ಬೆಳಿಗ್ಗೆ 2:30ಕ್ಕೆ ಸ್ನೇಹಿತನಿಗೆ ಸಂದೇಶ, 45 ನಿಮಿಷ ಸಿಪಿಆರ್‌ʼ… : ನಾನಾ ಪಾಟೇಕರ್ ಅಂತಿಮ ಕ್ಷಣಗಳು…

ನಟ ನಾನಾ ಪಾಟೇಕರ್ ಅವರ ಸಾವಿಗೆ ಮುನ್ನದ ಕೊನೆಯ ಕೆಲವು ಗಂಟೆಗಳ ವಿವರಗಳು ಇದೀಗ ಬೆಳಕಿಗೆ ಬಂದಿವೆ. ಅಕ್ಟೋಬರ್ 8ರ ಗುರುವಾರ ತಡರಾತ್ರಿ ಅವರು ಎದೆನೋವಿನ ಬಗ್ಗೆ ಸ್ನೇಹಿತನಿಗೆ ಸಂದೇಶ ಕಳುಹಿಸಿದ್ದು, ಬಳಿಕ ಅವರ ಆರೋಗ್ಯ ಸ್ಥಿತಿ ವೇಗವಾಗಿ ಹದಗೆಟ್ಟಿದ್ದಾಗಿ ವರದಿಗಳು ತಿಳಿಸಿವೆ. ಗೋವಾದ ಮಣಿಪಾಲ್ ಆಸ್ಪತ್ರೆಯ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಸಾಲ್ಕರ್ ಅವರ … Continued

ಖ್ಯಾತ ನಟ ನಾನಾ ಪಾಟೇಕರ್‌ ನಿಧನ

ಪಣಜಿ:  ಖ್ಯಾತ ನಟ ನಾನಾ ಪಾಟೇಕರ್ ಅವರು ಗುರುವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಗೋವಾದ ಡೋನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ನಾನಾ ಪಾಟೇಕರ್ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಮಣಿಪಾಲ್ ಆಸ್ಪತ್ರೆಯ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಶೇಖರ … Continued

ಹೃದಯಾಘಾತಕ್ಕೊಳಗಾದ ಉದ್ಯಮಿಗೆ ಸಿಪಿಆರ್ ನೀಡಿ ಜೀವ ಉಳಿಸಿದ ಚಿನ್ನದಂಗಡಿ ಮಾಲೀಕನ ಮಗ; ವೀಡಿಯೊ ವೈರಲ್

ಕೋಟಾ: ರಾಜಸ್ಥಾನದ ಕೋಟಾ ನಗರದಲ್ಲಿರುವ ವರ್ಧಮಾನ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ಗುರುವಾರ (ಡಿಸೆಂಬರ್ 11) ಮಧ್ಯಾಹ್ನ ಸುಮಾರು 1:58 ರ ಸುಮಾರಿಗೆ ಹೃದಯ ಕಲಕುವ ಘಟನೆಯೊಂದು ನಡೆದಿದೆ. ಜೈಪುರ ಮೂಲದ ರತ್ನ ವ್ಯಾಪಾರಿ ರಾಜಕುಮಾರ ಸೋನಿ (60) ಅವರು ರಾಂಪುರ ಬಜಾರ್‌ನಲ್ಲಿರುವ ಈ ಆಭರಣ ಮಳಿಗೆಯಲ್ಲಿ ವಹಿವಾಟು ನಡೆಸುವಾಗ ಆಕಸ್ಮಿಕವಾಗಿ ಹೃದಯಾಘಾತಕ್ಕೊಳಗಾಗಿದ್ದಾರೆ. ಕೌಂಟರ್‌ ಬಳಿ ಕುಳಿತು ವ್ಯವಹಾರದ … Continued

ಹೃದಯ ಸ್ತಂಭನ ; ಗೋವಾ ಕೃಷಿ ಸಚಿವ, ಮಾಜಿ ಸಿಎಂ ರವಿ ನಾಯ್ಕ ನಿಧನ

ಪಣಜಿ: ಗೋವಾದ ಕೃಷಿ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾಗಿದ್ದ ಹಿರಿಯ ರಾಜಕಾರಣಿ ರವಿ ನಾಯ್ಕ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಕುಟುಂಬ ಮೂಲಗಳು ಪಿಟಿಐಗೆ ನೀಡಿರುವ ಮಾಹಿತಿಯ ಪ್ರಕಾರ, ಬುಧವಾರ ಮುಂಜಾನೆ ಪಣಜಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ತಮ್ಮ ಸ್ವಗ್ರಾಮದಲ್ಲಿ ಅವರಿಗೆ ಹೃದಯಾಘಾತವಾಯಿತು. ತಕ್ಷಣವೇ ಅವರನ್ನು ಪೊಂಡಾದಲ್ಲಿರುವ ಖಾಸಗಿ ಆಸ್ಪತ್ರೆಗೆ … Continued

ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಕುಸಿದು ಬಿದ್ದು 25 ವರ್ಷದ ವ್ಯಕ್ತಿ ಸಾವು ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೈದರಾಬಾದ್ : ಭಾನುವಾರ ಸಂಜೆ ಹೈದರಾಬಾದ್‌ನ ನಾಗೋಲ್ ಕ್ರೀಡಾಂಗಣದಲ್ಲಿ ಶಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದಾಗ 25 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವಿಗೀಡಾದ ಆಘಾತಕಾರಿ ಘಟನೆ ನಡೆದಿದೆ. ಮೃತರನ್ನು ಗುಂಡ್ಲಾ ರಾಕೇಶ ಎಂದು ಗುರುತಿಸಲಾಗಿದ್ದು, ಅವರು ನಗರದ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಅವರು ಖಮ್ಮಮ್ ಜಿಲ್ಲೆಯ ತಲ್ಲಡಾದ ಮಾಜಿ ಉಪ ಸರಪಂಚ ಗುಂಡ್ಲಾ ವೆಂಕಟೇಶ್ವರಲು ಅವರ … Continued

ಆಘಾತಕಾರಿ ವೀಡಿಯೊ..| : ಕ್ರಿಕೆಟ್ ಆಡುತ್ತಿದ್ದ 21 ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿ ಕುಸಿದುಬಿದ್ದು ಸಾವು

ಹೈದರಾಬಾದ್: ತೆಲಂಗಾಣದ ರಾಜಧಾನಿ ಹೈದರಾಬಾದ್‌ನಿಂದ ಆಘಾತಕಾರಿ ಘಟನೆಯೊಂದು ಹೊರಬಿದ್ದಿದ್ದು, 21 ವರ್ಷದ ಬಿಟೆಕ್ ವಿದ್ಯಾರ್ಥಿಯೊಬ್ಬರು ಕ್ರಿಕೆಟ್‌ ಆಡುತ್ತಿರುವಾಗ ಕುಸಿದುಬಿದ್ದು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ, ಏಪ್ರಿಲ್ 4ರಂದು ಈ ಘಟನೆ ನಡೆದಿದ್ದು, ಆ ವಿದ್ಯಾರ್ಥಿಯನ್ನು ತೆಲಂಗಾಣದ ಖಮ್ಮಂ ಜಿಲ್ಲೆಯ ವಿನಯಕುಮಾರ ಎಂದು ಗುರುತಿಸಲಾಗಿದೆ. ಮೇಡ್ಚಲದ ಸಿಎಂಆರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕ್ರಿಕೆಟ್ ಪಂದ್ಯ ಆಡುತ್ತಿದ್ದಾಗ ವಿನಯಕುಮಾರ ಇದ್ದಕ್ಕಿದ್ದಂತೆ … Continued

ಶಾಲೆಯಲ್ಲಿ 8 ವರ್ಷದ ಬಾಲಕಿ ಹೃದಯಾಘಾತದಿಂದ ಸಾವು…!

ಅಹ್ಮದಾಬಾದ್‌: ಗುಜರಾತಿನ ಅಹ್ಮದಾಬಾದ್‌ನಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದ ಎಂಟು ವರ್ಷದ ಬಾಲಕಿ ಶಂಕಿತ ಹೃದಯಾಘಾತದಿಂದ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ ಎಂದು ವರದಿಯಾಗಿದೆ. ಅಹಮದಾಬಾದ್‌ನ ಥಲ್ತೇಜ್ ಪ್ರದೇಶದಲ್ಲಿರುವ ಜೆಬಾರ್ ಮಕ್ಕಳ ಶಾಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಆಕೆಯ ಸಾವಿಗೆ ನಿಖರವಾದ ಕಾರಣ ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. “ಬಾಲಕಿ ಗಾರ್ಗಿ ರಣಪಾರ ಎಂಬ … Continued

ಹೃದಯ ಸ್ತಂಭನ : 48ನೇ ವಯಸ್ಸಿನಲ್ಲಿ ಜನಪ್ರಿಯ ಹಿಂದಿ ಕಿರುತೆರೆ ನಟ ವಿಕಾಸ್ ಸೇಥಿ ನಿಧನ

ಮುಂಬೈ: 48ರ ವಯಸ್ಸಿನಲ್ಲೇ ಖ್ಯಾತ ಕಿರುತೆರೆ ನಟ ನಟ ವಿಕಾಸ್ ಸೇಥಿ (Vikas Sethi) ನಿಧನರಾಗಿದ್ದಾರೆ. ಅವರು ಹೃದಯ ಸ್ತಂಭನದಿಂದ ಭಾನುವಾರ(ಸೆ.8ರಂದು) ಮಲಗಿದ್ದಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತ ದೇಹವನ್ನು ಕೂಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತರು ಪತ್ನಿ ಜಾನ್ವಿ ಸೇಥಿ ಮತ್ತು ಅವರ ಅವಳಿ ಮಕ್ಕಳನ್ನು ಅಗಲಿದ್ದಾರೆ. 2000 ಇಸವಿಯ ಆರಂಭದಲ್ಲಿ ಹಿಂದಿ ಕಿರುತೆರೆಯಲ್ಲಿ … Continued

ವೀಡಿಯೊ…| ವೈದ್ಯರು ಪರೀಕ್ಷಿಸುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು

ಇಂದೋರ್ : 31 ವರ್ಷದ ಆಟೋ ಚಾಲಕರೊಬ್ಬರು ವೈದ್ಯರು ತಪಾಸಣೆ ನಡೆಸುತ್ತಿದ್ದ ವೇಳೆಯೇ ಹಠಾತ್ ಕುಸಿದು ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ. ಮೃತರನ್ನು ಇಂದೋರ್‌ನ ಶಿವಾಜಿ ನಗರದ ನಿವಾಸಿ ಸೋನು ಮಟ್ಕರ್ ಎಂದು ಗುರುತಿಸಲಾಗಿದೆ. ತಡರಾತ್ರಿ ಎದೆನೋವು ಕಾಣಿಸಿಕೊಂಡ ನಂತರ ಮಟ್ಕರ್ ಅವರೇ ಸಮೀಪದ ಕ್ಲಿನಿಕ್‌ಗೆ ತೆರಳಿದ್ದರು. ವೈದ್ಯರು ಅವರನ್ನು ಪರೀಕ್ಷಿಸುತ್ತಿದ್ದಾಗ ಏಕಾಏಕಿ ಕುಸಿದು … Continued

ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಕುಸಿದು ಬಿದ್ದಿದ್ದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ನಿಧನ

ಬೆಂಗಳೂರು: ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು, ಶುಕ್ರವಾರ ಖಾಸಗಿ ರೆಸಾರ್ಟ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ನೇತೃತ್ವದಲ್ಲಿ ನಡೆದ ಟಿಕೆಟ್​ ಆಕಾಂಕ್ಷಿಗಳ ಸಭೆಯಲ್ಲಿ ಶ್ರೀಶೈಲಪ್ಪ ಅವರು ಭಾಗಿಯಾಗಿದ್ದರು. ಸಭೆಯ ನಡುವೆಯೇ ಹೃದಯಾಘಾತದಿಂದ ಕುಸಿದು ಬಿದ್ದ ಅವರನ್ನು ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. … Continued