ಬೆಂಗಳೂರಿಗೆ ಬಂದಿದ್ದ ಇಥಿಯೋಪಿಯಾ ಪ್ರಜೆಗೆ ಬಂದಿದ್ದು ಮಂಕಿಪಾಕ್ಸ್ ಅಲ್ಲ: ಆರೋಗ್ಯ ಸಚಿವ ಡಾ.ಸುಧಾಕರ

ಬೆಂಗಳೂರು : ಈ ತಿಂಗಳ ಆರಂಭದಲ್ಲಿ ಬೆಂಗಳೂರಿಗೆ ಬಂದಿದ್ದ ಇಥಿಯೋಪಿಯಾ ಪ್ರಜೆಗೆ ಮಂಕಿಪಾಕ್ಸ್ ರೋಗಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಟೆಸ್ಟ್ ಬಳಿಕ ಆ ವ್ಯಕ್ತಿಗೆ ಇರುವುದು ಮಂಕಿಪಾಕ್ಸ್‌ ಅಲ್ಲ, ಬದಲಿಗೆ ಚಿಕನ್ ಫಾಕ್ಸ್ ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿಗೆ ಚಿಕಿತ್ಸೆಗೆಂದು ಬಂದಿದ್ದ ಇಥಿಯೋಪಿಯಾದ 55 ವರ್ಷದ ವ್ಯಕ್ತಿಗೆ ಮಂಕಿಪಾಕ್ಸ್ ಲಕ್ಷಣ ಕಂಡುಬಂದಿತ್ತು. ಆತನನ್ನು ತಕ್ಷಣವೇ ಶಂಕಿಸಿ ಅವರನ್ನು ಮಂಕಿಪಾಕ್ಸ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಹಾಗೂ ಮಾದರಿಯನ್ನು ವರದಿಗಾಗಿ ಕಳುಹಿಸಲಾಗಿತ್ತು. ವರದಿಯಲ್ಲಿ ಚಿಕನ್‌ಪಾಕ್ಸ್‌ ಇರುವುದು ಪತ್ತೆಯಾಗಿದ್ದು, ಮಂಕಿಪಾಕ್ಸ್ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಮಂಕಿಪಾಕ್ಸ್ ಮುನ್ನೆಚ್ಚರಿಕೆ ಹಿನ್ನೆಲೆ ಕರ್ನಾಟಕದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಸೋಂಕು ಪೀಡಿತ ದೇಶಗಳಿಂದ ಬರುವ ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಬೆಂಗಳೂರು, ಮಂಗಳೂರು ಏರ್ ಪೋರ್ಟ್​ಗಳಲ್ಲಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಶೀತ- ಜ್ವರ, ತಲೆನೋವು, ಸ್ನಾಯು ಸೆಳೆತ, ಆಯಾಸ, ಗಂಟಲು ಕೆರೆತ, ಕೆಮ್ಮು, ಚರ್ಮ ತುರಿಕೆ ಲಕ್ಷಣಗಳು ಕಂಡು ಬರುವ ಪ್ರಯಾಣಿಕರಿಗೆ ತಪಾಸಣೆ ತಪಾಸಣೆ ನಡೆಸಲಾಗುತ್ತದೆ ಎಂದು ಸಚಿವ ಸುಧಾಕರ್ ಟ್ವೀಟ್​ನಲ್ಲಿ ತಿಳಿಸಿದ್ದಾರೆ

ಪ್ರಮುಖ ಸುದ್ದಿ :-   ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​ ಕೇಸ್: ಎಸ್ಐಟಿ ತಂಡಕ್ಕೆ 18 ಸಿಬ್ಬಂದಿ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement