ಶಿಕ್ಷಕರನ್ನು ಅಪಹರಿಸಿ ಗನ್ ಪಾಯಿಂಟ್‌ನಲ್ಲಿ ಅಪಹರಣಕಾರನ ಮಗಳ ಜೊತೆ ಮದುವೆ

ಪಾಟ್ನಾ: ಬಿಹಾರದಲ್ಲಿ ಹೊಸದಾಗಿ ನೇಮಕಗೊಂಡ ಸರ್ಕಾರಿ ಶಿಕ್ಷಕರೊಬ್ಬರನ್ನು ಅವರ ಶಾಲೆಯಿಂದ ಬುಧವಾರ ಅಪಹರಿಸಲಾಗಿದೆ ಮತ್ತು ಬಂದೂಕು ತೋರಿಸಿ ಯುವತಿಯೊಬ್ಬರ ಜೊತೆ ಬಲವಂತವಾಗಿ ಮದುವೆ ಮಾಡಲಾಗಿದೆ ಎಂದು ಆರೋಪಿಸಿ ಶಿಕ್ಷಕನ ಪತ್ತೆ ಹಚ್ಚಿದ ನಂತರ ಪೊಲೀಸರು ಗುರುವಾರ ತಿಳಿಸಿದ್ದಾರೆ. ಯುವತಿ ತಂದೆ ವಿರುದ್ಧ ಪ್ರಕರಣ ದಾಖಲಾಗಿದೆ.
ಇತ್ತೀಚೆಗಷ್ಟೇ ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಶಿಕ್ಷಕರಾಗಿದ್ದ ಗೌತಮಕುಮಾರ ಎಂಬವರನ್ನು ಬುಧವಾರ ಮೂರ್ನಾಲ್ಕು ಮಂದಿ ಆತನ ಶಾಲೆಗೆ ಆಗಮಿಸಿ ಬಲವಂತವಾಗಿ ಹೊತ್ತೊಯ್ದು ಬಂದೂಕು ತೋರಿಸಿ ಅಪಹರಣಕಾರರೊಬ್ಬರ ಮಗಳನ್ನು ಮದುವೆ ಮಾಡಿಸಿದ್ದಾರೆ.
ಬುಧವಾರ ರಾತ್ರಿ ಮಹುವಾ-ತಾಜ್‌ಪುರ ರಸ್ತೆಯನ್ನು ತಡೆದು ಕುಮಾರ ಅವರ ಕುಟುಂಬ ಪ್ರತಿಭಟಿಸಿದ್ದರಿಂದ, ಪಟೇಪುರ್ ಪೊಲೀಸರು ಶಿಕ್ಷಕನನ್ನು ಹುಡುಕಲು ಪ್ರಾರಂಭಿಸಿದರು ಮತ್ತು ಗುರುವಾರ ಅವರನ್ನು ಪತ್ತೆಹಚ್ಚಿದರು.

ರೇಪುರ ಗ್ರಾಮದ ರಾಕೇಶ ರಾಯ್‌ ಎಂಬುವರ ಮಗಳನ್ನು ಬಲವಂತವಾಗಿ ಮದುವೆ ಮಾಡಿರುವುದಾಗಿ ಮಹೇಯ ಮಾಲ್ಪುರ್ ಗ್ರಾಮದ ನಿವಾಸಿ ಗೌತಮಕುಮಾರ ಪೊಲೀಸರಿಗೆ ತಿಳಿಸಿದ್ದಾರೆ. ಈ ವಿವಾಹವು ತನಗೆ ಒಪ್ಪಿಗೆ ಇಲ್ಲ ಎಂದು ಗೌತಮಕುಮಾರ ಹೇಳಿದ್ದಾರೆ ಮತ್ತು 10 ವರ್ಷದ ಹಿಂದೆ ನಡೆದ ನವಡಾ ಸೇನಾಧಿಕಾರಿಗೆ ಲಖಿಸರಾಯ್ ಹುಡುಗಿಯೊಂದಿಗೆ ನಡೆಸಿದ ‘ಬಲವಂತದ ಮದುವೆ’ಯನ್ನು ರದ್ದುಗೊಳಿಸಿದ ಇತ್ತೀಚಿನ ಪಾಟ್ನಾ ಹೈಕೋರ್ಟ್ ತೀರ್ಪನ್ನು ಅವರು ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ಶಿಕ್ಷಕರು ನ್ಯಾಯಾಲಯದ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸುತ್ತಾರೆ. ನಾವು ಹುಡುಗಿಯ ಸಂಬಂಧಿಕರೊಂದಿಗೆ ಮಾತನಾಡುತ್ತಿದ್ದೇವೆ ಎಂದು ಪತೇಪುರ ಪೊಲೀಸ್ ಠಾಣೆಯ ಹೆಚ್ಚುವರಿ ಪೊಲೀಸ್ ಠಾಣೆ ಪ್ರಭಾರಿ ಹಸನ್ ಸರ್ದಾರ್ ಹೇಳಿದ್ದಾರೆ.
ಗೌತಮಕುಮಾರ ಈ ಘಟನೆಯು ಬಿಹಾರದ ‘ಪಕಡ್ವಾ ವಿವಾಹ’ ಅಥವಾ ವರನ ಅಪಹರಿಸಿ ಮದುವೆ ಮಾಡುವ ಇತಿಹಾಸಕ್ಕೆ ಇತ್ತೀಚಿನ ಸೇರ್ಪಡೆಯಾಗಿದೆ, ಅವಿವಾಹಿತ ಪುರುಷರಿಗೆ ಬಂದೂಕು ತೋರಿಸಿ ಬಲವಂತವಾಗಿ ಮದುವೆ ಮಾಡುವ ಘಟನೆ ಬಿಹಾರದಲ್ಲಿ ಆಗಾಗ ಸಂಭವಿಸುತ್ತದೆ.

ಪ್ರಮುಖ ಸುದ್ದಿ :-   "ಚಾಣಕ್ಯ ಕೂಡ...: ತನ್ನ ಲುಕ್‌ ಬಗ್ಗೆ ಟ್ರೋಲ್‌ ಮಾಡಿದವರ ಬಾಯ್ಮುಚ್ಚಿಸಿದ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ

ರಾಯ್‌ ಕುಟುಂಬದ ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ ಗೌತಮಕುಮಾರ ಅವರು ದೈಹಿಕ ಹಿಂಸೆಗೆ ಒಳಗಾಗಿದ್ದರು. ಗೌತಮಕುಮಾರ ಅವರನ್ನು ಬಲವಂತವಾಗಿ ಕರೆದೊಯ್ದು ಅವರ ಮಗಳಾದ ಚಾಂದಿನಿಯೊಂದಿಗೆ ವಿವಾಹ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಅಪಹರಣಕಾರರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರದಲ್ಲಿ ‘ಪಕಡ್ವಾ ವಿವಾಹ’ ಆಗಾಗ ನಡೆಯುತ್ತದೆ. ಕಳೆದ ವರ್ಷ, ಅನಾರೋಗ್ಯಕೀಡಾದ ಜಾನುವಾರನ್ನು ಪರೀಕ್ಷಿಸಲು ಕರೆದ ಪಶುವೈದ್ಯರನ್ನು ಮೂವರು ಅಪಹರಿಸಿ ಬೇಗುಸರಾಯ್‌ನಲ್ಲಿ ಬಲವಂತವಾಗಿ ಮದುವೆ ಮಾಡಿದ್ದರು. ಕೆಲವು ವರ್ಷಗಳ ಹಿಂದೆ, ಬಿಹಾರದಲ್ಲಿ ಇಂಜಿನಿಯರ್‌ ಅವರಿಗೆ ಸಂಬಂಧಿಸಿದ ಇಂತಹುದೇ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತ್ತು. ಬೊಕಾರೊ ಸ್ಟೀಲ್ ಪ್ಲಾಂಟ್‌ನಲ್ಲಿ ಜೂನಿಯರ್ ಮ್ಯಾನೇಜರ್ ಆಗಿದ್ದ 29 ವರ್ಷದ ವಿನೋದಕುಮಾರ ಎಂಬಾತನನ್ನು ಥಳಿಸಿ, ಪಾಟ್ನಾದ ಪಂಡರಕ್ ಪ್ರದೇಶದಲ್ಲಿ ಮಹಿಳೆಯೊಬ್ಬಳನ್ನು ಬಲವಂತವಾಗಿ ವಿವಾಹವಾಗುವಂತೆ ಮಾಡಲಾಗಿತ್ತು.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ಮುಸ್ಲಿಂ ಮತಗಳು ಬೇಕು, ಆದರೆ ಟಿಕೆಟ್‌ ಕೊಡಲ್ಲ : ಕಾಂಗ್ರೆಸ್‌ ಬಗ್ಗೆ ನಸೀಂ ಖಾನ್ ತೀವ್ರ ಅಸಮಾಧಾನ, ಹುದ್ದೆಗೆ ರಾಜೀನಾಮೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement