ಪಾಟ್ನಾ: ಯೂಟ್ಯೂಬ್ ವೀಡಿಯೊ ನೆಚ್ಚಿಕೊಂಡ ವೈದ್ಯನೊಬ್ಬ ಪಿತ್ತಕೋಶದಿಂದ ಕಲ್ಲು ತೆಗೆಯಲು ಆಪರೇಷನ್ ಮಾಡಿ 15 ವರ್ಷದ ಬಾಲಕ ಸಾವಿಗೀಡಾಗಿರುವ ಘಟನೆ ಬಿಹಾರದ ಸರನ್ ನಲ್ಲಿ ನಡೆದಿದೆ.
ಬಾಲಕನ ಪರಿಸ್ಥಿತಿ ಹದಗೆಡುತ್ತಿದ್ದಂತೆ, ರಾಜ್ಯ ರಾಜಧಾನಿ ಪಾಟ್ನಾದ ಆಸ್ಪತ್ರೆಗೆ ಆತನನ್ನು ಸಾಗಿಸಲು ‘ವೈದ್ಯರು’ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು. ಮಾರ್ಗಮಧ್ಯೆ ಬಾಲಕ ಮೃತಪಟ್ಟಿದ್ದು, ಆತನೊಂದಿಗೆ ಇದ್ದ ‘ವೈದ್ಯ’ ಮತ್ತು ಇತರರು ಶವವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಬಾಲಕನ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಬಾಲಕ ಕೃಷ್ಣಕುಮಾರ ಹಲವು ಬಾರಿ ವಾಂತಿ ಮಾಡಿಕೊಂಡ ನಂತರ ಆತನನ್ನು ಸರನ್‌ನಲ್ಲಿರುವ ಗಣಪತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. “ನಾವು ಅವನನ್ನು ಅಡ್ಮಿಟ್ ಮಾಡಿದೆವು ಮತ್ತು ಶೀಘ್ರದಲ್ಲೇ ವಾಂತಿ ನಿಂತಿತು. ಆದರೆ ವೈದ್ಯರಾದ ಅಜಿತಕುಮಾರ ಪುರಿ ಅವರು ಬಾಲಕನಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಹೇಳಿದರು. ನಂತರ ಅವರು ಯೂಟ್ಯೂನ್ ನಲ್ಲಿನ ವೀಡಿಯೊ ನೋಡುವ ಮೂಲಕ ಆಪರೇಷನ್ ಮಾಡಿದರು. ನಂತರ ನನ್ನ ಮಗ ಮೃತಪಟ್ಟಿದ್ದಾನೆ ಎಂದು ಚಂದನ್ ಶಾ ಆರೋಪಿಸಿದ್ದಾರೆ.
‘ವೈದ್ಯರಿಗೆ ಸೂಕ್ತ ವಿದ್ಯಾರ್ಹತೆ ಇದೆಯೇ ಎಂಬುದು ಗೊತ್ತಿಲ್ಲ’ ಎಂದು ಕುಟುಂಬಸ್ಥರು ಹೇಳಿದ್ದಾರೆ. “ಅವರು ಸ್ವ ಘೋಷಿತ ಮತ್ತು ನಕಲಿ ವೈದ್ಯರು ಎಂದು ನಾವು ಭಾವಿಸುತ್ತೇವೆ” ಎಂದು ಅವರು ಹೇಳಿದರು.
ವಾಂತಿ ನಿಂತ ನಂತರ ಬಾಲಕನಿಗೆ ಚೇತರಿಸಿಕೊಂಡಿದ್ದಾನೆ ಎಂದು ಬಾಲಕನ ಅಜ್ಜ ಹೇಳಿದ್ದಾರೆ. “ಆದರೆ ವೈದ್ಯರು ಕುಟುಂಬದ ಒಪ್ಪಿಗೆಯಿಲ್ಲದೆ ಹುಡುಗನಿಗೆ ಆಪರೇಷನ್ ಮಾಡಲು ಪ್ರಾರಂಭಿಸಿದರು, ಹುಡುಗ ನೋವಿನಿಂದ ಬಳಲುತ್ತಿದ್ದನು, ನಾವು ವೈದ್ಯರಿಗೆ ನೋವು ಏಕೆ ಎಂದು ಕೇಳಿದಾಗ, ಅವರು ನೀವು ವೈದ್ಯರೇ ಎಂದು ಪ್ರಶ್ನಿಸಿದರು. ಸಂಜೆಯ ವೇಳೆಗೆ ಆತನಿಗೆ ಉಸಿರಾಟ ನಿಲ್ಲಿಸಿದ. ನಂತರ ಪುನಶ್ಚೇತನಗೊಂಡ (CPR ನೊಂದಿಗೆ) ಮತ್ತು ನಂತರ ಪಾಟ್ನಾಗೆ ಒಯ್ಯಲಾಯಿತು. ಮಾರ್ಗಮಧ್ಯೆ ಬಾಲಕ ಮೃತಪಟ್ಟರು. ಬಾಲಕನ ಶವವನ್ನು ಆಸ್ಪತ್ರೆಯ ಮೆಟ್ಟಿಲುಗಳ ಮೇಲೆ ಬಿಟ್ಟು ಅವರು ಪರಾರಿಯಾಗಿದ್ದಾರೆ’’ ಎಂದು ಕೃಷ್ಣಕುಮಾರ ಅವರ ಅಜ್ಜ ಪ್ರಹ್ಲಾದಪ್ರಸಾದ ಶಾ ತಿಳಿಸಿದರು.
ವೈದ್ಯರ ವಿದ್ಯಾರ್ಹತೆ ಬಗ್ಗೆ ಖಚಿತವಿಲ್ಲದಿದ್ದರೆ ಆ ವೈದ್ಯರ ಏಕೆ ಕರೆದುಕೊಂಡು ಹೋಗಿದ್ದೇಕೆ ಎಂದು ಕುಟುಂಬ ಸದಸ್ಯರನ್ನು ಕೇಳಿದಾಗ, “ನಾವು ವಾಂತಿ ನಿಲ್ಲಿಸುವ ಸಲುವಾಗಿ ಅಲ್ಲಿಗೆ ಹೋಗಿದ್ದೆವು. ಆದರೆ ಅವರು ನಮ್ಮ ಒಪ್ಪಿಗೆಯಿಲ್ಲದೆ ಆಪರೇಷನ್ ಮಾಡಿದ್ದಾರೆ” ಎಂದು ಹೇಳಿದರು.
ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಗಣಪತಿ ಸೇವಾ ಸದನದ ವೈದ್ಯರು ಮತ್ತು ಇತರ ಸಿಬ್ಬಂದಿಯನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ