ವ್ಯಕ್ತಿಯ ಹೊಟ್ಟೆಯಲ್ಲಿತ್ತು ಟೀ ಗ್ಲಾಸ್‌…! ಅನ್ನನಾಳ ಬಹಳ ಚಿಕ್ಕದು, ಅದು ಹೊಟ್ಟೆಯೊಳಗೆ ಹೇಗೆ ಹೋಯ್ತು ಎಂದು ವೈದ್ಯರಿಗೇ ಆಶ್ವರ್ಯ..!!

ಮುಜಾಫರ್‌ಪುರ (ಬಿಹಾರ): ತೀವ್ರ ಮಲಬದ್ಧತೆ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದ 55 ವರ್ಷದ ವ್ಯಕ್ತಿಯೊಬ್ಬರಿಗೆ ಭಾನುವಾರ ಬಿಹಾರದ ಮುಜಾಫರ್‌ಪುರದಲ್ಲಿ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ ಅವರ ಕರುಳಿನಿಂದ ಗಾಜಿನ ಗ್ಲಾಸ್‌ ಅನ್ನು ಹೊರತೆಗೆದಿದೆ.

ಪಟ್ಟಣದ ಮಾದಿಪುರ ಪ್ರದೇಶದ ಆಸ್ಪತ್ರೆ ವೈದ್ಯಕೀಯ ತಜ್ಞರು ಗಾಜಿನ ಗ್ಲಾಸ್‌ ರೋಗಿಯ ಹೊಟ್ಟೆಯೊಳಗೆ ಹೇಗೆ ಹೋಯಿತು ಎಂದು ಆಶ್ಚರ್ಯ ಪಡುತ್ತಿದ್ದಾರೆ.
ಶಸ್ತ್ರಚಿಕಿತ್ಸಕರ ತಂಡದ ನೇತೃತ್ವ ವಹಿಸಿದ್ದ ಡಾ. ಮಖ್ದುಲುಲ್ ಹಕ್ ಅವರ ಪ್ರಕಾರ, ರೋಗಿಯು ಪಕ್ಕದ ವೈಶಾಲಿ ಜಿಲ್ಲೆಯ ಮಹುವಾದಿಂದ ಬಂದವರು ಮತ್ತು ಅವರ ಅಲ್ಟ್ರಾಸೌಂಡ್ ಮತ್ತು ಎಕ್ಸ್-ರೇ ವರದಿಗಳು ಆತನ ಕರುಳಿನಲ್ಲಿ ಏನೋ ವಸ್ತುವಿದೆ ಎಂದು ತೋರಿಸಿದೆ ಎಂದರು.
ಶಸ್ತ್ರಚಿಕಿತ್ಸೆಯ ವೀಡಿಯೊ ತುಣುಕನ್ನು ಮತ್ತು ಅದಕ್ಕಿಂತ ಮೊದಲು ತೆಗೆದ ಎಕ್ಸ್-ರೇ ಅನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡ ಡಾ ಹಕ್, ಗಾಜಿನ ಲೋಟ ಹೊಟ್ಟೆಯೊಳಗೆ ಹೇಗೆ ಹೋಯಿತು ಎಂಬುದು ಪ್ರಸ್ತುತ ನಿಗೂಢವಾಗಿದೆ” ಎಂದು ಹೇಳಿದರು.

ನಾವು ವಿಚಾರಿಸಿದಾಗ, ರೋಗಿಯು ಚಹಾ ಕುಡಿಯುವಾಗ ಗಾಜಿನ ಲೋಟ ನುಂಗಿರುವುದಾಗಿ ಹೇಳಿದ್ದಾನೆ. ಆದರೆ, ಆದರೆ ಈ ವಿವರಣೆಯಿಂದ ನಮಗೆ ತೃಪ್ತಿಯಾಗಿಲ್ಲ, ಯಾಕೆಂದರೆ ಮನುಷ್ಯನ ಅನ್ನ ನಾಳ ಗಾಜಿನ ಲೋಟಕ್ಕಿಂತ ಬಹಳ ಕಿರಿದಾಗಿದೆ,” ಅವರು ಹೇಳಿದರು.
ಆರಂಭದಲ್ಲಿ ಎಂಡೋಸ್ಕೋಪಿಕ್ ವಿಧಾನದ ಮೂಲಕ ಗುದನಾಳದಿಂದ ಗಾಜನ್ನು ಹೊರತೆಗೆಯಲು ಪ್ರಯತ್ನಿಸಲಾಯಿತು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಆದ್ದರಿಂದ ನಾವು ವ್ಯಕ್ತಿಯ ಹೊಟ್ಟೆಯನ್ನು ಕತ್ತರಿಸಿ ಅವನ ಕರುಳಿನ ಗೋಡೆಯ ಛೇದನದ ನಂತರ ಗಾಜಿನ ಲೋಟವನ್ನು ಹೊರತೆಗೆಯಬೇಕಾಯಿತು ಎಂದು ಡಾ ಹಕ್ ಹೇಳಿದರು.
ಈಗ ರೋಗಿಯು ಸ್ಥಿರವಾಗಿದ್ದಾನೆ, ಶಸ್ತ್ರಚಿಕಿತ್ಸೆಯ ನಂತರ ಕೊಲೊನ್ ಅನ್ನು ಹೊಲಿಯಲಾಗುತ್ತದೆ ಮತ್ತು ಮಲವನ್ನು ಹೊರಹಾಕಲು ಫಿಸ್ಟುಲರ್ ತೆರೆದಿದ್ದರಿಂದ ಚೇತರಿಕೆಗೆ ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಅವನ ಕೊಲೊನ್ ಕೆಲವು ತಿಂಗಳುಗಳಲ್ಲಿ ಗುಣವಾಗುವ ನಿರೀಕ್ಷೆಯಿದೆ ನಂತರ ನಾವು ಫಿಸ್ಟುಲಾವನ್ನು ಮುಚ್ಚುತ್ತೇವೆ ಮತ್ತು ಅವನ ಕರುಳುಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ” ಎಂದು ಅವರು ಹೇಳಿದರು.
ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಪ್ರಜ್ಞೆಗೆ ಮರಳಿದ್ದರೂ, ಅವನಾಗಲಿ ಅವನ ಕುಟುಂಬ ಸದಸ್ಯರಾಗಲಿ ಮಾಧ್ಯಮಗಳೊಂದಿಗೆ ಮಾತನಾಡಲು ಸಿದ್ಧರಿಲ್ಲ.

ಪ್ರಮುಖ ಸುದ್ದಿ :-   ಮೊಬೈಲ್ ನಲ್ಲಿ ಹುಡುಗರ ಜೊತೆ ಹರಟೆ ಬೇಡ ಅಂದಿದ್ದಕ್ಕೆ ಅಣ್ಣನನ್ನೇ ಕೊಡಲಿಯಿಂದ ಹೊಡೆದು ಕೊಂದ 14 ವರ್ಷದ ಬಾಲಕಿ...!

ರೋಗಿಯು ಚಹಾ ಸೇವನೆ ಮಾಡುವಾಗ ಗಾಜಿನ ಲೋಟ ಒಳಗೆ ಹೋಗಿದೆ ಎಂದು ಹೇಳುತ್ತಾನೆ. ಆದರೆ ಮಾನವ ಅಂಗರಚನಾಶಾಸ್ತ್ರದ ಬಗ್ಗೆ ನಮ್ಮ ತಿಳುವಳಿಕೆಯು ಗಾಜಿನ ಲೋಟ ದೇಹದೊಳಕ್ಕೆ ಹೋಗಲು ಒಂದೇ ಒಂದು ಮಾರ್ಗವಿದೆ ಎಂದು ಹೇಳುತ್ತದೆ. ಅದನ್ನು ಗುದದ್ವಾರದ ಮೂಲಕ ಅವನ ದೇಹಕ್ಕೆ ನೂಕಬೇಕಾಗುತ್ತದೆ. ಆದರೆ ವೈದ್ಯರಾಗಿ ನಾವು ರೋಗಿಗಳ ಗೌಪ್ಯತೆಯನ್ನು ರಕ್ಷಿಸಬೇಕಾಗುತ್ತದೆ ಎಂದು ಡಾ ಹಕ್ ಹೇಳಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement