ದಾವಣಗೆರೆ : ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಆಮ್ಲಜನಕ ಸಿಲಿಂಡರ್ ಸ್ಫೋಟ

ದಾವಣಗೆರೆ : ದಾವಣಗೆರೆ ಜಿಲ್ಲೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ (ಆಪರೇಷನ್ ಥಿಯೇಟರ್) ಮಂಗಳವಾರ ಬೆಳಿಗ್ಗೆ ಆಮ್ಲಜನಕ (ಆಕ್ಸಿಜನ್) ಸಿಲಿಂಡರ್ ಸ್ಫೋಟಗೊಂಡ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸ್ಫೋಟದ ಪರಿಣಾಮ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿದ್ದ ಕೆಲವು ವೈದ್ಯಕೀಯ ಉಪಕರಣಗಳು ಬೆಂಕಿಗಾಹುತಿಯಾಗಿದ್ದು, ಸುತ್ತಮುತ್ತಲಿನ ಇತರೆ ಕೊಠಡಿಗಳಿಗೂ ಹಾನಿಯಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಯ ಆರೋಗ್ಯ ಇಲಾಖೆ ಸಿಬ್ಬಂದಿ … Continued

ಗೋವಾ ನೈಟ್‌ ಕ್ಲಬ್ ದುರಂತ: ಮಾಲೀಕ ಅಜಯ ಗುಪ್ತಾ ದೆಹಲಿಯಲ್ಲಿ ವಶಕ್ಕೆ

ನವದೆಹಲಿ:ಉತ್ತರ ಗೋವಾದ ‘ಬಿರ್ಚ್ ಬೈ ರೋಮಿಯೋ ಲೇನ್’ ನೈಟ್‌ಕ್ಲಬ್‌ನ ನಾಲ್ವರು ಮಾಲೀಕರಲ್ಲಿ ಒಬ್ಬರಾದ ಅಜಯ ಗುಪ್ತಾ ಅವರನ್ನು ದೆಹಲಿಯಲ್ಲಿ ವಶಕ್ಕೆ ಪಡೆಯಲಾಗಿದೆ. ನೈಟ್‌ಕ್ಲಬ್‌ಗೆ ಸಂಬಂಧಿಸಿದ ಕಾರ್ಯಾಚರಣೆಯ ಜವಾಬ್ದಾರಿಗಳಿಂದ ದೂರವಿರುವ ಗುಪ್ತಾ, ಘಟನೆಯಲ್ಲಿ ತಮ್ಮ ಪಾತ್ರ ಸೀಮಿತವಾಗಿತ್ತು ಎಂದು ಹೇಳಿಕೊಂಡಿದ್ದಾರೆ. “ನಾನು ಕೇವಲ ಪಾಲುದಾರನಾಗಿದ್ದೆ, ನನಗೆ ಬೇರೇನೂ ತಿಳಿದಿಲ್ಲ,” ಎಂದು ಗುಪ್ತಾ ಅವರು ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ … Continued

ಗೋವಾ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ: 25 ಮಂದಿ ಸಾವು

ಆರ್ಪೋರಾ (ಉತ್ತರ ಗೋವಾ): ಉತ್ತರ ಗೋವಾದ ಆರ್ಪೋರಾದಲ್ಲಿರುವ ನೈಟ್‌ಕ್ಲಬ್‌ವೊಂದರಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಿಂದಾಗಿ ಕನಿಷ್ಠ 25 ಜನರು ಸಾವಿಗೀಡಾಗಿದ್ದು, ಏಳು ಮಂದಿ ಗಾಯಗೊಂಡಿರುವ ದುರ್ಘಟನೆ ಸಂಭವಿಸಿದೆ. ಮೃತರಾದವರಲ್ಲಿ ಬಹುತೇಕರು ಕ್ಲಬ್‌ನ ಸಿಬ್ಬಂದಿ ಎಂದು ತಿಳಿದುಬಂದಿದೆ. ರಾತ್ರಿ ಸುಮಾರು 1 ಗಂಟೆಯ ಸುಮಾರಿಗೆ ನೈಟ್‌ಕ್ಲಬ್‌ನ ಅಡುಗೆಮನೆಯ (Kitchen) ಸಮೀಪದಲ್ಲಿ ಸಿಲಿಂಡರ್ ಸ್ಫೋಟದಿಂದ ಬೆಂಕಿ … Continued

ಹೈದರಾಬಾದ್‌ ಚಾರ್ಮಿನಾರ್ ಬಳಿ ಕಟ್ಟಡದಲ್ಲಿ ಬೆಂಕಿ ಅವಘಡ : 8 ಮಕ್ಕಳು ಸೇರಿ 17 ಮಂದಿ ಸಾವು

ಹೈದರಾಬಾದ್‌ : ಐತಿಹಾಸಿಕ ಸ್ಮಾರಕ ಚಾರ್ಮಿನಾರ್ ಬಳಿಯ ಪ್ರದೇಶವಾದ ಹೈದರಾಬಾದ್ ಓಲ್ಡ್ ಸಿಟಿಯಲ್ಲಿರುವ ಗುಲ್ಜಾರ್ ಹೌಸ್ ಬಳಿ ಶನಿವಾರ ಮುಂಜಾನೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಎಂಟು ಮಕ್ಕಳು ಸೇರಿದಂತೆ ಹದಿನೇಳು ಜನರು ಮೃತಪಟ್ಟಿದ್ದಾರೆ. ತೆಲಂಗಾಣ ಸಚಿವ ಪೊನ್ನಮ್ ಪ್ರಭಾಕರ್ ಅವರ ಪ್ರಕಾರ, ಮೃತಪಟ್ಟವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು. ಮೃತರನ್ನು ಪ್ರಹ್ಲಾದ (70), ಮುನ್ನಿ (70), ರಾಜೇಂದರ … Continued

ಗ್ಯಾಸ್ ಸಿಲಿಂಡರ್‌ ಸೋರಿಕೆಯಿಂದ ಹೊತ್ತಿ ಉರಿದ ಮನೆ ; ಇಬ್ಬರು ಸಜೀವ ದಹನ, ನಾಲ್ವರಿಗೆ ಗಾಯ

ಬೆಂಗಳೂರು: ಬೆಂಗಳೂರು ಉತ್ತರ ತಾಲ್ಲೂಕಿನ ನೆಲಮಂಗಲ ಸಮೀಪದ ಅಡಕಮಾರಹಳ್ಳಿಯಲ್ಲಿ ಗುರುವಾರ ಎಲ್‌ಪಿಜಿ ಸಿಲಿಂಡರ್ ಸೋರಿಕೆಯಿಂದ ಮೃತರನ್ನು 50 ವರ್ಷದ ನಾಗರಾಜು ಮತ್ತು 50 ವರ್ಷದ ಶ್ರೀನಿವಾಸ ಎಂದು ಗುರುತಿಸಲಾಗಿದೆ. ಗಾಯಗೊಂಡ ಅಭಿಷೇಕ ಗೌಡ, ಶಿವಶಂಕರ್, ಲಕ್ಷ್ಮಿದೇವಿ ಮತ್ತು ಬಸನಗೌಡ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಮನೆಯೊಳಗಿನ ಎಲ್‌ಪಿಜಿ ಗ್ಯಾಸ್ ಸೋರಿಕೆಯಿಂದ ಬೆಂಕಿ … Continued

ವೀಡಿಯೊ | ರೆಸ್ಟೋರೆಂಟ್‌ನಲ್ಲಿ ಭಾರೀ ಬೆಂಕಿ ಅವಘಡ ; ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ಜನರು

ನವದೆಹಲಿ: ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ಸೋಮವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಹಲವಾರು ಜನರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದಿದ್ದಾರೆ ಎಂದು ವರದಿಯಾಗಿದೆ. ರಾಜೌರಿ ಗಾರ್ಡನ್‌ನಲ್ಲಿರುವ ಜಂಗಲ್ ಜಾಂಬೋರಿ ರೆಸ್ಟೋರೆಂಟ್‌ನಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಭಯಭೀತರಾದ ಜನರು ಹತ್ತಿರದ ಕಟ್ಟಡದ ಛಾವಣಿಗೆ ಹಾರಿ ಬಚಾವ್‌ ಆಗಿದ್ದಾರೆ. ಗಾಯವಾದ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ … Continued

ಬೆಳಗಾವಿ ಕಾರ್ಖಾನೆಯಲ್ಲಿ ಅಗ್ನಿ ಅನಾಹುತ ; ಮುಗಿಲೆತ್ತರಕ್ಕೆ ಧಗಧಗಿಸಿದ ಬೆಂಕಿ ಜ್ವಾಲೆ : ಮೂವರು ಗಂಭೀರ

ಬೆಳಗಾವಿ: ನಾವಗೆ ಗ್ರಾಮದ ಸನಿಹದ ಟಿಕ್ಸ್‌ ಟೇಪ್ (ಅಂಟು) ತಯಾರಿಸುವ ಸ್ನೇಹಂ ಕಾರ್ಖಾನೆಯಲ್ಲಿ ಬೃಹತ್ ಪ್ರಮಾಣದ ಬೆಂಕಿ ಹೊತ್ತಿಕೊಂಡಿದ್ದು, ಈ ದುರ್ಘಟನೆಯಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಬೆಳಗಾವಿ ತಾಲೂಕಿನ ಕವಳವಾಡಿಯ ಮಾರುತಿ ನಾರಾಯಣ ಕರವೇಕರ (32), ಹಳೇ ಬೆಳಗಾವಿಯ ಯಲ್ಲಪ್ಪ ಪ್ರಕಾಶ ಸಲಗುಡೆ (35) ಮತ್ತು ರಾಝವಾಡಿಯ ರಂಜಿತ ದಶರಥ ಪಾಟೀಲ (39) ಎಂಬ ಮೂವರು … Continued

ಬಂದರಿನಲ್ಲಿ ಭಾರೀ ಬೆಂಕಿ ಅನಾಹುತ : 35 ಮೀನುಗಾರಿಕಾ ಬೋಟ್‌ ಗಳು ಸುಟ್ಟು ಕರಕಲು

ವಿಶಾಖಪಟ್ಟಣಂ : ಸೋಮವಾರ ಮುಂಜಾನೆ ವಿಶಾಖಪಟ್ಟಣಂನ ಜೆಟ್ಟಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 35 ಮೀನುಗಾರಿಕಾ ಬೋಟ್‌ ಗಳು ಸುಟ್ಟು ಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಝೀರೋ ಜೆಟ್ಟಿ ಪ್ರದೇಶದಲ್ಲಿ ಬೋಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಅದು ಬೇಗನೆ ವ್ಯಾಪಿಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಅವರ ಪ್ರಕಾರ, ಬೆಳ್ಳಂಬೆಳಗ್ಗೆ ಹೊತ್ತಿ ಉರಿದು ಬೆಳಗಿನ ಜಾವ 4 ಗಂಟೆ … Continued

ರಾಸಾಯನಿಕ ಗೋದಾಮಿನಲ್ಲಿ ಬೆಂಕಿ: ಬಹುಮಹಡಿ ಕಟ್ಟಡಕ್ಕೆ ವ್ಯಾಪಿಸಿ 9 ಸಾವು

ಹೈದರಾಬಾದ್‌ : ಹೈದರಾಬಾದ್ ನಾಂಪಲ್ಲಿ ವಸತಿ ಕಟ್ಟಡದಲ್ಲಿ ಸೋಮವಾರ ಸಂಭವಿಸಿದ ಭಾರೀ ಬೆಂಕಿಯಲ್ಲಿ ಕನಿಷ್ಠ ಒಂಬತ್ತು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ದುರಂತದ ನಂತರ ಒಟ್ಟು 16 ಜನರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ರಕ್ಷಣಾ ಮತ್ತು ತಂಪಾಗಿಸುವ ಕಾರ್ಯಾಚರಣೆ ನಡೆಯುತ್ತಿದೆ. ಮೇಲಿನ ಮಹಡಿಗಳಲ್ಲಿ ವಾಸಿಸುವ … Continued

ಬೆಂಕಿ ಅನಾಹುತ : ಏಳು ಗೋವುಗಳು ಸಜೀವ ದಹನ

ಮುಂಡಗೋಡ: ದನದ ಕೊಟ್ಟಿಗೆಗೆ ಹೊತ್ತಿಕೊಂಡ ಬೆಂಕಿಯಿಂದ ಏಳು ಆಕಳುಗಳು ಸಜೀವ ದಹನವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ಹಳೂರ ಓಣಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟಿನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಹಳೂರ ಓಣಿಯ ಮಂಜುನಾಥ ನಾಗೇಶ ಶೇಟ್ ಎಂಬವರ ಸೇರಿದ ದನಗಳು ಸಜೀವ ದಹನವಾಗಿವೆ. ಮನೆಯ ಪಕ್ಕದಲ್ಲೇ ದನದಕೊಟ್ಟಿಯಲ್ಲಿ … Continued