ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ…: ಹಬ್ಬದ ಸೀಸನ್‌ ನಲ್ಲಿ ರಿಟರ್ನ್ ಟಿಕೆಟ್‌ ಮೇಲೆ ಭಾರಿ ರಿಯಾಯಿತಿ ಘೋಷಿಸಿದ ರೈಲ್ವೆ

ನವದೆಹಲಿ : ಹಬ್ಬದ ಋತುವಿನ ಜನದಟ್ಟಣೆ ಕಡಿಮೆ ಮಾಡಲು ಮತ್ತು ರೈಲುಗಳ ಗರಿಷ್ಠ ಬಳಕೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ರೈಲ್ವೆಯು ನೂತನವಾದ ‘ರೌಂಡ್ ಟ್ರಿಪ್ ಪ್ಯಾಕೇಜ್ ಯೋಜನೆ’ಯನ್ನು ಪರಿಚಯಿಸಿದೆ, ಇದು ರಿಟರ್ನ್ ಟಿಕೆಟ್‌ಗಳ ಮೇಲೆ 20%ರ ವರೆಗೆ ರಿಯಾಯಿತಿ ನೀಡುತ್ತದೆ. ಈ ಯೋಜನೆಯನ್ನು ಪ್ರಸ್ತುತ ಪ್ರಾಯೋಗಿಕ ಆಧಾರದ ಮೇಲೆ ಜಾರಿಗೆ ತರಲಾಗುತ್ತಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ, … Continued

ರೈಲ್ವೆ ಹಳಿಯ ಸಮೀಪವೇ ಮರಿಗೆ ಜನ್ಮ ನೀಡಿದ ಕಾಡಾನೆ ; 2 ತಾಸು ನಿಂತ ರೈಲು | ಹೃದಯಸ್ಪರ್ಶಿ ವೀಡಿಯೊ ವೀಕ್ಷಿಸಿ

ಒಂದು ಹೃದಯಸ್ಪರ್ಶಿ ವಿದ್ಯಮಾನದಲ್ಲಿ ಜಾರ್ಖಂಡ್‌ನಲ್ಲಿ ಕಾಡಾನೆಯೊಂದು ಹಳಿಗೆ ಸಮೀಪದಲ್ಲಿಯೇ ಮರಿಗೆ ಜನ್ಮ ನೀಡುತ್ತಿರುವಾಗ ರೈಲು ಸುಮಾರು ಎರಡು ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತಗೊಳಿಸಿದ ಅಪರೂಪದ ಘಟನೆ ನಡೆದಿದೆ. ರೈಲು ಎರಡು ಗಂಟೆಗಳಿಗೂ ಹೆಚ್ಚು ಕಾಲ ನಿಂತಿದ್ದರಿಂದ ಆನೆ ಸುರಕ್ಷಿತವಾಗಿ ಹೆರಿಗೆ ಮಾಡಲು ಅವಕಾಶ ಮಾಡಿಕೊಟ್ಟಿತು. ಕ್ಯಾಮೆರಾದಲ್ಲಿ ಸೆರೆಯಾದ ಈ ಘಟನೆಯಲ್ಲಿ ಆನೆ ಮತ್ತು ಅದರ … Continued

ಬೆಳಗಾವಿ | ಹಳಿ‌ ತಪ್ಪಿದ ಗೂಡ್ಸ್ ರೈಲು

ಬೆಳಗಾವಿ: ಮೀರಜ್ ಗೆ ತೆರಳುತ್ತಿದ್ದ ಗೂಡ್ಸ್ ರೈಲಿನ ಎರಡು ಬೋಗಿಗಳು ಪಲ್ಟಿಯಾಗಿರುವ ಘಟನೆ ಬೆಳಗಾವಿ ಮಿಲಿಟರಿ ಮಹಾದೇವ ದೇವಸ್ಥಾನದ ಬಳಿ ಇರುವ ರೈಲ್ವೆ ಹಳಿಯಲ್ಲಿ ಮಂಗಳವಾರ ನಡೆದಿದೆ. ಜಿಂದಾಲ್‌ ಫ್ಯಾಕ್ಟರಿಯ ಕಬ್ಬಿಣದ ಅದಿರು ತುಂಬಿಕೊಂಡು ಮಿರಜ್ ಗೆ ಹೊರಟಿದ್ದ ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ ರೈಲು ಸಂಚಾರದಲ್ಲಿ ಅಡಚಣೆ ಉಂಟಾಗಿದೆ. ಸುಮಾರು 3 ರಿಂದ 4 … Continued

ವೀಡಿಯೊ..| ಜಾರ್ಖಂಡ್-ಗೋವಾ ರೈಲಿನ ಎಸಿ 2-ಟೈರ್ ಬೋಗಿಯಲ್ಲಿ ಜೀವಂತ ಹಾವು ಪತ್ತೆ…!

ಆಘಾತಕಾರಿ ಘಟನೆಯೊಂದರಲ್ಲಿ, ಅಕ್ಟೋಬರ್ 21 ರಂದು ಜಾರ್ಖಂಡ್‌ನಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ ವಾಸ್ಕೋ-ಡ-ಗಾಮಾ ವೀಕ್ಲಿ ಎಕ್ಸ್‌ಪ್ರೆಸ್‌ನ ಹವಾನಿಯಂತ್ರಿತ (AC) ಕೋಚ್‌ನಲ್ಲಿ ಜೀವಂತ ಹಾವು ಪತ್ತೆಯಾಗಿದೆ. ಹಲವಾರು ಪ್ರಯಾಣಿಕರು ಎಸಿ 2-ನಲ್ಲಿ ಕೆಳಗಿನ ಬರ್ತ್‌ ಪರದೆಯ ಬಳಿ ಹಾವು ಜಾರುತ್ತಿರುವುದನ್ನು ಗಮನಿಸಿದರು. ನಂತರ ಅದರ ವೀಡಿಯೊಗಳನ್ನು ತೆಗೆದುಕೊಂಡರು. ತಮ್ಮ ಪೋಷಕರು ಪ್ರಯಾಣಿಸುತ್ತಿದ್ದ ಕೋಚ್‌ನಲ್ಲಿ (ಎ 2 31, 33) … Continued

ವೀಡಿಯೊ..| ಹೃದಯಾಘಾತದಿಂದ ರೈಲಿನಲ್ಲಿ ಪ್ರಜ್ಞೆ ಕಳೆದುಕೊಂಡ ವಯಸ್ಸಾದ ವ್ಯಕ್ತಿ ; ಸಿಪಿಆರ್‌ ಮಾಡಿ ಜೀವ ಉಳಿಸಿದ ಟಿಕೆಟ್ ಪರೀಕ್ಷಕ…!

ರೈಲು ಪ್ರಯಾಣದ ವೇಳೆ ಪ್ರಯಾಣಿಕ ಹೃದಯಾಘಾತಕ್ಕೆ ಒಳಗಾದ ನಂತರ ಟಿಕೆಟ್ ಪರೀಕ್ಷಕರೊಬ್ಬರು ಸುಮಾರು 15 ನಿಮಿಷಗಳ ಕಾಲ ವಯಸ್ಸಾದ ವ್ಯಕ್ತಿಗೆ ಸಿಪಿಆರ್ ಮಾಡಿ ಆತನ ಜೀವ ಉಳಿಸಿದ್ದಾರೆ. ಬಿ.ಪಿ. ಕರ್ಣ ಮತ್ತು ಅವರ ಸಹೋದರ ಬಿಹಾರದ ದರ್ಬಂಗಾದಿಂದ ಉತ್ತರ ಪ್ರದೇಶದ ವಾರಣಾಸಿಗೆ ಪವನ್ ಎಕ್ಸ್‌ಪ್ರೆಸ್‌ನ ಪ್ರಥಮ ದರ್ಜೆ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಕರ್ಣ ಅವರಿಗೆ ಎದೆನೋವು ಕಾಣಿಸಿಕೊಂಡು … Continued

ವೀಡಿಯೊ…| ಎಕ್ಸ್‌ಪ್ರೆಸ್‌ ರೈಲಿನೊಳಗೆ ಹಾವು ಪ್ರತ್ಯಕ್ಷ…! ತಮ್ಮ ಸೀಟು ಬಿಟ್ಟು ಓಡಿದ ಪ್ರಯಾಣಿಕರು…!!

ಜಬಲ್‌ಪುರ (ಮಧ್ಯಪ್ರದೇಶ): ರೈಲಿನ ಮೇಲಿನ ಬರ್ತ್‌ನ ಕಬ್ಬಿಣದ ಸಲಾಕೆಯ ಸುತ್ತಲೂ ಉದ್ದವಾದ ಹಾವು ಸುತ್ತಿರುವುದನ್ನು ನೋಡಿದ ಪ್ರಯಾಣಿಕರು ಬೆಚ್ಚಿಬಿದ್ದ ಘಟನೆ ಜಬಲ್‌ಪುರದಿಂದ ಮುಂಬೈಗೆ ತೆರಳುತ್ತಿದ್ದ ರೈಲಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಭಾನುವಾರ ಇದರ ವೀಡಿಯೊ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ಪ್ರಕಾರ, ಜಬಲ್‌ಪುರದಿಂದ ಮುಂಬೈಗೆ ತೆರಳುತ್ತಿದ್ದ ಗರೀಬ್ ರಥ ಎಕ್ಸ್‌ಪ್ರೆಸ್‌ನಲ್ಲಿ ಹಾವು … Continued

ವೀಡಿಯೊ..| ನಿದ್ದೆ ಅಂದ್ರೆ ಇದಪ್ಪ..! ಪಕ್ಕದಲ್ಲಿ ರೈಲು ನಿಂತ್ರೂ ಹಳಿ ಮೇಲೆ ಗಡದ್ದಾಗಿ ಮಲಗಿದ್ದ ಈ ವ್ಯಕ್ತಿ ; ಲೋಕೊ ಪೈಲಟ್‌ ಎಬ್ಬಿಸಬೇಕಾಯ್ತು..!!

ನವದೆಹಲಿ : ಜೀವನದ ಜಂಜಾಟವನ್ನು ಮರೆಯಲು ಕೆಲವೊಮ್ಮೆ ಒಳ್ಳೆಯ ನಿದ್ದೆ ಸಾಕಾಗುತ್ತದೆ. ಆದರೆ ಅದರಿಂದ ಜೀವಕ್ಕೆ ಕುತ್ತು ಬರುವ ಸಾಧ್ಯತೆಯೂ ಇರುತ್ತದೆ ಎಂಬುದಕ್ಕೆ ಘಟನೆಯೊಂದು ಸಾಕ್ಷಿಯಾಗಿದೆ. ಈ ಘಟನೆಯಲ್ಲಿ ರೈಲ್ವೆ ಹಳಿಯ ಮೇಲೆ ಗಡದ್ದಾಗಿ ನಿದ್ದೆ ಹೋಗಿದ್ದ ವ್ಯಕ್ತಿಯೊಬ್ಬರನ್ನು ರೈಲ್ವೆಯ ಲೋಕೊ ಪೈಲಟ್‌ ಅವರ ಸಮಯ ಪ್ರಜ್ಞೆಯಿಂದ ಜೀವ ಕಳೆದುಕೊಳ್ಳುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿದ್ದಾರೆ. ವೈರಲ್‌ ಆದ … Continued

ಮಂಗಳೂರು-ಮಡಗಾಂವ ಜಂಕ್ಷನ್ ನಡುವೆ ವಿಶೇಷ ರೈಲು

ಮಂಗಳೂರು: ಮಂಗಳೂರು-ಮಡಗಾಂವ ಜಂಕ್ಷನ್ ನಡುವೆ ಟಿಕೆಟ್ ಕಾಯ್ದಿರಿಸುವಿಕೆಗೆ ಅವಕಾಶ ಇಲ್ಲದ ವಿಶೇಷ ಮೆಮು ರೈಲ್ವೆ ಸೇವೆಯನ್ನು ಇದೀಗ ಕೊಂಕಣ ರೈಲ್ವೆಯು ಮೂರು ದಿನಗಳ ಕಾಲ ಒದಗಿಸಲಿದೆ. ಈ ವಿಶೇಷ ರೈಲು ಜುಲೈ 20, 21 ಮತ್ತು 22ರಂದು ಈ ಎರಡು ಜಂಕ್ಷನ್‌ಗಳ ನಡುವೆ ಸಂಚರಿಸಲಿದೆ. ಬೆಳಗ್ಗೆ 6ಕ್ಕೆ ಮಡಗಾಂವ ಜಂಕ್ಷನ್ ನಿಂದ ಹೊರಡುವ ರೈಲು ಮಧ್ಯಾಹ್ನ … Continued

ವೀಡಿಯೊ…| ರೈಲು ಬಂದ್ರೂ ಕ್ಯಾರೇ ಎನ್ನದೆ ರೈಲ್ವೆ ಹಳಿಗಳ ಮೇಲೆ ದೈತ್ಯ ಗೂಳಿಗಳ ಕಾದಾಟ ; ಮುಂದಾಗಿದ್ದು…

ರಸ್ತೆಯಲ್ಲಿ ಗೂಳಿ ಕಾಳಗದ ಹಲವು ವಿಡಿಯೋಗಳು ವೈರಲ್ ಆಗಿದ್ದು, ಹಲವು ವೀಡಿಯೊಗಳಲ್ಲಿ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವುದು ಕಂಡುಬಂದಿದೆ. ಗೂಳಿ ಕಾಳಗದಿಂದ ಹಲವು ಬಾರಿ ಕಾರು, ಬೈಕ್‌ಗಳು ಹಾನಿಗೊಳಗಾಗಿವೆ. ಈಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ರೈಲ್ವೇ ಹಳಿ ಮೇಲೆಯೇ ಕಾದಾಟ ಮಾಡುತ್ತಿದ್ದ ಎರಡು ಹೋರಿಗಳನ್ನು ಗೇಟ್‌ನಲ್ಲಿದ್ದ ರೈಲ್ವೇಮನ್ ಓಡಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಕೊನೆಗೆ ಲೋಕೋ … Continued

ಬಿ.ಸಿ.ರೋಡ್‌ : ಚಲಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

ಮಂಗಳೂರು : ಚಲಿಸುತ್ತಿರುವ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಮಹಿಳೆಯೋರ್ವವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಗುರುವಾರ (ಫೆ. 15ರ) ಮುಂಜಾನೆ ಬಂಟ್ವಾಳ ಬಿಸಿ ರೋಡ್ ಸಮೀಪ ನಡೆದಿದೆ ಎಂದು ವರದಿಯಾಗಿದೆ. ಇಂದು ಬೆಳಿಗ್ಗೆ ಸುಮಾರು 6:20ರ ಸುಮಾರಿಗೆ ಈ ಘಟನೆ ನಡೆದಿದ್ದು, ಮಹಿಳೆಯ ಬ್ಯಾಗಿನಲ್ಲಿದ್ದ ಆಧಾರ್‌ ಕಾರ್ಡ್‌ ಆಧಾರದ ಮೇಲೆ ಆಕೆಯನ್ನು ತುಮಕೂರು ಜಿಲ್ಲೆಯ … Continued