“ಚಾಣಕ್ಯ ಕೂಡ…: ತನ್ನ ಲುಕ್‌ ಬಗ್ಗೆ ಟ್ರೋಲ್‌ ಮಾಡಿದವರ ಬಾಯ್ಮುಚ್ಚಿಸಿದ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ

ನವದೆಹಲಿ: ಈ ವರ್ಷದ ಉತ್ತರ ಪ್ರದೇಶದ 10ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ 98.5% ಅಂಕದೊಂದಿಗೆ ಅಗ್ರಸ್ಥಾನ ಪಡೆದ ಪ್ರಾಚಿ ನಿಗಮ್ ಎಂಬ ವಿದ್ಯಾರ್ಥಿನಿ, ತನ್ನ ಮುಖದ ಕೂದಲಿಗೆ ಟ್ರೋಲ್‌ಗೆ ಗುರಿಯಾದಳಿ. ಈಗ ಅವಳು ಆನ್‌ಲೈನ್‌ನಲ್ಲಿ ತನಗೆ ಅವಹೇಳನ ಮಾಡಿದವರ ವಿರುದ್ಧ ಮಾತನಾಡಿದ್ದಾಳೆ. ತನಗೆ ತಾನು ನೋಡಲು ಹೇಗೆ ಕಾಣುತ್ತೇನೆ ಎಂಬುದಕ್ಕಿಂತ ತನ್ನ ಶೈಕ್ಷಣಿಕ ಸಾಧನೆಗಳು ಮುಖ್ಯವೆಂದು ಅವಳು ಹೇಳಿದ್ದಾಳೆ.
“ಜನರು ನನ್ನನ್ನು ಟ್ರೋಲ್ ಮಾಡುತ್ತಿರುವುದನ್ನು ನಾನು ನೋಡಿದಾಗ, ಅದು ನನಗೆ ಹೆಚ್ಚು ಕಸಿವಿಸಿಯಾಗಲಿಲ್ಲ. ನನಗೆ ನನ್ನ ಸಾಧನೆಯ ಗುರುತುಗಳು ಮುಖ್ಯ, ನನ್ನ ಮುಖದ ಮೇಲಿನ ಕೂದಲು ಅಲ್ಲ,” ಎಂದು ಪ್ರಾಚಿ ಹೇಳಿದ್ದಾಳೆ. ನಾನು ಹೇಗೆ ಕಾಣುತ್ತಿದ್ದೇನೆಂಬ ಬಗ್ಗೆ ಮಾಡಿದ ನಕಾರಾತ್ಮಕ ಕಾಮೆಂಟ್‌ಗಳಿಂದ ನಾನು ಪ್ರಭಾವಿತನಾಗಿಲ್ಲ ಎಂದು ಟಾಪರ್‌ ವಿದ್ಯಾರ್ಥಿನಿ ಹೇಳಿದ್ದಾಳೆ.

ತನ್ನ ಲುಕ್‌ಗೆ ಆನ್‌ಲೈನ್ ಟ್ರೋಲಿಂಗ್ ಮಾಡಿ ಟೀಕಿಸುವ ಸಮಯದಲ್ಲಿ ತನ್ನ ಬೆಂಬಲಕ್ಕೆ ನಿಂತವರಿಗೆ ಪ್ರಾಚಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾಳೆ. “ಉತ್ತರ ಪ್ರದೇಶ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಎಂದು ನನ್ನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ, ಕೆಲವರು ನನ್ನನ್ನು ಟ್ರೋಲ್ ಮಾಡಿದರು. ಅದೇ ಸಮಯದಲ್ಲಿ ನನ್ನನ್ನು ಬೆಂಬಲಿಸುವವರೂ ಇದ್ದರು. ನಾನು ನನ್ನ ಬೆಂಬಲಿಸಿದವರೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಮುಖದ ಕೂದಲಿನ ಬಗ್ಗೆ ವಿಚಿತ್ರವೆನಿಸುವವರು ಟ್ರೋಲ್ ಮಾಡುವುದನ್ನು ಮುಂದುವರಿಸಬಹುದು, ಅದು ನನ್ನಲ್ಲಿ ಯಾವ ವ್ಯತ್ಯಾಸವನ್ನುಂಟು ಮಾಡುವುದಿಲ್ಲ” ಎಂದು ಅವಳು ಹೇಳಿದ್ದಾಳೆ.

ಪ್ರಮುಖ ಸುದ್ದಿ :-   ಇಂಡಿಯಾ ಮೈತ್ರಿಕೂಟ ಅಧಿಕಾರ ಬಂದ್ರೆ ಅಯೋಧ್ಯೆ ರಾಮಮಂದಿರ ಶುದ್ಧೀಕರಿಸ್ತೇವೆ : ವಿವಾದ ಸೃಷ್ಟಿಸಿದ ಕಾಂಗ್ರೆಸ್‌ ನಾಯಕನ ಹೇಳಿಕೆ

NDTV ವರದಿಯ ಪ್ರಕಾರ, “ಚಾಣಕ್ಯ ಕೂಡ ಅವನ ಲುಕ್‌ ಕಾರಣಕ್ಕಾಗಿ ಟ್ರೋಲ್ ಮಾಡಲ್ಪಟ್ಟಿದ್ದಾನೆ, ಆದರೆ ಅದು ಅವನ ಮೇಲೆ ಪರಿಣಾಮ ಬೀರಲಿಲ್ಲ” ಎಂದು ಅವಳು ಹೇಳಿದ್ದಾಳೆ.ಉತ್ತರ ಪ್ರದೇಶದ ಬೋರ್ಡ್ ಫಲಿತಾಂಶ ಪ್ರಕಟವಾದ ನಂತರ ಹಂಚಿಕೊಂಡ ಪ್ರಾಚಿ ಅವರ ಫೋಟೋ ಗಮನ ಸೆಳೆಯಿತು. ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ಆಕೆಯ ಮುಖದ ಕೂದಲನ್ನು ಟೀಕಿಸಿದರೆ, ಇತರರು ವಿದ್ಯಾರ್ಥಿನಿಗೆ ಬೆಂಬಲ ವ್ಯಕ್ತಪಡಿಸಿದರು. ಮತ್ತು ಬೋರ್ಡ್ ಪರೀಕ್ಷೆಯಲ್ಲಿ ಆಕೆಯ ಸಾಧನೆಗೆ ಅಭಿನಂದಿಸಿದರು.
ತೀವ್ರ ಟ್ರೋಲಿಂಗ್ ನಂತರ, ಆನ್‌ಲೈನ್ ಸಮುದಾಯವು ಪ್ರಾಚಿಗೆ ಬೆಂಬಲವಾಗಿ ನಿಂತಿತು, ನಕಾರಾತ್ಮಕ ಕಾಮೆಂಟ್‌ಗಳನ್ನು ಖಂಡಿಸಿತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement