ಮದುವೆ ಮನೆಯಲ್ಲಿ ಪೊಲೀಸ್ ಅಧಿಕಾರಿ ಹತ್ಯೆ ; ಹೆಸರು ಬದಲಿಸಿಕೊಂಡು ನಕಲಿ ವೈದ್ಯನಾಗಿ ಬದುಕಿದ್ದ ಆರೋಪಿ 28 ವರ್ಷಗಳ ನಂತರ ಸೆರೆ…!

ನವದೆಹಲಿ: ಸುಮಾರು 28 ವರ್ಷಗಳ ಕಾಲ ಪೊಲೀಸರ ಕಣ್ಣಿಗೆ ಮಣ್ಣೆರಚಿ, ತನ್ನ ಗುರುತನ್ನೇ ಬದಲಿಸಿಕೊಂಡು ಮಧ್ಯಪ್ರದೇಶದ ಸಣ್ಣ ಪಟ್ಟಣದಲ್ಲಿ ‘ಡಾ. ಝಟ್ಕಾ’ ಎಂಬ ಹೆಸರಿನಲ್ಲಿ ವೈದ್ಯನಂತೆ ನಟಿಸಿ ಹೊಸ ಜೀವನ ಕಟ್ಟಿಕೊಂಡಿದ್ದ ಪರಾರಿಯಾಗಿದ್ದ ಕುಖ್ಯಾತ ವ್ಯಕ್ತಿಯನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗ ಕೊನೆಗೂ ಬಂಧಿಸಿದೆ. 53 ವರ್ಷದ ರಾಜಿಂದರ ಬೈರಾಗಿ ಅಲಿಯಾಸ್ ರಾಜಿಂದರ ಸಿಂಗ್ ಯಾದವ್ … Continued

ಯೂಟ್ಯೂಬ್ ನೋಡಿ ನಕಲಿ ವೈದ್ಯನಿಂದ ಶಸ್ತ್ರಚಿಕಿತ್ಸೆ : ಮಹಿಳೆ ಸಾವು

ಬಾರಾಬಂಕಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಯೂಟ್ಯೂಬ್ ವೀಡಿಯೊ ನೋಡಿ ಕಾನೂನು ಬಾಹಿರ ಕ್ಲಿನಿಕ್‌ನ ಮಾಲೀಕ ಮತ್ತು ಆತನ ಸೋದರಳಿಯ ನಡೆಸಿದ ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಕ್ಲಿನಿಕ್‌ನವರು ಯಾವುದೇ ಮಾನ್ಯತೆ ಇಲ್ಲದೆ ಅದನ್ನು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತೇಹಬಹದ್ದೂರ ರಾವತ್ ಅವರ ಪತ್ನಿ ಮುನಿಶ್ರ ರಾವತ್ ಅವರು … Continued

ಯೂ ಟ್ಯೂಬ್ ವೀಡಿಯೊ ನೋಡಿ ಶಸ್ತ್ರಚಿಕಿತ್ಸೆ ; ಬಾಲಕ ಸಾವು…

ಪಾಟ್ನಾ: ಯೂಟ್ಯೂಬ್ ವೀಡಿಯೊ ನೆಚ್ಚಿಕೊಂಡ ವೈದ್ಯನೊಬ್ಬ ಪಿತ್ತಕೋಶದಿಂದ ಕಲ್ಲು ತೆಗೆಯಲು ಆಪರೇಷನ್ ಮಾಡಿ 15 ವರ್ಷದ ಬಾಲಕ ಸಾವಿಗೀಡಾಗಿರುವ ಘಟನೆ ಬಿಹಾರದ ಸರನ್ ನಲ್ಲಿ ನಡೆದಿದೆ. ಬಾಲಕನ ಪರಿಸ್ಥಿತಿ ಹದಗೆಡುತ್ತಿದ್ದಂತೆ, ರಾಜ್ಯ ರಾಜಧಾನಿ ಪಾಟ್ನಾದ ಆಸ್ಪತ್ರೆಗೆ ಆತನನ್ನು ಸಾಗಿಸಲು ‘ವೈದ್ಯರು’ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು. ಮಾರ್ಗಮಧ್ಯೆ ಬಾಲಕ ಮೃತಪಟ್ಟಿದ್ದು, ಆತನೊಂದಿಗೆ ಇದ್ದ ‘ವೈದ್ಯ’ ಮತ್ತು ಇತರರು … Continued