ಸಫಾರಿ ಜೀಪ್‌ ಮೇಲೆ ದಾಳಿ ಮಾಡಿದ ಘೇಂಡಾಮೃಗಗಳು…ತಗ್ಗಿಗೆ ಬಿದ್ದ ಜೀಪ್, ಏಳು ಮಂದಿಗೆ ಗಾಯ : ಮೈ ಜುಂ ಎನ್ನುವ ದೃಶ್ಯ ವೀಡಿಯೊದಲ್ಲಿ ಸೆರೆ

ಪಶ್ಚಿಮ ಬಂಗಾಳದ ಜಲ್ದಪಾರಾ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಘೇಂಡಾಮೃಗಗಳು ಸಫಾರಿ ವಾಹನದ ಮೇಲೆ ದಾಳಿ ಮಾಡಲು ಬರುತ್ತಿರುವ ಹಾಗೂ ವಾಹನದಲ್ಲಿದ್ದವರು ಪ್ರಾಣಾಪಾಯದ ಭಯದಿಂದ ವಾಹನವನ್ನು ರಿವರ್ಸ್‌ನ್ಲಿ ಓಡಿಸುವಾಗ ವಾಹನ ಪಲ್ಟಿಯಾಗುವ ಭಯಾನಕ ದೃಶ್ಯಾವಳಿ ವೀಡಿಯೊದಲ್ಲಿ ಸೆರೆಯಾಗಿದೆ. ವನ್ಯಜೀವಿ ಸಫಾರಿ ವೇಳೆ ಈ ಘಟನೆ ನಡೆದಿದ್ದು, ಪ್ರವಾಸಿಗರು ಘೇಂಡಾಮೃಗಗಳ ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತಿರುವಾಗ ಅದು ದಾಳಿ ಮಾಡಲು ಮುಂದಾಗಿದೆ.
ಜೀಪಿನತ್ತ ಘೇಂಡಾಮೃಗಗಳು ದಾಳಿ ಮಾಡಲು ಬರುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಚಾಲಕ ತರಾತುರಿಯಲ್ಲಿ ವಾಹನವನ್ನು ರಿವರ್ಸ್‌ನಲ್ಲಿ ಓಡಿಸಿದ್ದು, ನಂತರ ಜೀಪ್ ಪಾರ್ಕ್‌ನ ಕಂದಕಕ್ಕೆ ಬಿದ್ದಿರುವುದನ್ನು ವೀಡಿಯೊದಲ್ಲಿ ಕಂಡುಬರುತ್ತದೆ.

ಈ ವೀಡಿಯೊವನ್ನು ಭಾರತೀಯ ಅರಣ್ಯ ಸೇವೆಗಳ (ಐಎಫ್‌ಎಸ್) ಅಧಿಕಾರಿ ಆಕಾಶ್ ದೀಪ್ ಬಧವಾನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸುರಕ್ಷತೆ ಮತ್ತು ರಕ್ಷಣೆಗಾಗಿ ಸಮಯ-ಮಾರ್ಗಸೂಚಿಗಳನ್ನು ದೇಶಾದ್ಯಂತ ವನ್ಯಜೀವಿ ಸಫಾರಿಗಳಲ್ಲಿ ಅಳವಡಿಸಲಾಗಿದೆ ಎಂದು ನಾನು ಭಾವಿಸುತ್ತೇನೆ. ಸಫಾರಿಗಳು ಈಗ ಸಾಹಸ ಕ್ರೀಡೆಗಳಾಗುತ್ತಿವೆ ಎಂದು ಅವರು ಬರೆದಿದ್ದಾರೆ.
ವರದಿಯ ಪ್ರಕಾರ, ಘಟನೆಯಲ್ಲಿ ಚಾಲಕ ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದಾರೆ. “ಚಾಲಕನಿಗೆ ವಾಹನದ ಹಿಂದಿನ ತಗ್ಗನ್ನು ನೋಡಲು ಸಾಧ್ಯವಾಗದ ಕಾರಣ ಅದು ಉರುಳಿಬಿದ್ದಿದೆ. ಚಾಲಕ ಸೇರಿದಂತೆ ಕೆಲವರು ಗಾಯಗೊಂಡರು, ಗಾಯಾಳುಗಳಿಗೆ ಮದರಿಹತ್ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಮೈ ಜುಂ ಎನ್ನುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಟ್ವಿಟರ್‌ನಲ್ಲಿ ಸಾವಿರಾರು ಜನರು ನೋಡಿದ್ದಾರೆ.
ಪ್ರಕೃತಿಯು ಪ್ರತಿಯೊಂದನ್ನೂ ಅದಕ್ಕೆ ಅನುಗುಣವಾಗಿ ಹೊಂದಿಸುತ್ತದೆ. ನಾವು ಪ್ರಕೃತಿಗೆ ಏನು ನೀಡುತ್ತೇವೆಯೋ ಅದನ್ನೇ ನಾವು ಸ್ವೀಕರಿಸುತ್ತೇವೆ” ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಶಿವಸೇನೆ ನಾಯಕಿ ಕರೆದೊಯ್ಯಲು ಬಂದಿದ್ದ ಹೆಲಿಕಾಪ್ಟರ್ ಅಪಘಾತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement