43%
ಪ್ರಸ್ತುತ, ರಾಜ್ಯ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಬಿಹಾರದಲ್ಲಿ EBC ಗಳಿಗೆ 18%, OBC ಗಳಿಗೆ 12%, SC ಗಳಿಗೆ 16%, ST ಗಳಿಗೆ 1% ಮತ್ತು ಹಿಂದುಳಿದ ವರ್ಗಗಳ ಮಹಿಳೆಯರಿಗೆ 3% ಮೀಸಲಾತಿ ಇದೆ.
ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ, ಮಸೂದೆಯ ಮೀಸಲಾತಿ ವಿಭಜನೆಯಲ್ಲಿ ಇಡಬ್ಲ್ಯೂಎಸ್ ಅನ್ನು ಉಲ್ಲೇಖಿಸದಿರುವ ವಿಷಯವನ್ನು ಪ್ರಸ್ತಾಪಿಸಿತು.
ಜಾತಿ ಸಮೀಕ್ಷೆಯಲ್ಲಿ ಮುಸ್ಲಿಮರು ಮತ್ತು ಯಾದವರ ಜನಸಂಖ್ಯೆಯನ್ನು ಬಿಹಾರ ಸರ್ಕಾರ ಹೆಚ್ಚಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ ಎರಡು ದಿನಗಳ ನಂತರ ನಿತೀಶಕುಮಾರ ಜಾತಿ ಆಧಾರಿತ ಕೋಟಾ ಹೆಚ್ಚಳಕ್ಕೆ ಪಿಚ್ ನೀಡಿದ್ದಾರೆ.

ಪ್ರಮುಖ ಸುದ್ದಿ :-   ನೂಪುರ್ ಶರ್ಮಾ ಸೇರಿದಂತೆ ಹಲವು ಹಿಂದೂ ನಾಯಕರ ಹತ್ಯೆಗೆ ಸಂಚು: ಮೌಲ್ವಿ ಬಂಧನ

ತಕ್ಷಣ ಅದನ್ನು ಜಾರಿಗೆ ತರಲು ಇಚ್ಛಿಸುತ್ತೇನೆ: ನಿತೀಶಕುಮಾರ
ಮುಖ್ಯಮಂತ್ರಿಗಳು ಕೂಡಲೇ ವಿಧೇಯಕವನ್ನು ಜಾರಿಗೆ ತರಲು ಬಯಸುವುದಾಗಿ ಹೇಳಿದರು. ಪ್ರಸ್ತುತ ಮೀಸಲಾತಿ ಕೋಟಾದಲ್ಲಿ ಬದಲಾವಣೆಯನ್ನು ಎಲ್ಲರ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಲಾಗಿದೆ. ಶೇಕಡ ಐವತ್ತು ಮೀಸಲಾತಿ ಮೊದಲಿನಿಂದಲೂ ಇತ್ತು. ಕೇಂದ್ರ EWS ಕೋಟಾವನ್ನು ನಿಗದಿಪಡಿಸಿದೆ ಮತ್ತು ನಾವು ಅದನ್ನು ಜಾರಿಗೊಳಿಸಿದ್ದೇವೆ. ಇದನ್ನು ತಕ್ಷಣವೇ ಜಾರಿಗೆ ತರಲು ಬಯಸುತ್ತೇವೆ ಎಂದು ನಿತೀಶಕುಮಾರ ಹೇಳಿದರು.
ಅಗತ್ಯಬಿದ್ದರೆ ಜಾತಿವಾರು ಜನಗಣತಿ ನಡೆಸುವ ಮೂಲಕ ಕೇಂದ್ರವೂ ಮೀಸಲಾತಿ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement