
ಗೋಪಾಲಗಂಜ್ : ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡುವ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ನ ಇತ್ತೀಚಿನ ಆದೇಶದ ವಿರುದ್ಧ ಕೆಲವು ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ವೇಳೆ ಪ್ರತಿಭಟನಾಕಾರರು ರಸ್ತೆಯಲ್ಲಿ ಹಲವಾರು ಟೈರ್‌ಗಳನ್ನು ಸುಟ್ಟುಹಾಕಿದ ಸ್ಥಳವನ್ನು ದಾಟುವಾಗ ಮಕ್ಕಳಿದ್ದ ಶಾಲಾ ಬಸ್ ಮಾರಣಾಂತಿಕ ಅಪಘಾತದಿಂದ ಪಾರಾದ ವಿದ್ಯಮಾನ ಬುಧವಾರ ಬಿಹಾರದ ಗೋಪಾಲ್‌ಗಂಜ್‌ನಲ್ಲಿ ನಡೆದಿದೆ.
ದೃಶ್ಯಗಳ ಪ್ರಕಾರ, ಮೊದಲಿಗೆ ಕೆಲ ಪ್ರತಿಭಟನಾಕಾರರು ಬಸ್ ನಿಲ್ಲಿಸಿದ್ದು ಕಂಡುಬಂತು. ಆದರೆ ಕೆಲವರು ಬಸ್ಸಿನ ಕೆಳಗೆ ಟೈರ್ ಹೊತ್ತಿ ಉರಿಯುತ್ತಿರುವುದನ್ನು ಕಂಡ ಕೂಡಲೇ ಬಸ್ಸು ಸಾಗಲು ದಾರಿ ಮಾಡಿಕೊಡಲು ರಸ್ತೆಯನ್ನು ತೆರವುಗೊಳಿಸುತ್ತಿರುವುದು ಕಂಡು ಬಂತು. ಜನಸಮೂಹದ ಭಾಗವಾಗಿರುವ ವ್ಯಕ್ತಿಯೊಬ್ಬರು ಬಸ್ಸಿನ ಕೆಳಗೆ ಸುಡುವ ಟೈರ್ ಅನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ.ಭಾರತ್ ಬಂದ್ ಕರೆಯಿಂದಾಗಿ ನಗರದ ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಪಡೆ ನಿಯೋಜಿಸಲಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿತ್ತು ಎಂದು ಗೋಪಾಲಗಂಜ್ ಪೊಲೀಸ್ ವರಿಷ್ಠಾಧಿಕಾರಿ ಸ್ವರ್ಣ ಪ್ರಭಾತ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿನ ವಿರುದ್ಧ ಒಂದು ದಿನದ ಭಾರತ್ ಬಂದ್ ಕರೆ ನೀಡಿದ್ದರ ಬೆಂಬಲಲಾರ್ಥ ಪ್ರತಿಭಟನೆ ನಡೆಸುತ್ತಿದ್ದಾಗ ಪಾಟ್ನಾದಲ್ಲಿ ಜನರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದರು.
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತು ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪಿನ ವಿರುದ್ಧ ಕೆಲವು ಸಂಘಟನೆಗಳು ಕರೆ ನೀಡಿದ್ದ ರಾಷ್ಟ್ರವ್ಯಾಪಿ ಬಂದ್ ಬಿಹಾರ ಮತ್ತು ಜಾರ್ಖಂಡ್ ಮತ್ತು ವಿವಿಧ ರಾಜ್ಯಗಳ ಬುಡಕಟ್ಟು ಪ್ರದೇಶಗಳಲ್ಲಿ ಸಾಮಾನ್ಯ ಜೀವನದ ಮೇಲೆ ಸ್ವಲ್ಪ ಪರಿಣಾಮ ಬೀರಿತು.
ರೈಲು ಮತ್ತು ರಸ್ತೆ ತಡೆಗಳನ್ನು ತೆರವುಗೊಳಿಸಲು ಪಾಟ್ನಾ, ದರ್ಭಂಗಾ ಮತ್ತು ಬೇಗುಸರೈ ಸೇರಿದಂತೆ ಬಿಹಾರದ ಹಲವಾರು ಜಿಲ್ಲೆಗಳಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮತ್ತು ಜಲಫಿರಂಗಿಗಳನ್ನು ಬಳಸಿದರೆ, ಜಾರ್ಖಂಡ್ ಮತ್ತು ಒಡಿಶಾದಲ್ಲಿ ಸಾರ್ವಜನಿಕ ಸಾರಿಗೆ ಸೇವೆಗಳು ಭಾಗಶಃ ಪರಿಣಾಮ ಬೀರಿದವು.
ಸುಪ್ರೀಂ ಕೋರ್ಟ್‌ನ ಆದೇಶದ ವಿರುದ್ಧ ದೇಶಾದ್ಯಂತ 21 ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿದ್ದು, ಇದು ಮೀಸಲಾತಿಯ ಮೂಲ ತತ್ವಗಳಿಗೆ ಹಾನಿ ಮಾಡುತ್ತದೆ ಎಂದು ಅವರು ಹೇಳಿದ್ದಾರೆ
ಪ್ರತಿಭಟನಾಕಾರರು ಬಿಹಾರದ ಹಲವು ಜಿಲ್ಲೆಗಳಲ್ಲಿ ರೈಲು ಮತ್ತು ರಸ್ತೆ ತಡೆಗಳನ್ನು ಮಾಡಿದರು ಮತ್ತು ಅವರನ್ನು ಚದುರಿಸಲು ಪೊಲೀಸರು ಲಾಠಿ ಮತ್ತು ಜಲಫಿರಂಗಿಗಳನ್ನು ಬಳಸಿದರು. ದರ್ಬಂಗಾ ಮತ್ತು ಬಕ್ಸರ್ ರೈಲು ಸೇವೆಗಳಲ್ಲಿ ಅಡಚಣೆಗೆ ಸಾಕ್ಷಿಯಾಗಿದ್ದು, ಪಾಟ್ನಾ, ಹಾಜಿಪುರ್, ದರ್ಭಾಂಗಾ, ಜೆಹಾನಾಬಾದ್ ಮತ್ತು ಬೇಗುಸರಾಯ್ ಜಿಲ್ಲೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ