ಕೊರೊನಾ ಪಾಸಿಟಿವ್ ಬಂದ ಶೇ.20 ಮಂದಿ ಫೋನ್ ಸ್ವಿಚ್ ಆಫ್ ಮಾಡಿ ಬೇರೆಡೆ ಹೋಗ್ತಿದ್ದಾರೆ: ಸಚಿವ ಅಶೋಕ

ಬೆಂಗಳೂರು: ಕೊರೊನಾ ಸೋಂಕು ದೃಢಪಟ್ಟ ಶೇಕಡ 20ರಷ್ಟು ಜನರು ತಮ್ಮ ಫೋನ್​ಗಳನ್ನ ಸ್ವಿಚ್ ಆಫ್ ಮಾಡುತ್ತಿದ್ದಾರೆ. ಪತ್ತೆ ಹಚ್ಚಲು ಸಾಧ್ಯವಾಗದಂತೆ ಮನೆ ಬಿಟ್ಟು ಬೇರೆಡೆ ಹೋಗುತ್ತಿದ್ದಾರೆ. ಸೋಂಕು ಗಂಭೀರವಾದ ಮೇಲೆ ಬಂದು ಬೆಡ್ ಸಿಗುತ್ತಿಲ್ಲ ಎಂದು ಅಲೆದಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್​. ಅಶೋಕ ಹೇಳಿದ್ದಾರೆ.
ನಗರದಲ್ಲಿಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ‘ಖಾಸಗಿ ಲ್ಯಾಬ್​ನವರು ವರದಿಗೆ ಎರಡು ದಿನ ತಡಮಾಡುತ್ತಿದ್ದಾರೆ. ಇದರಿಂದ ವರದಿ ತಡವಾಗುತ್ತಿದೆ. ಡೇಟಾ ಆಪರೇಟರ್​ಗಳನ್ನ ನೇಮಕ ಮಾಡಲಾಗುತ್ತಿದ್ದು. ಇನ್ಮುಂದೆ ಅವರೇ ಡೇಟಾ ಫೀಡ್ ಮಾಡಲಿದ್ದಾರೆ ಎಂದರು.
ಸಾರ್ವಜನಿಕರ ವರ್ತನೆಗೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ‘ಕೋವಿಡ್ ಪಾಸಿಟಿವ್ ಎಂದು ಮೆಸೇಜ್ ಬಂದ ನಂತರ ಶೇ. 20ರಷ್ಟು ಜನ ಮೊಬೈಲ್‌ಸ್ವಚ್‌ ಆಫ್‌ ಮಾಡಿ ನಿರ್ಲಕ್ಷ್ಯ ಮಾಡುತ್ತಾರೆ. ಮನೆ ಬದಲಾಯಿಸುತ್ತಾರೆ, ನಂತರ ರೋಗ ಉಲ್ಬಣಗೊಂಡಾಗ ಆಸ್ಪತ್ರೆಗೆ ಬರ್ತಾರೆ. ಸಮಯಕ್ಕೆ ಸರಿಯಾಗಿ ಮಾತ್ರೆ ತೆಗೆದುಕೊಂಡರೆ ಹಾಗೂ ಚಿಕಿತ್ಸೆ ಪಡೆದರೆ ರೋಗ ವಾಸಿಯಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ ಎಂದರು.
ಮೊದಲು ನಿರ್ಲಕ್ಷ್ಯ ಮಾಡಿ ಉಲ್ಬಣವಾದ ನಂತರ ಆಸ್ಪತ್ರೆಯಲ್ಲಿ ಹಾಸಿಗಾಗಿ ಅಲೆದಾಟ ಮಾಡಬೇಡುವುದು ಬೇಡ, ದಯವಿಟ್ಟು ಮೊಬೈಲಿಗೆ ಸಂದೇಶ ಬಂದಾಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದು ಮನವಿ ಮಾಡಿದರು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement