ಪ್ರತಿಭಟನಾ ಸ್ಥಳದಲ್ಲಿ ತಂದೆಯನ್ನು ಹುಡುಕುತ್ತಿರುವ ಪುತ್ರಿ

ಪ್ರತಿಭಟನಾ ನಿರತ ರೈತ ಹರಿಯಾಣದ ಏಕೋಲಹಾ ಗ್ರಾಮದ ಜೋರಾವರ್‌ ಸಿಂಗ್‌ ಗಣರಾಜ್ಯೋತ್ಸವದಿಂದ ಕಣ್ಮರೆಯಾಗಿದ್ದು, ತಂದೆಗಾಗಿ ಪುತ್ರಿ ಪ್ರತಿಭಟನೆ ನಡೆದ ಕಡೆಗಳಲ್ಲೆಲ್ಲ ಹುಡುಕುತ್ತಿದ್ದಾರೆ.
೭೫ರ ಹರೆಯದ ರೈತ ಜನವರಿ ೨೬ರವರೆಗೆ ಕುಟುಂಬದ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದನು. ಆದರೆ ನಂತರ ಅವರು ಕಣ್ಮರೆಯಾಗಿರುವುದು ಕುಟುಂಬದ ಸದಸ್ಯರಿಗೆ ಆತಂಕ ಮೂಡಿಸಿದೆ. ಪುತ್ರಿ ಪರಮಜೀತ್‌ ಕೌರ್‌ ಸಿಂಗು ಹಾಗೂ ಟಿಕ್ರಿ ಗಡಿಯಲ್ಲಿ ಸುಮಾರು ೫೦೦೦ ಪೋಸ್ಟರ್‌ಗಳನ್ನು ಅಂಟಿಸಿದ್ದು, ತಂದೆಗಾಗಿ ಹುಡುಕುತ್ತಿದ್ದಾರೆ. ಜೋರಾವರ್‌ ಜಾನಪದ ವಾದ್ಯ ತುಂಬಿಯನ್ನು ನುಡಿಸುವ ಮೂಲಕ ಜನರನ್ನು ಸೇರಿಸುವ ಕೆಲಸ ಮಾಡುತ್ತಿದ್ದರು.
ಹಲವು ತಿಂಗಳುಗಳಿಂದ ಅವರು ಪ್ರತಿಭಟನೆಯ ಭಾಗವಾಗಿದ್ದರು.
ಚಿಂತೆ ಬಿಡು, ನಿಮ್ಮ ತಂದೆ ಸುರಕ್ಷಿತವಾಗಿದ್ದಾರೆ. ನಮ್ಮ ಬೇಡಿಕೆ ಈಡೇರಿದ ನಂತರ ಮನೆಗೆ ಮರಳುತ್ತಾರೆ ಎಂದು ರೈತ ಮುಖಂಡರು ಸಮಾಧಾನ ಮಾಡುತ್ತಾರೆ ಎಂದು ಪುತ್ರಿ ಹೇಳುತ್ತಾರೆ. ಗಂಡನೊಂದಿಗೆ ಜಗಳವಾದ ನಂತರ ಪರಮಜೀತ್‌ ತವರಿನಲ್ಲಿ ತಂದೆಯೊಂದಿಗೆ ವಾಸವಿದ್ದಾರೆ. ತನ್ನ ೫ ವರ್ಷದ ಮಗನೊಂದಿಗೆ ಪರಜೀತ್‌ ತಂದೆಯನ್ನು ಹುಡುಕಲು ಅಲೆಯುತ್ತಿದ್ದಾರೆ. ಮೊಬೈಲ್‌ನಲ್ಲಿ ತಂದೆಯೊಂದಿಗಿರುವ ವಿಡಿಯೋ ತೋರಿಸಿ ಪ್ರತಿಭಟನಾನಿರತ ರೈತರಲ್ಲಿ ತಮ್ಮ ತಂದೆ ಬಗ್ಗೆ ವಿಚಾರಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   'ನಮ್ಮಲ್ಲಿಗೆ ಪ್ರವಾಸಕ್ಕೆ ಬನ್ನಿ, ನಮ್ಮ ಆರ್ಥಿಕತೆ ಬೆಂಬಲಿಸಿ' : ಹದಗೆಟ್ಟ ಸಂಬಂಧಗಳ ಮಧ್ಯೆ ಭಾರತದ ಪ್ರವಾಸಿಗರಿಗೆ ಮನವಿ ಮಾಡಿದ ಮಾಲ್ಡೀವ್ಸ್ ಸರ್ಕಾರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement